ಜೀವ ಉಳಿಸಿಕೊಳ್ಳಲು ಓಡಿ ಹೋಗುತ್ತಿರುವ ತನ್ನ ನಾಗರಿಕರನ್ನೇ ತಡೆಯುತ್ತಿರುವ ಹಮಾಸ್‌

ಇಸ್ರೇಲ್ ದಾಳಿಗೆ ಹೆದರಿ ದೇಶ ಬಿಡುತ್ತಿರುವ ತನ್ನದೇ ನಾಗರಿಕರನ್ನು ಹಮಾಸ್ ಉಗ್ರರು ತಡೆಯುತ್ತಿದ್ದಾರೆ. ತಮ್ಮ ಸ್ವ ಹಿತಾಸಕ್ತಿಗಾಗಿ ತಮ್ಮ ಜೀವ ಉಳಿಸಿಕೊಳ್ಳುವ ಸಲುವಾಗಿ ಹಮಾಸ್ ಉಗ್ರರು ತಮ್ಮದೇ ನಾಗರಿಕರನ್ನು ತಡೆಯುತ್ತಿದ್ದಾರೆ ಎಂದು ಇಸ್ರೇಲ್ ಆರೋಪಿಸಿದೆ. 

Israel is ready to attack through land, sea and Air Hamas is stopping its own citizens who are running for their lives akb

ಟೆಲ್ ಅವಿವಾ: ತನ್ನ ಕೆಣಕಿದ ಹಮಾಸ್‌ ಉಗ್ರರ ಸದೆಬಡಿಯುವ ಶಪಥ ಮಾಡಿರುವ ಇಸ್ರೇಲ್ ಸೇನೆ ಭೂ, ಸಮುದ್ರ ಹಾಗೂ ವಾಯು ಮಾರ್ಗದ ಮೂಲಕ ಗಾಜಾ ಮೇಲೆ ಮುಗಿ ಬೀಳುವ ನಿರ್ಧಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಆ ಪ್ರದೇಶದ ಜನರನ್ನು ಕೂಡಲೇ ಆ ಪ್ರದೇಶ ಬಿಟ್ಟು ಹೊರಡುವಂತೆ ಸೂಚನೆ ನೀಡಿದೆ. ಈ ಪ್ರದೇಶ ಹಮಾಸ್ ನಾಯಕರ ಹಿಡಿತದಲ್ಲಿದ್ದು, ಇಸ್ರೇಲ್ ದಾಳಿಗೆ ಹೆದರಿ ದೇಶ ಬಿಡುತ್ತಿರುವ ತನ್ನದೇ ನಾಗರಿಕರನ್ನು ಹಮಾಸ್ ಉಗ್ರರು ತಡೆಯುತ್ತಿದ್ದಾರೆ. ತಮ್ಮ ಸ್ವ ಹಿತಾಸಕ್ತಿಗಾಗಿ ತಮ್ಮ ಜೀವ ಉಳಿಸಿಕೊಳ್ಳುವ ಸಲುವಾಗಿ ಹಮಾಸ್ ಉಗ್ರರು ತಮ್ಮದೇ ನಾಗರಿಕರನ್ನು ತಡೆಯುತ್ತಿದ್ದಾರೆ ಎಂದು ಇಸ್ರೇಲ್ ಆರೋಪಿಸಿದೆ. 

ಇತ್ತ ತಮ್ಮ ಯುದ್ಧ ಪ್ಯಾಲೇಸ್ತೀನ್ ನಾಗರಿಕರ ವಿರುದ್ಧ ಅಲ್ಲ, ಕೇವಲ ಹಮಾಸ್ ಉಗ್ರರ ವಿರುದ್ಧ ಮಾತ್ರವೇ ನಮ್ಮ ಯುದ್ಧ, ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವುದೇ ನಮ್ಮ ಗುರಿ ಎನ್ನುತ್ತಿರುವ ಇಸ್ರೇಲ್, ಜೀವ ಉಳಿಸಿಕೊಳ್ಳಬೇಕಿದ್ದರೆ ಈ ಪ್ರದೇಶವನ್ನು ಕೂಡಲೇ ಬಿಟ್ಟು ಹೋಗಿ ಎಂದು ಎಚ್ಚರಿಕೆ ನೀಡಿದೆ. 

 

ಇಸ್ರೇಲಿ ಮಿಲಿಟರಿ ವಕ್ತಾರ ರಿಚರ್ಡ್ ಹೆಕ್ಟ್ ಅವರು ಹಮಾಸ್‌ನ ನಾಯಕತ್ವ ಇರುವ ಉತ್ತರ ಗಾಜಾದಲ್ಲಿ ನಾಗರಿಕರು ದೂರ ಹೋಗಲು ವಿಳಂಬ ಮಾಡಬೇಡಿ. ನಾವು ಗಾಜಾದ ಮೇಲೆ  ಸಮುದ್ರ, ಭೂಮಿ ಮತ್ತು ವಾಯುಮಾರ್ಗದ ಮೂಲಕ ದಾಳಿ ಮಾಡಲು ತಯಾರಿ ನಡೆಸುತ್ತಿದ್ದೇವೆ ಎಂದು  ತಿಳಿಸಿದ್ದಾರೆ. ಇತ್ತ 24 ಗಂಟೆಯಲ್ಲಿ ಮನೆ ತೊರೆಯಿರಿ ಎಂಬ ಇಸ್ರೇಲ್‌ ಸೂಚನೆಯಿಂದ ಆತಂಕಕ್ಕೆ ಒಳಗಾಗಿದ್ದ ಉತ್ತರ ಗಾಜಾದ 11 ಲಕ್ಷ ಜನರ ಪೈಕಿ ಕನಿಷ್ಠ 4 ಲಕ್ಷ ಜನರು ತಮ್ಮ ಮನೆಗಳನ್ನು ತೊರೆದು ದಕ್ಷಿಣ ಗಾಜಾಕ್ಕೆ ವಲಸೆ ಹೋಗಿದ್ದಾರೆ. ಆದರೆ ಕೆಲವು ಪ್ರದೇಶಗಳಲ್ಲಿ ಹೀಗೆ ಜೀವ ಉಳಿಯಲು ಹೊರಟು ಹೋಗುತ್ತಿರುವ ತನ್ನ ನಾಗರಿಕರನ್ನೇ ಹಮಾಸ್ ಉಗ್ರರು ತಡೆದು ಅವರನ್ನೇ ಮಾನವ ಗುರಾಣಿಯಾಗಿ ಇರಿಸಿಕೊಳ್ಳಲು ನೋಡುತ್ತಿದ್ದಾರೆ ಎಂದು ಇಸ್ರೇಲ್ ಆರೋಪಿಸಿದೆ. 

ಇಸ್ರೇಲ್‌ನಿಂದ ದೆಹಲಿಗೆ ಬಂದಿಳಿದ 4ನೇ ವಿಮಾನ: ಯುದ್ಧಭೂಮಿಯಿಂದ ಬಂದವರು ಏನಂದರು ನೋಡಿ?

ತೆರವು ಸೂಚನೆಗೆ ಖಂಡನೆ:

ಈ ನಡುವೆ ಇದೇ ವೇಳೆ 11 ಲಕ್ಷ ಜನರ ಏಕಾಏಕಿ ತೆರವಿಗೆ ಸೂಚಿಸಿದ ಇಸ್ರೇಲ್‌ ಸರ್ಕಾರದ ನಿರ್ಧಾರವನ್ನು 57 ಇಸ್ಲಾಮಿಕ್‌ ದೇಶಗಳ ಸಂಘಟನೆಯಾದ ‘ಆರ್ಗನೈಜೇಷನ್‌ ಆಫ್‌ ಇಸ್ಲಾಮಿಕ್‌ ಕೋ ಆಪರೇಷನ್‌’ ಖಂಡಿಸಿದೆ. ಜೊತೆಗೆ ಯುರೋಪಿಯನ್‌ ಒಕ್ಕೂಟ ಕೂಡಾ ಜನರ ತೆರವಿಗೆ ಇನ್ನಷ್ಟು ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿವೆ. ಅಲ್ಲದೆ ವಿಶ್ವಸಂಸ್ಥೆ (United Nation) ಕೂಡಾ ಇಸ್ರೇಲ್‌ ಸರ್ಕಾರ ತನ್ನ ನಿರ್ಧಾರವನ್ನು ಮರು ಪರಿಶೀಲಿಸಬೇಕೆಂದು ಒತ್ತಾಯಿಸಿದೆ.

'ಬಿಸ್ಮಿಲ್ಲಾ' ಎಂದರೆ ಮಾತ್ರ ಮಗುವಿಗೆ ನೀರು: ಇಸ್ರೇಲ್‌ ಮಕ್ಕಳ ಒತ್ತೆಯಾಗಿರಿಸಿ ಹಮಾಸ್‌ ಉಗ್ರರ ಕ್ರೌರ್ಯ

5 ಸಾವಿರ ದಾಟಿದ ಸಾವು:ಸಂಘರ್ಷದಿಂದ ಉಭಯ ದೇಶಗಳಲ್ಲಿ ಸಾವನ್ನಪ್ಪಿದ ಯೋಧರು ಮತ್ತು ನಾಗರಿಕ ಸಂಖ್ಯೆ 5100 ದಾಟಿದ್ದು, ಗಾಯಾಳುಗಳ ಸಂಖ್ಯೆ 10 ಸಾವಿರದ ಸನಿಹಕ್ಕೆ ಬಂದಿದೆ. ಈ ಪೈಕಿ ಇಸ್ರೇಲ್‌ ಕಡೆ 1600 ಜನರು ಸಾವ್ನಪ್ಪಿದ್ದಾರೆ. ಗಾಜಾ ಪಟ್ಟಿ ಪ್ರದೇಶದಲ್ಲಿ 724 ಮಕ್ಕಳು ಸೇರಿದಂತೆ 2215 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇನ್ನು ಗಾಜಾ ಗಡಿಯಲ್ಲಿ 1300 ಹಮಾಸ್‌ ಉಗ್ರರ ಶವ ಪತ್ತೆಯಾಗಿದೆ ಎಂಬ ಇಸ್ರೇಲ್‌ ಸರ್ಕಾರದ ಹೇಳಿಕೆಯನ್ನು ಪರಿಗಣಿಸಿದರೆ ಒಟ್ಟಾರೆ ಸಾವಿನ ಸಂಖ್ಯೆ 5100 ದಾಟಿದಂತಾಗಿದೆ.

ಕಣ್ಣಿಗೆ ಬಿದ್ದ ಮಕ್ಕಳು, ಶಿಶು, ಮಹಿಳೆಯರ ಕೊಂದೆವು: ಹಮಾಸ್‌ ಉಗ್ರ ಸ್ಫೋಟಕ ಹೇಳಿಕೆ Video

Latest Videos
Follow Us:
Download App:
  • android
  • ios