ಹಮಾಸ್ ಉಗ್ರರು ಅಪಹರಿಸಿ ಬೆತ್ತಲೇ ಪರೇಡ್ ಮಾಡಿದ್ದ ಶಾನಿ ಮೃತದೇಹ ಪತ್ತೆ, ತಾಯಿ ಅಸ್ವಸ್ಥ!
ಹಮಾಸ್ ಉಗ್ರರು ಅಪಹರಿಸಿ ಜೀಪ್‌ನಲ್ಲಿ ಅರೆಬೆತ್ತಲೇ ಪರೇಡ್ ಮಾಡಿದ್ದ ಇಸ್ರೇಲ್-ಜರ್ಮನ್ ಯುವತಿ ಮೃತಪಟ್ಟಿರುವುದನ್ನು ಇಸ್ರೇಲ್ ಖಚಿತಪಡಿಸಿದೆ. ಯುವತಿ ಮೃತದೇಹ ಪತ್ತೆಯಾಗಿರುವುದಾಗಿ ಇಸ್ರೇಲ್ ಹೇಳಿದೆ. ಇತ್ತ ಶಾನಿ ಬರುವಿಕೆಗಾಗಿ ಕಾಯುತ್ತಿದ್ದ ಕುಟುಂಬ ಆಘಾತಕ್ಕೊಳಗಾಗಿದೆ.
ಇಸ್ರೇಲ್(ಅ.30) ಹಮಾಸ್ ಉಗ್ರರು ಅ.7 ರಂದು ಮ್ಯೂಸಿಕ್ ಫೆಸ್ಟಿವಲ್ ಮೇಲೆ ದಾಳಿ ಮಾಡಿ ಹಲವರ ಹತ್ಯೆ ಮಾಡಿದ್ದರು. ಈ ವೇಳೆ ಹಲವರನ್ನು ಸೆರೆ ಹಿಡಿದು ಒತ್ತೆಯಳಾಗಿಟ್ಟುಕೊಂಡಿದ್ದಾರೆ. ಹೀಗೆ ಸೆರೆ ಹಿಡಿದ 23 ವರ್ಷದ ಶಾನಿ ಲಾಕ್ ಯುವತಿಯ ಕೈಕಾಲು ಮುರಿದು ಜೀಪ್ ಹಿಂಭಾಗದಲ್ಲಿ ಅರೆಬೆತ್ತಲೇ ಮಾಡಿ ಪರೇಡ್ ಮಾಡಲಾಗಿತ್ತು. ಇದೀಗ ಈ ಯುವತಿ ಮೃತದೇಹ ಪತ್ತೆಯಾಗಿದೆ. ಶಾನಿ ಲಾಕ್ ಸಾವನ್ನು ಇಸ್ರೇಲ್ ಖಚಿತಪಡಿಸಿದೆ. ಈ ಮೂಲಕ ಮಗಳ ಬರುವಿಕೆ ಕಾಯುತ್ತಿದ್ದ ತಾಯಿಗೆ ಆಘಾತದಿಂದ ಅಸ್ವಸ್ಥರಾಗಿದ್ದಾರೆ.
ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಏಕಾಏಕಿ ಗಾಝಾ ಪಟ್ಟಿಯಿಂದ ಇಸ್ರೇಲ್ ಮೇಲೆ ದಾಳಿ ನಡೆಸಿದ್ದರು. ಆರಂಭದಲ್ಲಿ ರಾಕೆಟ್ ದಾಳಿ ನಡೆಸಿದ ಹಮಾಸ್ ಉಗ್ರರು ಬಳಿಕ ಪ್ಯಾರಗ್ಲೈಡಿಂಗ್ ಬಳಸಿ ವಾಯು ಮಾರ್ಗದ ಮೂಲಕವೂ ಇಸ್ರೇಲ್‌ಗೆ ನುಗ್ಗಿದ್ದರು. ಕಿಬ್ಬುಟ್ಜ್ ವಲಯದ ಮೇಲೆ ದಾಳಿಗೂ ಮುನ್ನ ಹಮಾಸ್ ಉಗ್ರರು ಗಾಜಾ ಗಡಿ ಪಕ್ಕದಲ್ಲಿ ನಡೆಯುತ್ತಿದ್ದ ಮ್ಯೂಸಿಕ್ ಫೆಸ್ಟಿವಲ್ ಮೇಲೆ ದಾಳಿ ನಡೆಸಿದ್ದರು.
ಇಸ್ರೇಲ್ ಭಾರಿ ದಾಳಿ ಮಾಡಿದ್ರೂ ಹಮಾಸ್ ಸುರಂಗ ಸೇಫ್: ಪೂರ್ಣ ಪ್ರಮಾಣದ ಭೂದಾಳಿ ಹಿಂದೇಟಿಗೂ ಇದೇ ಕಾರಣ!
ಮ್ಯೂಸಿಕ್ ಕಾರ್ಯಕ್ರಮದಲ್ಲಿ ನೆರೆದಿದ್ದ ಸಾವಿರಾರು ಯುವ ಸಮೂಹದ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಹಲವರು ಮೃತಪಟ್ಟಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮತ್ತೆ ಕೆಲವವರನ್ನು ಸೆರೆ ಹಿಡಿದು ಒತ್ತೆಯಾಳಾಗಿ ಗಾಜಾಗೆ ಕರೆದೊಯ್ದಿದ್ದರು. ಹೀಗೆ ಸೆರೆ ಹಿಡಿದವರ ಪೈಕಿ 23 ವರ್ಷದ ಇಸ್ರೇಲ್-ಜರ್ಮನ್ ಯುವತಿ ಶಾನಿ ಲಾಕ್ ಕೂಡ ಒಬ್ಬಳು.
ಈಕೆಯನ್ನು ಸೆರೆ ಹಿಡಿದು ಥಳಿಸಲಾಗಿತ್ತು. ಕಾಲು ಮುರಿಯಲಾಗಿತ್ತು. ಅರೆಪ್ರಜ್ಞಾಸ್ಥಿತಿ ತಲುಪಿದ್ದ ಶಾನಿ ಲಾಕ್‌ನ ಅರೆಬೆತ್ತಲೆಗೊಳಿಸಿದ ಹಮಾಸ್ ಉಗ್ರರು ತಮ್ಮ ಜೀಪ್ ಹಿಂಭಾಗದಲ್ಲಿ ಹಾಕಿ ಗಾಜಾಗೆ ಕರೆದೊಯ್ದಿದ್ದರು. ಈ ವೇಳೆ ಈಕೆಯ ಮೇಲೆ ಕುಳಿತುಕೊಂಡು ಕೇಕೆ ಹಾಕುತ್ತಾ ಹಮಾಸ್ ಉಗ್ರರು ತೆರಳಿದ್ದರು. ಹಮಾಸ್ ಉಗ್ರರು ಗಾಜಾ ತಲುಪುತ್ತಿದ್ದಂತೆ ಅದ್ಧೂರಿ ಸ್ವಾಗತ ಸಿಕ್ಕಿತ್ತು. ಪ್ಯಾಲೆಸ್ತಿನ್ ಜನ, ಓಡೋಡಿ ಬಂದು ಇಸ್ರೇಲ್‌ನಿಂದ ಸೆರೆ ಹಿಡಿದು ತಂದ ಶಾನಿ ಲಾಕ್ ಮೇಲೆ ದಾಳಿ ಮಾಡಿದ್ದರು. ಹಮಾಸ್ ಉಗ್ರರ ಕ್ರೌರ್ಯವನ್ನು ಪ್ಯಾಲೆಸ್ತಿನ್ ಜನ ರಸ್ತೆಯಲ್ಲೇ ಸಂಭ್ರಮಪಟ್ಟಿದ್ದರು. ಈ ವಿಡಿಯೋಗಳು ಭಾರಿ ವೈರಲ್ ಆಗಿತ್ತು.
ಗಾಜಾದಲ್ಲಿ ಇಸ್ರೇಲ್ ಸೇನೆಯಿಂದ ಭಾರಿ ಪ್ರಮಾಣದಲ್ಲಿ ಭೂದಾಳಿ, ವಾಯುದಾಳಿ: ಇಂಟರ್ನೆಟ್, ಮೊಬೈಲ್ ಸ್ತಬ್ಧ
ಬಳಿಕ ಶಾನಿ ಲಾಕ್ ಸುಳಿವು ಇರಲಿಲ್ಲ. ಒತ್ತೆಯಾಳುಗಳ ಪೈಕಿ ಶಾನಿ ಲಾಕ್ ಕೂಡ ಇರಬಹುದು ಎಂದು ಕುಟುಂಬಸ್ಥರು ನಂಬಿದ್ದರು. ತನ್ನ ಮಗಳನ್ನು ಬಿಟ್ಟುಕಳುಹಿಸುವಂತೆ ಶಾನಿ ತಾಯಿ ಪರಿಪರಿಯಾಗಿ ಮನವಿ ಮಾಡಿದ್ದರು. ಆದರೆ ಕುಟುಂಬಕ್ಕೆ ಇದೀಗ ಆಘಾತವಾಗಿದೆ. ಶಾನಿ ಲಾಕ್ ಮೃತದೇಹ ಪತ್ತೆಯಾಗಿದೆ. ಕೊಳತೆ ಸ್ಥಿತಿಯಲ್ಲಿ ಶಾನಿ ಲಾಕ್ ಮೃತದೇಹ ಪತ್ತೆಯಾಗಿದೆ. ಶಾನಿ ಲಾಕ್ ಸಾವು ಖಚಿತವವಾಗುತ್ತಿದ್ದಂತೆ ತಾಯಿ ಅಸ್ವಸ್ಥರಾಗಿದ್ದಾರೆ. ಕುಟುಂಬಸ್ಥರು ತೀವ್ರ ಆಘಾತಕ್ಕೊಳಗಾಗಿದ್ದಾರೆ.