Asianet Suvarna News Asianet Suvarna News

ಗೊಂಬೆ ಹೇಳುತೈತೆ ಹಾಡಿಗೆ ಕಿಲಿ ಪಾಲ್‌ ಲಿಪ್ ಸಿಂಕ್: ವಿಡಿಯೋ ವೈರಲ್

ಕಿಲಿ ಪಾಲ್‌ ಅಪ್ಪು ಹಾಡಿಗೆ ಲಿಪ್ ಸಿಂಕ್ ಮಾಡುವ ಮೂಲಕ ಪೋಸ್ಟ್ ಮಾಡಿದ ವೀಡಿಯೊ ತಕ್ಷಣವೇ ವೈರಲ್ ಆಗಿದ್ದು, ನೆಟಿಜನ್‌ಗಳು ಮೆಚ್ಚಿಕೊಂಡಿದ್ದಾರೆ.

First Published Jun 20, 2023, 3:33 PM IST | Last Updated Jun 20, 2023, 3:33 PM IST

ಟಾಂಜೇನಿಯಾದ ಕಂಟೆಂಟ್ ಕ್ರಿಯೇಟರ್, ಕಿಲಿ ಪಾಲ್ ಅವರು ವಿಶೇಷವಾಗಿ Instagram  ನಲ್ಲಿ ತಮ್ಮ ಸೊಗಸಾದ ನೃತ್ಯ ಚಲನೆಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರ ಬಹುತೇಕ ಎಲ್ಲಾ ವಿಡಿಯೋಗಳು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳೊಂದಿಗೆ ದೊಡ್ಡ ಪ್ರೇಕ್ಷಕರನ್ನು ತಕ್ಷಣವೇ ಸೆಳೆಯುತ್ತವೆ. ಕಿಲಿ ಪಾಲ್‌ ಅಪ್ಪು ಹಾಡಿಗೆ ಲಿಪ್ ಸಿಂಕ್ ಮಾಡುವ ಮೂಲಕ ಪೋಸ್ಟ್ ಮಾಡಿದ ವೀಡಿಯೊ ತಕ್ಷಣವೇ ವೈರಲ್ ಆಗಿದ್ದು, ನೆಟಿಜನ್‌ಗಳು ಮೆಚ್ಚಿಕೊಂಡಿದ್ದಾರೆ. ಇದು ಕಿಲಿ ಮತ್ತು ಅವರ ಸಹೋದರಿ ನೀಮಾ ಪೌಲ್ ಅವರು ಅಪ್ಪುವಿನ ರಾಜಕುಮಾರ ಸಿನಿಮಾದ ಬೊಂಬೆ ಹೇಳುತೈತೆ ಹಾಡಿಗೆ ಲಿಪ್‌ ಸಿಂಕ್ ಮಾಡಿದ್ದಾರೆ.ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಹಂಚಿಕೊಂಡ ಕಿಲಿ, = May This Be Special To All Kannada All Fans Of Star #puneethrajkumar and the whole india n whole world ..Legends never die ❤ಎಂದು ಬರೆದಿದ್ದಾರೆ. ವೀಡಿಯೊವನ್ನು ‘ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದಿದೆ. 

ಇದನ್ನೂ ವೀಕ್ಷಿಸಿ: ವಿವಾದಗಳ ಗೂಡಾಗಿದೆ ಪ್ರಭಾಸ್ ನಟನೆಯ ಆದಿಪುರುಷ್!: ಇನ್ಮುಂದೆ ಬಾಲಿವುಡ್ ಸಿನಿಮಾಗೆ ಹೊಸ ರೂಲ್ಸ್‌!