ಇಸ್ಲಾಮಾಬಾದ್/ ನವದೆಹಲಿ ( ನ. 15)  ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸೋಶಿಯಲ್ ಮೀಡಿಯಾ ಮೂಲಕ ದೀಪಾವಳಿ ಹಬ್ಬದ  ಶುಭಾಶಯ ಕೋರಿದ್ದರು. ಇಮ್ರಾನ್ ಖಾನ್ ಅವರ ಶುಭಾಶಯಕ್ಕೆ  ಟ್ವಿಟರ್ ನಲ್ಲಿ ಖಾರವಾದ ಪ್ರತಿಕ್ರಿಯೆ ಬಂದಿದೆ.

ಪಾಕಿಸ್ತಾನಕ್ಕೆ ಪ್ರಧಾನಿ  ಕೊಟ್ಟ ಖಡಕ್ ಎಚ್ಚರಿಕೆ

ಪಾಕಿಸ್ತಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗೆ ಲೆಕ್ಕವೇ ಇಲ್ಲ. ಕೊರೋನಾ ಸಹ ಮಿತೀಮೀರಿದೆ. ಎಲ್ಲ ಹಿಂದುಗಳಿಗೆ ದೀಪಾವಳಿ ಶುಭಾಶಯ ಎಂದು ಕೋರಿದ್ದಕ್ಕೆ ಜನರು ಸರಿಯಾಗಿಗೆ ದಬಾಯಿಸಿದ್ದಾರೆ.

ಹಿಂದುಗಳಿಗೆ ಶುಭಾಶಯ ಎಂದು ಹೇಳಿದ್ದೀರಿ.. ಪಾಕಿಸ್ತಾನದಲ್ಲಿ ಹಿಂದುಗಳು ಇನ್ನು ಉಳಿದುಕೊಂಡಿದ್ದಾರೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಶನಿವಾರ ಪಾಕಿಸ್ತಾನದ ಹಿಂದು ಸಮುದಾಯ ದೀಪಾವಳಿ ಆಚರಣೆ ಮಾಡಿದೆ.