ಗಾಜಾ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಇನ್‌ಕ್ಯುಬೇಟರ್‌ಗಳಲ್ಲಿರುವ 39 ಶಿಶುಗಳ ಹೋರಾಟ
ಗಾಜಾ ಆಸ್ಪತ್ರೆಗೆ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತವಾಗಿದೆ. ಹೀಗಾಗಿ ಆಪರೇಶನ್‌ಗಳನ್ನೂ ಸ್ಥಗಿತಗೊಳಿಸಲಾಗಿದೆ. ಪರಿಣಾಮ, ಒಂದು ಶಿಶು ಸೇರಿ ಐವರು ರೋಗಿಗಳು ಸಾವನ್ನಪ್ಪಿದ್ದಾರೆ. ಇದೇ ವೇಳೆ ಕ್ಷಿಪಣಿ ದಾಳಿ ಕಾರಣ ಆಸ್ಪತ್ರೆಯಲ್ಲಿನ ಒಬ್ಬ ರೋಗಿ ಸಾವನ್ನಪ್ಪಿದ್ದಾರೆ. 36 ಮಕ್ಕಳ ಸ್ಥಿತಿಯೂ ಗಂಭೀರವಾಗಿದೆ.

ಡೇರ್ ಅಲ್ ಬಲಾಹ್: ಹಮಾಸ್ ಉಗ್ರರ ಕಾರ್ಯಾಚರಣೆಯ ಪ್ರಮುಖ ಕೇಂದ್ರ ಸ್ಥಾನವಾದ ಗಾಜಾ ನಗರವನ್ನು ಬಹುತೇಕ ತನ್ನ ವಶಕ್ಕೆ ಪಡೆದಿರುವ ಇಸ್ರೇಲಿ ಸೇನೆ, ಶನಿವಾರ ಗಾಜಾದ ಅತಿದೊಡ್ಡ ಆಸ್ಪತ್ರೆ ಮತ್ತು ಸಾವಿರಾರು ಜನರಿಗೆ ಚಿಕಿತ್ಸೆ ನೀಡುತ್ತಿದ್ದ ಶಿಫಾ ಆಸ್ಪತ್ರೆಯನ್ನು ಸುತ್ತುವರೆದಿದೆ. ಈ ವೇಳೆ ಹಮಾಸ್ ಉಗ್ರರು ಹಾಗೂ ಸೇನೆ ನಡುವೆ ಭಾರಿ ಸಂಘರ್ಷ ನಡೆದಿದೆ. ಇದರಿಂದ ಆಸ್ಪತ್ರೆಯ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತವಾಗಿದೆ. ಹೀಗಾಗಿ ಆಪರೇಶನ್‌ಗಳನ್ನೂ ಸ್ಥಗಿತಗೊಳಿಸಲಾಗಿದೆ. ಪರಿಣಾಮ, ಒಂದು ಶಿಶು ಸೇರಿ ಐವರು ರೋಗಿಗಳು ಸಾವನ್ನಪ್ಪಿದ್ದಾರೆ. ಇದೇ ವೇಳೆ ಕ್ಷಿಪಣಿ ದಾಳಿ ಕಾರಣ ಆಸ್ಪತ್ರೆಯಲ್ಲಿನ ಒಬ್ಬ ರೋಗಿ ಸಾವನ್ನಪ್ಪಿದ್ದಾರೆ.
ಆಸ್ಪತ್ರೆಯಲ್ಲಿನ ನೆಲದಾಳದಲ್ಲಿ ಉಗ್ರರು ಸುರಂಗ (Tunnels) ನಿರ್ಮಿಸಿಕೊಂಡಿದ್ದು, ಅದು ಅವರ ಕಮ್ಯಾಂಡ್ ಸೆಂಟರ್ ಆಗಿದೆ ಎಂಬುದು ಇಸ್ರೇಲ್ ಶಂಕೆ. ಜೊತೆಗೆ ಆಸ್ಪತ್ರೆಯಲ್ಲಿ ರೋಗಿಗಳು ಮತ್ತು ಜನಸಾಮಾನ್ಯರನ್ನು ತಡೆಗೋಡೆಯ ರೀತಿಯಲ್ಲಿ ಬಳಸಿ ದಾಳಿ ತಡೆಯುವ ಮತ್ತು ಪ್ರತಿದಾಳಿ ನಡೆಸುವ ಕೆಲಸ ಮಾಡುತ್ತಿದೆ ಎಂಬುದು ಇಸ್ರೇಲ್ (Israel) ಆರೋಪವಾಗಿದೆ..
ಜ್ವಾಲಾಮುಖಿಯ ಸ್ಫೋಟದಿಂದ ನಿರ್ಮಾಣವಾಯ್ತು ಹೊಸ ದ್ವೀಪ: ನೈಸರ್ಗಿಕ ಪ್ರಕ್ರಿಯೆಯ ವೀಡಿಯೋ ವೈರಲ್
ಇದನ್ನು ಹಮಾಸ್ ಉಗ್ರರು (Hamas militants) ನಿರಾಕರಿಸಿದ್ದರೂ, ಇದೇ ಕಾರಣಕ್ಕಾಗಿಯೇ ಉಗ್ರರಿಗೆ ದೊಡ್ಡಪೆಟ್ಟು ನೀಡಲು ಆಸ್ಪತ್ರೆಯನ್ನೇ ವಶಪಡಿಸಿಕೊಳ್ಳಲು ಸೇನೆ ಮುಂದಾಗಿದೆ. ಅದರ ಭಾಗವಾಗಿ ಇಸ್ರೇಲಿ ಟ್ಯಾಂಕ್‌ಗಳು ಆಸ್ಪತ್ರೆಯನ್ನು ಸುತ್ತುವರೆದಿದ್ದು, ಆ ಪ್ರದೇಶದಲ್ಲಿ ಹಮಾಸ್ ಉಗ್ರರು ಮತ್ತು ಸೇನೆಯ ನಡುವೆ ಭಾರೀ ಕಾಳಗ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ.
ವಿದ್ಯುತ್ ಇಲ್ಲದೆ ಶಿಫಾ ಆಸ್ಪತ್ರೆಯಲ್ಲಿದ್ದ 4 ರೋಗಿಗಳು ಸಾವು
ಟೆಲ್ ಅವಿವ್: ಗಾಜಾ ಮೇಲೆ ನಿರಂತರವಾಗಿ ಇಸ್ರೇಲ್ ದಾಳಿ ನಡೆಸುತ್ತಿರುವುದರ ಪರಿಣಾಮವಾಗಿ ಗಾಜಾದ ಪ್ರಮುಖ ಆಸ್ಪತ್ರೆಯಾದ ಅಲ್ ಶಿಫಾ ಆಸ್ಪತ್ರೆಯಲ್ಲಿ (Al Shifa Hospital) ವಿದ್ಯುತ್ ಸಂಪರ್ಕ ಕಡಿತಗೊಂಡು ನವಜಾತ ಶಿಶು ಸೇರಿ ಐಸಿಯುನಲ್ಲಿದ್ದ ನಾಲ್ವರು ರೋಗಿಗಳು ಸಾವನ್ನಪ್ಪಿದ್ದಾರೆ ಹಾಗೂ ಇನ್‌ಕ್ಯುಬೆಟರ್‌ಗಳಲ್ಲಿರುವ 39 ಶಿಶುಗಳು ಸಾವು ಬದುಕಿನ ನಡುವೆ ಹೋರಾಡುತ್ತಿವೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.
ಇಸ್ರೇಲ್ ಬಳಿಕ ತೈವಾನ್‌ನಿಂದಲೂ ಭಾರತದ ಕಾರ್ಮಿಕರಿಗೆ ಬೇಡಿಕೆ: 1 ಲಕ್ಷ ಕೆಲಸಗಾರರ ನೇಮಕಕ್ಕೆ ನಿರ್ಧಾರ
ಕಳೆದ ಒಂದು ತಿಂಗಳಿನಿಂದ ಗಾಜಾ ಹಾಗೂ ಅಲ್ಲಿನ ಯಾವುದೇ ಆಸ್ಪತ್ರೆಗಳಿಗೆ ಇಂಧನ ಲಭ್ಯವಾಗಿಲ್ಲ. ಅಲ್ಲದೆ, ಆಸ್ಪತ್ರೆಯಲ್ಲಿ ಹಮಾಸ್ ಉಗ್ರರು ಅಡಗಿರಬಹುದು ಎಂಬ ಕಾರಣಕ್ಕ ಇಸ್ರೇಲಿ ಪಡೆಗಳು ಆಸ್ಪತ್ರೆ ಸುತ್ತುವರಿದಿವೆ ಎನ್ನಲಾಗಿದೆ. ಹೀಗಾಗಿ ಎಲ್ಲ ಜನರೇಟರ್‌ಗಳು ಬಂದ್ ಆಗಿವೆ. ಇನ್ನು ಗಾಜಾ ಆಸ್ಪತ್ರೆ ಸ್ಥಿತಿ ಕುರಿತು ಮಾತನಾಡಿದ ಗಾಜಾದ ಉಪ ಆರೋಗ್ಯ ಸಚಿವ ಅಲ್ರೀಶ್ ಅಲ್ ಜಜೀರಾ (Alreesh Al Jazeera) ನಾವು ಜಗತ್ತಿಗೆ ಎಚ್ಚರಿಕೆ ಸಂದೇಶ ನೀಡುತ್ತಿರುವ ಕ್ಷಣವಿದು. ಇಲ್ಲಿನ ಎಲ್ಲ ಜನರೇಟರ್ ಬಂದ್ ಆಗಿವೆ ಮತ್ತು ವಿದ್ಯುತ್ ಇಲ್ಲ ಎಂದರು.
ಈ ನಡುವೆ ಆಸ್ಪತ್ರೆಯಲ್ಲಿನ ಭಯಾನಕ ಪರಿಸ್ಥಿತಿಯನ್ನು ಬಿಚ್ಚಿಟ್ಟ ಅಲ್- ಶಿಫಾದ (Al-Shifa) ವೈದ್ಯರೊಬ್ಬರು ನಮಗೆ ಇಲ್ಲಿ ಆಹಾರವಿಲ್ಲ, ನೀರಿಲ್ಲ, ವಿದ್ಯುತ್ ಮತ್ತು ಇಂಟರ್ನೆಟ್ ಸೇರಿ ಯಾವ ವ್ಯವಸ್ಥೆಯೂ ಇಲ್ಲ. ನಾವು ಹೊರ ಜಗತ್ತಿನಿಂದ ಸಂಪೂರ್ಣವಾಗಿ ಬೇರ್ಪಟ್ಟಿದ್ದೇವೆ ಎಂದಿದ್ದಾರೆ. ಗಾಜಾ ಮೇಲಿನ ಇಸ್ರೇಲ್ ಯುದ್ಧದ ಭೀಕರತೆಯಿಂದಾಗಿ ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿ ಹೋಗಿದ್ದು, ಅರವಳಿಕೆ (ಅನಸ್ತೇಶಿಯಾ) ಸೇರಿದಂತೆ ಎಲ್ಲ ಮೂಲಭೂತ ಸಂಪನ್ಮೂಲಗಳು ಖಾಲಿಯಾಗಿವೆ. ಸ್ಥಿತಿ ಎಷ್ಟು ಚಿಂತಾಜನಕ ಆಗಿದೆ ಎಂದರೆ ಅನಸ್ತೇಶಿಯಾ ಇಲ್ಲದೆ ಆಪರೇಶನ್‌ಗಳು ನಡೆದಿವೆ.
ಗಾಜಾ ಆಳಲು ನಮಗೆ ಇಷ್ಟವಿಲ್ಲ: ನೆತನ್ಯಾಹು
ಟೆಲ್ ಅವಿವ್: ಗಾಜಾ ಆಳಲು ನಮಗೆ ಇಷ್ಟವಿಲ್ಲ. ಉಗ್ರರಿಂದ ಅದನ್ನು ಮುಕ್ತಿಗೊಳಿಸಿ ಆ ದೇಶಕ್ಕೆ ಭವಿಷ್ಯದಲ್ಲಿ ಉತ್ತಮ ಆಡಳಿತ ದೊರಕಿಸಿಕೊಡಬೇಕು ಎಂಬುದಷ್ಟೇ ನಮ್ಮ ಉದ್ದೇಶ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಈ ನಡುವೆ, ಗಾಜಾದಲ್ಲಿ ಕದನ ವಿರಾಮ ಘೋಷಿಸಿ ಎಂಬ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಕೋರಿಕೆ ತಿರಸ್ಕರಿಸಿರುವ ನೆತನ್ಯಾಹು, ಹಮಾಸ್ ದಮನವೇ ಕದನವಿರಾಮ ಇದ್ದಂತೆ ಎಂದು ಹೇಳಿದ್ದಾರೆ.