ನಾಯಿ ಮೇಲಿನ ಪ್ರೀತಿ: ಕಾಣಿಸಬೇಕು ನಾಯಿ ರೀತಿ ತನ್ನ ಸಾಕುನಾಯಿಯಂತೆ ಮೇಕಪ್ ಮಾಡಿಕೊಂಡ ಪುಟಾಣಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ನಾಯಿಗಳಿಗೂ ಮಕ್ಕಳಿಗೂ ಎಲ್ಲಿಲ್ಲದ ಅವಿನಾಭಾವ ಸಂಬಂಧ. ಕೆಲವರಂತೂ ಶ್ವಾನವನ್ನು ತಾವು ಎಲ್ಲಿಗೆಲ್ಲ ಹೋಗುತ್ತಾರೋ ಅಲ್ಲಿಗೆಲ್ಲ ಶ್ವಾನವನ್ನು ಜೊತೆಯಲ್ಲೇ ಕರೆದುಕೊಂಡು ಹೋಗುತ್ತಾರೆ. ಪುಟ್ಟ ಮಕ್ಕಳೊಂದಿಗೆ ಶ್ವಾನವೂ ಕೂಡ ತುಂಬಾ ಆತ್ಮೀಯತೆಯಿಂದ ವರ್ತಿಸುತ್ತದೆ. ಹಾಗೆಯೇ ಇಲ್ಲೊಂದು ವಿಡಿಯೋದಲ್ಲಿ ಪುಟ್ಟ ಬಾಲಕಿ ತನ್ನ ಸಾಕು ನಾಯಿಯಂತೆ ಕಾಣಿಸುವುದಕ್ಕೋಸ್ಕರ ನಾಯಿಯಂತೆ ಮೇಕಪ್ ಮಾಡುವುದನ್ನು ಆಕೆಯ ಅಮ್ಮ ವಿಡಿಯೋ ಚಿತ್ರೀಕರಿಸಿದ್ದಾರೆ.
ಈ ವೇಳೆ ಈ ರೀತಿ ಏಕೆ ಮೇಕಪ್ ಮಾಡುತ್ತಿದ್ದೀಯಾ ಎಂದು ಆಕೆಯನ್ನು ಆಕೆಯ ಅಮ್ಮ ಕೇಳುತ್ತಾಳೆ. ಅದಕ್ಕೆ ನಾನು ನನ್ನ ನಾಯಿ ಫ್ರಾಂನ್ಸಿಸ್ಕೋ ತರ ಕಾಣಿಸಬೇಕು ಅದಕ್ಕಾಗಿ ಈ ಮೇಕಪ್ ಮಾಡುತ್ತಿದ್ದೇನೆ ಎಂದು ಆಕೆ ಹೇಳುತ್ತಾಳೆ. ಆಕೆಯ ಮಾತು ಕೇಳಿದ ತಾಯಿ ಜೋರಾಗಿ ನಗುತ್ತಾರೆ. ಈ ವಿಡಿಯೋವನ್ನು 8 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಈಕೆಯ ಶ್ವಾನ ಕಪ್ಪು ಬಿಳಿ ಮ್ರಿಶ್ರಿತ ಬಣ್ಣದಲ್ಲಿದೆ. ಇದನ್ನು ನೋಡಿ ಆಕೆ ತನ್ನ ಶ್ವಾನಕ್ಕೆ ಮುಖದ ಎಲ್ಲೆಲ್ಲಾ ಕಪ್ಪು ಬಣ್ಣವಿದೆಯೋ ಅಲ್ಲೆಲ್ಲಾ ಈಕೆ ತನಗೂ ಕಪ್ಪು ಬಣ್ಣವನ್ನು ಹಚ್ಚಿಕೊಳ್ಳುತ್ತಾಳೆ. ಗುಡ್‌ನ್ಯೂಸ್ ಮೂವ್‌ಮೆಂಟ್ ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ಪುಟ್ಟ ಬಾಲಕಿಯ ಮೇಕಪ್‌ಗೆ ನೋಡುಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮನುಷ್ಯರಷ್ಟೇ ಶ್ವಾನಗಳು ಕೂಡ ಭಾವಜೀವಿಗಳು. ಕೆಲ ದಿನಗಳ ಹಿಂದೆ ತನ್ನ ಮರಿಗಳಿಗೆ ಆಹಾರ ನೀಡುತ್ತಿದ್ದ ಮಹಿಳೆಗೆ ಶ್ವಾನವೊಂದು ಕೃತಜ್ಞತೆ ಸಲ್ಲಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋವನ್ನು ನಾಲ್ಕು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದರು. ಅಲ್ಲದೇ ತಾಯಿ ಶ್ವಾನದ ಈ ಕೃತಜ್ಞತೆ ತುಂಬಿದ ನೋಟಕ್ಕೆ ಜನ ಫಿದಾ ಆಗಿದ್ದಾರೆ. ಯೋಧ ಫಾರೆವರ್ (Yoda4ever) ಎಂಬ ಟ್ವಿಟ್ಟರ್ ಪೇಜ್‌ನಿಂದ ಮಾರ್ಚ್ 8ರಂದು ಈ ವಿಡಿಯೋ ಪೋಸ್ಟ್ ಆಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ನಾಯಿ ಮರಿಗಳಿಗೆ ಆಹಾರ ನೀಡುತ್ತಿದ್ದಾರೆ. ಇದನ್ನು ನೋಡಿದ ತಾಯಿ ಶ್ವಾನ ಮಹಿಳೆಯ ಹಿಂದೆ ಮುಂದೆ ಸುತ್ತಾಡಿ ತನ್ನ ಬಾಲವನ್ನು ಅಲ್ಲಾಡಿಸುತ್ತಾ ದೇಹವನ್ನು ಬಾಗಿಸಿ ಕೃತಜ್ಞತೆ ಸಲ್ಲಿಸುತ್ತದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಪ್ರೀತಿ ತುಂಬಿದ ಇಮೋಜಿಗಳನ್ನು ಕಾಮೆಂಟ್ ಮಾಡಿದ್ದಾರೆ.
ಅಮ್ಮನ ಸಾವಿನ ನಂತರ ವೃದ್ಧ ಅಪ್ಪನಿಗೆ ನಾಯಿ ಗಿಫ್ಟ್ ನೀಡಿದ ಮಕ್ಕಳು... ಒಂಟಿ ಬದುಕಿಗೆ ಜಂಟಿಯಾದ ಶ್ವಾನ
ಪ್ರಾಣಿಗಳು ಎಂದರೆ ಬಹುತೇಕರು ಬುದ್ಧಿ ಇಲ್ಲದ ಭಾವನೆಗಳಿಲ್ಲದ ಜೀವಿಗಳು ಎಂದು ಬಹುತೇಕ ಮಾನವರು ಭಾವಿಸುವುದುಂಟು. ಆದರೆ ಮನುಷ್ಯರ ಈ ಊಹೆಯನ್ನು ಅನೇಕ ಬಾರಿ ಪ್ರಾಣಿಗಳು ಸುಳ್ಳು ಮಾಡಿವೆ. ನಮಗೂ ಭಾವನೆಗಳಿವೆ. ನಮಗೂ ಗೌರವಯುತವಾಗಿ ಬದುಕಲು ಅವಕಾಶ ನೀಡಿ ಎಂದು ಹೇಳುವಂತಿರುತ್ತವೆ ಪ್ರಾಣಿಗಳ ವರ್ತನೆಗಳು. ಅದರಲ್ಲೂ ಶ್ವಾನಗಳು ಮನುಷ್ಯನ ಆತ್ಮೀಯ ಸ್ನೇಹಿತ ಎಂದರೆ ತಪ್ಪಾಗಲಾರದು. ತನಗೆ ಒಂದು ತುತ್ತು ಊಟ ಕೊಟ್ಟವನ ಎಂದೂ ಮರೆಯದ ಈ ಶ್ವಾನಗಳು ಸ್ವಾಮಿನಿಷ್ಠೆಗೆ ಹೆಸರುವಾಸಿ. ಶ್ವಾನಗಳು ಮನುಷ್ಯನ ರಕ್ಷಿಸಿದಂತಹ ಹಲವು ಘಟನೆಗಳನ್ನು ನೀವು ಈಗಾಗಲೇ ನೋಡಿರಬಹುದು. ಕೆಲದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ ಶ್ವಾನಗಳು ತಮ್ಮ ಮೃತ ಗೆಳೆಯನಿಗೆ ಮನುಷ್ಯರೂ ಮಾಡುವಂತೆಯೇ ಅಂತಿಮ ಸಂಸ್ಕಾರವನ್ನು ನಡೆಸಿದ್ದು, ಇದನ್ನು ನೋಡಿದ ಜನ ಇವುಗಳೇನು ಪ್ರಾಣಿಗಳೋ ಅಥವಾ ಪ್ರಾಣಿವೇಷದಲ್ಲಿರುವ ಮನುಷ್ಯರೋ ಎಂದು ಗೊಂದಲಕ್ಕೊಳಗಾಗುತ್ತಿದ್ದಾರೆ.
ಗುಂಡಿ ತೋಡಿ ಮಣ್ಣುಮುಚ್ಚಿ ಅಗಲಿದ ಮಿತ್ರನಿಗೆ ಅಂತಿಮ ವಿದಾಯ... ಶ್ವಾನಗಳ ವಿಡಿಯೋ ವೈರಲ್