ವಾಶಿಂಗ್ಟನ್(ನ.07):  ವಿಶ್ವದ ಗಮನ ಸೆಳೆದಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಡೋನಾಲ್ಡ್ ಟ್ರಂಫ್ ವಿರುದ್ಧ  ಭರ್ಜರಿ ಗೆಲುವು ದಾಖಲಿಸಿದ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

4 ವರ್ಷದಲ್ಲಿ ಟ್ರಂಪ್ 20 ಸಾವಿರಕ್ಕೂ ಹೆಚ್ಚು ಸುಳ್ಳು: ಇಲ್ಲಿದೆ ಟಾಪ್ 3!

ಪೆನ್ಸುಲ್ವೇನಿಯಾ ಗೆಲುವಿನೊಂದಿಗೆ ಜೋ ಬೈಡನ್ ಓಟ್ಟು 284 ಎಲೆಕ್ಟೋರಲ್ ಮತ ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ 270 ಎಲೆಕ್ಟೊರಲ್ ಮತ ಅವಶ್ಯಕತೆ ಇದೆ. ಈ ಮೂಲಕ ಜೋ ಬೈಡನ್ ಅಮೆರಿದ 46ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಚುನಾವಣೆಗೂ ಮುನ್ನ ಕುಕ್ಕೆಯಲ್ಲಿ ಪ್ರಾರ್ಥಿಸಿದ್ದ ಭಾರತೀಯ ಅಮೆರಿಕಾ ಸೆನೆಟ್‌ಗೆ ಮರು ಆಯ್ಕೆ

ಅಮೆರಿಕ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಮಲಾ ಹ್ಯಾರಿಸ್ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿ ಅಮೆರಿಕ ಉಪಾಧ್ಯಕ್ಷ ಸ್ಥಾನವನ್ನು ಭಾರತೀಯ ಮೂಲದವರು ಅಲಂಕರಿಸುತ್ತಿದ್ದಾರೆ.

ಗೆಲುವಿನ ನಿರೀಕ್ಷೆಯಲ್ಲಿದ್ದ ಡೋನಾಲ್ಡ್ ಟ್ರಂಪ್‌ಗೆ ಬಾರಿ ನಿರಾಸೆಯಾಗಿದೆ.  1992ರ ಬಳಿಕ 2ನೇ ಅವಧಿ ಚುನಾವಣೆಯಲ್ಲಿ ಸೋತ ಅಮೆರಿಕ ಅಧ್ಯಕ್ಷ ಅನ್ನೋ ಕುಖ್ಯಾತಿಗೆ ಗುರಿಯಾಗಿದ್ದಾರೆ. 1992ರಲ್ಲಿ ಜಾರ್ಜ್ ಡಬ್ಲೂ ಬುಶ್ ಮೊದಲ ಅವದಿ ಬಳಿಕ, 2ನೇ ಅವಧಿಯ ಚುನಾವಣೆಯಲ್ಲಿ ಸೋಲು ಕಂಡಿದ್ದರು.