Asianet Suvarna News Asianet Suvarna News

Attack on Hindu Temples: ಖಲಿಸ್ತಾನಿಗಳಿಂದ ಮೆಲ್ಬರ್ನ್‌ನಲ್ಲಿ ಹಿಂದು ದೇಗುಲಗಳ ಮೇಲೆ ದಾಳಿ!

ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ಮತ್ತೊಮ್ಮೆ ಹಿಂದು ದೇಗುಲಗಳ ಮೇಲೆ ಖಲಿಸ್ತಾನಿ ಭಯೋತ್ಪಾದಕರಿಂದ ದಾಳಿಯಾಗಿದೆ. ಬ್ರಿಸ್ಬೇನ್‌ನ ದೇವಸ್ಥಾನದಲ್ಲಿ ಖಲಿಸ್ತಾನಿ ಪ್ರತ್ಯೇಕದ ಬರಹವನ್ನು ಬರೆಯಲಾಗಿದೆ.
 

Hindu temple attacked again by Khalistan supporters  in Australia san
Author
First Published Mar 4, 2023, 10:57 AM IST | Last Updated Mar 4, 2023, 10:57 AM IST

ನವದೆಹಲಿ (ಮಾ.4):  ಆಸ್ಟ್ರೇಲಿಯಾದಲ್ಲಿ ಹಿಂದು ದೇಗುಲಗಳ ಮೇಲೆ ಆಗುವ ದಾಳಿ ಕಡಿಮೆಯಾಗುವತೆ ಕಾಣುತ್ತಿಲ್ಲ. ಕೆನಡಾ ಬಳಿಕ ಆಸ್ಟ್ರೇಲಿಯಾದಲ್ಲಿ ಪ್ರತಿದಿನ ಎನ್ನುವಂತೆ ಖಲಿಸ್ತಾನಿಗಳಿಂದ ದೇಗುಲಗಳ ಮೇಲೆ ದಾಳಿಯಾಗುತ್ತಿದೆ. ಶನಿವಾರ ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿದ್ದ ಹಿಂದು ದೇಗುಲವನ್ನು ಖಲಿಸ್ತಾನಿ ಬೆಂಬಲಿಗರು ದಾಳಿ ಮಾಡಿ ಹಾನಿ ಮಾಡಿದ್ದಾರೆ. ಬ್ರಿಸ್ಬೇನ್‌ನ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನ ಖಲಿಸ್ತಾನಿ ಬೆಂಬಲಿಗರ ದಾಳಿಯಿಂದ ಹಾನಿಗೀಡಾಗಿದೆ. ದೇವಸ್ಥಾನದ ಗೋಡೆಯ ಮೇಲೆ ಬರಹ ಬರೆದಿದ್ದಾರೆ. ಖಲಿಸ್ತಾನಿ ಪ್ರತ್ಯೇಕ ಹೋರಾಟದಲ್ಲಿ ಹಿಂದುಗಳು ಮೌನದಿಂದ ಇರಬೇಕು. ಪಂಜಾಬ್ ನ ಹಿಂದುಗಳು ಈ ಬಗ್ಗೆ ಮೌನವಾಗಿರಬೇಕು ಬರೆಯಲಾಗಿದೆ. ಈ ಮೂಲಕ ಖಲಿಸ್ತಾನಿ ಪ್ರತ್ಯೇಕ ಹೋರಾಟದ ಸಿದ್ದತೆಯ ಸಂದೇಶ ವಿದೇಶದಿಂದ ರವಾನೆಯಾಗಿದೆ. ಕೆಲ‌ದಿನಗಳ ಹಿಂದೆ ಇದೇ ರೀತಿಯ ಬರಹ ಆಸ್ಟ್ರೇಲಿಯಾದ ಮೆಲ್ಬರ್ನ್‌ನ ಹಿಂದೂ ದೇವಸ್ಥಾನದಲ್ಲಿ ಕಂಡುಬಂದಿತ್ತು. ಈಗ ಮತ್ತೆ ಅದೇ ರೀತಿಯ ಬರಹ ಬ್ರಿಸ್ಬೇನ್‌ನ ದೇವಸ್ಥಾನದಲ್ಲಿ ಕಂಡು ಬಂದಿದೆ.

ಜನವರಿಯಲ್ಲಿ, ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ 15 ದಿನಗಳಲ್ಲಿ ಮೂರು ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸಲಾಗಿತ್ತು. ಇದರ ಬೆನ್ನಲ್ಲಿಯೇ ಆಸೀಸ್‌ನಲ್ಲಿ ಭಾರತೀಯ ಮೂಲದ ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಆಗಲೂ ಕೂಡ ದೇವಸ್ಥಾನದಲ್ಲಿ ವಿಧ್ವಂಸಕ ಕೃತ್ಯದ ಎಚ್ಚರಿಕೆಯ ಜೊತೆಗೆ ಭಾರತ ವಿರೋಧಿ ಘೋಷಣೆಗಳನ್ನು ಬರೆಯಲಾಗಿತ್ತು. ಇಂತಹ ಘಟನೆಗಳು ಸ್ಪಷ್ಟವಾಗಿ ಶಾಂತಿಯುತ ಮತ್ತು ಬಹು-ಧರ್ಮೀಯ ಭಾರತೀಯ ಆಸ್ಟ್ರೇಲಿಯನ್ ಸಮಾಜದಲ್ಲಿ ದ್ವೇಷ ಮತ್ತು ವಿಭಜನೆಯನ್ನು ಸೃಷ್ಟಿಸುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.

ದೇವಸ್ಥಾನ ಧ್ವಂಸ: ಸ್ಥಳೀಯ ಮಾಧ್ಯಮಗಳ ಪ್ರಕಾರ, ಶನಿವಾರ ಮುಂಜಾನೆ ಈ ಘಟನೆ ನಡೆದಿದೆ. ಬ್ರಿಸ್ಬೇನ್‌ನಲ್ಲಿರುವ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ಮುಂಜಾನೆಯೇ ಭಕ್ತಾದಿಗಳು ಪೂಜೆ ಸಲ್ಲಿಸಲು ಆಗಮಿಸಿದ್ದರು. ಈ ವೇಳೆ ಖಲಿಸ್ತಾನಿ ಬೆಂಬಲಿಗರು ದೇವಸ್ಥಾನಕ್ಕೆ ನುಗ್ಗಿದ್ದಾರೆ. ದೇವಸ್ಥಾನದ ಗೋಡೆಯ ಮೇಲೆ ಹಿಂದು ವಿರೋಧಿ ಬರಹಗಳನ್ನು ಬರೆಯಲಾಗಿದೆ. ಎರಡು ತಿಂಗಳ ಅವಧಿಯಲ್ಲಿ ಆಸ್ಟ್ರೇಲಿಯಾದಲ್ಲಿ ದೇವಸ್ಥಾನಗಳ ಮೇಲೆ ದಾಳಿಯಾಗುತ್ತಿರುವುದು ಇದು ನಾಲ್ಕನೇ ಬಾರಿಯಾಗಿದೆ.

ಗನ್‌, ಖಡ್ಗ, ಆಯುಧ ಹಿಡಿದು ಖಲಿಸ್ತಾನಿ ಬೆಂಬಲಿಗರ ದಾಂಧಲೆ: ಅಮೃತಸರದಲ್ಲಿ ಠಾಣೆ ಮೇಲೆ ದಾಳಿ

ದೇವಸ್ಥಾನದ ಅಧ್ಯಕ್ಷ ಸತೀಂದರ್ ಶುಕ್ಲಾ ಅವರು ಆಸ್ಟ್ರೇಲಿಯ ಟುಡೇಗೆ ಮಾಹಿತಿ ನೀಡಿದ್ದು, ದೇವಾಲಯದ ಅರ್ಚಕರು ಮತ್ತು ಭಕ್ತರು ಇಂದು ಬೆಳಿಗ್ಗೆ ಕರೆ ಮಾಡಿ ನಮ್ಮ ದೇವಾಲಯದ ಅಂಚಿನ ಗೋಡೆಯ ಮೇಲೆ ಹಿಂದು ವಿರೋಧಿ ಬರಹಗಳನ್ನು ಬರೆಯಲಾಗಿದೆ ಎಂದು ನನಗೆ ತಿಳಿಸಿದರು. ನಿರ್ವಹಣಾ ಸಮಿತಿಯು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ವಿವರವಾದ ಹೇಳಿಕೆಯನ್ನು ನೀಡುವುದಾಗಿ ಶುಕ್ಲಾ ಹೇಳಿದರು. ಇದಕ್ಕೂ ಮುನ್ನ ಬ್ರಿಸ್ಬೇನ್‌ನಲ್ಲಿರುವ ಮತ್ತೊಂದು ಹಿಂದೂ ದೇವಾಲಯಕ್ಕೆ ಪಾಕಿಸ್ತಾನ ಮೂಲದ ಖಲಿಸ್ತಾನ್ ಉಗ್ರರಿಂದ ಬೆದರಿಕೆ ಕರೆಗಳು ಬಂದಿದ್ದವು. ದೇವಸ್ಥಾನದ ಸಮೀಪದಲ್ಲಿಯೇ ವಾಸ ಮಾಡುವ ರಮೇಶ್‌ ಕುಮಾರ್‌ ಎನ್ನುವ ವ್ಯಕ್ತಿ ಘಟನೆಯ ಪ್ರತ್ಯಕ್ಷದರ್ಶಿಯಾಗಿದ್ದು, ದೇವಸ್ಥಾನದ ಒಳಗೆ ಏನಾಯಿತು ಎನ್ನುವುದು ನನಗೆ ಗೊತ್ತಿದೆ. ದ್ವೇಷವನ್ನು ಎದುರಿಸುತ್ತಿರುವುದು ಬಹಳ ಬೇಸರದ ಸಂಗತಿ ಎಂದಿದ್ದಾರೆ.

ಕೆನಡಾದ ರಾಮಮಂದಿರ ಮೇಲೆ ಮೋದಿ ವಿರೋಧಿ, ಭಾರತ ವಿರೋಧಿ ಬರಹ

ಆಸೀಸ್‌ನಲ್ಲಿ 6.84 ಲಕ್ಷ ಹಿಂದುಗಳು: ಆಸ್ಟ್ರೇಲಿಯಾದಲ್ಲಿ ಹಿಂದೂಗಳ ಒಟ್ಟು ಜನಸಂಖ್ಯೆ 6.84 ಲಕ್ಷ. ಹಿಂದೂ ಇಲ್ಲಿ ಮೂರನೇ ಅತಿ ದೊಡ್ಡ ಧರ್ಮವಾಗಿದೆ. 2021ರ ಜನಗಣತಿ ಆಧಾರದಲ್ಲಿ ಹೇಳುವುದಾದರೆ, ಇದು ಆಸ್ಟ್ರೇಲಿಯಾದ ಒಟ್ಟು ಜನಸಂಖ್ಯೆಯ ಶೇ.2.7ರಷ್ಟಾಗಿದೆ. ಆಸ್ಟ್ರೇಲಿಯಾದಲ್ಲಿ ಚೀನಾ ಬಳಿಕ ಭಾರತೀಯ ಮೂಲದ ಗರಿಷ್ಠ ವಿದ್ಯಾರ್ಥಿಗಳು ಶಿಕ್ಷಣ ಮಾಡುತ್ತಿದ್ದಾರೆ.
 

Latest Videos
Follow Us:
Download App:
  • android
  • ios