2022ರ ಹಮಾಸ್ ದಾಳಿಯ ಗುಪ್ತಚರ ವೈಫಲ್ಯದಿಂದ ಪಾಠ ಕಲಿತ ಇಸ್ರೇಲಿ ಸೇನೆ, ಗುಪ್ತಚರ ವಿಭಾಗದ ಯೋಧರಿಗೆ ಇಸ್ಲಾಂ ಅಧ್ಯಯನ ಮತ್ತು ಅರೇಬಿಕ್ ಭಾಷೆ ಕಲಿಕೆಯನ್ನು ಕಡ್ಡಾಯಗೊಳಿಸಿದೆ. 

ಜೆರುಸಲೆಂ: 2022ರ ಹಮಾಸ್ ದಾಳಿ ವೇಳೆಯ ಗುಪ್ತಚರ ವೈಫಲ್ಯ ಗಂಭೀರವಾಗಿ ಪರಿಗಣಿಸಿರುವ ಇಸ್ರೇಲಿ ಸೇನೆ, ಗುಪ್ತಚರ ವಿಭಾಗದ ಯೋಧರಿಗೆ ಇಸ್ಲಾಂ ಅಧ್ಯಯನ ಮತ್ತು ಅರೇಬಿಕ್ ಭಾಷೆ ಕಲಿಕೆ ಕಡ್ಡಾಯ ಮಾಡಿದೆ. 1200 ಇಸ್ರೇಲಿಗರು ಬಲಿಯಾದ ವೇಳೆ, ದಾಳಿಯ ಮಾಹಿತಿಯನ್ನು ಮೊದಲೇ ಗ್ರಹಿಸುವಲ್ಲಿ ವಿಫಲವಾಗಿದ್ದಕ್ಕೆ ಗುಪ್ತಚರ ವಿಭಾಗಕ್ಕೆ ಅರೇಬಿಕ್ ಭಾಷೆ ಬಾರದಿರುವುದೇ ಕಾರಣ ಎಂದು ಘಟನೆ ಕುರಿತ ತನಿಖೆ ವೇಳೆ ಕಂಡು ಬಂದಿತ್ತು. ಹೀಗಾಗಿ ಇಸ್ಲಾಂ ಅಧ್ಯಯನ, ಅರೇಬಿಕ್ ಭಾಷೆ ಕಲಿಕೆ, ಹೌತಿ ಮತ್ತು ಇರಾಕಿ ಭಾಷೆ ಕಲಿಕೆಯನ್ನು ಯೋಧರು ಮತ್ತು ಅಧಿಕಾರಿಗಳಿಗೆ ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗಿದೆ.

ರಾಹುಲ್ 2ನೇ ಅಂಬೇಡ್ಕರ್: ಕೈ ನಾಯಕ ಉದಿತ್ ವಿವಾದ

ನವದೆಹಲಿ: ಬಾಹ್ಯಾಕಾಶಕ್ಕೆ ಮೇಲ್ವರ್ಗದ ಶುಭಾಂಶು ಶುಕ್ಲಾ ಅವರ ಬದಲಿಗೆ ದಲಿತರನ್ನು ಕಳಿಸಬೇಕಿತ್ತು ಎಂದು ವಿವಾದ ಸೃಷ್ಟಿಸಿದ್ದ ಕಾಂಗ್ರೆಸ್‌ ನಾಯಕ ಉದಿತ್ ರಾಜ್ ಈಗ ರಾಹುಲ್ ಗಾಂಧಿ ಅವರು 2ನೇ ಅಂಬೇಡ್ಕರ್ ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ಬರೆದುಕೊಂಡಿರುವ ಉದಿತ್, 'ಒಬಿಸಿಗಳೇ, ಕಾಲ ಕಳೆದುಹೋಗುವ ಮುನ್ನ ರಾಹುಲ್ ಗಾಂಧಿ ಬೆಂಬಲಿಸಿ. ಅವರು 2ನೇ ಅಂಬೇಡ್ಕರ್. ನಿಮ್ಮ ಉದ್ಧಾರ ಮಾಡಲಿದ್ದಾರೆ' ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, 'ನಿಜವಾದ ಅಂಬೇಡ್ಕರ್ ಅವರನ್ನು ಗೌರವಿಸದ ಕಾಂಗ್ರೆಸ್ ಈಗ 2ನೇ ಅಂಬೇಡ್ಕರ್ ಆಗಿ ರಾಹುಲ್ ಗಾಂಧಿ ಅವರನ್ನು ಬಿಂಬಿಸುತ್ತಿದೆ. ಇದು ದಲಿತರಿಗೆ, ಸಂವಿಧಾನಕ್ಕೆ ಮಾಡಿದ ಅವಮಾನ' ಎಂದಿದೆ.

ರಾಜಕೀಯ ಜಾಹೀರಾತುಗಳಿಗೆ ಯುರೋಪಲ್ಲಿ ಫೇಸ್ಟುಕ್ ಕೋಕ್

ನವದೆಹಲಿ: ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸಾಪ್‌ನ ಮಾತೃ ಸಂಸ್ಥೆಯಾದ 'ಮೆಟಾ', ಯುರೋಪ್ ದೇಶಗಳಲ್ಲಿ ಚುನಾವಣೆ, ರಾಜಕೀಯ, ಸಾಮಾಜಿಕ ಸಮಸ್ಯೆಗಳ ಕುರಿತಾದ ಜಾಹೀರಾತು ಪ್ರಸಾರ ಸ್ಥಗಿತ ಮಾಡುವುದಾಗಿ ಘೋಷಿಸಿದೆ. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಚುನಾವಣೆಯ ದಿಕ್ಕನ್ನೇ ಬದಲಾಯಿಸಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ. ಐರೋಪ್ಯ ಒಕ್ಕೂಟ ತನ್ನ 27 ದೇಶಗಳಲ್ಲಿ ಪಾರದರ್ಶಕತೆ ಮತ್ತು ಜಾಹೀರಾತುಗಳ ಗುರಿ( ಟಿಟಿಪಿಎ) ನಿಯಂತ್ರಣ ಕಾಯ್ದೆಯನ್ನು ಅ.10ರಿಂದ ಜಾರಿಗೆ ತರಲಿದೆ. ಈ ಪ್ರಕಾರ ಟೆಕ್ ಕಂಪನಿಗಳು ಜಾಹೀರಾತಿಗೆ ಯಾರು ಹಣವನ್ನು ನೀಡಿದವರು ಮತ್ತು ಎಷ್ಟು ಹಣ ನೀಡಿದ್ದಾರೆ ಎನ್ನುವುದನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು.

ಪ್ರಧಾನಿ ಮೋದಿ ವಿಶ್ವ ನಂ.1 ಜನಪ್ರಿಯ ನಾಯಕ: ಸರ್ವೇ

ನವದೆಹಲಿ: ಸತತ 3ನೇ ಬಾರಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಲೇ ಇದ್ದು, ವಿಶ್ವದ ಅತ್ಯಂತ ಜನಪ್ರಿಯ, ಪ್ರಜಾಪ್ರಭುತ್ವ ವಾದಿ ನಾಯಕ ಎಂಬ ಹಿರಿಮೆ ಮತ್ತೆ ಮೋದಿ ಅವರನ್ನು ಅರಸಿ ಬಂದಿದೆ. ಅಮೆರಿಕದ ಮಾರ್ನಿಂಗ್ ಕನಲ್ಟೆಂಟ್‌ ಸಮೀಕ್ಷಾ ವರದಿ ಅನ್ವಯ ಶೇ.75ರಷ್ಟು ರೇಟಿಂಗ್‌ನೊಂದಿಗೆ ಮೋದಿ ವಿಶ್ವದ ನಂ.1 ಜನಪ್ರಿಯ ಪ್ರಜಾಸತಾತ್ಮಕ ನಾಯಕನಾಗಿ ಹೊರಹೊಮ್ಮಿದ್ದಾರೆ. ವಿಶ್ವದ ಪ್ರಮುಖ ಪ್ರಜಾಪ್ರಭುತ್ವ ದೇಶಗಳಲ್ಲಿ ಜು.4 ರಿಂದ ಜು.10 ರವರೆಗೆ ನಡೆಸಿದ ಸಮೀಕ್ಷೆಯಲ್ಲಿ ವ್ಯಕ್ತವಾದ ಅಂಶಗಳನ್ನು ಸಂಸ್ಥೆ ತನ್ನ ಹೊಸ ವರದಿಯಲ್ಲಿ ಪ್ರಕಟಿಸಿದೆ. ನಂತರದಲ್ಲಿ ದಕ್ಷಿಣ ಕೊರಿಯಾ ಅಧ್ಯಕ್ಷ ಲೀ ಜೇ (ಶೇ.59) ಅವರಿದ್ದಾರೆ.