ಫ್ಲೈ ದುಬೈ ವಿಮಾನದಲ್ಲಿ ಕ್ಯಾಪ್ಟನ್ ಸ್ಮಿತ್ ಮಛಾರ್ ಮೇಲೆ ದಾಳಿ ನಡೆದ ಬೆನ್ನಲ್ಲೇ ಹೈಜಾಕ್ ಸಂದೇಶ ರವಾನಿಸಲಾಗಿತ್ತು. ಇತ್ತ ಇಸ್ರೇಲ್ ಊಹೆಗೂ ನಿಲುಕದ ನಿರ್ಧಾರ ತೆಗೆದುಕೊಂಡಿತ್ತು. ಈ ನಿರ್ಧಾರ ಇದೀಗ ಬಯಲಾಗಿದೆ.

ಇಸ್ರೇಲ್ (ಅ.06) ಇಸ್ರೇಲ್ ಪ್ರಯಾಣಿಕರ ಹೊತ್ತ ಫ್ಲೈದುಬೈ ವಿಮಾನ ಹೈಜಾಕ್ ಘಟನೆ ವಿಶ್ವದಲ್ಲೇ ಕೋಲಾಹಲ ಸೃಷ್ಟಿಸಿದೆ. ಓಮಾನಿ ಕೋ ಪೈಲೆಟ್ ಹಮಾಮ್ ಅಲ್ ಹಮಾಮಿ ಏಕಾಏಕಿ ಕ್ಯಾಪ್ಟನ್ ಸ್ಮಿತ್ ಮಚಾರ್ ಮೇಲೆ ದಾಳಿ ಮಾಡಿ ವಿಮಾನ ಪತನಗೊಳಿಸಲು ಪ್ರಯತ್ನಿಸಲಾಗಿತ್ತು. ಕ್ಯಾಪ್ಟನ್ ಸ್ಮಿತ್ ಧೈರ್ಯ ಹಾಗೂ ಸಾಹಸದಿಂ ವಿಮಾನ ಹೈಜಾಕ್ ಪ್ರಯತ್ನ ವಿಫಲಗೊಂಡಿತ್ತು.ದಾಳಿ ಬೆನ್ನಲ್ಲೇ ಕ್ಯಾಪ್ಟನ್ ಸ್ಮಿತ್ ಏರ್ ಕಂಟ್ರೋಲ್‌ಗೆ ಹೈಜಾಕ್ ಸಂದೇಶ ರವಾನಿಸಲಾಗಿತ್ತು. ಅಚ್ಚರಿ ಎಂರೆ 174 ಮಂದಿ ಇದ್ದ ವಿಮಾನದ ವಿರುದ್ದ ಇಸ್ರೇಲ್ ಭಯಾನಕ ನಿರ್ಧಾರ ತೆಗೆದುಕೊಂಡಿತ್ತು.

ಯುದ್ಧವಿಮಾನಕ್ಕೆ ಸೂಚನೆ ನೀಡಿದ್ದ ಇಸ್ರೇಲ್

ಫ್ಲೈ ದುಬೈ ವಿಮಾನದಿಂದ ಕ್ಯಾಪ್ಟನ್ ಸ್ಮಿತ್ ತೀವ್ರ ನೋವು, ಗಾಯದ ನಡುವೆ ಹೈಜಾಕ್ ಸಂದೇಶ ರವಾನಿಸಿದ್ದಾರೆ. ಈ ಸಂದೇಶ ಸಿಕ್ಕ ಬೆನ್ನಲ್ಲೇ ಇಸ್ರೇಲ್ ಅಲರ್ಟ್ ಆಗಿದೆ. ಇಸ್ರೇಲ್ ಎಮರ್ಜೆನ್ಸಿ ಕಮಾಂಡ್ ಸೆಂಟರ್ ಕೆಲವೇ ಕ್ಷಣಗಳಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು. ಹೈಜಾಕ್ ಸಂದೇಶದ ಬೆನ್ನಲ್ಲೇ ವಿಮಾನ ಏಕಾಏಕಿ ಕುಸಿತ ಕಂಡಿತ್ತು. ಪೈಲೆಟ್‌ಗೆ ಕಮಾಂಡ್ ಸೆಂಟರ್‌ನಿಂದ ಸಂದೇಶವೊಂದು ಕಳುಹಿಸಲಾಗಿತ್ತು. ಆದರೆ ಉತ್ತರ ಬಂದಿರಲಿಲ್ಲ. ಹೀಗಾಗಿ ಕಮಾಂಡ್ ಸೆಂಟರ್ ನೇರವಾಗಿ ಇಸ್ರೇಲ್ ಯುದ್ಧವಿಮಾನಗ್ಗೆ ಸೂಚನೆ ನೀಡಿತ್ತು. 174 ಮಂದಿ ಪ್ರಯಾಣಿಕರಿದ್ದ ವಿಮಾನ 26/11ರಂತೆ ಕಟ್ಟಡಗಳಿಗೆ ಡಿಕ್ಕಿ ಹೊಡೆಸಿ ಪತನಗೊಳಿಸುವ ಮೊದಲೇ ಪ್ರಯಾಣಿಕರ ವಿಮಾನ ಹೊಡೆದುರುಳಿಸಲು ಆದೇಶ ನೀಡಲಾಗಿತ್ತು.

ಸೌದಿ ಅರೆಬಿಯಾದಲ್ಲಿ ತುರ್ತು ಲ್ಯಾಂಡಿಂಗ್

ಇಸ್ರೇಲ್ ಯುದ್ಧ ವಿಮಾನ ತಕ್ಷಣವೇ ಸನ್ನದ್ಧವಾಗಿತ್ತು. ಇಸ್ರೇಲ್ ವಾಯು ಪ್ರದೇಶವನ್ನು ನಿರ್ಬಂಧಿಸಲಾಗಿತ್ತು. ಯಾವುದೇ ಹಾರಾಟಕ್ಕೂ ಅನುಮತಿ ಇರಲಿಲ್ಲ. ಇತ್ತ ಇಸ್ರೇಲ್ ವಾಯುಪ್ರದೇಶಕ್ಕೆ ಆಗಮಿಸುತ್ತಿದ್ದಂತೆ ವಿಮಾನ ಹೊಡೆದುರುಳಿಸಲು ಪ್ಲಾನ್ ಮಾಡಲಾಗಿತ್ತು. ಆದರೆ ಅಷ್ಟರಲ್ಲೇ ವಿಮಾನ ಸೌದಿ ಅರೇಬಿಯಾದಲ್ಲಿ ತುರ್ತು ಲ್ಯಾಂಡಿಂಗ್ ಸಂದೇಶ ರವಾನೆಯಾಗಿದೆ. ಕಮಾಂಡ್ ಸೆಂಟರ್ ವಿಮಾನದ ಇಂಚಿಂಚು ಮಾಹಿತಿಯನ್ನು ಕಲೆ ಹಾಕುತ್ತಿತ್ತು. ಸೌದಿ ಅರೆಬಿಯಾದಲ್ಲಿ ವಿಮಾನ ಲ್ಯಾಂಡಿಂಗ್ ಆಗುತ್ತಿದ್ದಂತೆ ಸೌದಿ ಸರ್ಕಾರವನ್ನು ಸಂಪರ್ಕ ಮಾಡಿತ್ತು.

174 ಮಂದಿ ಇದ್ದ ಪ್ರಯಾಣಿಕರ ವಿಮಾನವನ್ನು ಯಾರೂ ಊಹೆ ಮಾಡದ ರೀತಿಯಲ್ಲಿ ಹೊಡೆದುರುಳಿಸಿ ಭಯಾಕನ ಭಯೋತ್ಪಾದಕ ದಾಳಿಯನ್ನು ತಪ್ಪಿಸಲು ಇಸ್ರೇಲ್ ಪ್ಲಾನ್ ಮಾಡಿತ್ತು. ಓಮಾನಿ ಕೋಪೈಲೆಟ್ ವಿಚಾರಣೆಯಲ್ಲೂ ಹೈಜಾಕ್ ಮಾಡಿ ವಿಮಾನ ಪತನಗೊಳಿಸಲು ಮುಂದಾಗಿದ್ದ ಅನ್ನೋದು ಒಪ್ಪಿಕೊಂಡಿದ್ದಾನೆ. ಅಮರಿಕಗ ಗಗನಚುಂಬಿ ಕಟ್ಟಡಗಳ ಮೇಲೆ ನಡೆದ ಭಯೋತ್ಪಾದಕ ದಾಳಿ ರೀತಿಯಲ್ಲೇ ಪ್ಲಾನ್ ಮಾಡಲಾಗಿತ್ತು. ಹೀಗಾಗಿ ಇಸ್ರೇಲ್ ಈ ದಾಳಿ ತಪ್ಪಿಸಲು ಬಹುತೇಕ ತನ್ನದೇ ದೇಶದ ಅಮಾಯಕ ಪ್ರಯಾಣಿಕರಿದ್ದ ವಿಮಾನ ಹೊಡೆದುರುಳಿಸಲು ಮುಂದಾಗಿತ್ತು.