ಇಟಲಿಯಲ್ಲಿ ನೀವು ಕೇವಲ 260 ರೂಗೆ ಮನೆ ಖರೀದಿ ಸಾಧ್ಯ, ಅಚ್ಚರಿಯಾದರೂ ಇದು ಸತ್ಯ!

ಇಟಲಿಯಲ್ಲಿ ನೀವು ಮನೆ ಖರೀದಿಸುವ ಪ್ಲಾನ್ ಇದೆಯಾ? ಕೇವಲ 260 ರೂಪಾಯಿಯಲ್ಲಿ ನೀವು ಮನೆ ಖರೀದಿಸಲು ಸಾಧ್ಯ. ಇದು ವಿದೇಶಿಗರಿಗೆ ಇಟಲಿ ನೀಡುತ್ತಿರುವ ಆಫರ್. ಅಷ್ಟಕ್ಕೂ ಇಷ್ಟು ಕಡಿಮೆ ಬೆಲೆ ಮನೆ ಕೊಡುತ್ತಿರುವುದೇಕೆ?

Italy offering affordable house sales just rs 260 only for international buyers ckm

ಇಟಲಿ(ಡಿ.18) ಸೆಲೆಬ್ರೆಟಿಗಳು, ಉದ್ಯಮಿಗಳ ರೀತಿ ವಿದೇಶದಲ್ಲಿ ಒಂದು ಮನೆ ಇರಬೇಕು ಅನ್ನೋ ಆಲೋಚನೆ ಇದೆಯಾ? ಹಾಗಾದರೆ ಇಟಲಿಯಲ್ಲಿ ಇದಕ್ಕೆ ಸುಲಭದ ಅವಕಾಶವಿದೆ. ಇಲ್ಲಿ ಮನೆ ಖರೀದಿಗೆ ನಿಮಗೆ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಬೇಕಿಲ್ಲ. ಕೇವಲ 270 ರೂಪಾಯಿ ಸಾಕು. ಅಂದರೆ 1 ಡಾಲರ್, 2 ಡಾಲರ್ ಅಥವಾ 3 ಡಾಲರ್ ಕೊಟ್ಟರೆ ಮನೆ ಸಿಗುತ್ತಿದೆ. ಇದು ಇಟಲಿ ನೀಡಿದ ವಿಶೇಷ ಆಫರ್. ಕೇವಲ ವಿದೇಶಿಗರಿಗೆ ಮಾತ್ರ  ಈ ಆಫರ್ ಲಭ್ಯವಿದೆ.  ಅಚ್ಚರಿಯಾದರೂ ಇದು ಸತ್ಯ. ಈ ಮನೆಗಳನ್ನು ಹರಾಜಿನ ಮೂಲಕ ಖರೀದಿಬೇಕು. 1 ಡಾಲರ್‌ನಿಂದ ಆರಂಭಗೊಳ್ಳುತ್ತದೆ. ಹೆಚ್ಚೆಂದರೆ 3 ಡಾಲರ್ ಅಂದರೆ ಸರಿಸುಮಾರು 260 ರೂಪಾಯಿಗೆ ಮನೆ ನಿಮ್ಮದಾಗಲಿದೆ.

2019ರಿಂದ ಇಟಲಿ ವಿದೇಶಿಗರನ್ನು ಆಕರ್ಷಿಕಲು,  ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸಲು ಈ ಯೋಜನೆ ಜಾರಿಗೆ ತಂದಿದೆ. 2019ರಲ್ಲಿ ಕೇವಲ 85 ರೂಪಾಯಿಗೆ ಮನೆ ಮಾರಾಟವಾಗಿದೆ. ಇದೀಗ 2024ರ ಬೆಲೆ ಕೊಂಚ ಏರಿಕೆಯಾಗಿದೆ. ಇದೀಗ ಸರಾಸರಿ 260 ರೂಪಾಯಿಗೆ ಮನೆ ನಿಮ್ಮ ಕೈಸೇರಲಿದೆ. ಇದು ಇಟಲಿಯ ಎಲ್ಲಾ ಭಾಗದಲ್ಲಿ ಲಭ್ಯವಿಲ್ಲ. ಕೆಲ ನಗರಗಳಲ್ಲಿ ಈ ಕಡಿಮೆ ಬೆಲೆಯ ಮನೆಗಳು ಲಭ್ಯವಿದೆ. ಈ ಪೈಕಿ ಸಂಬುಕಾ ಡಿ ಸಿಸಿಲಿಯಾ, ಮುಸೋಮೆಲಿ, ಕಂಪಾನಿಯಾದ ಝಂಗೊಲಿ, ದಕ್ಷಿಣ ಭಾಗದಲ್ಲಿರವು ಸಿಸಿಲಿ ಐಸ್‌ಲ್ಯಾಂಡ್‌ನಲ್ಲಿರುವ ಬೈವೋನ್ ಸೇರಿದಂತೆ ಕೆಲ ಪ್ರದೇಶದಲ್ಲಿ ಈ ಮನೆಗಳು ಲಭ್ಯವಿದೆ.

ಈ ರೈಲು ಸುರಂಗ ಪ್ರವೇಶಿಸಿದ ಬೆನ್ನಲ್ಲೇ ಮಾಯ, 113 ವರ್ಷವಾದರೂ ಪತ್ತೆಯಾಗಿಲ್ಲ ಘೋಸ್ಟ್ ಟ್ರೈನ್!

ಇದು ಸ್ಕ್ಯಾಮ್ ಅಲ್ಲ. ಕೇವಲ ಇಷ್ಟು ಕಡಿಮೆ ಬೆಲೆಗೆ ಅಂದರೆ ಮನೆಯ ಯಾವುದೇ ಒಂದು ವಸ್ತು ಖರೀದಿಸಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ 260 ರೂಪಾಯಿ ಬೆಲೆಗೆ ಮನೆ ಹೇಗೆ ಸಿಗಲಿದೆ ಅನ್ನೋ ಪ್ರಶ್ನೆ ಮೂಡುವುದು ಸಹಜ. ಇದರ ಹಿಂದೆ ಕೆಲ ಕಾರಣಗಳಿವೆ. ಪ್ರಮುಖವಾಗಿ ಇಟಲಿ ಕೆಲ ಪಟ್ಟಣ ನಗರಗಳಲ್ಲಿ ಜನವಸತಿ ತೀರಾ ವಿರಳವಾಗಿದೆ. ಆದರೆ ಸರ್ಕಾರ ಎಲ್ಲಾ ಸೌಲಭ್ಯಗಳನ್ನು ಬೆರಳೆಣಿಗೆ ಮಂದಿಗೆ ನೀಡಲೇಬೇಕಿದೆ. ಇದು ಆರ್ಥಿಕವಾಗಿ ಸವಾಲಾಗುತ್ತಿದೆ. ಈ ರೀತಿಯ ಸಮಸ್ಯೆಗಳನ್ನು ದೂರ ಮಾಡಲು ವಿದೇಶಿಗರಿಗೆ ಈ ಕಡಿಮೆ ಬೆಲೆಯ ಮನೆ ಖರೀದಿ ಸೌಲಭ್ಯ ನೀಡಲಾಗಿದೆ.

ಮತ್ತೊಂದು ಕಾರಣವಿದೆ. ಈ ನಿಗದಿತ ಪ್ರದೇಶಗಳಲ್ಲಿ ಹಲವು ದಶಕಗಳಿಂದ ಜನವಸತಿ ಕಡಿಮೆಯಾಗಿದೆ. ಒಂದು ಕಾಲದಲ್ಲಿ ಹೆಚ್ಚಿನ ಜನರಿದ್ದ ನಗರ, ಪಟ್ಟಣವಾಗಿತ್ತು. ಆದರೆ ಹಲವು ಕಾರಣಗಳಿಂದ ಈ ಪಟ್ಟಣ, ನಗರ ತೊರೆದಿದ್ದಾರೆ. ಆದರೆ ಇವರ ಮನೆಗಳು ಹಾಗೇ ಇವೆ. ಈ ಪೈಕಿ ಹಲವು ಮನೆಗಳಿಗೆ ವಾರಸುದಾರರೇ ಇಲ್ಲ. ಇಂತಹ ಹಳೇ ಮನೆ,ಪಾಳು ಬಿದ್ದ ಮನೆಗಳನ್ನು ಸರಿಸುಮಾರು 260 ರೂಪಾಯಿ ಮಾರಾಟ ಮಾಡಲಾಗುತ್ತಿದೆ. ಹರಾಜಿನ ಮೂಲಕ ಆಸಕ್ತರು ಈ ಮನೆಗಳನ್ನು ಖರೀದಿಸಬಹುದು. ಈ ಮೂಲಕ ಇಟಲಿ ನಗರದಲ್ಲಿ ಮನೆ ಮಾಲೀಕರಾಗುವ ಅವಕಾಶವಿದೆ.

ಅಮೆರಿಕದ ಅಲೆಕ್ಸಾಂಡರ್ ಸ್ಟಬ್ಸ್ ಅನ್ನೋ ವ್ಯಕ್ತಿ ಇದೇ ಆಫರ್ ಮೂಲಕ 2 ಮನೆ ಖರೀದಿಸಿದ್ದಾರೆ. ಆರಂಭದಲ್ಲಿ ಇದು ಸುಳ್ಳು ಎಂದುಕೊಂಡಿದ್ದೆ. ಬಳಿಕ ವಿಚಾರಿಸಿದಾಗ ಸತ್ಯ ಗೊತ್ತಾಗಿದೆ. ತಕ್ಷಣವೇ 2 ಮನೆ ಖರೀದಿಸಿದ್ದೇವೆ ಎಂದು ಅಲೆಕ್ಸಾಂಡರ್ ಹೇಳಿದ್ದಾರೆ. ಕಟ್ಟಡಗಳು ಹಳೇಯದು. ಆದರೆ ವಾಸಯೋಗ್ಯವಾಗಿದೆ. ಕೆಲ ರಿನೋವೇಶನ್ ಕಡ್ಡಾಯವಾಗಿ ಮಾಡಬೇಕು. ಇದು ಸರ್ಕಾರದ ಆದೇಶವಾಗಿದೆ ಎಂದಿದ್ದಾರೆ.

ಕಡಿಮೆ ಬೆಲೆಯ ಮನೆ ಖರೀದಿಸಲು ಮೊದಲು ಬಿಡ್ಡಿಂಗ್‌ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಇದಕ್ಕೆ 5,399 ಅಮೆರಿಕನ್ ಡಾಲರ್ ಮೊತ್ತ ಕಟ್ಟಬೇಕು. ಅಂದರೆ ಭಾರತೀಯ ರೂಪಾಯಿಗಳಲ್ಲಿ 4.5 ಲಕ್ಷ ರೂಪಾಯಿ. ಮನೆ ಖರೀದಿಸಿದ ಮೂರು ವರ್ಷದೊಳಗೆ ನವೀಕರಣ ಕಡ್ಡಾಯಾಗಿ ಮಾಡಬೇಕು. ಹಲವು ವರ್ಷಗಳಿಂದ ಮನೆ ಪಾಳು ಬಿದ್ದಿರುವ ಕಾರಣ ಮನೆ ವಾಸಯೋಗ್ಯ ಮಾಡಲು ನವೀಕರಣ ಮಾಡಲೇಬೇಕು. ಈ ವೇಳೆ ಮನೆಯ ಬಾಳಿಕೆ, ಅಗ್ನಿಶಾಮಕ ಸೇರಿದಂತೆ ಹಲವು ಸುರಕ್ಷತೆಗಳ ಪ್ರಮಾಣೀಕರಣ ಮಾಡಲೇಬೇಕು. ಮೂರು ವರ್ಷದೊಳಗೆ ನವೀಕರಣ ಮಾಡದಿದ್ದರೆ, ಖರೀದಿಸಿದ ಮನೆ ಮತ್ತೆ ಸರ್ಕಾರದ ಪಾಲಾಗುವ ಸಾಧ್ಯತೆ ಇದೆ. ಅಥವಾ ಡೆಪಾಸಿಟ್ ಮೊತ್ತ ಕಳೆದುಕೊಳ್ಳುವ ಸಾಧ್ಯತೆ ಇದೆ.

ಇಟಲಿಯ ಮಿಲನ್ ಫ್ಯಾಷನ್ ವೀಕ್ ನಂತರದ ಪಾರ್ಟಿಯಲ್ಲಿ ಮಿಂಚಿ, ವಿದೇಶಿ ಡಿಸೈನರ್‌ ಹೊಗಳಿದ ರಶ್ಮಿಕಾ ಮಂದಣ್ಣ

260 ರೂಪಾಯಿ ನೀಡಿ ಅಮೆರಿಕದ ಚಿಕಾಗೋ ಮೂಲದ ವ್ಯಕ್ತಿ ಇಟಲಿಯಲ್ಲಿ ಮನೆ ಖರೀದಿಸಿದ್ದಾರೆ. ಸರ್ಕಾರದ ಸೂಚನೆಯಂತೆ ಮನೆಯ ನವೀಕರಣ ಹಾಗೂ ದಾಖಲೆ ಪತ್ರ ಮಾಡಲಾಗಿದೆ. ಇದರ ಒಟ್ಟು ಮೊತ್ತ 3.8 ಕೋಟಿ ರೂಪಾಯಿ ಆಗಿದೆ. ನನ್ನ ಜೀಮಮಾನದಲ್ಲಿ ಈ ರೀತಿಯ ನವೀಕರಣ ಮಾಡಿಲ್ಲ ಎಂದು ಚಿಕಾಗೋ ವ್ಯಕ್ತಿ ಹೇಳಿದ್ದಾರೆ.
 

Latest Videos
Follow Us:
Download App:
  • android
  • ios