ಇಸ್ರೇಲ್ ವಿರುದ್ಧ ಜಿಹಾದ್ ಹೋರಾಟದಲ್ಲಿ ಪಾಲ್ಗೊಳ್ಳಿ, ಮುಸ್ಲಿಮರಿಗೆ ಮಸೀದಿ ಲೌಡ್‌ಸ್ಪೀಕರ್ ಸಂದೇಶ!

ಹಮಾಸ್ ಉಗ್ರರ ದಾಳಿ ಬೆನ್ನಲ್ಲೇ ಇಸ್ರೇಲ್ ಪ್ರತಿದಾಳಿ ಆರಂಭಿಸಿದೆ. ಇಷ್ಟೇ ಅಲ್ಲ ಹಮಾಸ್ ಉಗ್ರರ ವಿರುದ್ಧ ಯುದ್ದ ಘೋಷಿಸಿದೆ. ದೇಶವೇ ಹೊತ್ತಿ ಉರಿಯುತ್ತಿದ್ದರೆ, ಇಸ್ರೇಲ್ ಒಳಗಿರುವ ಮುಸ್ಲಿಮರು ಇಸ್ರೇಲ್ ವಿರುದ್ಧದ ಯುದ್ಧದಲ್ಲಿ  ಪಾಲ್ಗೊಳ್ಳಿ ಎಂದು ಜೆರುಸಲೆಂನ ಮಸೀದಿ ಲೌಡ್‌ಸ್ಪೀಕರ್ ಮೂಲಕ ಸಂದೇಶ ನೀಡಲಾಗಿದೆ. ಈ ಮೂಲಹ ಜಿಹಾದಿ ಹೋರಾಟದಲ್ಲಿ ಪಾಲ್ಗೊಳ್ಳಲು ಮುಸ್ಲಿಮರಿಗೆ ಸೂಚನೆ ನೀಡಲಾಗಿದೆ.

Israel Palestine Conflict Jerusalem Mosques provoke Muslims to join jihad against Israel Force ckm

ಜೆರುಸಲೇಮ್(ಅ.07)  ಇಸ್ರೇಲ್ ಮೇಲೆ ಗಾಜಾದ ಹಮಾಸ್ ಉಗ್ರರು ದಾಳಿ ನಡೆಸಿದ್ದಾರೆ. 5,000ಕ್ಕೂ ಹೆಚ್ಚು ರಾಕೆಟ್ ದಾಳಿ ನಡೆಸಿದ್ದರೆ, ಇತ್ತ ಟ್ಯಾಂಕರ್, ಮಿಸೈಲ್ ಮೂಲಕವೂ ದಾಳಿ ನಡೆಸಿದ್ದಾರೆ. ಸಾವಿರಾರು ಉಗ್ರರು ಏಕಾಏಕಿ ಇಸ್ರೇಲ್‌ಗೆ ನುಗ್ಗಿ ಸಾರ್ವಜನಿಕರ ಮೇಲೂ ದಾಳಿ ನಡೆಸಿದ್ದಾರೆ. ಗಾಜಾ ಸ್ಟ್ರಿಪ್‌ನಿಂದ ಹಮಾಸ್ ಉಗ್ರರ ದಾಳಿ ಆರಂಭಗೊಂಡಿದೆ. ಅಲ್ಲಾಹು ಅಕ್ಬರ್ ಘೋಷಣೆ ಕೂಗುತ್ತಾ ಹಮಾಸ್ ಉಗ್ರರು ಕ್ರಿಶ್ಚಿಯನ್ನರ ಪವಿತ್ರ ದೇಶ ಎಂದೇ ಗುರುತಿಸಿಕೊಂಡಿರುವ ಇಸ್ರೇಲ್ ಮೇಲೆ ದಾಳಿ ನಡೆಸಿದ್ದಾರೆ. ಹಮಾಸ್ ಉಗ್ರರ ದಾಳಿಗೆ ಇಸ್ರೇಲ್ ಹೊತ್ತಿ ಉರಿಯುತ್ತಿದೆ. ಇದರ ನಡುವೆ ಇಸ್ರೇಲ್ ಒಳಗಿರುವ ಕೆಲ ಮಸೀದಿಗಳು ಇಸ್ರೇಲ್ ವಿರುದ್ಧವೇ ಯುದ್ಧ ಸಾರಿದೆ. ಲೌಡ್ ಸ್ಪೀಕರ್ ಮೂಲಕ ಇಸ್ರೇಲ್ ವಿರುದ್ಧ ನಡೆಯುತ್ತಿರುವ ಜಿಹಾದ್ ಹೋರಾಟದಲ್ಲಿ ಪಾಲ್ಗೊಳ್ಳಿ ಎಂದು ಮುಸ್ಲಿಮರಿಗೆ ಸಂದೇಶ ನೀಡಲಾಗುತ್ತಿದೆ.

ಇಸ್ರೇಲ್ ರಾಜಧಾನಿ ಜೆರುಸಲೇಮ್‌ನಲ್ಲಿರುವ ಮಸೀದಿ ಲೌಡ್ ಸ್ಪೀಕರ್ ಮೂಲಕ ಇಸ್ರೇಲ್ ಮುಸ್ಲಿಮರಿಗೆ ಸಂದೇಶ ನೀಡಲಾಗುತ್ತಿದೆ. ಲೌಡ್ ಸ್ಪೀಕರ್ ಮೂಲಕ ಇಸ್ರೇಲ್ ಮುಸ್ಲಿಮರು ಹಮಾಸ್ ಉಗ್ರರು ನಡೆಸುತ್ತಿರುವ ಜಿಹಾದ್ ಹೋರಾಟಕ್ಕೆ ಕೈಜೋಡಿಸಲು ಸೂಚಿಸಿದ್ದಾರೆ. ಇಸ್ರೇಲ್ ದೇಶದ ಮೇಲೆ ಹಮಾಸ್ ಉಗ್ರರು ದಾಳಿ ನಡೆಸುತ್ತಿದ್ದರೆ, ಇತ್ತ ರಾಜಧಾನಿಯಲ್ಲಿರುವ ಮಸೀದಿಗಳು ಜಿಹಾದಿ ಪ್ರವೃತ್ತಿ ತೋರಿಸುತ್ತಿದೆ.

ಇಸ್ರೇಲ್ ಮಹಿಳೆಯ ವಿವಸ್ತ್ರಗೊಳಿಸಿ ಹಮಾಸ್ ಉಗ್ರರ ದಾಳಿ, ಅಲ್ಲಾಹು ಅಕ್ಬರ್ ಘೋಷಣೆ!

ಮುಸ್ಲಮರೆ ಹಾಗೂ ಪ್ಯಾಲೆಸ್ತೇನಿಗಳೇ, ಮುಂದೆ ಬನ್ನಿ ಇಸ್ರೇಲ್ ಸೇನೆ ಹಾಗೂ ಇಸ್ರೇಲ್ ಸರ್ಕಾರದ ವಿರುದ್ದ ಆರಂಭಿಸಿರುವ ನಮ್ಮ ಪವಿತ್ರ ಜಿಹಾದಿ ಯುದ್ಧದಲ್ಲಿ ಕೈಜೋಡಿಸಿ ಎಂದು ಮಸೀದಿ ಲೌಡ್‌ಸ್ಪೀಕರ್ ಮೂಲಕ ಘೋಷಿಸಲಾಗಿದೆ.  ಈ ಘೋಷಣೆ ಕೂಗುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಜೆರುಸಲೇಮ್‌ನಲ್ಲಿರುವ ಶೌಫತ್ ನಿರಾಶ್ರಿತರ ಕೇಂದ್ರದ ಮಸೀದಿಯಲ್ಲಿ ಈ ರೀತಿ ಲೌಡ್‌ಸ್ಪೀಕರ್ ಮೂಲಕ ಸಂದೇಶ ನೀಡಲಾಗುತ್ತಿದೆ. 

 

 

ಜಿಹಾದಿ ಹೋರಾಟದಲ್ಲಿ ನಮ್ಮ ವಿರುದ್ಧ ನಿಂತಿರುವ ಶಕ್ತಿಗಳನ್ನು ಅಲ್ಲಾಹು ನಿಮ್ಮ ಕೈಯಲ್ಲಿ ಕೊಲ್ಲಿಸುತ್ತಾನೆ. ಜಿಹಾದಿ ಹೋರಾಟದಲ್ಲಿ ಹೋರಾಡಿ, ದೇವರು ನಿಮ್ಮ ಕೈಯಿಂದ ವಿರೋಧಿ ಶಕ್ತಿಗಳನ್ನು ಹತ್ಯೆ ಮಾಡುತ್ತಾನೆ ಎಂದು ಖುರಾನ್ ಹೇಳಿದೆ ಎಂದು ಮಸೀದಿ ಲೌಡ್‌ಸ್ಪೀಕರ್ ಮೂಲಕ ಹೇಳಲಾಗುತ್ತಿದೆ. ಇದೀಗ ಈ ವಿಡಿಯೋ ಭಾರಿ ವೈರಲ್ ಆಗಿದೆ. ಇಷ್ಟೇ ಅಲ್ಲ ತನ್ನ ದೇಶದ ವಿರುದ್ಧ ಹಮಾಸ್ ಉಗ್ರರು ದಾಳಿ ನಡೆಸಿದ್ದಾರೆ. ಆದರೆ ಅದೇ ದೇಶದ ಮುಸ್ಲಿಮರಿಗೆ ದೇಶದ ಸೇನೆ ವಿರುದ್ಧ ಸರ್ಕಾರದ ವಿರುದ್ದ ಯುದ್ಧಕ್ಕೆ ಕೈಜೋಡಿಸಲು ಸೂಚಿಸಲಾಗುತ್ತಿದೆ.

ಹಮಾಸ್‌ ಉಗ್ರರು ಪದೇ ಪದೇ ಇಸ್ರೇಲ್ ಮೇಲೆ ದಾಳಿ ಮಾಡೋದ್ಯಾಕೆ? ಯಾಕಿಷ್ಟು ದ್ವೇಷ? ವಿವರ ಇಲ್ಲಿದೆ..

Latest Videos
Follow Us:
Download App:
  • android
  • ios