ನವದೆಹಲಿ(ಜೂ.08)  ಚಿಂತಕ, ಕವಿ,  ಚಿತ್ರಕಥೆಗಾರ  ಜಾವೇದ್ ಅಖ್ತರ್  ಪ್ರತಿಷ್ಠಿತ ರಿಚರ್ಡ್ ಡಾಕಿನ್ಸ್ ಪ್ರಶಸ್ತಿಗೆ ಭಾಜನಾರಿದ್ದಾರೆ. ಈ ಗೌರವಕ್ಕೆ ಪಾತ್ರವಾಗುತ್ತಿರುವ  ಭಾರತದ ಮೊಟ್ಟ ಮೊದಲ ವ್ಯಕ್ತಿ ಎನ್ನುವ ಶ್ರೇಯವೂ ಅವರದ್ದಾಗಿದೆ.

ವಿಮರ್ಶೆ, ಧರ್ಮವನ್ನು ಮೀರಿ ಆಲೋಚನೆ ಮಾಡಿದ ಕಾರಣಕ್ಕೆ ಅಖ್ತರ್  ಅವರಿಗೆ ಈ ಗೌರವ ಸಂದಾಯವಾಗಿದೆ.  ಅಮೆರಿಕದ ಟಿವಿ ಹೋಸ್ಟ್, ರಾಜಕೀಯ ವಿಮರ್ಶಕ ಬಿಲ್ ಮಹೇರ್, ತತ್ವಜ್ಞಾನಿ ಕ್ರಿಸ್ಟೋಪರ್ ಹಿಚೆನ್ಸ್ ಈ ಗೌರವಕ್ಕೆ ಪಾತ್ರವಾಗಿದ್ದರು.

ಅಜಾನ್ ನಿಂದ ತೊಂದರೆ ಎಂದ ಜಾವೇದ್ ಅಖ್ತರ್

ಸ್ವತಂತ್ರ ಅಭಿಪ್ರಾಯಗಳಮನ್ನು ಹೊರ ಹಾಕುವುದರಲ್ಲಿ ಜಾವೇದ್ ಅಖ್ತರ್   ಸದಾ ಮುಂದು. ರಾಜಕಾರಣ, ಧರ್ಮ, ಸಂಸ್ಕೃತಿ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಅಖ್ತರ್   ಮಾತನಾಡುತ್ತಾರೆ.

ನಾನು ರಿಚರ್ಡ್ ಡಾಕಿನ್ಸ್ ಅವರ ದೊಡ್ಡ ಅಭಿಮಾನಿ, ಅವರ ಪುಸ್ತಕ ಸೆಲ್ಫಿಷ್ ಜೇನ್ ಓದಿದ್ದೇನೆ.  ಅಮೆರಿಕದ ಬೋರ್ಡ್ ಯಾವುದೇ ನೋಮಿನೇಶನ್ ಇಲ್ಲದೇ ನನ್ನನ್ನು ಫ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಇಮೇಲ್ ಕಳಿಸಿದೆ ಎಂದು ಅಖ್ತರ್  ಪ್ರಶಸ್ತಿ ಸಂದ ಖುಷಿ ಹಂಚಿಕೊಂಡಿದ್ದಾರೆ.