'ಇಸ್ರೇಲ್‌ಗೆ ನಿಮ್ಮ ಭಾಷಣ ಬಿಗಿಯುವ ಬದಲು, ಹಮಾಸ್ ಖಂಡಿಸುವ ಧೈರ್ಯಮಾಡಿ..' ವಿಶ್ವಸಂಸ್ಥೆಗೆ ಇಸ್ರೇಲ್ ಖಡಕ್ ಮಾತು!
ಇಸ್ರೇಲ್ ಅನ್ನು ಟೀಕಿಸಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ನೀಡಿದ್ದ ಹೇಳಿಕೆಯನ್ನು ಇಸ್ರೇಲ್ ರಾಯಭಾರಿ ಗಿಲಾಡ್ ಎರ್ಡನ್ ಟೀಕಿಸಿದ್ದಾರೆ. ಮಾನವ ಹಕ್ಕುಗಳ ಸಮಿತಿ ತನ್ನ ನೈತಿಕತೆಯನ್ನು ಕಳೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.

ನ್ಯೂಯಾರ್ಕ್ (ಅ.13): ಗಾಜಾದ ನಾಗರೀಕರು ಆದಷ್ಟು ಶೀಘ್ರವಾಗಿ ತಮ್ಮ ಪ್ರದೇಶವನ್ನು ಖಾಲಿ ಮಾಡಬೇಕು ಎಂದು ಇಸ್ರೇಲ್ ಭದ್ರತಾ ಸಮಿತಿಯ ಎಚ್ಚರಿಕೆಯನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ಟೀಕಿಸಿದೆ. ಇದರ ಬೆನ್ನಲ್ಲಿಯೇ ಇಸ್ರೇಲ್ ರಾಯಭಾರಿ ಗಿಲಾಡ್ ಎರ್ಡನ್ ವಿಶ್ವಸಂಸ್ಥೆಯ ಸಮಿತಿಯ ವಿರುದ್ಧವೇ ಆಕ್ರೋಶ ಹೊರಹಾಕಿದ್ದಾರೆ. ಇಸ್ರೇಲ್‌ನ ಮಾನವ ಹಕ್ಕುಗಳ ಭಾಷಣ ಬಿಗಿಯುವ ಬದಲು, ಒತ್ತೆಯಾಳುಗಳಾಗಿರುವ ಇಸ್ರೇಲ್ ಪ್ರಜೆಗಳು, ಸೈನಿಕರನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಅದು ಪ್ರಯತ್ನ ಮಾಡಬೇಕು. ಹಮಾಸ್‌ನನನ್ನು ಖಂಡಿಸುವ ಧೈರ್ಯ ಮಾಡಬೇಕು. ಅದರೊಂದಿಗೆ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳುವ ಇಸ್ರೇಲ್ ನಿರ್ಧಾರವನ್ನು ಬೆಂಬಲಿಸಬೇಕು ಎಂದು ಹೇಳಿದ್ದಾರೆ. ವಿಶ್ವಸಂಸ್ಥೆಯ ಇಸ್ರೇಲ್‌ನ ರಾಯಭಾರಿ ಗಿಲಾಡ್ ಎರ್ಡಾನ್ ಅವರು ಹಮಾಸ್ ಭಯೋತ್ಪಾದಕ ದಾಳಿಯ ಕುರಿತು ಮಾನವ ಹಕ್ಕುಗಳ ಮಂಡಳಿತ ಆಯುಕ್ತರಿಂದ ಬಂದಿರುವ ಹೇಳಿಕೆ ತಪ್ಪಾಗಿದ್ದಲ್ಲದೆ, ಅನೈತಿಕವೂ ಆಗಿದೆ ಎಂದಿದ್ದಾರೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯಿಂದ ಇಸ್ರೇಲ್ ವಿರೋಧಿ ಹೇಳಿಕೆಯನ್ನು ಪಾಕಿಸ್ತಾನದ ರಾಯಭಾರಿ ಝಮಾನ್ ಮೆಹದಿ ಸೋಮವಾರ ಹೇಳಿದ್ದರು.
ಐಒಸಿ ಸದಸ್ಯ ರಾಷ್ಟ್ರಗಳ ಪರವಾಗಿ, ಆಕ್ರಮಿತ ಪ್ಯಾಲೇಸ್ಟಿನಿಯನ್ ಭೂಪ್ರದೇಶದಲ್ಲಿ ಮತ್ತು ಇತರೆಡೆಗಳಲ್ಲಿ ಅಮಾಯಕರ ಜೀವಗಳನ್ನು ಕಳೆದುಕೊಂಡಿರುವ ಬಗ್ಗೆ ನಾವು ನಮ್ಮ ಆಳವಾದ ಕಳವಳವನ್ನು ವ್ಯಕ್ತಪಡಿಸುತ್ತೇವೆ" ಎಂದು ಮೆಹ್ದಿ ಹೇಳಿದ್ದರು. ಮಂಗಳವಾರದ ಹೇಳಿಕೆಯಲ್ಲಿ, ಮಾನವ ಹಕ್ಕುಗಳ ಯುಎನ್ ಹೈ ಕಮಿಷನರ್ ವೋಲ್ಕರ್ ಟರ್ಕ್ ಅವರು ಐಡಿಎಫ್ ಮತ್ತು ಹಮಾಸ್ ಎರಡಕ್ಕೂ "ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಗೌರವಿಸಲು" ಮತ್ತು ಉದ್ವಿಗ್ನತೆಯನ್ನು ತಗ್ಗಿಸಲು ಕರೆ ನೀಡಿದರು. ಗಾಜಾದ ಮೇಲೆ ಇಸ್ರೇಲ್‌ನ ಸಂಪೂರ್ಣ ಮುತ್ತಿಗೆಯನ್ನೂ ಅವರು ಟೀಕಿಸಿದ್ದಾರೆ. ಇಸ್ರೇಲ್ ತಕ್ಷಣವೇ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಿಲ್ಲಿಸಬೇಕು ಎಂದಿದ್ದರು.
ಇನ್ನು ಟರ್ಕ್ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ ಇಸ್ರೇಲ್ ರಾಯಭಾರಿ, ಎಚ್‌ಆರ್‌ಸಿ ತನ್ನ ನೈತಿಕತೆಯನ್ನು ಕಳೆದುಕೊಂಡಿದೆ ಎಂದಿದ್ದಾರೆ. ಹಾಲೋಕಾಸ್ಟ್ ಬಳಿಕ ಇಸ್ರೇಲ್ ತನ್ನ ಅತಿದೊಡ್ಡ ಮಾನವ ಹಕ್ಕುಗಳ ಹಿಂಸಾಚಾರವನ್ನು ಎದುರಿಸಿದೆ ಎಂದು ಹೇಳಿದ ಎಡರ್ನ್, ನರರಾಕ್ಷಸರಾಗಿರುವ ಭಯೋತ್ಪಾದಕ ಸಂಘಟನೆಯ ವಿರುದ್ಧ ನಿಮ್ಮ ಕಠಿಣ ಪ್ರತಿಕ್ರಿಯೆ ನೀಡಲು ಇನ್ನೂ ಎಷ್ಟು ಯಹೂದಿಗಳು ಸಾಯಬೇಕು? 1 ಸಾವಿರ? 6 ಲಕ್ಷ? ಅಥವಾ 10 ಲಕ್ಷ? ಇಲ್ಲವೇ ಇಡೀ ಇಸ್ರೇಲ್ ನ ಜನಸಂಖ್ಯೆಯಷ್ಟು ಜನ ಸಾಯಬೇಕೇ? ಇದು ಹಮಾಸ್ ಸಾರ್ವಜನಿಕವಾಗಿ ಹೇಳಿರುವ ಮಾತಾಗಿದೆ. ಇಸ್ರೇಲ್‌ನ ಸ್ವರಕ್ಷಣೆಯ ಹಕ್ಕನ್ನು ಬೆಂಬಲಿಸಲು ನೀವು ಎಷ್ಟು ಯಹೂದಿಗಳ ಸಾವನ್ನು ಬಯಸಿದ್ದೀರಿ ಅನ್ನೋದನ್ನು ಹೇಳಿಬಿಡಿ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.
ನೀವೇನೇ ಹೇಳಿ ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳುವುದನ್ನು ಮುಂದುವರಿಸುತ್ತದೆ. ಇನ್ನು ಎಚ್‌ಆರ್‌ಸಿ ಇಂಥವೇ ಸುಳ್ಳು, ಅನೈತಿಕ ಹೋಲಿಕೆಗಳನ್ನು ಮಾಡುವುದರಲ್ಲಿಯೇ ಕಾಲ ಕಳೆಯಿರಿ ಎಂದು ತಿವಿದಿದ್ದಾರೆ.
'ಒತ್ತೆಯಾಳಾಗಿ ನರಳೋದಕ್ಕಿಂತ ಸತ್ತಿದ್ದೆ ಒಳ್ಳೆಯದಾಯ್ತ..' 8 ವರ್ಷದ ಮಗಳ ಸಾವನ್ನು ಸ್ವಾಗತಿಸಿದ ಇಸ್ರೇಲ್ ಪ್ರಜೆ!
"ಈ ದುಷ್ಕೃತ್ಯಗಳು ಮುಂದುವರಿಯುತ್ತದೆ ಎಂದು ದುಃಖದಿಂದ ಖಾತರಿಪಡಿಸುವ ಇಂತಹ ವಿಕೃತ ನೈತಿಕ ಮಾನದಂಡವನ್ನು ಜಗತ್ತು ಒಪ್ಪಿಕೊಳ್ಳುವುದಿಲ್ಲ" ಎಂದು ರಾಯಭಾರಿ ಹೇಳಿದ್ದಲ್ಲದೆ, "ನಾವು ಹಮಾಸ್ ಭಯೋತ್ಪಾದಕ ಮೂಲಸೌಕರ್ಯವನ್ನು ನಾಶಪಡಿಸುತ್ತೇವೆ' ಎಂದು ವಿಶ್ವಸಂಸ್ಥೆಯ ವೇದಿಕೆಯಲ್ಲಿ ತಿಳಿಸಿದ್ದಾರೆ. ಉತ್ತರ ಗಾಜಾದಲ್ಲಿರುವವರನ್ನು ಸ್ಥಳಾಂತರಿಸುವಂತೆ ಇಸ್ರೇಲ್‌ನ ಆದೇಶದ ನಂತರ 'ವಿನಾಶಕಾರಿ ಮಾನವೀಯ ಪರಿಣಾಮಗಳ' ಬಗ್ಗೆ ಯುಎನ್ ಎಚ್ಚರಿಸಿದೆ.
ವೋಟ್‌ಬ್ಯಾಂಕ್ ಸಲುವಾಗಿ ಪ್ಯಾಲೆಸ್ತೇನ್ ಪರ ನಿಂತ ಕಾಂಗ್ರೆಸ್, 'ಹಮಾಸ್ ಭಯೋತ್ಪಾದಕರಲ್ಲ' ಎಂದ ತರೂರ್!