ಹೆಗ್ ಬೀಸ್ ಚಂಡಮಾರುತದ ಅಬ್ಬರಕ್ಕೆ ಜಪಾನ್ ಅಕ್ಷರಶಃ ತತ್ತರಿಸಿ ಹೋಗಿದೆ. ಗಂಟೆಗೆ 216 ಕಿಮೀ ವೇಗದಲ್ಲಿ ಚಂಡಮಾರುತ ಅಪ್ಪಳಿಸುತ್ತಿದೆ. ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯ ನಡೆಯುತ್ತಿದೆ. 

ಟೋಕಿಯೋ (ಅ.15): ಜಪಾನ್‌ಗೆ ಅಪ್ಪಳಿಸಿದ ಪ್ರಬಲ ಹಗಿಬಿಸ್‌ ಚಂಡಮಾರುತಕ್ಕೆ ಸಾವನ್ನಪ್ಪಿದ್ದವರ ಸಂಖ್ಯೆ 33ರಿಂದ 48ಕ್ಕೆ ಏರಿಕೆಯಾಗಿದೆ. ಅಲ್ಲದೆ, ಈ ಘಟನೆಯಿಂದಾಗಿ ಜಪಾನ್‌ ಕೇಂದ್ರ ಮತ್ತು ಉತ್ತರದಲ್ಲಿ ಭಾರೀ ಪ್ರಮಾಣದ ಹಾನಿಯಾಗಿದೆ.

ಜಪಾನ್ ನಲ್ಲಿ ಹೆಗ್ ಬೀಸ್ ಚಂಡಮಾರುತ ಅಬ್ಬರ; ಟೋಕಿಯೋ ಜನ ತತ್ತರ

ಶನಿವಾರ ಮತ್ತು ಭಾನುವಾರ 48 ಗಂಟೆಗಳ ನಿರಂತರ ಸುರಿದ ಮಳೆಯಿಂದಾಗಿ ಎದುರಾದ ಈ ದುರಂತದಲ್ಲಿ 17ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಹೀಗಾಗಿ, ಉಕ್ಕಿ ಹರಿಯುತ್ತಿರುವ ನದಿಗಳು ಮತ್ತು ಭೂಕುಸಿತ ಸಂಭವಿಸಿದ ಕಡೆಗಳಲ್ಲಿ ಮಣ್ಣನ್ನು ಅಗೆದು ಕಣ್ಮರೆಯಾದವರ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಏತನ್ಮಧ್ಯೆ, ಕೆಲವು ಪ್ರದೇಶಗಳಲ್ಲಿ ಸೋಮವಾರ ನೆರೆ ಪರಿಸ್ಥಿತಿ ಮುಂದುವರಿದಿದ್ದು, ಮತ್ತೆ ಕೆಲವು ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ತ್ವರಿತಗೊಂಡಿದೆ.