ರಷ್ಯಾ ಆಕ್ರಮಣದ ನಂತರ ಉಕ್ರೇನ್ ಸೇನೆ ಸೇರಿದ್ದ ನಟ ನಟ 33 ವರ್ಷದ ಪಾಶಾ ಲೀ ಸಾವು ಸಾವಿಗೂ ಮುನ್ನ ಇನ್ಸ್ಟಾಗ್ರಾಮ್‌ನಲ್ಲಿ ಕೊನೆ ಪೋಸ್ಟ್
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ 14ನೇ ದಿನವೂ ಮುಂದುವರೆದಿದೆ. ತಮ್ಮ ದೇಶವನ್ನು ರಕ್ಷಿಸಿಕೊಳ್ಳಲು ಉಕ್ರೇನ್ ಸೇನೆಯ ಜೊತೆ ಆ ದೇಶದ ಮಹಿಳೆಯರು ಯುವ ತರುಣರು, ನಟರು ಹೀಗೆ ಬಹುತೇಕ ನಾಗರಿಕರು ಸೇರಿ ಒಗ್ಗಟ್ಟಾಗಿ ಹೋರಾಡುತ್ತಿದ್ದಾರೆ. ಇದರಲ್ಲಿ ಅನೇಕರು ಈಗಾಗಲೇ ತಮ್ಮ ತಾಯ್ನೆಲಕ್ಕಾಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹೀಗೆ ದೇಶದ ಪರ ಹೋರಾಡುತ್ತಾ ಉಕ್ರೇನ್ (Ukraine) ನಟ ಕೂಡ ಪ್ರಾಣ ಬಿಟ್ಟಿದ್ದಾರೆ. 33 ವರ್ಷದ ಉಕ್ರೇನ್ ನಟ (actor) ಪಾಶಾ ಲೀ (Pasha Lee)ಅವರು ರಷ್ಯಾ ವಿರುದ್ಧ ಹೋರಾಡುತ್ತಾ ತಾಯ್ನೆಲಕ್ಕಾಗಿ ಮಡಿದಿದ್ದಾರೆ. ಇರ್ಪಿನ್‌ನಲ್ಲಿ( Irpin) ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ಅವರು ಸಾವನ್ನಪ್ಪಿದ್ದು, ಸಾವಿಗೂ ಮೊದಲು ಇನ್ಸ್ಟಾಗ್ರಾಮ್‌ನಲ್ಲಿ ಅವರು ಪೋಸ್ಟ್ ಮಾಡಿದ ಕೊನೆ ಸಂದೇಶ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ 48 ಗಂಟೆಗಳಿಂದ ಈಗ ನಮಗೆ ಕುಳಿತುಕೊಂಡು ನಾವು ಹೇಗೆ ಬಾಂಬ್ ಹಾಕುತ್ತಿದ್ದೇವೆ ಎಂಬುದರ ಫೋಟೋ ತೆಗೆಯುವ ಅವಕಾಶ ಸಿಕ್ಕಿದೆ. ನಾವು ನಗುತ್ತಿದ್ದೇವೆ ಏಕೆಂದರೆ ನಾವು ಈ ಸ್ಥಿತಿಯನ್ನು ನಿರ್ವಹಿಸುತ್ತಿದ್ದೇವೆ ಎಂದು ಅವರು ಇನ್ಸ್ಟಾಗ್ರಾಮ್‌ನಲ್ಲಿ ಕೊನೆಯದಾಗಿ ಸಂದೇಶ ಪೋಸ್ಟ್ ಮಾಡಿದ್ದರು. ಕಳೆದ ತಿಂಗಳು ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಆರಂಭವಾದ ನಂತರ ಈ ಕ್ರಿಮಿಯದಲ್ಲಿ ಜನಿಸಿದ ನಟ ಪಾಶಾ ಲೀ ಉಕ್ರೇನ್‌ನ ಪ್ರಾದೇಶಿಕ ರಕ್ಷಣಾ ಪಡೆಗೆ ಸೇರಿದ್ದರು. ಉಕ್ರೇನ್‌ನ ರಾಷ್ಟ್ರೀಯ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಸೆರ್ಗಿ ಟೊಮಿಲೆಂಕೊ (Sergiy Tomilenko) ಹಾಗೂ ಒಡೆಸ್ಸಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ( Odessa International Film Festival) ಅವರ ಸಾವಿನ ಸುದ್ದಿಯನ್ನು ದೃಢಪಡಿಸಿದೆ.
ಆಪರೇಷನ್ ಗಂಗಾದಲ್ಲಿ ರಕ್ಷಿಸಲ್ಪಟ್ಟ ಪಾಕಿಸ್ತಾನಿ ವಿದ್ಯಾರ್ಥಿನಿ... ಮೋದಿ ಬಗ್ಗೆ ಹೇಳಿದ್ದಿಷ್ಟು
ಸಂಧಾನ ಮಾತುಕತೆ (Peace talks), ಕದನ ವಿರಾಮದ (ceasefire ) ನಡುವೆಯೂ ಉಕ್ರೇನ್ (Ukraine) ಮೇಲಿನ ದಾಳಿಯನ್ನು ರಷ್ಯಾ (Russia) ಮುಂದುವರೆಸಿದೆ. ಹೀಗಾಗಿ ಉಕ್ರೇನ್‌ನಲ್ಲಿ ಭಾರೀ ಸಾವು ನೋವು ಉಂಟಾಗಿದೆ. ಸುಮಿಯ (sumy)ಜನವಸತಿ ಪ್ರದೇಶ, ಶಾಲೆಗಳು, ಆಸ್ಪತ್ರೆ ಮೇಲೆ ರಷ್ಯಾ ನಡೆಸಿದ ಬಾಂಬ್ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿ 18 ಜನರು ಸಾವನ್ನಪ್ಪಿದ್ದರೆ, ಮಕಾರಿವ್‌ನ ಕೈಗಾರಿಕಾ ಪ್ರದೇಶದ ಮೇಲೆ ನಡೆದ ದಾಳಿಯಲ್ಲಿ 13 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ರಷ್ಯಾ ನಡೆಸಿದ ಶೆಲ್ (Shell) ದಾಳಿಯಲ್ಲಿ ಖಾರ್ಕಿವ್‌ನಲ್ಲಿರುವ (Kharkive)ಪರಮಾಣು ಸಂಶೋಧನಾ ಘಟಕಕ್ಕೆ (nuclear research centre) ಹಾನಿಯಾಗಿದೆ ಎಂದು ಅಂತಾರಾಷ್ಟ್ರೀಯ ಅಣು ಶಕ್ತಿ ಸಂಸ್ಥೆ (international atomic energy agency) ಕಳವಳ ವ್ಯಕ್ತಪಡಿಸಿದೆ.
ಈ ನಡುವೆ ರಾಜಧಾನಿ ಕೀವ್ ವಶಕ್ಕೆ ರಷ್ಯಾ ಸೇನೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಬಹುತೇಕ ನಗರದ ಗಡಿಯಲ್ಲಿ ದೊಡ್ಡ ಪ್ರಮಾಣದ ಸೇನಾ ದಂಡನ್ನು ನಿಯೋಜಿಸಿದೆ. ಯುದ್ಧಕ್ಕೆ ಬಂದಿದ್ದ 1.5 ಲಕ್ಷ ಯೋಧರು ಈಗಾಗಲೇ ವಿವಿಧ ಪ್ರದೇಶಗಳ ಮೂಲಕ ಉಕ್ರೇನ್ ಗಡಿಯೊಳಗೆ ನುಗ್ಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಜೊತೆಗೆ ಇತರೆ ಹಲವು ಕರಾವಳಿ ನಗರಗಳನ್ನೂ ರಷ್ಯಾ ಸೇನೆ (Russia army) ಸುತ್ತುವರೆದಿದ್ದು, ಕದನ ವಿರಾಮದ ಅವಧಿ ಮುಗಿಯುತ್ತಲೇ ದೊಡ್ಡ ಮಟ್ಟದಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಡುವೆ ಖಾರ್ಕೀವ್‌ನಲ್ಲಿ ನಡೆದ ಯುದ್ಧದಲ್ಲಿ ರಷ್ಯಾದ ಸೇನಾ ಜನರಲ್ ವಿಟಲಿ ಗ್ಯಾರಿಸಿಮೋವ್ (vitaly gerasimov) ಉಕ್ರೇನಿನ ಸೇನೆ ದಾಳಿಗೆ ಬಲಿಯಾಗಿದ್ದಾನೆ ಎಂದು ಉಕ್ರೇನಿನ ಗುಪ್ತಚರ ಮೂಲಗಳು ತಿಳಿಸಿವೆ.
Putin Kundli: ಅಣ್ವಸ್ತ್ರ ಮಹಾಯುದ್ಧ ನಡೆಯುತ್ತಾ? ಪುಟಿನ್ ಜಾತಕ ಏನನ್ನುತ್ತೆ?
ಈ ನಡುವೆ ಉಕ್ರೇನಿನ ಪ್ರತಿರೋಧಿಸುವ ಸಾಮರ್ಥ್ಯವನ್ನು ಕಡಿಮೆ ಅಂದಾಜಿಸಿ ದಾಳಿ ಮಾಡಿದ್ದಕ್ಕಾಗಿ ರಷ್ಯಾದ ಸಾವಿರಾರು ಯೋಧರು ಬಲಿಯಾಗಿದ್ದಾರೆ ಎಂದು ಅಮೆರಿಕದ ಗುಪ್ತಚರ ದಳದ ಅಧಿಕಾರಿ ಮಂಗಳವಾರ ಅಭಿಪ್ರಾಯ ಪಟ್ಟಿದ್ದಾರೆ.