ಗುಮ್ಮಟನಗರಿಯಲ್ಲಿ ರೆಕಾರ್ಡ್ ಮೇಲೆ ರೆಕಾರ್ಡ್ ಮಾಡ್ತಿರೋ ಪುಟಾಣಿಗಳು..!
• ಗುಮ್ಮಟನಗರಿಯಲ್ಲಿ ರೆಕಾರ್ಡ್ ಮೇಲೆ ರೆಕಾರ್ಡ್ ಮಾಡ್ತಿರೋ ಪುಟಾಣಿಗಳು..!
• ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸೇರಿದ ಮತ್ತೊಂದು ಪುಟಾಣಿ
• ಅತಿ ಚಿಕ್ಕವಯಸ್ಸಿನಲ್ಲಿ ಬುದ್ಧಿವಂತಿಕೆ ಹೊಂದಿದ ಪಟ್ಟಿಗೆ ಮತ್ತೊಂದು 1 ವರ್ಷ 7 ತಿಂಗಳ ಮಗು..!
ವರದಿ-ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಏ.23) : ಗುಮ್ಮಟನಗರಿ ವಿಜಯಪುರದಲ್ಲಿ ಪುಟಾಣಿ ಮಕ್ಕಳು ರೆಕಾರ್ಡ್ ಮೇಲೆ ರೆಕಾರ್ಡ್ ಮಾಡ್ತೀವೆ. ಮೊನ್ನೆಯಷ್ಟೆ ಮುದ್ದೇಬಿಹಾಳ ಪಟ್ಟಣದ 1 ವರ್ಷ 11 ತಿಂಗಳ ಗಗನ್ ದೀಪ್ ಅನ್ನೋ ಪುಟಾಣಿ ದಾಖಲೆ ನಿರ್ಮಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸೇರಿತ್ತು.. ಇದ್ರ ಬೆನ್ನಲ್ಲೆ ವಿಜಯಪುರ ಜಿಲ್ಲೆಯ ಶಿವಣಗಿ ಗ್ರಾಮದ ಮತ್ತೊಂದು ಪುಟಾಣಿ ಇಂಥದ್ದೆ ಸಾಧನೆ ಮಾಡಿ ದಾಖಲೆ ನಿರ್ಮಿಸಿದೆ..
1ವರ್ಷ 7 ತಿಂಗಳ ಬಾಲಕಿಯಿಂದ ಅಗಾಧ ಸಾಧನೆ..!
ವಿಜಯಪುರ ತಾಲೂಕಿನ ಶಿವಣಗಿ ಗ್ರಾಮದ ಕುಮಾರಿ ಇರ್ತಿಜಾ ಮೊಹಮ್ಮದ್ ಇರ್ಫಾನ್ ಶಿರಗೂರ ಇವರು ಅತಿ ಚಿಕ್ಕ ವಯಸ್ಸಿನ ಅಂದರೆ 1 ವರ್ಷ 7 ತಿಂಗಳಿನಲ್ಲಿ ಅತಿ ಹೆಚ್ಚು ಬುದ್ಧಿಶಕ್ತಿ ಮತ್ತು ಜ್ಞಾಪಕ ಶಕ್ತಿ ಹೊಂದಿರುವ ಮಗುವೆಂದು ಗುರುತಿಸಿಕೊಂಡಿದೆ. ಅತಿ ಚಿಕ್ಕ ವಯಸ್ಸಿನಲ್ಲಿ ತಾನು ಹೊಂದಿದ ಅಪಾರ ಬುದ್ಧಿ ಶಕ್ತಿಯಿಂದಾಗಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಿಸಿಕೊಂಡಿದೆ. ಪಕ್ಷಿಗಳನ್ನ ಗುರುತಿಸೋದು, ವಸ್ತುಗಳನ್ನ ಗುರುತಿಸುವುದು, ಸನ್ನೆಗಳನ್ನ ಸರೆಯುವುದು ಹೀಗೆ ನಾನಾ ವಿಷಯಗಳಲ್ಲಿ ಬುದ್ಧಿ ಶಕ್ತಿ ಹೊಂದಿದ ಮಗು ಎಂದು ದಾಖಲೆ ಮಾಡಿದೆ..
ವಿಶ್ವ ಶಾಂತಿಗಾಗಿ 18 ಕೋಟಿ ಜಪಯಜ್ಞ: ಹೊಸ ದಾಖಲೆಗೆ ಸಾಕ್ಷಿಯಾದ ವಿಜಯಪುರ!
ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸೇರಿದ್ದು ಹೇಗೆ?
ಪುಟಾಣಿ ಇರ್ತಿಜಾ ಈ ಪಾರ್ಟ್ಸ್ ಆಫ್ ಬಾಡಿಗಳನ್ನ ಗುರುತಿಸುತ್ತಾಳೆ. ಹಾಗೂ ಎಲ್ಲ ಬಣ್ಣಗಳನ್ನ ಕರೆಕ್ಟಾಗಿ ಗುರುತಿಸುತ್ತಾಳೆ. ಇನ್ನು ವಾಹನಗಳನ್ನ ಗುರುತಿಸುವ ಇರ್ತಿಜಾ ಯಾವ ವಾಹನ ಯಾವುದು? ಹೆಸರೇನು ಎಂಬುದನ್ನ ಪಕ್ಕಾ ಕಂಡು ಹಿಡಿತಾಳೆ. ಇನ್ನು ಪಕ್ಷಿಗಳ ವಿಚಾರಕ್ಕೆ ಬಂದರೆ ಹತ್ತಾರು ಪಕ್ಷಿಗಳನ್ನ ಪಟಪಟನೆ ಗುರುತಿಸ್ತಾಳೆ. ಕಾಡುಪ್ರಾಣಿಗಳು ಯಾವವು? ಸಾಕುಪ್ರಾಣಿಗಳು ಯಾವವು? ಅನ್ನೋದನ್ನ ಸರಿಯಾಗಿ ಗುರುತಿಸ್ತಾಳೆ. ಹಣ್ಣುಗಳು, ತರಕಾರಿಗಳು, ಸಮುದ್ರ ಜೀವಿಗಳು ರಾಷ್ಟ್ರೀಯ ಲಾಂಛನಗಳನ್ನು ಬಹಳ ಸರಳವಾಗಿ ಗುರುತಿಸುತ್ತಾರೆ.. ಇದಷ್ಟೇ ಅಲ್ಲ Action words ಮಾಡಿ ತೋರಿಸುತ್ತಾಳೆ...
ಇರ್ತಿಜಾ ಇಷ್ಟು ಚಿಕ್ಕವಯಸ್ಸಿನಲ್ಲಿ ಇಷ್ಟೆಲ್ಲ ವಸ್ತುಗಳು, ಪ್ರಾಣಿ ಪಕ್ಷಿಗಳನ್ನ, ಬಾಡಿ ಪಾರ್ಟ್ಸ್ ಗಳನ್ನ ಗುರುತಿಸೋದನ್ನ ಕಂಡು ತಂದೆ-ತಾಯಿ ಶಾಕ್ ಆಗಿದ್ದಾರೆ.
ತಾಯಿಗೆ ಸಲ್ಲಬೇಕು ಬಾಲಕಿಯ ಕೀರ್ತಿ.!
ಇರ್ತಿಜಾ ತಾಯಿ ತಬಸ್ಸುಮ್ ರವರು ಆರೋಗ್ಯ ಇಲಾಖೆಯಲ್ಲಿ ಆರೋಗ್ಯ ನಿರೀಕ್ಷಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಕೊರೋನಾ ಕಾಲದಲ್ಲಿ ಕೆಲಸದ ಒತ್ತಡದಲ್ಲಿನು ಮಗುವಿಗೆ ಇಷ್ಟೆಲ್ಲ ಕಲಿಸಿ ತಾಯಿಯ ಜವಾಬ್ದಾರಿ ವಹಿಸಿದ್ದಾರೆ. ತಾಯಿಯ ಜೊತೆ ತಂದೆಯೂ ಸಹ ಪ್ರೋತ್ಸಾಹಿಸುತ್ತಿದ್ದರು ಮಗುವಿನ ಸಾಧನೆಗೆ ಕುಟುಂಬಸ್ಥರು ಸ್ನೇಹಿತರು ಊರಿನ ಹಿರಿಯರು ಮತ್ತು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಇಬ್ಬರು ಪುಟಾಣಿಗಳಿಂದ ಬ್ಯಾಕ್ ಟು ಬ್ಯಾಕ್ ರೆಕಾರ್ಡ್..!
ಇರ್ತಿಜಾ ಅಷ್ಟೇ ಅಲ್ಲ ಮುದ್ದೇಬಿಹಾಳ ಪಟ್ಟಣದಲ್ಲಿ ವಾಸವಿರುವ ಮೂಲತಃ ನಿಡಗುಂದಿ ತಾಲೂಕಿನ ಇಟಗಿ (Itagi) ಗ್ರಾಮದವರಾದ ಚಂದ್ರು (Chandru) ಹಾಗೂ ಶಿಲ್ಪಾ ಗಣಾಚಾರಿ ದಂಪತಿಯ ಪುತ್ರ ಗಗನದೀಪ್ ಗಣಾಚಾರಿ ಎನ್ನುವ 1 ವರ್ಷ 11 ತಿಂಗಳ ಬಾಲಕನು ಇದೇ ರೀತಿಯಲ್ಲಿ ಸಾಧನೆ ಮಾಡಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಲಿಸ್ಟ್ ಸೇರಿದ್ದಾನೆ.
ಗಗನ್ ದೀಪ್ ರೆಕಾರ್ಡ್ ಮಾಡಿದ್ದು ಹೇಗೆ.?!
ಗಗನದೀಪ್ ಆಂಗ್ಲಭಾಷೆಯ ವರ್ಣಮಾಲೆ ಹೇಳುವುದು, ದೇಹದ 22 ಅಂಗಗಳನ್ನು ಗುರುತಿಸುವುದು, ಒಂಭತ್ತು ಬಗೆಯ ಒಳಾಂಗಣ,10 ಬಗೆಯ ಹೊರಾಂಗಣ ಕ್ರೀಡೆಗಳನ್ನು ಗುರುತಿಸುವುದು, ಐದು ಆಕಾರಗಳನ್ನು ಗುರುತಿಸುವಿಕೆ,10 ಉದ್ಯೋಗಗಳನ್ನು ಗುರುತಿಸುವಿಕೆ, ಐದು ಆರ್ಗನ್ಸ್ , 35 ಸಾಮಾನ್ಯ ಸಂಗತಿಗಳು, 35 ಪ್ರಾಣಿಗಳು, ಐದು ಪಕ್ಷಿಗಳು, ಏಳು ಕೀಟಗಳು,11 ವಿವಿಧ ಬಗೆಯ ವಾಹನಗಳು,ಎಂಟು ಹಣ್ಣುಗಳು, ಆರು ವಿವಿಧ ತರಕಾರಿಗಳು,13 ಆಹಾರದ ಹೆಸರುಗಳು, ಸಸಿಯ ನಾಲ್ಕು ಭಾಗಗಳು, 11 ವಿವಿಧ ಪ್ರಾಣಿಗಳ ಶಬ್ದಗಳನ್ನು ಗುರುತಿಸುವುದಲ್ಲದೇ ಅವುಗಳ ಹೆಸರು ಹೇಳುತ್ತಾನೆ. ಈ ಬಗ್ಗೆಯು ಕೂಡ ನಿಮ್ಮ ಏಷ್ಯಾನೆಟ್ ಸುವರ್ಣ ನ್ಯೂಜ್.ಕಾಮ್ ಸುದ್ದಿಯನ್ನ ಪ್ರಕಟಿಸಿತ್ತು...