ಐಸಿಸ್ ಉಗ್ರರ ಕರಾಳ ಕತೆ ಬಹಿರಂಗ ಪಡಿಸಿದ ಇರಾಕ್ ಸಂಸದೆ ಐಸಿಸ್ ಉಗ್ರರ ಬಳಿ ನರಕ ಯಾತನೆ ಅನುಭವದ ನೈಜ ಕತೆ 10 ವರ್ಷದ ಹುಡಿಗಿಯನ್ನು ತಂದೆ, ಸಹೋದರರಿದ ಮುಂದೆ ರೇಪ್

ನವದೆಹಲಿ(ಮೇ.17): ಐಸಿಸ್ ಉಗ್ರರ ಕರಾಳ ಮುಖಗಳ ಅನಾವರ ಹಲವು ಬಾರಿ ಆಗಿದೆ. ಅಪ್ರಾಪ್ರರ ಮೇಲೆ ಸಾಮೂಹಿಕ ರೇಪ್, ಕತ್ತು ಕೊಯ್ದು ಕೊಲೆ, ಚಿತ್ರ ಹಿಂಸೆ, ಹೀಗೆ ಒಂದೆರಡಲ್ಲ. ಆದರೆ ಇದಕ್ಕಿಂತ ಕ್ರೂರ, ಇದಕ್ಕಿಂತ ಅಮಾನುಷ ಘಟನೆ ಇದೀಗ ಬಹಿರಂಗವಾಗಿದೆ. ಜೈಲಿನಲ್ಲಿ ಕೂಡಿ ಹಾಕಿದ್ದ ಮಹಿಳೆಗೆ ತನ್ನ 1 ವರ್ಷದ ಮಗನನ್ನು ಕೊಂದು ಅಡುಗೆ ಮಾಡಿ ಹಸಿದ ತಾಯಿಗೆ ಬಡಿಸಿದ ಅತ್ಯಂತ ಕ್ರೂರ ಘಟನೆಯನ್ನು ಇರಾಕ್ ಸಂಸದೆ ಬಹಿರಂಗ ಪಡಿಸಿದ್ದಾರೆ.

ಇರಾಕ್ ಸಂಸದೆ ವಿಯಾನ್ ದಖಿಲ್ ಈಜಿಪ್ಟ್ ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಐಸಿಸ್ ಉಗ್ರರ ಅತ್ಯಂತ ಭೀಕರ ಹಾಗೂ ಕ್ರೂರತೆಯನ್ನು ಬಿಚ್ಚಿಟ್ಟಿದ್ದಾರೆ. ಐಸಿಸ್ ಉಗ್ರರಿಂದ ರಕ್ಷಿಸಿದ ಓರ್ವ ಮಹಿಳೆ ಆಕೆಯ ನೋವನ್ನು ಹೇಳಿಕೊಂಡಾಗ ನಮಗೆ ದಿಕ್ಕೇ ತೋಚಲಿಲ್ಲ ಎಂದು ವಿಯಾನ್ ಹೇಳಿದ್ದಾರೆ. 

ISIS ಖಲೀಫ್ ಬಗ್ದಾದಿಯ ಸಹೋದರ ಇಸ್ಲಾಮಿಕ್ ಸ್ಟೇಟ್ಸ್ ನ ಹೊಸ ನಾಯಕ!

ಮಹಿಳೆಯನ್ನು 3 ದಿನಗಳ ಕಾಲ ಅನ್ನ, ನೀರು ನೀಡದೆ ಜೈಲಿನಲ್ಲಿ ಕೂಡಿಹಾಕಲಾಯಿತು. ಆಕೆಯ ಮೇಲೆ ಅತ್ಯಾಚಾರ ಮಾಡಲಾಯಿತು. 3 ದಿನಗಳ ಬಳಿಕ ತೀವ್ರ ಹಸಿವಿನಿಂದ ಬಳಲಿದ ಆಕೆಗೆ ಐಸಿಸ್ ಉಗ್ರರು ಮಾಂಸದೂಟ ಮುಂದಿಟ್ಟರು. ಹಸಿದ ಆಕೆ ಹಿಂದೂ ಮುಂದೂ ನೋಡದೆ ಗಬಗಬನೆ ತಿಂದುಬಿಟ್ಟಿದ್ದಾಳೆ.

ತಿಂದ ಬಳಿಕ ಐಸಿಸ್ ಉಗ್ರರು, ನೀನು ತಿಂದ ಮಾಂಸ, ನಿನ್ನ 1 ವರ್ಷ ಮಗನ ಮಾಂಸವಾಗಿದೆ. ಆತನ ಕೊಂದು ಆಡುಗೆ ಮಾಡಿದ್ದೇವೆ ಎಂದರು ಎಂದು ಐಸಿಸ್ ಉಗ್ರರಿಂದ ರಕ್ಷಿಸಲ್ಪಟ್ಟ ಮಹಿಳೆ ಹೇಳಿದ ನೋವಿನ ಕತೆ. ಇದೇ ಕರಾಳ ಘಟನೆಯನ್ನು ವಿಯಾನ್ ದಖಿಲ್ ವಾಹಿನಿ ಸಂದರ್ಶನದಲ್ಲಿ ಹೇಳಿದ್ದಾರೆ.

Scroll to load tweet…

ಮತ್ತೊಂದು ಹುಡಿಗಿಯ ಕತೆ ಹೇಳುತ್ತೇನೆ. ಐಸಿಸ್ ಉಗ್ರರು 6 ಅಕ್ಕ ತಂಗಿಯರನ್ನು ಹಾಗೂ ತಂದೆಯನ್ನು ಅಪಹರಿಸಿ ಜೈಲಿನಲ್ಲಿಟ್ಟರು. ಈ ಅಕ್ಕ ತಂಗಿಯರಲ್ಲಿ 10 ವರ್ಷದ ಬಾಲಕಿ ಕೊನೆಯವಳು. ಈಕೆಯನ್ನು ತಂದೆ ಹಾಗೂ ಸಹೋದರಿಯರ ಮುಂದೆ ರೇಪ್ ಮಾಡಿ ಕೊಂದೇ ಬಿಟ್ಟರು ಎಂದು ಹೇಳುತ್ತಾ ಭಾವುಕರಾದರು.

ಮುರುಡೇಶ್ವರದ ಶಿವನ ಮೇಲೆ ಐಸಿಸ್‌ ಕಣ್ಣು? ಖಾಕಿ ಬಿಗಿ ಬಂದೋಬಸ್ತ್

ಲಾಡೆನ್‌ ಹತ್ಯೆ ರೀತಿ ಕಾರ್ಯಾಚರಣೆ: ಐಸಿಸ್‌ ಬಾಸ್‌ ಸಾವು
ಸಿರಿ​ಯಾ​ದಲ್ಲಿ ಅಮೆ​ರಿಕ ಸೇನೆ ನಡೆಸಿದ ಭಾರೀ ಕಾರ್ಯಾಚರಣೆಗೆ ಬೆದರಿದ ಐಸಿಸ್‌ ಸಂಘಟನೆಯ ಮುಖ್ಯಸ್ಥ ಇಬ್ರಾಹಿಂ ಅಲ್‌ ಹಷಿಮಿ ಅಲ್‌ ಖುರಾಯ್ಷಿ ಆತ್ಮಾಹುತಿ ಮಾಡಿಕೊಂಡು ಸಾವನ್ನಪ್ಪಿದ್ದಾನೆ. ತನ್ನ ಜೊತೆಗೆ ತನ್ನ ಕುಟುಂಬ ಸದಸ್ಯರನ್ನೂ ಆತ ಇದೇ ರೀತಿಯಲ್ಲಿ ಸಾವಿನ ಮನೆಗೆ ಕಳುಹಿಸಿದ್ದಾನೆ.

ಈ ಹಿಂದೆ ಅಲ್‌ಖೈದಾ ಉಗ್ರ ಒಸಾಮಾ ಬಿನ್‌ ಲಾಡೆನ್‌ ಹತ್ಯೆಗೆ ಪಾಕಿಸ್ತಾನವನ್ನು ರಹಸ್ಯವಾಗಿ ಪ್ರವೇಶಿಸಿ ಅಮೆರಿಕ ಪಡೆಗಳು ನಡೆಸಿದ ಕಾರ್ಯಾಚರಣೆ ನಡೆಸಿದ ರೀತಿಯಲ್ಲೇ ಈ ಕಾರ್ಯಾಚರಣೆಯನ್ನೂ ೂ ನಡೆಸಲಾಗಿದೆ.