Asianet Suvarna News Asianet Suvarna News

ಇಸ್ರೇಲ್ ಮಹಿಳೆಯ ವಿವಸ್ತ್ರಗೊಳಿಸಿ ಹಮಾಸ್ ಉಗ್ರರ ದಾಳಿ, ಅಲ್ಲಾಹು ಅಕ್ಬರ್ ಘೋಷಣೆ!

ಇಸ್ರೇಲ್ ಮೇಲೆ ಹಮಾಸ್ ಉಗ್ರರು 26/11 ರೀತಿಯಲ್ಲಿ ದಾಳಿ ನಡೆಸಿದ್ದಾರೆ. ಮುಂಬೈ ದಾಳಿಗಿಂತ 50 ಪಟ್ಟು ದೊಡ್ಡ ದಾಳಿ ಇದಾಗಿದೆ. ಇಸ್ರೇಲ್‌ಗೆ ನುಗ್ಗಿರುವ ಹಮಾಸ್ ಉಗ್ರರು ಇಸ್ರೇಲ್ ಸೈನಿಕರನ್ನು ಕಂಡ ಕಂಡಲ್ಲಿ ಹತ್ಯೆ ಮಾಡುತ್ತಿದ್ದಾರೆ. ಇದೇ ವೇಳೆ ಇಸ್ರೇಲ್ ಮಹಿಳೆ ಮೇಲೆ ದಾಳಿ ಮಾಡಿರುವ ಉಗ್ರರು ಆಕೆಯನ್ನು ವಿವಸ್ತ್ರಗೊಳಿಸಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದಾರೆ.

Hamas terrorist attack Israeli women stripped her it while shouting Allah Akbar ckm
Author
First Published Oct 7, 2023, 2:43 PM IST

ಇಸ್ರೇಲ್(ಅ.07) ಇಸ್ರೇಲ್ ಮೇಲೆ ಯುದ್ಧ ಸಾರಿರುವ ಹಮಾಸ್ ಉಗ್ರರು ಭೀಕರ ದಾಳಿ ನಡೆಸಿದ್ದಾರೆ. ಒಂದೆಡೆ ರಾಕೆಟ್ ಮೂಲಕ ದಾಳಿ ನಡೆಸಿದರೆ, ಸಾವಿರಾರು ಉಗ್ರರು ಇಸ್ರೇಲ್‌ಗೆ ನುಗ್ಗಿ ಸಿಕ್ಕ ಸಿಕ್ಕವರ ಮೇಲೆ ಗುಂಡಿನ ಮಳೆ ಸುರಿಸಿದ್ದಾರೆ. ಇಸ್ರೇಲ್ ಸೈನಿಕರನ್ನು ಅಟ್ಟಾಡಿಸಿಕೊಂಡು ಹೋಗಿ ಹತ್ಯೆ ಮಾಡುತ್ತಿದ್ದಾರೆ. ಇದೇ ವೇಳೆ ಸಾರ್ವಜನಿಕರ ಮೇಲೂ ದಾಳಿ ನಡೆದಿದೆ. ಗಾಜಾ ಸ್ಟ್ರಿಪ್‌ನಿಂದ ದಾಳಿ ಆರಂಭಿಸಿದ ಹಮಾಸ್ ಉಗ್ರರು ನೇರವಾಗಿ ಇಸ್ರೇಲ್ ಗಡಿ ದಾಟಿ ಇಸ್ರೇಲ್ ನಗರ, ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಹಲವು ಅಮಾಯಕರನ್ನು ಒತ್ತೆಯಾಳಾಗಿಟ್ಟುಕೊಂಡಿದ್ದಾರೆ. ಹಲವರ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಇತ್ತ ಇಸ್ರೇಲ್ ಮಹಿಳೆಯನ್ನು ವಿವಸ್ತ್ರಗೊಳಿಸಿ ತೀವ್ರ ದಾಳಿ ನಡೆಸಿದ್ದಾರೆ.  ಮಹಿಳೆಯನ್ನು ತಮ್ಮ ವಾಹನಕ್ಕೆ ಎತ್ತಿ ಹಾಕಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದಾರೆ.

100ಕ್ಕೂ ಹೆಚ್ಚು ಉಗ್ರರು ಮಹಿಳೆ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಹಮಾಸ್ ಉಗ್ರರ ಹಲ್ಲೆಯಿಂದ ಮಹಿಳೆ ಮೃತಪಟ್ಟಿದ್ದಾಳೆ. ಬಳಿಕ ಆಕೆಯನ್ನು ವಿವಸ್ತ್ರಗೊಳಿಸಿದ್ದಾರೆ. ಸಂಪೂರ್ಣ ದಾಳಿ ವೇಳೆ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದಾರೆ. ಈ ಭೀಕರ ವಿಡಿಯೋ ವೈರಲ್ ಆಗಿದೆ. ಇದೇ ವೇಳೆ ಹಮಾಸ್ ಉಗ್ರರಿಗೆ ಕೆಲವರು ನೇರವು ನೀಡಿದ್ದಾರೆ.

ಇಸ್ರೇಲ್‌ ಮೇಲೆ ದಿಢೀರ್‌ ಯುದ್ಧ ಸಾರಿದ ಹಮಾಸ್‌ ಉಗ್ರರು: 5,000 ಕ್ಕೂ ಹೆಚ್ಚು ರಾಕೆಟ್‌ ಸುರಿಮಳೆ

ಇಸ್ರೇಲ್ ಮಹಿಳೆಯರು, ಮಕ್ಕಳು ಸೇರಿದಂತೆ ಸಾರ್ವಜನಿಕರನ್ನೂ ಹಮಾಸ್ ಉಗ್ರರು ಟಾರ್ಗೆಟ್ ಮಾಡಿದ್ದಾರೆ. ಹಮಾಸ್ ಉಗ್ರರು ಗಡಿಯೊಳಕ್ಕೆ ಪ್ರವೇಶಿದಂತೆ ಟ್ಯಾಂಕರ್ ನಿಯೋಜಿಸಲಾಗಿದೆ. ಆದರೆ ಸಾವಿರಾರು ಉಗ್ರರು ಏಕಾಏಕಿ ದಾಳಿ ನಡೆಸಿದ ಕಾರಣ ಇಸ್ರೇಲ್ ಯೋಧರು ಅಸಹಾಯಕರಾಗಿದ್ದಾರೆ. ಹಲವು ಸೈನಿಕರ ಮೇಲೆ ದಾಳಿ ನಡೆಸಿದ ಉಗ್ರರು, ಟ್ಯಾಂಕರ್‌ನಿಂದ ಎಳೆದು ಕೆಳಕ್ಕೆ ಹಾಕಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ.

 

 

ಹಲವು ಇಸ್ರೇಲ್ ಸೈನಿಕರನ್ನು ಒತ್ತೆಯಾಳಾಗಿಟ್ಟುಕೊಂಡಿರುವ ಗಾಜಾ ಹಮಾಸ್ ಉಗ್ರರು, ಹೋರಾಟ ತೀವ್ರಗೊಳಿಸಿದ್ದಾರೆ. ಇತ್ತ ಇಸ್ರೇಲ್‌ನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರನ್ನು ಸುರಕ್ಷಿತ ಬಂಕರ್‌ಗೆ ತೆರಳಲು ಸೂಚಿಸಲಾಗಿದೆ. ಇತ್ತ ಇಸ್ರೇಲ್ ಸರ್ಕಾರ ಯುದ್ಧ ಘೋಷಿಸಿದೆ. ಇಸ್ರೇಸ್ ಸೇನೆ ಪ್ರತಿ ದಾಳಿ ಆರಂಭಿಸಿದೆ.

ಬಂಧಿತ ಐಸಿಸ್ ಉಗ್ರರ ಪೈಕಿ ಎಲ್ಲರೂ ಇಂಜಿನಿಯರ್ಸ್, ಒಬ್ಬ ಪಿಎಚ್‌ಡಿ!

ಇಸ್ರೇಲ್‌ನಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣದ ಬೆನ್ನಲ್ಲೇ ಇಸ್ರೇಲ್‌ನಲ್ಲಿರುವ ಭಾರತೀಯ ನಾಗರಿಕರಿಗೆ ಕೇಂದ್ರ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಇಸ್ರೇಲ್ ಯಾವ ಭಾಗದಲ್ಲಿ ಉಗ್ರ ದಾಳಿಯಾಗಿದೆ. ಸಂಭವನೀಯ ದಾಳಿ ಕುರಿತು ಇಸ್ರೇಲ್ ರಾಯಬಾರ ಕಚೇರಿ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ. ಇದೇ ವೇಳೆ ನೆರವಿಗೆ ಸಂಪರ್ಕಿಸಲು ಕೋರಲಾಗಿದೆ. ಭಾರತೀಯರ ಸುರಕ್ಷತೆಗೆ ಕೇಂದ್ರ ಸರ್ಕಾರ ಎಲ್ಲಾ ಕ್ರಮಕೈಗೊಳ್ಳುವ ಭರವಸೆ ನೀಡಿದೆ.

 


 

Follow Us:
Download App:
  • android
  • ios