ಸಾಮಾನ್ಯವಾಗಿ ದೆವ್ವ ಬಿಡಿ ದೆವ್ವದಂತೆ ವೇಷ ತೊಟ್ಟವರನ್ನು ನೋಡಿದರೆ ದೊಡ್ಡವರೆ ಹೆದರಿ ಓಡುತ್ತಾರೆ. ಅಂತಹದರಲ್ಲಿ ಪುಟ್ಟು ಮಗುವೊಂದು ದೆವ್ವದ ವೇಷ ತೊಟ್ಟಿದ್ದವನ ದಿಟ್ಟಿಸಿ ಕೈ ಚಾಚಿ ತಬ್ಬಿಕೊಂಡಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ದೆವ್ವ ಬಿಡಿ ದೆವ್ವದಂತೆ ವೇಷ ತೊಟ್ಟವರನ್ನು ನೋಡಿದರೆ ದೊಡ್ಡವರೆ ಹೆದರಿ ಓಡುತ್ತಾರೆ. ಅಂತಹದರಲ್ಲಿ ಪುಟ್ಟು ಮಗುವೊಂದು ದೆವ್ವದ ವೇಷ ತೊಟ್ಟಿದ್ದವನ ದಿಟ್ಟಿಸಿ ಕೈ ಚಾಚಿ ತಬ್ಬಿಕೊಂಡಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಗುವಿನ ಧೈರ್ಯ ಹಾಗೂ ಮುಗ್ಧತೆಗೆ ನೆಟ್ಟಿಗರು ಶಹಭಾಷ್ ಎಂದಿದ್ದಾರೆ. ಹ್ಯಾಲೋವೀನ್ ಆಚರಣೆಯ ಸಂಭ್ರಮದಲ್ಲಿರುವ ಪಾಶ್ಚಿಮಾತ್ಯ ದೇಶದಲ್ಲಿ ಈ ಘಟನೆ ನಡೆದಿದೆ.
ವಿದೇಶಗಳಲ್ಲಿ ಹ್ಯಾಲೋವೀನ್ ಆಚರಣೆಯ ಸಂಭ್ರಮ ಜೋರಾಗಿದ್ದು, ಹ್ಯಾಲೋವೀನ್ ಆಚರಣೆಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ರಾರಾಜಿಸುತ್ತಿವೆ. ಅನೇಕರು ಈ ಹಬ್ಬದ ಆಚರಣೆಗೆ ಈ ರೀತಿಯ ವಿವಿಧ ವೇಷಗಳನ್ನು ಖರೀದಿಸುವುದರಲ್ಲಿ ತೊಡಗಿದ್ದಾರೆ. ಈ ಮಧ್ಯೆ ಹ್ಯಾಲೋವೀನ್ ವೇಷಧಾರಿಯ ಜೊತೆ ಪುಟಾಣಿ ಹೆದರದೇ ಪ್ರೀತಿಯಿಂದ ವರ್ತಿಸಿರುವ ವಿಡಿಯೋ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾ ಇನ್ಲುಯೆನ್ಸರ್ ಜೈ ಶೆಟ್ಟಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಡಿಯೋದಲ್ಲಿ ಕಾಣಿಸುವಂತೆ ಹ್ಯಾಲೋವೀನ್ ವೇಷಧಾರಿಯೊಬ್ಬ ಮಗುವಿನ ಹಿಂಭಾಗದಿಂದ ಬಂದು ಕೋಲಿನಿಂದ ಮಗುವನ್ನು ಮುಟ್ಟುತ್ತಾನೆ. ಈ ವೇಳೆ ಹಿಂದೆ ತಿರುಗಿ ನೋಡುವ ಮಗು, ಆ ಹ್ಯಾಲೋವಿನ್ ವೇಷಧಾರಿಯನ್ನು ಕೆಲ ಕಾಲ ದಿಟ್ಟಿಸಿ ನೋಡಿ ತನ್ನೆರಡು ಕೈಗಳನ್ನು ಚಾಚಿ ತಬ್ಬಿಕೊಳ್ಳಲು ಮುಂದಾಗುತ್ತದೆ. ಮಗುವಿನ ಪ್ರೀತಿ ನೋಡಿದ ಹ್ಯಾಲೋವೀನ್ ವೇಷಧಾರಿ ಓಡಿ ಬಂದು ಮಗುವನ್ನು ತಬ್ಬಿಕೊಳ್ಳುತ್ತಾನೆ.
ಈ ಮಗುವಿಗೆ ಪ್ರೀತಿ ಮಾತ್ರ ಗೊತ್ತು ಎಂದು ಬರೆದು ಈ ವಿಡಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ನೋಡಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ವಿಡಿಯೋ ನನ್ನ ಕಣ್ಣಲ್ಲಿ ನೀರು ತರಿಸಿತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆತ ಹೆದರಲಿಲ್ಲ. ಬದಲಾಗಿ ಪ್ರೀತಿ ನೀಡಲು ಬಯಸಿದ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ನೋಡಿ ನಾವು ಕಲಿಯಬೇಕಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಆದರೆ ಮಗುವಿನ ಬಳಿ ಹೀಗೆಕೆ ಮಾಡಿದ್ದೀರಿ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಸೀರಿಯಲ್ ಕಿಲ್ಲರ್ ರೀತಿ ವೇಷ ತೊಟ್ಟು ಮಗುವನ್ನು ಹೆದರಿಸಲೆತ್ನಿಸಿದ್ದೇಕೆ ಎಂದು ಮತ್ತೊಬ್ಬರು ಕೇಳಿದ್ದಾರೆ.
ಹ್ಯಾಲೋವೀನ್ ಆಚರಣೆ ವೇಳೆ ಭೀಕರ ಕಾಲ್ತುಳಿತ, 24ರ ಹರೆಯದ ನಟ-ಗಾಯಕ ಲಿ ಜಿಹಾನ್ ನಿಧನ!
ವಿದೇಶಗಳಲ್ಲಿ ಈಗ ಎಲ್ಲೆಡೆ ಜನ ಹ್ಯಾಲೋವೀನ್ ಆಚರಣೆಯಲ್ಲಿ ಜನ ತೊಡಗಿದ್ದು ಇದರ ಭಾಗವಾಗಿ ಭೂತ ಪಿಶಾಚಿಗಳಂತೆ ಹಲವು ಚಿತ್ರ ವಿಚಿತ್ರ ವೇಷಗಳನ್ನು ಧರಿಸಿ ಫೋಟೋ ಕ್ಲಿಕ್ಕಿಸಿಕೊಂಡು ಜನ ಎಂಜಾಯ್ ಮಾಡುತ್ತಿದ್ದಾರೆ. ಹಾಗೆಯೇ ಇತ್ತೀಚೆಗೆ ಹ್ಯಾಲೋವಿನ್ ಆಚರಣೆಯ ಖುಷಿಯಲ್ಲಿದ್ದ ಮಹಿಳೆಯೊಬ್ಬರು ಚೀನಿಕಾಯಿ ಅಥವಾ ಸಿಹಿ ಕುಂಬಳ ಎಂದು ಕರೆಯಲ್ಪಡುವ ಕಾಯಿಯ ಮೇಲೆ ಕುಳಿತು ಫೋಟೋಗೆ ಫೋಸ್ ನೀಡಲು ಹೋಗಿದ್ದು, ಈ ವೇಳೆ ಈ ಸುಂದರಿಯ ಭಾರ ತಡೆಯಲಾಗದೇ ಅದು ಒಮ್ಮೆಗೆ ಒಡೆದು ಹೋಗಿ ಸುಂದರಿ ಕೆಳಗೆ ಬಿದ್ದಿದ್ದಾಳೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಗು ಮೂಡಿಸುತ್ತಿದೆ.
Foreign Festival : ಹ್ಯಾಲೋವೀನ್ ಹಬ್ಬದ ಬಗ್ಗೆ ಇಲ್ಲಿದೆ ಕುತೂಹಲಕಾರಿ ವಿಷ್ಯ
ಐರಿಶ್ ಮೂಲದ ಪುರಾಣಗಳ (Irish myth) ಪ್ರಕಾರ ಹ್ಯಾಲೋವೀನ್‌ಗೂ (Halloween) ಈ ಚೀನಿಕಾಯಿಗೂ ಸಂಬಂಧವಿದ್ದು, ಸ್ವಿಂಗಿ ಜ್ಯಾಕ್ ಎಂಬಾತ ತನ್ನ ಸ್ವಂತ ಲಾಭಕ್ಕಾಗಿ ಚೀನಿಕಾಯಿ ವಿಚಾರದಲ್ಲಿ ದೆವ್ವಕ್ಕೆ ಮೋಸ ಮಾಡುತ್ತಾನೆ. ಹೀಗಾಗಿ ಜ್ಯಾಕ್ ಮರಣ ಹೊಂದಿದಾಗ ಆತನಿಗೆ ಸ್ವರ್ಗದಲ್ಲಾಗಲಿ (heaven) ನರಕದಲ್ಲಾಗಲಿ (hell) ಎರಡೂ ಕಡೆಯಲ್ಲೂ ಯಾರೂ ಆತನಿಗೆ ಇರಲು ಜಾಗ ಕೊಡಲಿಲ್ಲವಂತೆ. ಹೀಗಾಗಿ ಜಾಕ್ ಅತೃಪ್ತ ಆತ್ಮವಾಗಿ ಭೂಮಿಯ ಮೇಲೆಯೇ ಶಾಶ್ವತವಾಗಿ ನೆಲಸುವಂತಾದನಂತೆ. ಹೀಗಾಗಿ ಐರ್ಲೆಂಡ್‌ನಲ್ಲಿ (Ireland) ಅತೃಪ್ತನಾಗಿ ಅಲೆದಾಡುವ ಜ್ಯಾಕ್‌ನ ಆತ್ಮವನ್ನು ಹೆದರಿಸಲು ಈ ಚೀನಿಕಾಯಿಯಿಂದ ಭೀಕರ ರೀತಿಯಲ್ಲಿ ಕಾಣಿಸುವ ರಾಕ್ಷಸ ಮುಖಗಳನ್ನು ಕೆತ್ತುತ್ತಾರಂತೆ.