Asianet Suvarna News Asianet Suvarna News

ಗಾಜಾದಲ್ಲಿ ಕಂಡಲೆಲ್ಲಾ ಶವಗಳ ರಾಶಿ, ಐಸ್‌ ಕ್ರೀಮ್‌ ಟ್ರಕ್‌ಗಳಲ್ಲಿ ಮೃತದೇಹಗಳ ಸಾಗಾಟ!

ಇಸ್ರೇಲ್‌ ಹಾಗೂ ಹಮಾಸ್‌ ನಡುವಿನ ಯುದ್ಧ 10ನೇ ದಿನಕ್ಕೆ ಕಾಲಿಟ್ಟಿದೆ. ಈವರೆಗೂ 4 ಸಾವಿರಕ್ಕೂ ಅಧಿಕ ಮಂದಿ ಸಾವು ಕಂಡಿದ್ದಾರೆ. ಯುದ್ಧಪೀಡಿತ ಪ್ರದೇಶದಿಂದ ಭಾರತ ತನ್ನ ನಾಗರೀಕರನ್ನು ಆಪರೇಷನ್‌ ಅಜಯ್‌ ಎನ್ನುವ ಕಾರ್ಯಾಚರಣೆಯ ಮೂಲಕ ಭಾರತಕ್ಕೆ ವಾಪಾಸ್‌ ಕರೆಸಿಕೊಳ್ಳುತ್ತಿದೆ.
 

Israel Hamas war report says  As Gaza death toll rises bodies are stored in ice cream trucks san
Author
First Published Oct 16, 2023, 4:08 PM IST

ನವದೆಹಲಿ (ಅ.16): ಹಮಾಸ್‌ನ ಆಡಳಿತದಲ್ಲಿರುವ ಗಾಜಾ ಪಟ್ಟಿಯಲ್ಲಿ ಆರೋಗ್ಯ ಸೇವಾ ಕಾರ್ಯಕರ್ತರು ಹಾಗೂ ಅಧಿಕಾರಿಗಳು ದೊಡ್ಡ ಮಟ್ಟದ ಸವಾಲನ್ನು ಎದುರಿಸುತ್ತಿದ್ದಾರೆ. ಇಸ್ರೇಲ್‌ನ ವೈಮಾನಿಕ ದಾಳಿಯಿಂದ ಈಗಾಗಲೇ ಸಾಕಷ್ಟು ಪ್ಯಾಲಿಸ್ತೇನಿಯನ್ನರು ಸಾವು ಕಂಡಿದ್ದಾರೆ. ಅವರ ದೇಹಗಳನ್ನು ರಕ್ಷಿಸಿ ಇಡಲು ಬೇರೆ ಎಲ್ಲೂ ವ್ಯವಸ್ಥೆ ಇರದ ಕಾರಣ ಐಸ್‌ ಕ್ರೀಮ್‌ ಟ್ರಕ್‌ಗಳಲ್ಲಿ ದೇಹವನ್ನು ಇಡಲಾಗುತ್ತಿದೆ. ಇಡೀ ರಸ್ತೆಗಳು ದಾಳಿಯಿಂದ ಹಾನಿಗೆ ಒಳಗಾಗಿರುವ ಕಾರಣ, ಆಸ್ಪತ್ರೆಯ ಶವಾಗಾರಗಳಿಗೆ ದೇಹವನ್ನು ಶಿಫ್ಟ್‌ ಮಾಡುವುದು ಸಾಧ್ಯವಾಗುತ್ತಿಲ್ಲ. ಇನ್ನು ಸ್ಮಶಾನಗಳಲ್ಲೂ ಸ್ಥಳಾವಕಾಶದ ಕೊರತೆ ಕಾಣುತ್ತಿದ್ದು, ಶವಗಳನ್ನು ಹೂಳುವವರೆಗೆ ಅವುಗಳನ್ನು ಐಸ್‌ಕ್ರೀಮ್‌ ಟ್ರಕ್‌ಗಳಲ್ಲಿ ಇಡಲಾಗುತ್ತಿದೆ. ಕಳೆದ ಒಂದು ದಶಕಗಳಲ್ಲಿ ಇಸ್ರೇಲ್‌ ಮೇಲೆ ನಡೆಸಿದ ಮಾರಣಾಂತಿಕ ದಾಳಿಯ ಬಳಿಕ, ಪ್ಯಾಲಿಸ್ತೇನ್‌ ದೇಶದ ಭಯೋತ್ಪಾದಕ ಗುಂಪು ಹಮಾಸ್‌ಅನ್ನು ಮಟ್ಟಹಾಕುವ ನಿಟ್ಟಿನಲ್ಲಿ ಇಸ್ರೇಲ್‌ ಕಳೆದ 10 ದಿನಗಳಿಂದ ಗಾಜಾಪಟ್ಟಿಯ ಮೇಲೆ ನಿರಂತರವಾಗಿ ವೈಮಾನಿಕ ದಾಳಿಯನ್ನು ನಡೆಸುತ್ತಿದೆ. ಅಕ್ಕಪಕ್ಕದ ಮುಸ್ಲಿಂ ದೇಶಗಳು ಹಾಗೂ ವಿಶ್ವಸಂಸ್ಥೆಯ ಮನವಿಗೂ ಬಗ್ಗದ ಇಸ್ರೇಲ್‌, ಹಮಾಸ್‌ ಸಂಘಟನೆಯನ್ನು ಭೂಮಿಯ ಮೇಲಿನಿಂದ ಸರ್ವನಾಶ ಮಾಡಿಯೇ ಸಿದ್ಧ ಎನ್ನುವ ತೀರ್ಮಾನಕ್ಕೆ ಬಂದಿದೆ.

ಸಾಮಾನ್ಯವಾಗಿ ಗಾಜಾಪಟ್ಟಿಯಲ್ಲಿರುವ ಆಸ್ಪತ್ರೆಗಳ ಶವಾಗಾರಗಳನ್ನು ಹೆಚ್ಚೆಂದರೆ 10 ಶವಗಳನ್ನು ಏಕಕಾಲದಲ್ಲಿ ಇರಿಸಿಕೊಳ್ಳಬಹುದು. ಆದ್ದರಿಂದ ಇಸ್ರೇಲ್‌ ದಾಳಿಯಲ್ಲಿ ಸಾವು ಕಂಡ ಹಮಾಸ್‌ನವರ ದೇಹಗಳನ್ನು ಸಂಗ್ರಹಿಸಲು ಐಸ್‌ ಕ್ರೀಮ್‌ ಫ್ಯಾಕ್ಟರಿಗಳಿಂದ ಐಸ್‌ ಕ್ರೀಮ್‌ ಫ್ರೀಜರ್‌ಗಳನ್ನು ತಂದಿದ್ದೇವೆ' ಎಂದು ದೇರ್ ಅಲ್-ಬಾಲಾಹ್‌ನಲ್ಲಿರುವ ಶುಹಾದಾ ಅಲ್-ಅಕ್ಸಾ ಆಸ್ಪತ್ರೆಯ ಡಾ. ಯಾಸರ್ ಅಲಿ ಹೇಳಿದ್ದಾರೆ.

ಫ್ರೀಜರ್‌ ಟ್ರಕ್‌ಗಳ ಮೇಲೆ ಅಂಟಿಸಲಾಗಿರುವ ಪೋಸ್ಟರ್‌ಗಳಲ್ಲಿ ಮಕ್ಕಳು ನಗುತ್ತಾ ಐಸ್‌ಕ್ರೀಮ್‌ ತಿನ್ನುತ್ತಿರುವ ಚಿತ್ರಗಳನ್ನು ಹಾಕಲಾಗಿದ್ದರೂ, ಯುದ್ಧದ ಸಮಯದಲ್ಲಿ ಬೇರೆಯದೇ ಕಾರಣಕ್ಕಾಗಿ ಇದನ್ನು ಬಳಸಿಕೊಳ್ಳಲಾಗುತ್ತಿದೆ. ಸಾಮಾನ್ಯವಾಗಿ ಸೂಪರ್‌ಮಾರ್ಕೆಟ್‌ಗಳಿಗೆ ಐಸ್‌ಕ್ರೀಮ್‌ ಡೆಲಿವರಿ ಮಾಡಲು ಈ ಟ್ರಕ್‌ಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ಆದರೆ, ಇಸ್ರೇಲ್‌ ಹಾಗೂ ಹಮಾಸ್‌ ಭಯೋತ್ಪಾದಕರ ನಡುವಿನ ವಿನಾಶಕಾರಿ ಯುದ್ಧದಲ್ಲಿ ಈ ಟ್ರಕ್‌ಗಳನ್ನು ತಾತ್ಕಾಲಿಕ ಶವಾಗಾರಗಳಾಗಿ ಮಾರ್ಪಟ್ಟಿವೆ.

ಈ ಫ್ರೀಜರ್‌ಗಳು ಮಾತ್ರವಲ್ಲ, ಆಸ್ಪತ್ರೆಯ ಮುಖ್ಯ ಶವಾಗಾರದಲ್ಲಿ ಇರಿಸಿಕೊಳ್ಳಲಾಗುವ ಶವಗಳ ಸಂಖ್ಯೆ ಕೂಡ ವಿಪರೀತವಾಗಿದೆ. ಅದಲ್ಲದೆ, ಪ್ರತಿ ಆಸ್ಪತ್ರೆಗಳಲ್ಲಿ 20 ರಿಂದ 30 ಶವಗಳನ್ನು ಆಸ್ಪತ್ರೆಯ ಎದುರಿನ ಟೆಂಟ್‌ಗಳಲ್ಲಿ ಇರಿಸಲಾಗಿದೆ ಎಂದು ಅಲಿ ಹೇಳಿದ್ದಾರೆ. ಅದರೊಂದಿಗೆಬಿಳಿ ಹೊದಿಕೆಯಲ್ಲಿರುವ ದೇಹಗಳನ್ನು ಪತ್ರಕರ್ತರಿಗೆ ತೋರಿಸಿದ್ದಾರೆ. ಗಾಜಾಪಟ್ಟಿ ದೊಡ್ಡ ಬಿಕ್ಕಟ್ಟಿನಲ್ಲಿದೆ. ಹಾಗೇನಾದರೂ ಯುದ್ಧವೂ ಇದೇ ರೀತಿ ಮುಂದುವರಿದಲ್ಲಿ ಸತ್ತವನ್ನು ಹೂಳಲು ಕೂಡ ಸಾಧ್ಯವಾಗೋದಿಲ್ಲ. ಸ್ಮಶಾನಗಳು ಈಗಾಗಲೇ ತುಂಬಿಹೋಗಿವೆ. ಹೊಸ ಶವಗಳನ್ನು ಹೂಳಲು ನಮಗೆ ದೊಡ್ಡ ಸ್ಮಶಾನದ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಗಾಜಾ ನಗರದಲ್ಲಿಯೂ ಅಧಿಕಾರಿಗಳು ಸಾಮೂಹಿಕ ಸಮಾಧಿಗಳನ್ನು ಸಿದ್ಧಪಡಿಸುತ್ತಿದ್ದಾರೆ ಎಂದು ಸರ್ಕಾರಿ ಮಾಧ್ಯಮ ಕಚೇರಿಯ ಮುಖ್ಯಸ್ಥ ಸಲಾಮಾ ಮರೂಫ್ ಹೇಳಿದ್ದಾರೆ.

Isreal Dispatch: ಗಾಜಾಕ್ಕೆ ವಿದ್ಯುತ್‌, ಇಂಧನ, ಆಹಾರ ಬಂದ್‌; ಈವರೆಗೂ 1 ಸಾವಿರ ಟನ್‌ ಬಾಂಬ್‌ ಗಿಫ್ಟ್‌!

"ಅಲ್-ಶಿಫಾ ಆಸ್ಪತ್ರೆಯ ಶವಾಗಾರಗಳ ಒಳಗೆ ಹೆಚ್ಚಿನ ಸಂಖ್ಯೆಯ ಶವಗಳು ಇವೆ. ಅಲ್ಲದೆ, ಯಾರ ಸಂಬಂಧಿಕರು ಕೂಡ ಶವಗಳನ್ನು ಹೂಳಲು ಇನ್ನುವರೆಗೆ ಬಂದಿಲ್ಲ. ಈಗಾಗಲೇ ಶವಗಳು ಕೊಳೆಯುವ ಚಿಹ್ನೆಗಳು ಕೂಡ ಆರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ. ಯುದ್ಧದ ಪರಿಣಾಮವಾಗಿ ಪ್ರತಿದಿನವೂ ಸಾಕಷ್ಟು ಸಂಖ್ಯೆಯ ಶವಗಳನ್ನು ಫ್ರೀಜರ್‌ನಲ್ಲಿ ಇರಿಸಲಾಗುತ್ತಿದೆ. ತುರ್ತು ಸ್ಮಶಾನದಲ್ಲಿ ಸರಿಸುಮಾರಿ 100 ಮಂದಿಯನ್ನು ಏಕಕಾಲದಲ್ಲಿ ಹೂಳಲು ಶವಾಗಾರದ ಸಮೀಪವೇ ಹೊಸ ಜಾಗವನ್ನು ಸಿದ್ಧ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇಸ್ರೇಲ್‌ನದ್ದು ಕದ್ದ ಭೂಮಿ, ಪ್ಯಾಲೆಸ್ತೇನ್‌ ಪರವಾಗಿ ಭಾರತ ನಿಲ್ಲಬೇಕು ಎಂದ ಚೇತನ್‌ ಅಹಿಂಸಾ!

Follow Us:
Download App:
  • android
  • ios