ಕಾಮಿಡಿ ಕಲಾವಿದ ಇನ್ನಿಲ್ಲ/  ದೂರವಾದ ಸ್ಪೇನಿಶ್ ಕಲಾವಿದ ಜುವಾನ್ ಜೋಯಾ ಬೋರ್ಜಾ ಇನ್ನಿಲ್ಲ/ ಟ್ರೋಲ್ ಮೆಮೆಗಳಿಗೆ ಆಧಾರವಾಗಿದ್ದ ಇವರ ನಗು/ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು

ನವದೆಹಲಿ (ಏ. 30) ಜುವಾನ್ ಜೋಯಾ ಬೋರ್ಜಾ. ಈ ಹೆಸರನ್ನು ಕೇಳಿದರೆ ತಕ್ಷಣಕ್ಕೆ ಏನಪ್ಪಾ ಅಂದುಕೊಳ್ಳುತ್ತೀರಿ. ಅದೇ ಈ ಪೋಟೋ ನೋಡಿದರೆ ಯಾರು ಎನ್ನುವುದು ಗೊತ್ತಾಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಾವಿರ ಅಲ್ಲವೇ ಅಲ್ಲ.. ಲಕ್ಷಗಟ್ಟಲೇ ಮೆಮೆ,. ಟ್ರೋಲ್ ಗೆ ಇವರನ್ನು ಬಳಸಿಕೊಳ್ಳಲಾಗಿತ್ತು. ಇವರ ನಗುವನ್ನು ಬಳಸಿಕೊಳ್ಳಲಾಗಿತ್ತು. ಅಂಥ ಜುವಾನ್ ಜೋಯಾ ಬೋರ್ಜಾ(65) ಇನ್ನಿಲ್ಲ.

ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದ ಕಾಮೆಡಿಯನ್ ನಿಧನರಾಗಿದ್ದಾರೆ. ಕಳೆದ ವರ್ಷ ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದರು. ಕೊರೋನಾ ನಡುವೆ ಜಗತ್ತು ಹೋರಾಟ ನಡೆಸುತ್ತಿರುವಾಗ ಇಂಥದ್ದೊಂದು ಸುದ್ದಿ ಬಂದಿದೆ. 

ಮತ್ತೊಬ್ಬ ನಿರ್ಮಾಪಕನ ಬಲಿ ಪಡೆದ ಕೊರೋನಾ.. ಸ್ಯಾಂಡಲ್‌ವುಡ್‌ ಗೆ ಆಘಾತ

ಮೂಲತಃ ಸ್ಪೇನಿಶ್ ಕಲಾವಿದರಾಗಿದ್ದ ಜೋಯಾ ಬೋರ್ಜಾ ಅನೇಕ ರಿಯಾಲಿಟಿ ಶೋ ನಿರ್ಣಾಯಕರಾಗಿದ್ದರು. ಅವರು ರಿಯಾಲಿಟಿ ಶೋ ಒಂದರಲ್ಲಿ ನಕ್ಕಿದ್ದು ಇಡೀ ಜಗತ್ತನ್ನೇ ನಗಿಸಿತ್ತು. ಅಂತಾರಾಷ್ಟ್ರೀಯ ಮಟ್ಟದ ಅನೇಕ ಕಲಾವಿದರು ಜೋಯಾ ಅವರಿಗೆ ಸಂತಾಪ ಸೂಚಿಸಿದ್ದಾರೆ. 

Scroll to load tweet…
Scroll to load tweet…

YouTube video player