ಎಂಆರ್‌ಐ ಯಂತ್ರಗಳ ಅಡಿಯಲ್ಲಿ ಗನ್, ಗ್ರೇನೇಡ್, ಗಾಜಾದ ಅಲ್-ಶಿಫಾ ಆಸ್ಪತ್ರೆಯಲ್ಲಿ ಇಸ್ರೇಲ್ ಸೇನೆಯ ಬಿಗ್ ಸರ್ಚ್!
Israel-Palestine Crisis ಗಾಜಾದಲ್ಲಿ ತನ್ನ ಬಲಿಷ್ಠ ಭೂಸೇನೆಯ ಮೂಲಕ ಕಾರ್ಯಾಚರಣೆ ನಡೆಸಿರುವ ಇಸ್ರೇಲ್, ಗುರುವಾರ ತನ್ನ ಟ್ಯಾಂಕ್‌ಗಳನ್ನು ಗಾಜಾದ ಪ್ರಸಿದ್ಧ ಅಲ್ ಶಿಫಾ ಆಸ್ಪತ್ರೆಯ ಬಳಿ ನುಗ್ಗಿಸಿದೆ. ಅಲ್ಲಿಯೇ ದೊಡ್ಡ ಸರ್ಚ್ ಆಪರೇಷನ್‌ಗಳನ್ನು ಮಾಡಿದ್ದು, ಗನ್ ಹಾಗೂ ಗ್ರೇನೇಡ್‌ಗಳನ್ನು ಎಂಆರ್‌ಐ ಯಂತ್ರಗಳ ಅಡಿಯಲ್ಲಿ ಭಯೋತ್ಪಾದಕರು ಬಚ್ಚಿಟ್ಟಿದ್ದು ಕಂಡಿದೆ.
ನವದೆಹಲಿ (ನ.16): ಇಸ್ರೇಲ್-ಹಮಾಸ್ ಯುದ್ಧದ 41 ನೇ ದಿನದಂದು, ಇಸ್ರೇಲ್ ರಕ್ಷಣಾ ಪಡೆಗಳು (IDF) ಗಾಜಾದ ಅಲ್-ಶಿಫಾ ಆಸ್ಪತ್ರೆಯಲ್ಲಿ ಭೂಕಾರ್ಯಾಚರಣೆಯನ್ನು ನಡೆಸುತ್ತಿದೆ. ಅನೇಕ ಇಸ್ರೇಲಿ ಟ್ಯಾಂಕ್‌ಗಳು ಆಸ್ಪತ್ರೆಯ ಕ್ಯಾಂಪಸ್‌ನಲ್ಲಿ ಬೀಡುಬಿಟ್ಟಿದೆ. ಆಸ್ಪತ್ರೆಯಲ್ಲಿ ಹಮಾಸ್ ಶಸ್ತ್ರಾಸ್ತ್ರಗಳು, ಗುಪ್ತಚರ ಸಾಮಗ್ರಿಗಳು ಮತ್ತು ಹಲವು ಸೇನಾ ಉಪಕರಣಗಳು ಪತ್ತೆಯಾಗಿವೆ ಎಂದು ಇಸ್ರೇಲಿ ಸೇನೆ ವಿಡಿಯೋ ಪ್ರಸಾರ ಮಾಡಿದೆ. ಇದಲ್ಲದೆ, ಹಮಾಸ್ ಕೇಂದ್ರ ಕಚೇರಿ, ಗುಪ್ತಚರ ಸೆಟಪ್ ಮತ್ತು ಸಮವಸ್ತ್ರಗಳನ್ನು ಇಲ್ಲಿ ಕಾಣಬಹುದು ಎಂದು ಅವರು ಹೇಳಿದ್ದಾರೆ. ಎಂಆರ್‌ಐ ಯಂತ್ರಗಳ ಬಳಿ ಹಮಾಸ್ ಅನೇಕ ಶಸ್ತ್ರಾಸ್ತ್ರಗಳು ಮತ್ತು ಗ್ರೆನೇಡ್‌ಗಳನ್ನು ಬಚ್ಚಿಟ್ಟಿದೆ ಎಂದು ಸೇನೆ ಹೇಳಿದೆ. ಹಮಾಸ್ ಕಾರ್ಯಾಚರಣೆಯ ಮಾಹಿತಿಗಾಗಿ ಐಡಿಎಫ್ ಆಸ್ಪತ್ರೆಯಲ್ಲಿ ಇದ್ದ ಜನರೊಂದಿಗೆ ಮಾತನಾಡಿದೆ. ಇನ್ನೊಂದೆಡೆ, ಹಮಾಸ್ ವಿರುದ್ಧದ ಈ ಯುದ್ಧವು ಇನ್ನು ಮುಂದೆ ಇಸ್ರೇಲ್ ಮೇಲೆ ದಾಳಿ ಮಾಡಲು ಅದಕ್ಕೆ ಸಾಧ್ಯವಾಗದೇ ಇದ್ದಾಗ ಮಾತ್ರವೇ ಕೊನೆಗೊಳ್ಳುತ್ತದೆ ಎಂದು ಯುಎಸ್ ಅಧ್ಯಕ್ಷ ಜೋ ಬಿಡೆನ್ ಬುಧವಾರ ಹೇಳಿದ್ದಾರೆ. ಅಲ್-ಶಿಫಾ ಆಸ್ಪತ್ರೆಯಲ್ಲಿ ರೆಡ್ ಇಸ್ರೇಲ್‌ಗೆ ದೊಡ್ಡ ಅಪಾಯವಿದೆ, ಆದರೆ ಹಮಾಸ್ ಆಸ್ಪತ್ರೆಯಿಂದ ಕಾರ್ಯನಿರ್ವಹಿಸುತ್ತದೆ ಎನ್ನುವುದು ನಿಜ. ಅದರ ಪ್ರಧಾನ ಕಛೇರಿ, ಶಸ್ತ್ರಾಸ್ತ್ರಗಳ ದಾಸ್ತಾನು ಮತ್ತು ಇತರ ಯುದ್ಧ ಸಂಬಂಧಿತ ವಸ್ತುಗಳು ಅಲ್ಲಿ ಸಿಕ್ಕಿವೆ.
ಬುಧವಾರ ಮುಂಜಾನೆ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಇಸ್ರೇಲ್ ಅನ್ನು ಭಯೋತ್ಪಾದಕ ರಾಷ್ಟ್ರ ಎಂದು ಕರೆದಿದ್ದರು. ಅಂಕಾರಾದಲ್ಲಿ ಪಕ್ಷದ ಸದಸ್ಯರೊಂದಿಗೆ ಮಾತನಾಡಿದ ಎರ್ಡೋಗನ್, 'ಇಸ್ರೇಲ್ ಒಂದು ಭಯೋತ್ಪಾದಕ ದೇಶ ಮತ್ತು ಹಮಾಸ್ ಸ್ವಾತಂತ್ರ್ಯದ ಯುದ್ಧವನ್ನು ನಡೆಸುತ್ತಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ' ಎಂದಿದ್ದಾರೆ. ಗಾಜಾದಲ್ಲಿ ಸಂಭವಿಸಿದ ವಿನಾಶಕ್ಕೆ ಕಾರಣವಾದ ಎಲ್ಲಾ ಇಸ್ರೇಲಿ ನಾಯಕರನ್ನು ನ್ಯಾಯಕ್ಕೆ ತರಲು ನಮ್ಮ ಸರ್ಕಾರವು ಅತ್ಯುತ್ತಮವಾಗಿ ಪ್ರಯತ್ನಿಸುತ್ತಿದೆ. ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಅವರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಅವರ ಸೇನಾ ನಾಯಕರೂ ಇದರಲ್ಲಿ ಸೇರಿಕೊಂಡಿದ್ದಾರೆ ಎಂದಿದ್ದಾರೆ.
ಈ ಸಮಯದಲ್ಲಿ ಇಸ್ರೇಲ್ ಕೇವಲ ಒಂದು ಕಾರ್ಯಸೂಚಿಯನ್ನು ಹೊಂದಿದೆ. ಅವರು ಗಾಜಾ ನಗರ ಮತ್ತು ಅದರ ಜನರನ್ನು ನಾಶಮಾಡಲು ಬಯಸುತ್ತಾರೆ. ಹಮಾಸ್ ಭಯೋತ್ಪಾದಕ ಸಂಘಟನೆಯಲ್ಲ. ಅದು ಇಸ್ರೇಲ್ ಅನ್ನು ತಡೆಯಲು ಹೋರಾಟಗಾರರ ಸಂಘಟನೆಯಾಗಿದೆ ಎಂದಿದ್ದಾರೆ.
ಇಸ್ರೇಲ್‌ನ ಮಾಜಿ ಪ್ರಧಾನಿ ಮತ್ತು ಈಗ ವಿರೋಧ ಪಕ್ಷದ ನಾಯಕ ಯೈರ್ ಲ್ಯಾಪಿಡ್, ಎರ್ಡೋಗನ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ. ಲ್ಯಾಪಿಡ್ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ಎರ್ಡೋಗನ್ ಅವರ ಮಾನವ ಹಕ್ಕುಗಳ ದಾಖಲೆಯ ಬಗ್ಗೆ ಮಾತನಾಡಿದ್ದಾರೆ. ಮಾನವ ಹಕ್ಕುಗಳನ್ನು ಉಲ್ಲಂಘಿಸಿದ ವ್ಯಕ್ತಿಯಿಂದ ನಾವು ನೈತಿಕತೆಯ ಬಗ್ಗೆ ಪಾಠ ಕಲಿಯಲು ಬಯಸುವುದಿಲ್ಲ ಎಂದಿ ಹೇಳಿದ್ದಾರೆ. ಎರ್ಡೋಗನ್ ಮೊದಲು ತನ್ನ ಇತಿಹಾಸವನ್ನು ತಿಳಿದುಕೊಳ್ಳಬೇಕು. ಇಸ್ರೇಲ್ ಏನು ಮಾಡುತ್ತಿದ್ದರೂ ಅದು ತನ್ನ ಭದ್ರತೆಗಾಗಿ ಮಾಡುತ್ತಿದೆ. ಅವರು ಹಮಾಸ್ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ಎರ್ಡೋಗನ್ ತನ್ನ ಮನೆಯಲ್ಲಿ ಈ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದಾನೆ ಎಂದು ಟೀಕಿಸಿದ್ದಾರೆ.
16 ವರ್ಷಗಳ ಬಳಿಕ ಹಮಾಸ್ ಗಾಜಾ ಪಟ್ಟಿಯ ನಿಯಂತ್ರಣ ಕಳೆದುಕೊಂಡಿದೆ: ಇಸ್ರೇಲ್ ರಕ್ಷಣಾ ಸಚಿವ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಗಾಜಾ ಬಳಿಯ ಇಸ್ರೇಲಿ ಸೇನೆಯ ಸೇನಾ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ್ದರು. ಸೈನಿಕರೊಂದಿಗೆ ಮಾತನಾಡಿದ ಅವರು, ಹಮಾಸ್‌ನ ಹಂತಕರು ಗಾಜಾದಲ್ಲಿ ನಮ್ಮ ಸೈನಿಕರು ತಲುಪಲು ಸಾಧ್ಯವಾಗದ ಸ್ಥಳವಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ. ಇಸ್ರೇಲಿ ಸೇನೆ ಗಾಜಾ ಪ್ರವೇಶಿಸಲೂ ಸಾಧ್ಯವಿಲ್ಲ ಎಂದು ಹಮಾಸ್ ಹೇಳುತ್ತಿತ್ತು. ನಾವು ಅದನ್ನು ಸಾಧಿಸಿದ್ದೇವೆ. ನಾವು ಶಿಫಾ ಆಸ್ಪತ್ರೆಗೆ ತಲುಪಲು ಸಾಧ್ಯವಿಲ್ಲ ಎನ್ನುತ್ತಿದ್ದರು. ಅಲ್ಲಿಗೂ ತಲುಪಿದ್ದೇವೆ. ಈಗ ಹಮಾಸ್‌ಗೆ ಅಡಗಿಕೊಳ್ಳಲು ಸ್ಥಳವಿಲ್ಲ. ನಮಗೆ ಎರಡು ಗುರಿಗಳಿವೆ. ಮೊದಲನೆಯದು - ಹಮಾಸ್ ಅನ್ನು ತೊಡೆದುಹಾಕುವುದು ಇನ್ನೊಂದು, ನಮ್ಮ ಒತ್ತೆಯಾಳುಗಳನ್ನು ಮರಳಿ ಕರೆತರುವುದು ಎಂದು ಹೇಳಿದ್ದಾರೆ.
ಫೌದಾ ವೆಬ್ ಸೀರಿಸ್ ನಟ ಗಾಜಾದಲ್ಲಿ ಹತ್ಯೆ: 80 ಒತ್ತೆಯಾಳುಗಳ ಬಿಡುಗಡೆಗೆ ಡೀಲ್ ಇಸ್ರೇಲ್ ಹಮಾಸ್ ಡೀಲ್