ಯಾವುದೇ ಶಿಕ್ಷಣ ತರಬೇತಿ ಇಲ್ಲದೆ 26 ಕೇಸ್ ಗೆದ್ದ ನಕಲಿ ಲಾಯರ್
ಲಾಯರ್ ಬುದ್ಧಿ ಚುರುಕಾಗಿರಬೇಕು. ಅದಕ್ಕೆ ಸೂಕ್ತ ತರಬೇತಿ ಅಗತ್ಯವೂ ಇರುತ್ತದೆ. ಸಖಾಸುಮ್ಮನೆ ಕೋರ್ಟ್ ನಲ್ಲಿ ಹೋಗಿ ವಾದ ಮಾಡೋದು ಅಸಾಧ್ಯವಾದ ಮಾತು. ಆದ್ರೆ ಈ ವ್ಯಕ್ತಿ ಏನೂ ಇಲ್ದೆ ಏನೇನೋ ಮಾಡಿ ಸಿಕ್ಕಿಬಿದ್ದಿದ್ದಾನೆ.

ಶಿಕ್ಷಣ ಪಡೆಯುವ ಆರಂಭದಲ್ಲೇ ಜನರು ತಾವೇನಾಗ್ಬೇಕು ಎನ್ನುವ ಬಗ್ಗೆ ಆಲೋಚನೆ ಮಾಡಿರ್ತಾರೆ. ಗುರಿ ಸಾಧನೆಗಾಗಿ ಅದೇ ಫೀಲ್ಡ್ ನಲ್ಲಿ ವಿದ್ಯಾಭ್ಯಾಸ ಮುಂದುವರೆಸ್ತಾರೆ. ನಿಮಗೆ ಗೊತ್ತಿರುವಂತೆ ವೈದ್ಯನಾಗಲು ಎಂಬಿಬಿಎಸ್ ಪ್ರವೇಶ ಪಡೆಯಬೇಕು. ಇಂಜಿನಿಯರ್ ಆಗಲು ಇಂಜಿನಿಯರ್ ಶಿಕ್ಷಣ ಪಡೆದಿರಬೇಕು. ಯಾವುದೇ ವ್ಯಕ್ತಿ ವಿದ್ಯೆಯಿಲ್ಲದೆ ಇಂಥ ಉನ್ನತ ಹುದ್ದೆ ಏರಲು ಸಾಧ್ಯವಿಲ್ಲ. ರಾಜಕಾರಣಿ, ಬ್ಯುಸಿನೆಸ್ ಮೆನ್ ಹೊರತುಪಡಿಸಿ ಬಹುತೇಕ ಎಲ್ಲ ಹುದ್ದೆಗಳಿಗೆ ಅದಕ್ಕೆ ಸಂಬಂಧಿಸಿದ ಶಿಕ್ಷಣ ಪಡೆಯಬೇಕಾಗುತ್ತದೆ. ಸೂಕ್ತ ತರಬೇತಿ ಅಗತ್ಯವಿರುತ್ತದೆ. ನಂತ್ರವೇ ಅವರು ಗೌರವಾನ್ವಿತ ಹುದ್ದೆ ಹಾಗೂ ಸಂಬಳ ಪಡೆಯಲು ಸಾಧ್ಯ.
ನಾವು ಸಿನಿಮಾ (Movie) ಗಳಲ್ಲಿ ಏನೂ ತಿಳಿಯದ, ತರಬೇತಿ ಇಲ್ಲದ ವ್ಯಕ್ತಿ ಕೋರ್ಟ್ (Court) ನಲ್ಲಿ ಜಡ್ಜ್ ಮುಂದೆ ವಾದ ಮಾಡಿ ಗೆದ್ದಿದ್ದನ್ನು ನೋಡಿದ್ದೇವೆ. ಆದ್ರೆ ಆತ ಕೂಡ ನಾನು ವಕೀಲ ಎಂದು ಸುಳ್ಳು ಹೇಳಿರೋದಿಲ್ಲ. ತಾನು ಯಾರು ಎಂಬುದನ್ನು ಆತ ಸ್ಪಷ್ಟವಾಗಿ ಹೇಳಿರ್ತಾನೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ವಿದ್ಯೆಯಿಂದ ಹಿಡಿದು ಎಲ್ಲವನ್ನೂ ಕದ್ದು ತನ್ನದಾಗಿ ಮಾಡಿಕೊಂಡಿದ್ದಲ್ಲದೆ ತರಬೇತಿ ಇಲ್ಲದೆ ವಕೀಲ (Lawyer) ಹುದ್ದೆ ಅಲಂಕರಿಸಿ 26 ಪ್ರಕರಣಗಳನ್ನು ಗೆದ್ದಿದ್ದಾನೆ. ಆತ ಯಾರು ಎಂಬ ವಿವರ ಇಲ್ಲಿದೆ. ಈಗಿನ ದಿನಗಳಲ್ಲಿ ವಿದ್ಯೆ ಮಾರಾಟಕ್ಕಿದೆ ಎಂಬ ಸುದ್ದಿಯನ್ನು ನೀವು ಕೇಳ್ತಿರುತ್ತೀರಿ. ಅದನ್ನು ಖರೀದಿ ಮಾಡಿದ ಜನರಿಗೆ ತಾವೇನು ಕಲಿತಿದ್ದೇವೆ ಎನ್ನುವುದ್ರ ಸರಿಯಾದ ಮಾಹಿತಿ ಇರೋದಿಲ್ಲ. ಹಣ ಮಾಡುವ ಉದ್ದೇಶದಿಂದ ದೊಡ್ಡ ಹುದ್ದೆ ಅಲಂಕರಿಸಿ ಕೊನೆಗೆ ಸಿಕ್ಕಿ ಬೀಳ್ತಾರೆ. ಆದ್ರೆ ಈ ಕೀನ್ಯಾ ವ್ಯಕ್ತಿ ಸ್ವಲ್ಪ ಭಿನ್ನವಾಗಿದ್ದಾನೆ.
26 ವಾರಗಳ ಅವಧಿಯ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದ ಸುಪ್ರೀಂಕೋರ್ಟ್
ಆತನ ಬಳಿ ಯಾವುದೇ ಪದವಿ ಇಲ್ಲ, ತರಬೇತಿ ಇಲ್ಲ. ಆದ್ರೂ ವಕೀಲನಾಗಿ 26 ಕೇಸ್ ಗೆದ್ದಿದ್ದಾನೆ. ಬ್ರಿಯಾನ್ ಮ್ವೆಂಡಾ ಎನ್ಟ್ವಿಗಾ ಎಂಬ ವ್ಯಕ್ತಿಯ ಗುರುತನ್ನು ಈ ವ್ಯಕ್ತಿ ಕದ್ದಿದ್ದಾನೆ. ತನ್ನ ಹೆಸರಿಗೆ ಹೊಂದಿಕೆಯಾಗುವ ವ್ಯಕ್ತಿಯನ್ನು ಬ್ರಿಯಾನ್ ಹುಡುಕಾಟ ನಡೆಸುತ್ತಿದ್ದನಂತೆ. ಅದೇ ಸಮಯದಲ್ಲಿ ಬ್ರಿಯಾನ್ ಮ್ವೆಂಡಾ ಎನ್ಟ್ವಿಗಾ ಪ್ರೊಫೈಲ್ ಸಿಕ್ಕಿದೆ. ಅದನ್ನು ಹ್ಯಾಕ್ ಮಾಡಿದ ಆರೋಪಿ, ಅದಕ್ಕೆ ತನ್ನ ಫೋಟೋವನ್ನು ಅಪ್ಲೋಡ್ ಮಾಡಿದ್ದಾನೆ. ಯಾರಿಗೂ ಅನುಮಾನ ಬರದಿರಲಿ ಎನ್ನುವ ಕಾರಣಕ್ಕೆ ಈತ ಹೀಗೆ ಮಾಡಿದ್ದಾನೆ. ಇದಾದ ನಂತ್ರ ವಕೀಲ ವೃತ್ತಿ ಶುರು ಮಾಡಿದ್ದಾನೆ.
ವಕೀಲ ಸಿಕ್ಕಿಬಿದ್ದಿದ್ದು ಹೇಗೆ? : ನಿಜವಾದ ಬ್ರಿಯಾನ್ ಮ್ವೆಂಡಾ ಎನ್ಟ್ವಿಗಾ ತನ್ನ ಪ್ರೊಫೈಲ್ ಲಾಗಿನ್ ಮಾಡಲು ಹೋದಾಗ ಸತ್ಯ ಗೊತ್ತಾಗಿದೆ. ಬ್ರಿಯಾನ್ ಮ್ವೆಂಡಾ ಎನ್ಟ್ವಿಗಾ, ವಕೀಲ ಪ್ರಮಾಣಪತ್ರಕ್ಕೆ ಅರ್ಜಿಸಲ್ಲಿಸಲು ತಮ್ಮ ಖಾತೆ ತೆರೆಯುವ ಪ್ರಯತ್ನ ಮಾಡಿದ್ದಾರೆ. ಆಗ ಇದು ಹ್ಯಾಕ್ ಆಗಿರುವುದು ಗೊತ್ತಾಗಿದೆ. ನಂತ್ರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ವಿಚಾರಣೆ ವೇಳೆ ಆರೋಪಿ ಬಣ್ಣ ಬಯಲಾಗಿದೆ.
ಮುಟ್ಟಿನ ಸಮಯದಲ್ಲಿ ವಜೈನಾ ಸೆಳೆತ ಕಾಣಿಸಿಕೊಂಡ್ರೆ, ಇಗ್ನೋರ್ ಮಾಡ್ಲೇಬೇಡಿ
ಬ್ರಿಯಾನ್ ಗೆ ಬೆಂಬಲ ಸೂಚಿಸಿದ ಜನರು : ನಕಲಿ ಬ್ರಿಯಾನ್, ಯಾವುದೇ ತರಬೇತಿ ಇಲ್ಲದೆ ಇಷ್ಟೊಂದು ಪ್ರಕರಣ ಗೆದ್ದಿರುವುದು ಸಾಮಾನ್ಯ ವಿಷ್ಯವಲ್ಲ. ಅವರ ಕೆಲಸಕ್ಕೆ ಅನೇಕರಿಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದೊಂದು ಅಧ್ಬುತ ಎಂದಿದ್ದಾರೆ. ಆತನ ಬೆಂಬಲಕ್ಕೆ ಈಗ ದೊಡ್ಡ ದೊಡ್ಡ ವ್ಯಕ್ತಿಗಳು ನಿಂತಿದ್ದಾರೆ. ನನಗೆ ಬೆಂಬಲ ನೀಡಿದ ಹಾಗೂ ನನಗಾಗಿ ಪ್ರಾರ್ಥನೆ ಮಾಡುವ ಜನರಿಗೆ ನಾನು ಧನ್ಯವಾದ ಹೇಳ್ತೇನೆ ಎಂದು ಬ್ರಿಯಾನ್ ಹೇಳಿದ್ದಾನೆ. ಅಷ್ಟೇ ಅಲ್ಲ ಸೂಕ್ತ ಸಮಯ ಬಂದಾಗ ಎಲ್ಲ ತಪ್ಪು ತಿಳುವಳಿಕೆ ಬಹಿರಂಗವಾಗುತ್ತದೆ ಎಂದು ಬ್ರಿಯಾನ್ ವಿಡಿಯೋ ಮೂಲಕ ತನ್ನ ಅಭಿಮಾನಿಗಳಿಗೆ ತಿಳಿಸಿದ್ದಾರೆ.