ಭಯೋತ್ಪಾದಕ ಗುಂಪು ಇಸ್ಲಾಮಿಕ್ ಸ್ಟೇಟ್ಸ್ ಗೆ ಹೊಸ ನಾಯಕಅಬು ಬಕ್ರ್ ಅಲ್ ಬಗ್ದಾದಿಯ ಸಹೋದರ ಹೊಸ ಕ್ಯಾಪ್ಟನ್ಇರಾಕ್ ನ ಭದ್ರತಾ ಸಿಬ್ಬಂದಿಗಳ ಮೂಲಕ ಅಧಿಕೃತ

ಬಗ್ದಾದ್, ಇರಾಕ್ (ಮಾ. 11): ಭಯೋತ್ಪಾದಕ ಗುಂಪು ಇಸ್ಲಾಮಿಕ್ ಸ್ಟೇಟ್ (Islamic State) ಹೊಸ ನಾಯಕನನ್ನು (New Leader) ಹೆಸರಿಸುವ ಮೂಲಕ, ತನ್ನ ಮಾಜಿ ನಾಯಕನ ಸಾವನ್ನು ಖಚಿತಪಡಿಸಿದೆ. ಇಸ್ಲಾಮಿಕ್ ಸ್ಟೇಟ್ ಜಿಹಾದಿಸ್ಟ್ ಗುಂಪು ಗುರುವಾರ ಹೇಳಿಕೆಯಲ್ಲಿ ತನ್ನ ನಾಯಕ ಅಬು ಇಬ್ರಾಹಿಂ ಅಲ್-ಖುರಾಶಿಯ (Abu Ibrahim al-Qurashi ) ಸಾವನ್ನು ದೃಢಪಡಿಸಿದ್ದು, ಅವನ ಬದಲಿಯಾಗಿ ಅಬು ಹಸನ್ ಅಲ್-ಹಶೆಮಿ ಅಲ್-ಖುರಾಶಿ ( Abu Hasan al-Hashemi al-Qurashi) ಎಂದು ಹೆಸರಿಸಿದೆ. ಅಬು ಹಸನ್ ಅಲ್-ಹಶೆಮಿ ಅಲ್-ಖುರಾಶಿ, 2019ರಲ್ಲಿ ಸಾವನ್ನಪ್ಪಿದ್ದ ಅಬು ಬಕ್ರ್ ಅಲ್ ಬಗ್ದಾದಿ (Abu Bakr al-Baghdadi) ಅವರ ಸಹೋದರ ಎಂದು ಇರಾಕಿನ ಭದ್ರತಾ ಅಧಿಕಾರಿಗಳು ಮತ್ತು ಒಂದು ಪಾಶ್ಚಿಮಾತ್ಯ ಗುಪ್ತಚರ ಮೂಲವು ಖಚಿತಪಡಿಸಿದೆ.

2019 ರಲ್ಲಿ ಗುಂಪಿನ ಎರಡನೇ ಖಲೀಫ ಎಂದು ಕರೆಯಲ್ಪಡುವ ಬಗ್ದಾದಿಯ ಉತ್ತರಾಧಿಕಾರಿಯಾದ ಅಬು ಇಬ್ರಾಹಿಂ ಅಲ್-ಖುರೈಶಿಯ ಮರಣದ ಕೆಲವೇ ವಾರಗಳ ನಂತರ ಈ ಘೋಷಣೆ ಬಂದಿದೆ. ಬಾಗ್ದಾದಿ ಮತ್ತು ಖುರೈಶಿ ಇಬ್ಬರೂ ತಮ್ಮ ಉತ್ತರ ಸಿರಿಯಾ ಅಡಗುತಾಣಗಳ ಮೇಲೆ ಅಮೆರಿಕ ದಾಳಿಯ ಸಮಯದಲ್ಲಿ ತಮ್ಮನ್ನು ಮತ್ತು ಕುಟುಂಬ ಸದಸ್ಯರನ್ನು ಸ್ಫೋಟಿಸುವ ಮೂಲಕ ಸಾವನ್ನಪ್ಪಿದ್ದರು.

ಅಲ್ ಖೈದಾದ ಕುಖ್ಯಾತ ಕ್ರೂರ ಇರಾಕ್ ಶಾಖೆಯ ಸಂಬಂಧ ಹೊಂದಿರುವ ಇಸ್ಲಾಮಿಕ್ ಸ್ಟೇಟ್, 2003 ರಲ್ಲಿ ಇರಾಕ್ ಅನ್ನು ಆಕ್ರಮಿಸಿ ಸುನ್ನಿ ಮುಸ್ಲಿಂ ನಿರಂಕುಶಾಧಿಕಾರಿ ಸದ್ದಾಂ ಹುಸೇನ್ ಅವರನ್ನು ಪದಚ್ಯುತಗೊಳಿಸಿತ್ತು. ಆ ಬಳಿಕ ಅಮೆರಿಕ ಸೇನಾ ಪಡೆಗಳ ವಿರುದ್ಧದ ದಂಗೆಯ ಮೂಲಕ ತಮ್ಮ ರಕ್ತಸಿಕ್ತ ಅಧ್ಯಾಯವನ್ನು ಮುಂದುವರಿಸಿತ್ತು.

Scroll to load tweet…


ಇಸ್ಲಾಮಿಕ್ ಸ್ಟೇಟ್ ತನ್ನ ಪ್ರಸ್ತುತ ರೂಪವು ಕಳೆದ ದಶಕದಲ್ಲಿ ನೆರೆಯ ಸಿರಿಯಾದ ನಾಗರಿಕ ಸಂಘರ್ಷದ ಅವ್ಯವಸ್ಥೆಯಿಂದ ಹೊರಹೊಮ್ಮಿದ್ದಾಗಿದೆ, 2014 ರಲ್ಲಿ ಇರಾಕ್ ಮತ್ತು ಸಿರಿಯಾದ ವ್ಯಾಪಕ ಶ್ರೇಣಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತು. 2014 ರಲ್ಲಿ, ಬಗ್ದಾದಿ ಉತ್ತರ ಇರಾಕ್‌ನ ಮೊಸುಲ್‌ನಲ್ಲಿರುವ ಮಸೀದಿಯಿಂದ ಇಸ್ಲಾಮಿಕ್ ಕ್ಯಾಲಿಫೇಟ್ ಅನ್ನು ಘೋಷಿಸಿದ್ದಲ್ಲದೆ, ತಾವೇ ಎಲ್ಲಾ ಮುಸ್ಲೀಮರ ಕ್ಯಾಲಿಫೇಟ್ ಎಂದು ಘೋಷಣೆ ಮಾಡಿಕೊಂಡಿದ್ದರು. 

ISIS: ಅಮೆರಿಕಾದ ಮಾಸ್ಟರ್ ಪ್ಲ್ಯಾನ್, ವ್ಯವಸ್ಥಿತ ಕಾರ್ಯಾಚರಣೆ, ಐಸಿಸ್‌ ಬಾಸ್‌ ಹತ್ಯೆ
ಇಸ್ಲಾಮಿನ ಸೀಮಿತ ವ್ಯಾಖ್ಯಾನದ ಹೆಸರಿನಲ್ಲಿ ನೂರಾರು ಜನರನ್ನು ಕೊಂದು ಗಲ್ಲಿಗೇರಿಸಿದ ಇಸ್ಲಾಮಿಕ್ ಸ್ಟೇಟ್‌ನ ಕ್ರೂರ ಆಡಳಿತವು 2017 ರಲ್ಲಿ ಇರಾಕಿ ಮತ್ತು ಬಹುರಾಷ್ಟ್ರೀಯ ಶಕ್ತಿಗಳು ಅಲ್ಲಿನ ಸಂಘಟನೆಯನ್ನು ಹತ್ತಿಕ್ಕಿದಾಗ ಮೊಸುಲ್‌ನಲ್ಲಿ ಕೊನೆಗೊಂಡಿತು. ಹಾಗಿದ್ದರೂ, ಉಳಿದುಕೊಂಡಿರುವ ಸಾವಿರಾರು ಉಗ್ರಗಾಮಿಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ದೂರದ ಗುಡ್ಡಗಾಡು ಪ್ರದೇಶಗಳಲ್ಲಿ ಅಡಗಿಕೊಂಡಿದ್ದು, ಇನ್ನೂ ಗಮನಾರ್ಹವಾದ ದಂಗೆಕೋರ-ಶೈಲಿಯ ದಾಳಿಗಳನ್ನು ನಡೆಸಲು ಸಮರ್ಥರಾಗಿದ್ದಾರೆ.

ISIS Chief Killed by US: ಐಸಿಸ್‌ ಬಾಸ್ ಖುರೇಶಿ ಕೊಲ್ಲಲು 2 ತಿಂಗಳಿಂದ ಅಮೆರಿಕ ಪ್ಲ್ಯಾನ್‌!
ಹೊಸ ನಾಯಕನ ನಿಜವಾದ ಹೆಸರು ಜುಮಾ ಅವದ್ ಅಲ್-ಬದ್ರಿ, ಅವನು ಇರಾಕಿ ಮತ್ತು ಬಾಗ್ದಾದಿಯ ಹಿರಿಯ ಸಹೋದರ ಎಂದು ಇಬ್ಬರು ಇರಾಕಿ ಭದ್ರತಾ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಪಾಶ್ಚಿಮಾತ್ಯ ಭದ್ರತಾ ಅಧಿಕಾರಿಯೊಬ್ಬರು ಇಬ್ಬರು ಸಹೋದರರು ಎಂದು ದೃಢಪಡಿಸಿದ್ದರಾದರೂ, ಇವರಲ್ಲಿ ಯಾರು ದೊಡ್ಡವರು ಎನ್ನುವುದನ್ನು ಖಚಿತಪಡಿಸಿಲ್ಲ. ಇಸ್ಲಾಮಿಕ್ ಸ್ಟೇಟ್ ಹೊಸ ನಾಯಕನನ್ನು ಘೋಷಿಸಿದ್ದು ಇದೇ ಮೊದಲ ಬಾರಿಗೆ ಬಹಿರಂಗವಾಗಿದೆ. ಜಿಹಾದಿಗಳ ನಿಕಟ ವಲಯದಿಂದ ಬಂದ ವ್ಯಕ್ತಿಯಾಗಿರುವ ಅಬು ಹಸನ್ ಅಲ್-ಹಶೆಮಿ ಅಲ್-ಖುರಾಶಿ, 2003ರಲ್ಲಿ ಯುಎಸ್ ಆಕ್ರಮಣದ ಬಳಿಕ ಹೊರಹೊಮ್ಮಿದ ನಾಯಕ ಎನಿಸಿದ್ದಾರೆ. ಈತನ ಬಗ್ಗೆ ಇನ್ನಷ್ಟೇ ಮಾಹಿತಿಗಳು ಬಹಿರಂಗವಾಗಬೇಕಿದೆ. "ಬದ್ರಿ ಅವರು 2003 ರಲ್ಲಿ ಸಲಾಫಿ ಜಿಹಾದಿಸ್ಟ್ ಗುಂಪುಗಳಿಗೆ ಸೇರಿದ ತೀವ್ರಗಾಮಿ ಮತ್ತು ವೈಯಕ್ತಿಕ ಒಡನಾಡಿ ಮತ್ತು ಇಸ್ಲಾಮಿಕ್ ಕಾನೂನು ಸಲಹೆಗಾರರಾಗಿ ಯಾವಾಗಲೂ ಬಾಗ್ದಾದಿಯ ಜೊತೆಯಲ್ಲಿ ಇರುತ್ತಿದ್ದರು" ಎಂದು ಇರಾಕಿನ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.