ಕೆಲವು ಸಂದರ್ಭಗಳಲ್ಲಿ ಮಕ್ಕಳು ಪೋಷಕರಿಗಿಂತ ಹೆಚ್ಚು ಜವಾಬ್ದಾರಿಯುತವಾಗಿ ಸಂದರ್ಭವನ್ನು ನಿರ್ವಹಿಸಿ ಅಚ್ಚರಿ ಮೂಡಿಸುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಪುಟ್ಟ ಬಾಲಕನೋರ್ವ ಸಮಯಪ್ರಜ್ಞೆ ತೋರಿ ತನ್ನ ಪುಟ್ಟ ಸಹೋದರನ ಜೀವ ಉಳಿಸಿದ್ದಾನೆ.
ಬೆಂಗಳೂರು: ಈಗಿನ ಜನರೇಷನ್‌ನ ಮಕ್ಕಳು ತುಂಬಾ ಬುದ್ಧಿವಂತರು. ಪೋಷಕರಿಗಿಂತಲೂ ಬಹಳ ಸ್ಮಾರ್ಟ್ ಆಗಿ ಯೋಚಿಸುವ ಮಕ್ಕಳು ಅಷ್ಟೇ ಸ್ಮಾರ್ಟ್ ಆಗಿ ಕೆಲಸ ನಿರ್ವಹಿಸುತ್ತಾರೆ. ಈಗಿನ ಮಕ್ಕಳು ಬಹಳ ಬುದ್ಧಿವಂತರೂ ಎನ್ನುವುದಕ್ಕೆ ಹಲವು ನಿದರ್ಶನಗಳು ಸಾಕ್ಷಿಯಾಗಿವೆ. ಕೆಲವು ಸಂದರ್ಭಗಳಲ್ಲಿ ಮಕ್ಕಳು ಪೋಷಕರಿಗಿಂತ ಹೆಚ್ಚು ಜವಾಬ್ದಾರಿಯುತವಾಗಿ ಸಂದರ್ಭವನ್ನು ನಿರ್ವಹಿಸಿ ಅಚ್ಚರಿ ಮೂಡಿಸುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಪುಟ್ಟ ಬಾಲಕನೋರ್ವ ಸಮಯಪ್ರಜ್ಞೆ ತೋರಿ ತನ್ನ ಪುಟ್ಟ ಸಹೋದರನ ಜೀವ ಉಳಿಸಿದ್ದಾನೆ.
ಸಾಮಾನ್ಯವಾಗಿ ಕೈಕಾಲು ಹುಟ್ಟದ ಅಂಬೆಗಾಲಿಡುವ ಮಕ್ಕಳು (Kids) ಕೈಗೆ ಸಿಕ್ಕಿದ್ದೆಲ್ಲವನ್ನು ಬಾಯಿಗೆ ಹಾಕಿಕೊಳ್ಳುತ್ತಾರೆ. ಅಂಬೆಗಾಲಿಡುವ ಮಕ್ಕಳಿದ್ದ ಮನೆಯಲ್ಲಿ ತಾಯಿ ಮಗುವನ್ನು ಬಿಟ್ಟು ಒಂದು ಕ್ಷಣ ಅತ್ತಿತ್ತ ಹೋದರು ಅನಾಹುತ ಗ್ಯಾರಂಟಿ ಅದಕ್ಕೆ ಕಾರಣ ಮಕ್ಕಳ, ಈ ಕೈಗೆ ಸಿಕ್ಕಿದ್ದನ್ನು ಬಾಯಿಗೆ ತುಂಬಿಸುವ ಹವ್ಯಾಸ. ಹಾಗೆಯೇ ಇಲ್ಲೊಂದು ಕಡೆ ಪುಟ್ಟ ಮಗುವೊಂದು ಕೈಗೆ ಸಿಕ್ಕ ಏನೋ ವಸ್ತುವನ್ನು ಬಾಯಿಗೆ ಹಾಕಿಕೊಂಡು ನುಂಗಲು ಯತ್ನಿಸಿದ್ದಾನೆ. ಇದನ್ನು ಕೂಡಲೇ ಮಗುವಿನ ಹಿರಿಯ ಸಹೋದರ ಗಮನಿಸಿದ್ದು, ಕೂಡಲೇ ಅದನ್ನು ಮಗುವಿನ ಬಾಯಿಯಿಂದ ತೆಗೆದು ದೂರ ಬಿಸಾಕಿ ಪುಟಾಣಿ ತಮ್ಮನ ಜೀವ ಉಳಿಸಿದ್ದಾನೆ. ಒಂದು ವೇಳೆ ಈ ಪುಟ್ಟ ಮಗು ಈ ವಸ್ತುವನ್ನು ನುಂಗಿದ್ದರೆ ಅದು ದೊಡ್ಡ ಅನಾಹುತವಾಗುವ ಸಾಧ್ಯತೆ ಇತ್ತು. ಆದರೆ ಸಹೋದರನ ಸಮಯಪ್ರಜ್ಞೆಯಿಂದಾಗಿ ಬಾಲಕನ ಜೀವ ಉಳಿದಿದೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ (Social Media) ಟ್ವಿಟ್ಟರ್‌ನಲ್ಲಿ chris evans ಎಂಬುವವರು ಪೋಸ್ಟ್ ಮಾಡಿದ್ದಾರೆ. ಇದಕ್ಕೂ ಮೊದಲು ಈ ವಿಡಿಯೋವನ್ನು ಟಿಕ್‌ಟಾಕ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಈ ವಿಡಿಯೋವನ್ನು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ವೈರಲ್ ಆಗಿರುವ ವೀಡಿಯೊದಲ್ಲಿ (Viral Video) ಕಾಣಿಸುವಂತೆ ಮೂರು ವರ್ಷದ ಬಾಲಕ ತನ್ನ ತಾಯಿ (Mother) ಮತ್ತು ಅಣ್ಣನ ಉಪಸ್ಥಿತಿಯಲ್ಲಿ ತನ್ನ ಹುಲಾ-ಹೂಪ್ (hula hoop) ಜೊತೆ ಆಡುತ್ತಿದ್ದ, ಆಟವಾಡುತ್ತಾ ಆಡುತ್ತಾ ಬಾಲಕ ಅಲ್ಲೇ ಇದ್ದ ಏನೋ ವಸ್ತುವನ್ನು ಎತ್ತಿ ಬಾಯಿಗೆ ತುಂಬಿಸಿಕೊಂಡು ಚಪ್ಪರಿಸಲು ಶುರು ಮಾಡಿದ್ದಾನೆ. ಇತ್ತ ಇನ್ನೊಂದು ಕಡೆ ಆತನ ಅಣ್ಣನೂ ಕೂಡ ಹುಲಾ-ಹೂಪ್ ಜೊತೆ ಆಡುತ್ತಿದ್ದು, ಕೂಡಲೇ ಆತ ತನ್ನ ಪುಟ್ಟ ತಮ್ಮ ಏನೋ ಜಗಿಯುವುದನ್ನು ಗಮನಿಸಿದ್ದಾನೆ. ಕೂಡಲೇ ಆತ ತಮ್ಮನ ಬಾಯಿಗೆ ಕೈ ಹಾಕಿ ಬಾಯಿಯೊಳಗಿದ್ದ ವಸ್ತುವನ್ನು ತೆಗೆದು ಹೊರ ಹಾಕಿದ್ದಾನೆ. ಈ ಎಲ್ಲಾ ದೃಶ್ಯ ಅಲ್ಲಿದ್ದ ಕ್ಯಾಮರಾದಲ್ಲಿ ಸೆರೆ ಆಗಿದೆ. ಬಾಲಕನ ಸಮಯೋಚಿತ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕರು ಬಾಲಕನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈತ ತುಂಬಾ ಪ್ರಬುದ್ಧನಾಗಿದ್ದಾನೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.
