ರಾಮ ಸಿಯಾ ರಾಮ್ ಜಪಿಸಿದ ಕಿಲಿ ಪೌಲ್, ಶ್ರೀರಾಮನ ಆಶೀರ್ವಾದ ಪಡೆಯಲು ಉತ್ಸುಕರಾದ ಸ್ಟಾರ್!

ತಾಂಜೇನಿಯಾದ ಕಿಲಿ ಪೌಲ್ ಹಾಗೂ ನೀಮಾ ಪೌಲ್ ಭಾರತದಲ್ಲಿ ಅತ್ಯಂತ ಜನಪ್ರಿಯ. ಇದೀಗ ಆಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಕಿಲಿ ಹಾಗೂ ನೀಮಾ ಪೌಲ್ ಶ್ರೀರಾಮನ ಹಲವು ಭಜನೆಗಳಿಗೆ ಲಿಪ್ ಸಿಂಕ್ ಮಾಡಿದ್ದಾರೆ. ಇದೀಗ ಕಿಲಿ ಪೌಲ್ ರಾಮ್ ಸಿಯಾ ರಾಮ್ ಜಪಿಸುವ ಮೂಲಕ ದಕ್ಷಿಣಾ ಆಫ್ರಿಕಾದಲ್ಲಿ ಶ್ರೀರಾಮನ ಘೋಷಣೆ ಮೊಳಗಿದೆ. 

Kili Paul chants Ram siya Ram ask somebody invite me for Ram Mandir to seek blessing ckm

ದಕ್ಷಿಣಾ ಆಫ್ರಿಕಾ(ಜ.17) ಬಾಲಿವುಡ್ ಹಾಡುಗಳಿಗೆ ಲಿಪ್ ಸಿಂಕ್ ಮೂಲಕ ವಿಡಿಯೋ ಮಾಡುವ ತಾಂಜೇನಿಯಾದ ಕಿಲಿ ಪೌಲ್ ಹಾಗೂ ನೀಮಾ ಪೌಲ್ ಭಾರತದಲ್ಲಿ ಅತ್ಯಂತ ಜನಪ್ರಿಯ. ಪ್ರಧಾನಿ ಮೋದಿ ತಮ್ಮ ಮನ್ ಕಿ ಬಾತ್‌ನಲ್ಲಿ ಕಿಲಿ, ನೀಮಾ ಪೌಲ್ ಕುರಿತು ಉಲ್ಲೇಖಿಸಿದ್ದರು. ಇತ್ತೀಚೆಗೆ ಬಾಲಿವುಡ್, ಸ್ಯಾಂಡಲ್‌ವುಡ್ ಹಾಡುಗಳ ಜೊತೆಗೆ ಆಯೋಧ್ಯೆ ಶ್ರೀರಾಾಮನ ಭಜನೆ, ಹಾಡುಗಳಿಗೂ ಲಿಪ್ ಸಿಂಕ್ ಮಾಡಿ ಭಾರಿ ಮೆಚ್ಚುಗೆ ಗಳಿಸಿದ್ದಾರೆ. ಇದೀಗ ಕಿಲಿ ಪೌಲ್, ಖುದ್ದು ರಾಮ್ ಸಿಯಾ ರಾಮ್ ಜಪಿಸಿದ್ದಾರೆ. ತಾವೇ ಖುದ್ದು ರಾಮ್ ಸಿಯಾ ರಾಮ್ ಜಪಿಸುವ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ದನಗಳ ಕೊಟ್ಟಿಗೆ ಪಕ್ಕದಲ್ಲಿ ನಿಂತು ಕಿಲಿ ಪೌಲ್, ರಾಮ್ ಸಿಯಾ ರಾಮ್ ಜಪಿಸಿದ್ದಾರೆ. ಅಪಾರ ಗೋವುಗಳ ಮುಂದೆ ನಿಂತು ಕಿಲಿ ಪೌಲ್ ಮಾಡಿದ ಈ ಮಂತ್ರ ಘೋಷಣೆಗೆ ಭಾರತದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ವಿಡಿಯೋ ಪೋಸ್ಟ್ ಮಾಡಿ ಮಹತ್ವದ ಸಂದೇಶವೊಂದನ್ನು ಭಾರತೀಯರಿಗೆ ಕಳುಹಿಸಿದ್ದಾರೆ. ನಾನು ಆಯೋಧ್ಯೆಗೆ ಭೇಟಿ ನೀಡಲು ಉತ್ಸುಕವಾಗಿದ್ದೇನೆ. ಯಾರಾದರೂ ನನಗೆ ಆಯೋಧ್ಯೆ ರಾಮ ಮಂದಿರಕ್ಕೆ ಆಹ್ವಾನ  ನೀಡಿ ಎಂದು ಕಿಲಿ ಪೌಲ್ ವಿನಂತಿಸಿಕೊಂಡಿದ್ದಾರೆ.

 

ಗೊಂಬೆ ಹೇಳುತೈತೆ ಹಾಡಿಗೆ ಕಿಲಿ ಪಾಲ್‌ ಲಿಪ್ ಸಿಂಕ್: ವಿಡಿಯೋ ವೈರಲ್

ತಾಂಜಾನಿಯಾ ಸ್ಟಾರ್ ಕಿಲಿ ಪೌಲ್ ಜೊತೆಗೆ ಭಾರತೀಯ ಧೂತವಾಸ ಕಚೇರಿ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಈಗಾಗಲಿ ಕಿಲಿ ಪೌಲ್‌ನ ಕಚೇರಿಕೆಗೆ ಕರೆಸಿ ಸನ್ಮಾನ ಮಾಡಿದೆ. ಹೀಗಾಗಿ ಕಿಲಿ ಪೌಲ್‌ಗೆ ರಾಮ ಮಂದಿರ ಆಹ್ವಾನ ನೀಡುವ ಸಾಧ್ಯತೆಗಳಿವೆ ಅನ್ನೋ ಮಾತುಗಳು ಕೇಳಿಬಂದಿದೆ. ಆದರೆ ಯಾವುದೇ ಸ್ಪಷ್ಟತೆ ಇಲ್ಲ. 

 

 
 
 
 
 
 
 
 
 
 
 
 
 
 
 

A post shared by Kili Paul (@kili_paul)

 

ಕಿಲಿ ಪೌಲ್ ಬಾಲಿವುಡ್ ಮಾತ್ರವಲ್ಲ ಕನ್ನಡ ಸಿನಿಮಾ ಹಾಡುಗಳಿಗೆ ಲಿಪ್ ಸಿಂಕ್ ಮಾಡಿ ಭಾರಿ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಕಿಲಿ ಪೌಲ್ ಹಾಗೂ ನೀಮಾ ಪೌಲ್ ಈ ಪ್ರತಿಭೆಯನ್ನು ಪ್ರಧಾನಿ ಮೋದಿ ತಮ್ಮ ಮನ್ ಕಿ ಬಾತ್‌ನಲ್ಲಿ ಗುರುತಿಸಿ ಅಭಿನಂದಿಸಿದ್ದರು. ತಾಂಜೇನಿಯಾ ಮೂಲದ ಕಿಲಿ ಪೌಲ್‌ ಮತ್ತು ನೀಮಾ ಬಗ್ಗೆ ಪ್ರಸ್ತಾಪಿಸಿದ ಮೋದಿ, ‘ತಾಂಜೇನಿಯಾ ಮೂಲದ ಕಿಲಿ ಮತ್ತು ನೀಮಾ ಭಾರತೀಯ ಹಾಡುಗಳಿಗೆ ಲಿಪ್‌ಸಿಂಕ್‌ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹೊಸ ಅಲೆ ಎಬ್ಬಿಸಬಹುದಾದರೆ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಮಯದಲ್ಲಿ ಕನ್ನಡಿಗರು, ಕಾಶ್ಮೀರಿ ಹಾಡುಗಳಿಗೆ ಏಕೆ ಲಿಪ್‌ ಸಿಂಕ್‌ ಮಾಡಲಾಗದು, ಕೇರಳದವರು ಅಸ್ಸಾಮಿ ಭಾಷೆಯ ಹಾಡುಗಳಿಗೆ ಏಕೆ ಧ್ವನಿಯಾಗಬಾರದು. ಹೀಗಾಗಿ ಪ್ರತಿ ಯವಸಮೂಹವು ಭಾರತದ ಜನಪ್ರಿಯ ಗೀತೆಗಳನ್ನು ಬೇರೆ ಬೇರೆ ಭಾಷೆಗಳಲ್ಲಿ ಹಾಡಿ, ಅದನ್ನು ವಿಡಿಯೋ ಮಾಡಿ ಅದನ್ನು ಜನಪ್ರಿಯಗೊಳಿಸಬೇಕು. ಇದು ನಮ್ಮ ಹೊಸ ಪೀಳಿಗೆಗೆ ದೇಶದ ವೈವಿಧ್ಯತೆಯನ್ನು ಪರಿಚಯಿಸಲು ನೆರವಾಗುತ್ತದೆ ಮತ್ತು ಏಕ ಭಾರತ, ಶ್ರೇಷ್ಠ ಭಾರತದ ಅನುಭವ ಪಡೆಯಲು ಸಾಧ್ಯ ಮಾಡಿಕೊಡುತ್ತದೆ’ ಎಂದು ಹೇಳಿದರು.

ತಾಂಜೇನಿಯಾದಲ್ಲೂ ಕೆಜಿಎಫ್‌ 2 ಹವಾ; ಕಿಲಿ ಪಾಲ್ ಬಾಯಲ್ಲಿ ಕೆಜಿಎಫ್ ಡೈಲಾಗ್.!

Latest Videos
Follow Us:
Download App:
  • android
  • ios