ರೈಲಿನಲ್ಲೇ ಚಾಕು ಇರಿತ, ಲಂಡನ್ ಮೇಯರ್ ಸಾದಿಕ್ ಖಾನ್ ವಿರುದ್ಧ ಕೆವಿನ್ ಪೀಟರ್ಸೆನ್ ಕಿಡಿ!
ಲಂಡನ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಭದ್ರತಾ ಆತಂಕಗಳ ಕುರಿತಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸೆನ್, ಲಂಡನ್ ಮೇಯರ್ ಸಾದಿಕ್ ಖಾನ್‌ಗೆ ಪ್ರಶ್ನೆ ಮಾಡಿದ್ದಾರೆ.
ನವದೆಹಲಿ (ಮಾ.28): ಲಂಡನ್‌ನ ಶಾರ್ಟ್‌ಲ್ಯಾಂಡ್ಸ್ ಮತ್ತು ಬೆಕೆನ್‌ಹ್ಯಾಮ್ ನಡುವಿನ ಸಂಚಾರ ಮಾಡಿರುವ ರೈಲಿನಲ್ಲಿ ಭೀಕರ ಚಾಕು ಇರಿತ ಪ್ರಕರಣ ಮತ್ತೊಮ್ಮೆ ವಿಶ್ವವನ್ನು ಬೆಚ್ಚಿಬೀಳಿಸಿದೆ. ವಿಶ್ವದ ಪ್ರವಾಸಿಗರ ಪಾಲಿಗೆ ಈಗಲೂ ಲಂಡನ್ ಹಾಟ್ ಫೇವರಿಟ್ ಆಗಿದೆ. ಆದರೆ, ಲಂಡನ್‌ನಲ್ಲಿ ನಡೆಯುತ್ತಿರುವ ಘಟನೆಗಳು ನಗರದ ಪ್ರತಿಷ್ಠೆಗೆ ಕಪ್ಪುಚುಕ್ಕೆ ಇಟ್ಟಂತಾಗಿದೆ. ಮಾರ್ಚ್ 28 ರಂದು ನಡೆದ ಘಟನೆಯ ಕುರಿತಾಗಿ ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸೆನ್, ಲಂಡನ್ ಮೇಯರ್ ಸಾದಿಕ್ ಖಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.ಬೆಕೆನ್‌ಹ್ಯಾಮ್ ಜಂಕ್ಷನ್‌ನಲ್ಲಿ ಚಲಿಸುವ ರೈಲಿನಲ್ಲಿ ಪಾತಕಿಯೊಬ್ಬ ಪದೇ ಪದೇ ಯಾರೋ ಒಬ್ಬರ ಮೇಲೆ ಹಲ್ಲೆ ನಡೆಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ವರದಿಗಳ ಪ್ರಕಾರ, ಇಬ್ಬರು ವ್ಯಕ್ತಿಗಳು ಶಾರ್ಟ್‌ಲ್ಯಾಂಡ್ಸ್ ರೈಲು ನಿಲ್ದಾಣಕ್ಕೆ ಪ್ರವೇಶಿಸಿ, ವ್ಯಕ್ತಿಯೊಬ್ಬನಿಗೆ ಇರಿದಿದ್ದಾರೆ, ಇದರಿಂದ ಆತ ಗಂಭೀರವಾಗಿ ಗಾಯಗೊಂಡಿದ್ದ. ಮಾರಣಾಂತಿಕವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಲಂಡನ್‌ನ ರೈಲಿನಲ್ಲಿ ಚಾಕು ಇರಿತ ಪ್ರಕರಣದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು ಕೆವಿನ್ ಪೀಟರ್ಸೆನ್ ಇದನ್ನು ರೀಟ್ವೀಟ್ ಮಾಡಿದ್ದಾರೆ. ಅದರೊಂದಿಗೆ ಇದು ಲಂಡನ್‌ನಲ್ಲೂ ಆರಂಭವಾಯಿತೇ? ಲಂಡನ್ ಒಂದು ಕಾಲದಲ್ಲಿ ಅತ್ಯಂತ ಅದ್ಭುತ ನಗರವಾಗಿತ್ತು. ಆದರೆ, ಈಗ ಅತ್ಯಂತ ಕೆಟ್ಟ ನಗರವಾಗಿ ಪರಿವರ್ತನೆಗೊಂಡಿದೆ ಎಂದು ಅವರು ಬರೆದಿದ್ದಾರೆ.
ಅದರೊಂದಿಗೆ ಲಂಡನ್‌ನಲ್ಲಿ ನೀವು ಬೆಲೆಬಾಳುವ ವಾಚ್‌ಗಳನ್ನು ಧರಿಸಲು ಸಾಧ್ಯವಿಲ್ಲ. ನಿಮ್ಮ ಫೋನ್‌ಗಳನ್ನು ಕೈಗಲ್ಲಿ ಹಿಡಿದುಕೊಂಡು ನಡೆದುಕೊಂಡು ಹೋಗಲು ಸಾಧ್ಯವಿಲ್ಲ. ಮಹಿಳೆಯರ ಬ್ಯಾಗ್‌ಗಳು ಹಾಗೂ ಆಭರಣಗಳನ್ನು ಕಿತ್ತುಕೊಂಡು ಹೋಗುತ್ತಾರೆ. ಹಣಕ್ಕಾಗಿ ಕಾರ್‌ಗಳನ್ನು ಒಡೆದುಹಾಕುತ್ತಾರೆ. ಈಗ ಇಂಥದ್ದೊಂದು ವಿಡಿಯೋ ಬರುತ್ತದೆ' ಎಂದು ಪೀಟರ್ಸೆನ್ ಬರೆದುಕೊಂಡಿದ್ದಾರೆ. ಕೆವಿನ್ ಪೀಟರ್ಸನ್ ಈ ಹಂತದಲ್ಲಿ ಲಂಡನ್ ಮೇಯರ್ ಸಾದಿಕ್ ಖಾನ್ ಅವರನ್ನು ಗುರಿಯಾಗಿಸಿಕೊಂಡರು, ಅವರ ನೀತಿಗಳೇ ಲಂಡನ್‌ನಲ್ಲಿ ಅವ್ಯವಸ್ಥೆಯನ್ನು ಉಂಟುಮಾಡುತ್ತಿವೆ ಎಂದು ಹೇಳಿದರು.
'ಭಾರತ, ಮೋದಿಯನ್ನು ಬೆಂಬಲಿಸಿದ್ದಕ್ಕಾಗಿ ನನ್ನ ವಿರುದ್ಧ ಅಪಪ್ರಚಾರ' ಲಂಡನ್‌ನಲ್ಲಿ ಓದುವ ಭಾರತೀಯ ವಿದ್ಯಾರ್ಥಿ ದೂರು
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವಿಶ್ಲೇಷಕರಾಗಿರುವ ಕೆವಿನ್ ಪೀಟರ್ಸೆನ್, ಟೂರ್ನಿಯ ನೇರಪ್ರಸಾರ ವಾಹಿನಿಯ ಪರವಾಗಿ ಕೆಲಸ ಮಾಡುತ್ತಿದ್ದರೆ. ಅದಕ್ಕಾಗಿ ಸದ್ಯ ಅವರು ಭಾರತದಲ್ಲಿದ್ದಾರೆ. ಗುರುವಾರ ಬೆಂಗಳೂರು ಏರ್‌ಪೋರ್ಟ್‌ನ ವಿಡಿಯೋವನ್ನು ಪೋಸ್ಟ್ ಮಾಡಿದ್ದ ಕೆವಿನ್ ಪೀಟರ್ಸೆನ್ ಇದು ವಿಶ್ವದರ್ಜೆಯ ವಿಮಾನ ನಿಲ್ದಾಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಲಂಡನ್ ಜಾಬ್ ಬಿಟ್ಟು ಭಾರತದಲ್ಲಿ ಉದ್ಯಮ ಆರಂಭಿಸಿ ಕೋಟಿ ಕೋಟಿ ಗಳಿಸ್ತಿರೋ ಅಂಬಾನಿ ಸೊಸೆ!