ಗಾಜಾದಲ್ಲಿ ಇಸ್ರೇಲ್‌ ಸೇನೆಯಿಂದ ಭಾರಿ ಪ್ರಮಾಣದಲ್ಲಿ ಭೂದಾಳಿ, ವಾಯುದಾಳಿ: ಇಂಟರ್ನೆಟ್‌, ಮೊಬೈಲ್‌ ಸ್ತಬ್ಧ

ನಮ್ಮ ಯುದ್ಧ ವಿಮಾನಗಳು ಗಾಜಾ ಪಟ್ಟಣದ ಹೊರವಲಯದ ಶಿಜೈಯಾಹ್‌ ಪಟ್ಟಣದ ಹಲವು ಗುರಿಗಳ ಮೇಲೆ ಬಾಂಬ್‌ ದಾಳಿ ನಡೆಸಿವೆ. ದಾಳಿಯಲ್ಲಿ ನಮ್ಮ ಯಾವುದೇ ಯೋಧರ ಸಾವು ಸಂಭವಿಸಿಲ್ಲ ಎಂದು ಇಸ್ರೇಲಿ ಸೇನೆ ಹೇಳಿದೆ.

israel steps up air and ground attacks in gaza and cuts off the territorys communications ash

ಟೆಲ್‌ ಅವಿವ್‌ (ಅಕ್ಟೋಬರ್ 28, 2023) : ಗುರುವಾರ ಮೊದಲ ಬಾರಿಗೆ ಗಾಜಾದ ಗಡಿಯೊಳಗೆ ನುಗ್ಗಿ ಭೂದಾಳಿ ನಡೆಸಿದ್ದ ಇಸ್ರೇಲಿ ಸೇನಾ ಪಡೆಗಳು ಸತತ 2ನೇ ದಿನವಾದ ಶುಕ್ರವಾರ ಕೂಡಾ ಇದೇ ರೀತಿಯಲ್ಲಿ ಭೂದಾಳಿ ಪರೀಕ್ಷೆ ನಡೆಸಿ ಮರಳಿವೆ. ಯುದ್ಧ ವಿಮಾನಗಳು ಮತ್ತು ಡ್ರೋನ್‌ಗಳ ಕಣ್ಗಾವಲಿನಲ್ಲಿ ಗಾಜಾ ಪಟ್ಟಿ ಪ್ರದೇಶದೊಳಗೆ ನುಗ್ಗಿದ್ದ ಇಸ್ರೇಲಿ ಯುದ್ಧ ಟ್ಯಾಂಕರ್‌ಗಳು ಗಾಜಾ ಪಟ್ಟಿ ಹೊರವಲಯದಲ್ಲಿನ ಹಮಾಸ್‌ ಉಗ್ರರ ಹಲವು ಮೂಲಸೌಕರ್ಯಗಳನ್ನು ಧ್ವಂಸಗೊಳಿಸಿ ಮರಳಿವೆ.

ಕಳೆದ 24 ಗಂಟೆಗಳಲ್ಲಿ ನಾವು ಗಾಜಾದೊಳಗೆ ನುಗ್ಗಿ 10ಕ್ಕೂ ಹೆಚ್ಚು ಉಗ್ರರ ಅಡುಗುತಾಣಗಳನ್ನು ಧ್ವಂಸಗೊಳಿಸಿದ್ದೇವೆ. ಯುದ್ಧ ಟ್ಯಾಂಕರ್‌ಗಳನ್ನು ಹೊಡೆದುರುಳಿಸಲು ಬಳಸುವ ಕ್ಷಿಪಣಿ ಉಡ್ಡಯನ ನೆಲೆಗಳನ್ನು ದಾಳಿ ವೇಳೆ ಧ್ವಂಸಗೊಳಿಸಲಾಗಿದೆ. ಇದರ ಜೊತೆಗೆ ನಮ್ಮ ಯುದ್ಧ ವಿಮಾನಗಳು ಗಾಜಾ ಪಟ್ಟಣದ ಹೊರವಲಯದ ಶಿಜೈಯಾಹ್‌ ಪಟ್ಟಣದ ಹಲವು ಗುರಿಗಳ ಮೇಲೆ ಬಾಂಬ್‌ ದಾಳಿ ನಡೆಸಿವೆ. ದಾಳಿಯಲ್ಲಿ ನಮ್ಮ ಯಾವುದೇ ಯೋಧರ ಸಾವು ಸಂಭವಿಸಿಲ್ಲ ಎಂದು ಇಸ್ರೇಲಿ ಸೇನೆ ಹೇಳಿದೆ.

ಇದನ್ನು ಓದಿ: 2024ಕ್ಕೆ ಮತ್ತೊಂದು ಯುದ್ಧ ಕಾದಿದೆಯಾ? ಹಮಾಸ್ ದಾಳಿ ಹಿಂದಿದೆ ಸೌದಿ - ಇಸ್ರೇಲ್‌ ದೋಸ್ತಿ ತರ್ಕ!

ಈ ಕುರಿತು ಪ್ರತಿಕ್ರಿಯಿಸಿರುವ ಇಸ್ರೇಲಿ ಸೇನೆಯ ವಕ್ತಾರ ಡೇನಿಯಲ್‌ ಹಗರಿ, ‘ಕಳೆದ 2 ದಿನಗಳಿಂದ ನಾವು ನಡೆಸಿದ ಭೂದಾಳಿ, ಉಗ್ರರ ಮುಖವಾಡ ಬಯಲು ಮಾಡಲು, ಉಗ್ರರನ್ನು ಹತ್ಯೆ ಮಾಡಲು, ಸ್ಫೋಟಕಗಳನ್ನು ತೆರವು ಮಾಡಲು ಮತ್ತು ಲಾಂಚ್‌ ಪ್ಯಾಡ್‌ಗಳನ್ನು ನಿರ್ನಾಮ ಮಾಡಲು ನೆರವಾಗಿದೆ. ನಮ್ಮ ಈ ದಾಳಿಯ ಉದ್ದೇಶ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ದಾಳಿಗೆ ವೇದಿಕೆ ಸಿದ್ಧಪಡಿಸುವುದಾಗಿತ್ತು ಎಂದು ಹೇಳಿದ್ದಾರೆ.

ಇದೇ ವೇಳೆ ಅಕ್ಟೋಬರ್ 7ರಂದು ಇಸ್ರೇಲ್‌ನೊಳಗೆ ನುಗ್ಗಿ ನಡೆಸಿದ ಭೀಕರ ಹತ್ಯಾಕಾಂಡ ಪ್ರಮುಖ ಮಾಸ್ಟರ್‌ ಮೈಂಡ್‌ಗಳ ಪೈಕಿ ಒಬ್ಬನಾದ, ಹಮಾಸ್‌ನ ಗುಪ್ತಚರ ಪಡೆಯ ಮುಖ್ಯಸ್ಥ ಶಾದಿ ಬರುದ್‌ನನ್ನು ವಾಯುದಾಳಿಯಲ್ಲಿ ಹತ್ಯೆಗೈಯಲಾಗಿದೆ. ನಾವು ಉಗ್ರರನ್ನು ಮಾತ್ರವೇ ಗುರಿಯಾಗಿಸಿ ದಾಳಿ ನಡೆಸುತ್ತಿದ್ದೇವೆ. ಆದರೆ ಉಗ್ರರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ನಾಗರಿಕರ ನಡುವೆ ಸೇರಿಕೊಂಡು ದಾಳಿ ನಡೆಸುತ್ತಿದ್ದಾರೆ ಎಂದು ಸೇನೆ ಹೇಳಿದೆ.

ಇದನ್ನು ಓದಿ: ಉತ್ತರ ಗಾಜಾ ತೊರೆಯಲು ಇಸ್ರೇಲ್‌ ಎಚ್ಚರಿಕೆ: ದಕ್ಷಿಣಕ್ಕೆ ಹೋಗದಿದ್ದರೆ ಉಗ್ರರೆಂದು ಪರಿಗಣಿಸುತ್ತೇವೆ ಎಂದು ವಾರ್ನಿಂಗ್‌!

8500 ದಾಟಿದ ಸಾವು:
ಈ ನಡುವೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಮೃತಪಟ್ಟ ಪ್ಯಾಲೆಸ್ತೀನಿಯರ ಸಂಖ್ಯೆ 7000 ದಾಟಿದೆ. ಜೊತೆಗೆ 1400 ಇಸ್ರೇಲಿಯರು ಹಮಾಸ್‌ ದಅಳಿಗೆ ಬಲಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಗಾಜಾ ಅಂದು ಹೀಗಿತ್ತು.. ಈಗ ಹೀಗಾಗಿದೆ
ಇಸ್ರೇಲ್‌ ಹಮಾಸ್‌ ಯುದ್ಧದಲ್ಲಿ ಗಾಜಾಪಟ್ಟಿಯಲ್ಲಿ ಇಸ್ರೇಲ್‌ ದಾಳಿಯಿಂದ ಹಾನಿಗೊಂಡಿರುವ ಸ್ಥಳಗಳ ಉಪಗ್ರಹ ಚಿತ್ರಗಳನ್ನು ಮ್ಯಾಕ್ಸರ್‌ ಟೆಕ್ನಾಲಜಿ ಬಿಡುಗಡೆ ಮಾಡಿದೆ. ಈ ಕಂಪನಿ ಸ್ಯಾಟಲೈಟ್‌ ಮೂಲಕ ಯುದ್ಧಕ್ಕೂ ಮುನ್ನ ಹಾಗೂ ಯುದ್ಧದ ನಂತರ ಆದ ಬಾರಿ ಬದಲಾವಣೆಗಳನ್ನು ಬಾಹ್ಯಾಕಾಶದಿಂದ ಸೆರೆಹಿಡಿದಿದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಇದನ್ನು ಓದಿ: ಗಾಜಾ - ಈಜಿಪ್ಟ್‌ ಗಡಿ ಓಪನ್‌: ಆಹಾರ, ನೀರು, ಔಷಧ ಇಲ್ಲದೆ ಪರದಾಡುತ್ತಿದ್ದ ಗಾಜಾ ನಿವಾಸಿಗಳು ನಿರಾಳ

ಗಾಜಾದಲ್ಲಿ 2 ಲಕ್ಷಕ್ಕೂ ಹೆಚ್ಚು ಮನೆಗಳು ಇಸ್ರೇಲ್‌ ದಾಳಿಯಲ್ಲಿ ಧ್ವಂಸಗೊಂಡಿವೆ ಎಂದು ಗಾಜಾ ಸರ್ಕಾರ ಹೇಳಿದೆ.

ಇದನ್ನು ಓದಿ: ಉಗ್ರರ ಸರ್ವನಾಶಕ್ಕೆ ರೆಡಿ! ಅಮೆರಿಕ, ಯುಕೆ ಬಲದ ಬಳಿಕ ಗಾಜಾದಲ್ಲಿ ದಾಳಿಗೆ ಸಿದ್ಧರಾಗುವಂತೆ ಭೂಸೇನೆಗೆ ಇಸ್ರೇಲ್‌ ಸೂಚನೆ!

Latest Videos
Follow Us:
Download App:
  • android
  • ios