ವಿದೇಶಗಳಲ್ಲಿ ಭಾರತ ವಿರೋಧಿ ಕೃತ್ಯಗಳನ್ನು ಮುಂದುವರೆಸಿರುವ ಪ್ರತ್ಯೇಕ ಖಲಿಸ್ತಾನ್‌ ದೇಶ ಪರ ಹೋರಾಟಗಾರರು, ಭಾನುವಾರ ಲಂಡನ್‌ನಲ್ಲಿರುವ ಭಾರತೀಯ ಹೈಕಮೀಷನರ್‌ ಕಚೇರಿಯಲ್ಲಿ ಹಾರಿಸಲಾಗಿದ್ದ ಭಾರತದ ರಾಷ್ಟ್ರಧ್ವಜವನ್ನು ಕೆಳಗಿಳಿಸಿ, ಅಲ್ಲಿ ಖಲಿಸ್ತಾನ್‌ ಧ್ವಜ ಹಾರಿಸುವ ಯತ್ನ ಮಾಡಿದ್ದಾರೆ.

ಲಂಡನ್‌: ವಿದೇಶಗಳಲ್ಲಿ ಭಾರತ ವಿರೋಧಿ ಕೃತ್ಯಗಳನ್ನು ಮುಂದುವರೆಸಿರುವ ಪ್ರತ್ಯೇಕ ಖಲಿಸ್ತಾನ್‌ ದೇಶ ಪರ ಹೋರಾಟಗಾರರು, ಭಾನುವಾರ ಲಂಡನ್‌ನಲ್ಲಿರುವ ಭಾರತೀಯ ಹೈಕಮೀಷನರ್‌ ಕಚೇರಿಯಲ್ಲಿ ಹಾರಿಸಲಾಗಿದ್ದ ಭಾರತದ ರಾಷ್ಟ್ರಧ್ವಜವನ್ನು ಕೆಳಗಿಳಿಸಿ, ಅಲ್ಲಿ ಖಲಿಸ್ತಾನ್‌ ಧ್ವಜ ಹಾರಿಸುವ ಯತ್ನ ಮಾಡಿದ್ದಾರೆ. ಕಚೇರಿಯ ಗಾಜುಗಳನ್ನು ಒಡೆದ ಖಲಿಸ್ತಾನಿ ಬೆಂಬಲಿಗ ಪಡೆ ಬಳಿಕ ಕಚೇರಿಯ ಮುಂದೆ ಹಾರಿಸಿದ್ದ ಭಾರತದ ರಾಷ್ಟ್ರಧ್ವದ ಕೆಳಗಿಳಿಸಿ ತನ್ನ ಧ್ವಜ ಹಾರಿಸುವ ಕೆಲಸ ಮಾಡಿದೆ. ಜೊತೆಗೆ ಭಾರತ ವಿರೋಧಿ ಮತ್ತು ಖಲಿಸ್ತಾನ್‌ ಪರ ಘೋಷಣೆ ಕೂಗಿದೆ. ಈ ವೇಳೆ ಸಿಬ್ಬಂದಿಯೊಬ್ಬರು ಸ್ಥಳಕ್ಕೆ ಧಾವಿಸಿ ಖಲಿಸ್ತಾನಿ ಧ್ವಜ ಹಾರಿಸುವ ಯತ್ನವನ್ನು ವಿಫಲಗೊಳಿಸಿದ್ದಾರೆ.

ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಭಾರತ ಸರ್ಕಾರ (Indian government) ನವದೆಹಲಿಯಲ್ಲಿನ ಬ್ರಿಟನ್‌ ರಾಯಭಾರ (British Embassy)ಕಚೇರಿ ಹಿರಿಯ ಅಧಿಕಾರಿಯನ್ನು ಕರೆಸಿ ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ಜೊತೆಗೆ ಲಂಡನ್‌ ಕಚೇರಿಗೆ ಸೂಕ್ತ ಭದ್ರತೆ ನೀಡದೇ ಇರುವ ಬಗ್ಗೆಯೂ ಕಳವಳ ವ್ಯಕ್ತಪಡಿಸಿದೆ. ಇತ್ತೀಚೆಗಷ್ಟೇ ಆಸ್ಪ್ರೇಲಿಯಾದಲ್ಲಿಯೂ ಖಲಿಸ್ತಾನಿ ಬೆಂಬಲಿಗರು ಹಿಂದೂ ದೇಗುಲಗಳ ಮೇಲೆ ಧ್ವೇಷದ ಬರಹ ಬರೆದಿದ್ದರು. ಜೊತೆಗೆ ಮೆಲ್ಬರ್ನ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿನ ಧ್ವಜ ಇಳಿಸಿ ದುಷ್ಕೃತ್ಯ ಮರೆದಿದ್ದರು.

Scroll to load tweet…

ಮತ್ತೊಂದು ಮಹಾ ಷಡ್ಯಂತ್ರಕ್ಕೆ ವೇದಿಕೆ ರೆಡಿ, ದೆಹಲಿಯಲ್ಲಿ ಕಾಶ್ಮೀರ ಹಕ್ಕುಗಳ ಹೋರಾಟ!

Scroll to load tweet…

Attack on Hindu Temples: ಖಲಿಸ್ತಾನಿಗಳಿಂದ ಮೆಲ್ಬರ್ನ್‌ನಲ್ಲಿ ಹಿಂದು ದೇಗುಲಗಳ ಮೇಲೆ ದಾಳಿ!