Asianet Suvarna News Asianet Suvarna News

ಫೌದಾ ವೆಬ್ ಸೀರಿಸ್ ನಟ ಗಾಜಾದಲ್ಲಿ ಹತ್ಯೆ: 80 ಒತ್ತೆಯಾಳುಗಳ ಬಿಡುಗಡೆಗೆ ಡೀಲ್ ಇಸ್ರೇಲ್ ಹಮಾಸ್ ಡೀಲ್

ತನ್ನ ದೇಶದೊಳಕ್ಕೆ ನುಗ್ಗಿ ದಾಳಿ ನಡೆಸಿ, 240 ಮಂದಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡಿರುವ ಹಮಾಸ್ ಉಗ್ರರನ್ನು ಹೆಡೆಮುರಿ ಕಟ್ಟಲು ಪಣ ತೊಟ್ಟಿರುವ ಇಸ್ರೇಲ್, ಇದೀಗ ತನ್ನ ಯೋಧರನ್ನು ಗಾಜಾಪಟ್ಟಿಯ ಶಿಫಾ ಆಸತ್ರೆ ಹೊರಗೆ ಜಮಾಯಿಸಿದೆ.

Israel Hamas war Fauda Web Series Actor Killed in Gaza Israel Hamas Deal to Release 80 Hostages akb
Author
First Published Nov 13, 2023, 9:01 AM IST

ಖಾನ್‌ ಯೂನಿಸ್: ತನ್ನ ದೇಶದೊಳಕ್ಕೆ ನುಗ್ಗಿ ದಾಳಿ ನಡೆಸಿ, 240 ಮಂದಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡಿರುವ ಹಮಾಸ್ ಉಗ್ರರನ್ನು ಹೆಡೆಮುರಿ ಕಟ್ಟಲು ಪಣ ತೊಟ್ಟಿರುವ ಇಸ್ರೇಲ್, ಇದೀಗ ತನ್ನ ಯೋಧರನ್ನು ಗಾಜಾಪಟ್ಟಿಯ ಶಿಫಾ ಆಸತ್ರೆ ಹೊರಗೆ ಜಮಾಯಿಸಿದೆ.

15 ರಿಂದ 20 ಸಾವಿರ ನಿರಾಶ್ರಿತರು, 1500 ರೋಗಿಗಳು ಹಾಗೂ ಅಷ್ಟೇ ಸಂಖ್ಯೆಯ ವೈದ್ಯಕೀಯ ಸಿಬ್ಬಂದಿ ತಂಗಿರುವ ಈ ಆಸ್ಪತ್ರೆಯ ಹೊರಗೆ ದೊಡ್ಡ ಕದನವೇ ನಡೆಯುತ್ತಿದೆ.  ಗಾಜಾ ನಗರ ಅದರಲ್ಲೂ ಶಿಫಾ ಆಸ್ಪತ್ರೆ ಇರುವ ಪ್ರದೇಶದಲ್ಲಿ ಶನಿವಾರ ರಾತ್ರಿಯಿಡೀ ವಾಯುದಾಳಿ ಹಾಗೂ ಶೆಲ್ ದಾಳಿಗಳು ನಡೆದಿವೆ. ಯಾವುದೇ ಕ್ಷಣದಲ್ಲಿ ಇಸ್ರೇಲ್ ಯೋಧರು ಒಳಗೆ ನುಗ್ಗಬಹುದು ಎಂಬ ಭೀತಿಯೊಂದಿಗೇ ಆಸತ್ರೆಯಲ್ಲಿ ಜನ ಸಮಯ ದೂಡುತ್ತಿದ್ದಾರೆ.

ಶಿಫಾ ಆಸತ್ರೆಯ ಒಳಗೆ ಹಮಾಸ್ ಉಗ್ರರು ಕಮಾಂಡ್ ಪೋಸ್ಟ್ ಹೊಂದಿದ್ದಾರೆ ಎಂದು ಆರೋಪಿಸಿ ಇಸ್ರೇಲ್ ಈ ದಾಳಿ ನಡೆಸುತ್ತಿದೆ. ಆದರೆ ಈ ಆರೋಪವನ್ನು ಹಮಾಸ್ ಹಾಗೂ ಆಸ್ಪತ್ರೆ ಸಿಬ್ಬಂದಿ ತಿರಸ್ಕರಿಸಿದ್ದಾರೆ. ಈ ನಡುವೆ, ರಾಷ್ಟ್ರವನ್ನುದೇಶಿಸಿ ಮಾತನಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu), ಹಮಾಸ್ ತನ್ನ ವಶದಲ್ಲಿಟ್ಟುಕೊಂಡಿರುವ 240 ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೆ ಕದನ ವಿರಾಮ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಭಾರತದ ಅಚ್ಚರಿಯ ನಡೆ: ಇಸ್ರೇಲ್‌ ವಿರುದ್ಧ ವಿಶ್ವಸಂಸ್ಥೆಯಲ್ಲಿ ಭಾರತ ಮತ

ಶಿಶುಗಳ ರಕ್ಷಣೆ: ಇಸ್ರೇಲ್ ಭರವಸೆ 

ಇಸ್ರೇಲ್‌ ಯೋಧರು ಹಾಗೂ ಹಮಾಸ್ ಉಗ್ರರ ನಡುವಣ ರಣಾಂಗಣವಾಗಿರುವ ಗಾಜಾದ ಅಲ್ - ಶಿಫಾ ಆಸ್ಪತ್ರೆಯಲ್ಲಿ ಸಿಲುಕಿರುವ ಶಿಶುಗಳನ್ನು ತೆರವುಗೊಳಿಸಲು ಸಹಾಯ ಮಾಡುವುದಾಗಿ ಇಸ್ರೇಲ್ ರಕ್ಷಣಾ ಪಡೆ (Israel Defense Forces) ಘೋಷಿಸಿದೆ. ಅಲ್ - ಶಿಫಾ ಆಸ್ಪತ್ರೆಯಿಂದ (Al-Shifa hospital) ತನಗೆ ಇದ್ದ ನಂಟು ಕಡಿತಗೊಂಡಿದೆ. ಅಲ್ಲಿ ಇದ್ದ ವ್ಯಕ್ತಿಗಳು ಆಸತ್ರೆ ತೊರೆದಿದ್ದಾರೆ. ಆ ಆಸ್ಪತ್ರೆಯಲ್ಲಿ ಮಕ್ಕಳು ಹಾಗೂ ವೃದ್ಧರು ಇಸ್ರೇಲ್‌ ದಾಳಿಯಿಂದ ಸಂಕಷ್ಟಕ್ಕೆ ತುತ್ತಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಇದರ ಬೆನ್ನಲ್ಲೇ ಇಸ್ರೇಲ್ ಈ ಘೋಷಣೆ ಮಾಡಿದೆ.

ಇಸ್ರೇಲ್ ಸೇನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ, ಮುಸ್ಲಿಂ ರಾಷ್ಟ್ರಗಳಿಗೆ ಇರಾನ್ ಮನವಿ!

80 ಒತ್ತೆಯಾಳುಗಳ ಬಿಡುಗಡೆಗೆ ಡೀಲ್?

ಒಂದು ತಿಂಗಳಿಂದ ನಡೆಯುತ್ತಿರುವ ಇಸ್ರೇಲ್ ಹಮಾಸ್ ಯುದ್ಧಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆ ಭಾನುವಾರ ನಡೆದಿದ್ದು, ಒತ್ತೆಯಾಳುಗಳ ವಿನಿಮಯಕ್ಕೆ (hostage exchange) ಉಭಯ ಪಂಗಡಗಳ ನಡುವೆ ಮಹತ್ವದ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇಂಥ ಸಾಧ್ಯತೆ ಇದೆ ಎಂದು ಇಸ್ರೇಲ್ ಅಧ್ಯಕ್ಷ ಬೆಂಜಮಿನ್‌ ನೆತನ್ಯಾಹು ಕೂಡ ಹೇಳಿದಾರೆ. ಹಮಾಸ್ ಉಗ್ರರು ತಮ್ಮ ಬಳಿಯ 80 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ವಶದಲ್ಲಿರುವ ಕೆಲವು ಮಹಿಳೆಯರು, ವೃದ್ಧರು ಹಾಗೂ ಯುವಕರನ್ನು ನೆತನ್ಯಾಹು ಸರ್ಕಾರ ಬಿಡುಗಡೆ ಮಾಡಬೇಕು ಎಂಬುದು ಸಂಭಾವ್ಯ ಒಪ್ಪಂದವಾಗಿದೆ ಎಂದು ಅಮೆರಿಕ ಅಧಿಕಾರಿ ಹೇಳಿದ್ದಾರೆ. ಇಸ್ರೇಲ್‌ನ 230 ಒತ್ತೆಯಾಳುಗಳು ಹಮಾಸ್ ವಶದಲ್ಲಿದ್ದಾರೆ. . ಈಗಾಗಲೇ ಐವರನ್ನು ಹಮಾಸ್‌ ಬಿಡುಗಡೆ ಮಾಡಿದೆ.

ಜ್ವಾಲಾಮುಖಿಯ ಸ್ಫೋಟದಿಂದ ನಿರ್ಮಾಣವಾಯ್ತು ಹೊಸ ದ್ವೀಪ: ನೈಸರ್ಗಿಕ ಪ್ರಕ್ರಿಯೆಯ ವೀಡಿಯೋ ವೈರಲ್

ಫೌದಾ ವೆಬ್ ಸೀರಿಸ್ ನಟ ಗಾಜಾದಲ್ಲಿ ಹತ್ಯೆ
'ಫೌದಾ' ವೆಬ್ ಸೀರಿಸ್ ಮೂಲಕ ಖ್ಯಾತಿ ಗಳಿಸಿದ ಇಸ್ರೇಲಿ ನಟ ಮತನ್ ಮೀರ್ (38) ಹಮಾಸ್ ಬಂಡುಕೋರರೊಂದಿಗೆ ಯುದ್ಧ ಮಾಡುವಾಗ ಹತ್ಯೆಯಾಗಿದ್ದಾರೆ. ಈ ವಿಷಯವನ್ನು ಇಸ್ರೇಲಿ ಸೇನಾ ಪಡೆಗಳು ಖಚಿತಪಡಿಸಿವೆ. ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ಮಾಡಿದ ನಂತರ ದೇಶದ ನಾಗರಿಕರು ಕೂಡ ಇಸ್ರೇಲಿ ಸೇನೆ ಸೇರಿ ಹೋರಡುತ್ತಿದ್ದಾರೆ.

ಗಾಜಾ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಇನ್‌ಕ್ಯುಬೇಟರ್‌ಗಳಲ್ಲಿರುವ 39 ಶಿಶುಗಳ ಹೋರಾಟ

Follow Us:
Download App:
  • android
  • ios