ಲಾಹೋರ್(ಮಾ.19): ಇದು ನಂಬೋಕೆ ಕಷ್ಟ ಆಗಬಹುದು. ಆದರೆ ಇದು ನಿಜ. ಮುರಿದ ಗಾಜು, ಮಾಂಸ ಕೊಚ್ಚುವ ಕತ್ತಿ ಹಿಡಿದಯ ಕೂದಲನ್ನು ಸ್ಟೈಲಿಂಗ್ ಮಾಡೋ ಮತ್ತು ಕತ್ತರಿಸುವ ವಿಶಿಷ್ಟ ವಿಧಾನಕ್ಕಾಗಿ ಲಾಹೋರ್‌ನ ಕ್ಷೌರಿಕರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ.

ಕೆಲವು ಗ್ರಾಹಕರ ಕೂದಲನ್ನು ಸ್ಟೈಲ್ ಮಾಡಲು ಅಲಿ ಅಬ್ಬಾಸ್ ಬೆಂಕಿಯನ್ನು ಸಹ ಬಳಸುತ್ತಾರೆ. ಎಆರ್‌ವೈ ನ್ಯೂಸ್ ಯೂಟ್ಯೂಬ್‌ನಲ್ಲಿ ಪ್ರಕಟವಾದ ವಿಡಿಯೋದಲ್ಲಿ ಅಲಿಯ ಸ್ಟೋರಿ ಶೇರ್ ಮಾಡಲಾಗಿದೆ. ವಿಡಿಯೋದಲ್ಲಿ ಅಲಿ ತಮ್ಮ ವೃತ್ತಿಯಲ್ಲಿ ಹೊಸತನದ ತಂತ್ರಗಳನ್ನು ಬಳಸುತ್ತಾ ಹೋಗುವುದು ಅವರ ಉದ್ದೇಶ ಎಂದು ಹೇಳಿದ್ದಾರೆ.

15 ವರ್ಷಕ್ಕಿಂತ ಹಳೆ ವಾಹನ ಮಾಲಿಕರಿಗೆ ಬಿಗ್ ಶಾಕ್ : ಭಾರಿ ದುಬಾರಿ ಶುಲ್ಕ

ಒಡೆದ ಗಾಜಿನ ಬಾಟಲಿಯ ತುಂಡಿನಿಂದ ಮನುಷ್ಯನ ಕೂದಲನ್ನು ಸ್ಟೈಲಿಂಗ್ ಮಾಡುವಾಗ, ಅಲಿ,ಏನಾದರೂ ಹೊಸತು ಮಾಡೋಣವೆಂದು ಪ್ರಯತ್ನಿಸುತ್ತಲೇ ಇರುತ್ತೇನೆ. ನಾನು ಅವರ ಕೂದಲನ್ನು ಗಾಜಿನಿಂದ ಕತ್ತರಿಸಿ ಪದರಗಳಲ್ಲಿ ವಿನ್ಯಾಸಗೊಳಿಸಿದೆ ಎಂದಿದ್ದಾರೆ.

ಗ್ರಾಹಕರ ಕೂದಲನ್ನು ಸ್ಟೈಲ್ ಮಾಡಲು ಅಲಿ ಒಂದು ಸುತ್ತಿಗೆಯನ್ನು ಸಹ ಬಳಸಿದ್ದಾರೆ, ಅವರು ಈ ಕೆಲಸ ನಿಜವಾಗಿಯೂ ಎಂಜಾಯ್ ಮಾಡುತ್ತಾರೆಂದು  ವೀಡಿಯೊದಲ್ಲಿ ಹೇಳಿದ್ದಾರೆ.

ಮಾಡ್ತಾರೆಅಂಬಾನಿ ಮನೆ ಬಳಿ ಸ್ಫೋಟಕ ತುಂಬಿದ ಕಾರು ಪತ್ತೆ: ಮಾಲಿಕನ ಸಾವಿಗೆ ಮತ್ತೊಂದು ಟ್ವಿಸ್ಟ್

ತನ್ನ ಗ್ರಾಹಕರೊಬ್ಬರಿಗಾಗಿ ಅಲಿ ಮಾಂಸ ಕತ್ತರಿಸೋ ಚಾಕುವನ್ನು ಬಳಸುತ್ತಾರೆ. "ನಾನು ನಿಜವಾಗಿಯೂ ಹ್ಯಾಪಿ. ಮೊದಲು ಈ ಕೆಲಸ ಮಾಡುವಾಗ ಸ್ವಲ್ಪ ಹೆದರುತ್ತಿದ್ದೆ. ಆದರೆ ಅದು ನಿಜವಾಗಿಯೂ ಒಳ್ಳೆಯದು ಎಂದು ಅವರು ಹೇಳಿದ್ದಾರೆ.