Asianet Suvarna News Asianet Suvarna News

15 ಕೋಟಿ TikTok ಫಾಲೋವರ್ಸ್‌: ಖಾಬಿ ಲೇಮ್‌ಗೆ ಒಂದು ಪೋಸ್ಟ್‌ಗೆ ಇಷ್ಟು ಹಣ ಸಿಗುತ್ತೆ..!

ಖಾಬಿ ಲೇಮ್‌ ಟಿಕ್‌ಟಾಕ್‌ನಲ್ಲಿ ಲೈಫ್ ಹ್ಯಾಕ್ ವಿಡಿಯೋಗಳನ್ನು ಪೋಸ್ಟ್ ಮಾಡಲು ಪ್ರಸಿದ್ಧವಾದ ಇಂಟರ್ನೆಟ್ ಸೆಲೆಬ್ರಿಟಿಯಾಗಿದ್ದಾನೆ. ಇದರಲ್ಲಿ ಅವನು ಹೆಚ್ಚು ಸಂಕೀರ್ಣವಾದ ಸನ್ನಿವೇಶಗಳನ್ನು ಸರಳವಾಗಿ ಮಾಡುತ್ತಾನೆ. ಟಿಕ್‌ಟಾಕ್‌ ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ 20 ಕೋಟಿಗೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾನೆ. 

khaby lame tiktoks most followed star earns this staggering amount for each post ash
Author
First Published Sep 18, 2022, 4:25 PM IST

ಟಿಕ್‌ಟಾಕ್‌ನಲ್ಲಿ (TikTok) ಹೆಚ್ಚು ಫಾಲೋವರ್‌ಗಳನ್ನು (Followers) ಹೊಂದಿರುವುದು ಯಾರು ಗೊತ್ತಾ..? ಅದು ಖಾಬಿ ಲೇಮ್, ಈ ಹೆಸರು ಕೇಳಿದರೆ ನೀವು ಇವರು ಯಾರು ಎನ್ನಬಹುದು.. ಆದರೆ ನೀವು ಸಾಮಾಜಿಕ ಜಾಲತಾಣಗಳನ್ನು (Social Media) ಬಳಸುವುದು ನಿಜವಾದರೆ, ಅದರಲ್ಲಿ ಹಾಗೂ ಟ್ರೋಲ್‌ ಪೇಜ್‌ಗಳಲ್ಲಿ (Troll Pages) ನೀವು ಈ ಮುಖವನ್ನು ನೋಡಿರುತ್ತೀರಾ ಅಲ್ಲವೇ..? ಈತನೇ ಟಿಕ್‌ಟಾಕ್‌ನಲ್ಲಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಕಂಟೆಂಟ್ ಕ್ರಿಯೇಟರ್ (Content Creator). ಈತ ಪ್ರತಿ ಪೋಸ್ಟ್‌ಗೆ ಎಷ್ಟು ಹಣ ಗಳಿಸುತ್ತಾನೆ ಎಂಬುದನ್ನು ಆತನ ಮ್ಯಾನೇಜರ್‌ ಬಹಿರಂಗಪಡಿಸಿದ್ದಾರೆ. ಖಾಬಿ ಲೇಮ್ ಜೂನ್‌ನಲ್ಲಿ ತನ್ನ ಹೆಸರಿಗೆ 142.8 ಮಿಲಿಯನ್ ಫಾಲೋವರ್‌ಗಳನ್ನು ಹೊಂದುವ ಮೂಲಕ ಟಿಕ್‌ಟಾಕ್‌ನ ಅತ್ಯಂತ ಜನಪ್ರಿಯ ಸೃಷ್ಟಿಕರ್ತರಾದರು. ಈ ಸಂಖ್ಯೆ ಈಗ 149.5 ಮಿಲಿಯನ್‌ಗೆ ಹೆಚ್ಚಾಗಿದೆ. ಅಂದರೆ ಸುಮಾರು 15 ಕೋಟಿ. ಇನ್ಸ್ಟಾಗ್ರಾಮ್‌ನಲ್ಲೂ (Instagram) ಸುಮಾರು 8 ಕೋಟಿ ಫಾಲೋವರ್‌ಗಳನ್ನು ಹೊಂದಿದ್ದಾನೆ. 

22 ವರ್ಷ ವಯಸ್ಸಿನ ಖಾಬಿ ಲೇಮ್‌ ಈ ವರ್ಷ 10 ಮಿಲಿಯನ್‌ ಅಮೆರಿಕ ಡಾಲರ್‌ (US Dollar) ಗಳಿಸುವ ಹಾದಿಯಲ್ಲಿದ್ದಾರೆ ಎಂದು ಆತನ ಮ್ಯಾನೇಜರ್‌ ಅಲೆಸ್ಸಾಂಡ್ರೊ ರಿಗ್ಗಿಯೊ ಬಹಿರಂಗಪಡಿಸಿದ್ದಾರೆ. ಈತನ ಟಿಕ್‌ಟಾಕ್‌ ಖ್ಯಾತಿ ಹಾಗೂ ಜಾಹೀರಾತುಗಳಿಂದ ಇಷ್ಟು ಹಣ ಗಳಿಸುತ್ತಿದ್ದಾರಂತೆ. ಇನ್ನು, ಟಿಕ್‌ಟಾಕ್‌ನಲ್ಲಿ ಪ್ರತಿ ಪೋಸ್ಟ್‌ಗೆ ಖಾಬಿ ಲೇಮ್‌  750,000 ಅಮೆರಿಕ ಡಾಲರ್‌ ಅಂದರೆ ಸುಮಾರು 6 ಕೋಟಿ ರೂ. ಹಣ ಗಳಿಸುತ್ತಾರೆ ಎಂದು ಸಹ ಅವರ ಮ್ಯಾನೇಜರ್‌ ಬಹಿರಂಗಪಡಿಸಿದ್ದಾರೆ. 2020 ರಲ್ಲಿ ಖಾಬಿ ಲೇಮ್‌ ಟಿಕ್‌ಟಾಕ್‌ಗೆ ಸೇರಿದ್ದರು. ಅದಕ್ಕೂ ಮುನ್ನ ಫ್ಯಾಕ್ಟರಿಯಲ್ಲಿ ಮಷಿನ್‌ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಆದರೆ, ಕೋವಿಡ್ - 19 (COVID - 19) ಸಾಂಕ್ರಾಮಿಕದ (Pandemic) ಅವಧಿಯಲ್ಲಿ ಕೆಲಸ ಕಳೆದುಕೊಂಡ ಬಳಿಕ ಟಿಕ್‌ಟಾಕ್‌ ಅಕೌಂಟ್‌ ತೆರೆದಿದ್ದಾರೆ. 

ಕೇರಳದ ಈ ಪೊಲೀಸ್ ಠಾಣೆಗೆ ಹಾವುಗಳೇ ಕಾವಲುಗಾರರು

ಮಿಲನ್ ಫ್ಯಾಶನ್ ವೀಕ್ ಶೋನಲ್ಲಿ ರ್‍ಯಾಂಪ್‌ ವಾಕ್ ಮಾಡಲು ಮತ್ತು ಅವರ ಟಿಕ್‌ಟಾಕ್ ಖಾತೆಗೆ ಈ ರ್‍ಯಾಂಪ್‌ ವಾಕ್ನ ವಿಡಿಯೋ ಕ್ಲಿಪ್‌ವೊಂದನ್ನು ಪೋಸ್ಟ್ ಮಾಡಲು ಖಾಬಿ ಲೇಮ್ ಅವರಿಗೆ ಇತ್ತೀಚೆಗೆ ಹ್ಯೂಗೋ ಬಾಸ್ 450,000 ಅಮೆರಿಕ ಡಾಲರ್‌ನಷ್ಟು ಹಣ ಪಾವತಿಸಿದ್ದಾರೆ ಎಂದೂ ತಿಳಿದುಬಂದಿದೆ. ಹಾಗೆ, ಪ್ರಮುಖ ಹಾಲಿವುಡ್ ಸ್ಟುಡಿಯೋದಿಂದ ಟಿಕ್‌ಟಾಕ್‌ ವಿಡಿಯೋಗಾಗಿ 750,000 ಡಾಲರ್‌ ಹಣ ಗಳಿಸಿದ್ದಾನೆ ಎಂದೂ ಫಾರ್ಚೂನ್ ಪರಿಶೀಲಿಸಿದ ದಾಖಲೆಗಳನ್ನು ಬಹಿರಂಗಪಡಿಸಿತು. ಟಿಕ್‌ಟಾಕ್‌ ಇನ್‌ಫ್ಲುಯೆನ್ಸರ್‌ ಆಗಿರುವ ಖಾಬಿ ಲೇಮ್‌ ನಿಜವಾದ ಹೆಸರು ಖಬಾನೆ ಲೇಮ್, ಈತ ಜನಿಸಿದ್ದು ಸೆನೆಗಲ್‌ನಲ್ಲಿ ಮತ್ತು ಅವರ ಕುಟುಂಬದೊಂದಿಗೆ 2001 ರಲ್ಲಿ ಇಟಲಿಗೆ ವಲಸೆ ಹೋದ. ಕೊರೊನಾವೈರಸ್‌ ಸಾಂಕ್ರಾಮಿಕದ ಆರಂಭದಲ್ಲಿ ಟಿಕ್‌ಟಾಕ್‌ಗೆ ಸೇರಿದರೂ ಸಹ ಈತ ಮೂಕ ಸ್ಕಿಟ್‌ಗಳು ಮತ್ತು ಆತನ ವಿಚಿತ್ರ ಮುಖಭಾವ, ಹಾಸ್ಯದಿಂದ ಶೀಘ್ರವಾಗಿ ಖ್ಯಾತಿಗೆ ಬಂದ. 

ಹಣದ ಬಗ್ಗೆ ಆಸೆ ಇಲ್ಲವಂತೆ..!
ಇನ್ನು, ಇಂಡಿಪೆಂಡೆಂಟ್ ಪ್ರಕಾರ, ಖಾಬಿ ಲೇಮ್‌ನ ಮ್ಯಾನೇಜರ್, ಖಾಬಿ ಲೇಮ್‌ ಹಣದಿಮದ ಪ್ರೇರೇಪಣೆಗೊಳಗಾಗಿಲ್ಲ ಎಂದು ಹೇಳಿದರು. “ಅವನು ಬಡವನಾಗಿದ್ದನು ಮತ್ತು ಅವನು ಬ್ಯಾಂಕಿನಲ್ಲಿ ಎಷ್ಟು ಹೊಂದಿದ್ದಾನೆಂದು ಅವನಿಗೆ ತಿಳಿದಿಲ್ಲ. ಅವನು ಅದರ ಬಗ್ಗೆ ಕಾಳಜಿ ವಹಿಸುವುದಿಲ್ಲ…" ಎಂದು ಹೇಳಿದರು. ಇನ್ನು, "ನಾನು ಜನರನ್ನು ನಗಿಸಲು ಇಷ್ಟಪಡುತ್ತೇನೆ. ನಾನು ನನ್ನ ಕುಟುಂಬವನ್ನು ಪ್ರೀತಿಸುತ್ತೇನೆ. ನಾನು ನನ್ನ ಕಂಪನಿಯನ್ನು ಪ್ರೀತಿಸುತ್ತೇನೆ’’ ಎಂದು ಖಾಬಿ ಲೇಮ್‌ ಹೇಳಿಕೊಂಡಿದ್ದಾನೆ. 

ಬರೀ ಐನೂರಾ, 2 ಸಾವಿರ ಕೊಡು..! ಭಾರತ್‌ ಜೋಡೋ ನಿಧಿ ಸಂಗ್ರಹದ ವೇಳೆ ಕೈ ಕಾರ್ಯಕರ್ತರ ಆವಾಜ್‌!

ವಿಲ್‌ ಸ್ಮಿತ್‌ ಅವರೊಂದಿಗೆ ನಟಿಸುವುದು ಈತನ ಗುರಿ..!
ಖಾಬಿ ಲೇಮ್‌ ಈಗ ಅಮೆರಿಕದ ಕಾರ್ಟೂನ್ ಮತ್ತು ಚಲನಚಿತ್ರಗಳನ್ನು ನೋಡುವ ಮೂಲಕ ಇಂಗ್ಲಿಷ್ ಕಲಿಯುತ್ತಿದ್ದಾರೆ. ಮುಂದೊಂದು ದಿನ ನಟನಾಗಬೇಕೆಂದು ಆಶಿಸುತ್ತಿರುವ ಈತ ವಿಲ್ ಸ್ಮಿತ್ ಅವರೊಂದಿಗೆ ಚಲನಚಿತ್ರದಲ್ಲಿ ನಟಿಸುವುದು ಖ್ಯಾತ ಟಿಕ್‌ಟಾಕ್‌ ಕ್ರಿಯೇಟರ್‌ ಖಾಬಿ ಲೇಮ್‌ನ ಅಂತಿಮ ಗುರಿಯಾಗಿದೆ.

Follow Us:
Download App:
  • android
  • ios