ಹಿಜಾಬ್ ಧರಿಸಲು ಮೌಲ್ವಿ ಒತ್ತಾಯಿಸಿದ್ದಕ್ಕೆ ಈ ಯುವತಿ ಹೀಗಾ ಮಾಡೋದು? ಮೌಲ್ವಿ ಕಕ್ಕಾಬಿಕ್ಕಿ- ವಿಡಿಯೋ ವೈರಲ್
ಹಿಜಾಬ್ ಧರಿಸಲು ಮೌಲ್ವಿ ಒತ್ತಾಯಿಸಿದ್ದಕ್ಕೆ ಈ ಯುವತಿ ಮಾಡಿದ್ದೇನು ನೋಡಿ! ವಿಮಾನ ನಿಲ್ದಾಣದಲ್ಲಿ ಕೋಲಾಹಲ ಸೃಷ್ಟಿಸಿದ್ದ ವಿಡಿಯೋ ವೈರಲ್ ಆಗಿದೆ.
ಮುಸ್ಲಿಂ ರಾಷ್ಟ್ರ ಇರಾನ್‌ನಲ್ಲಿ ಹಿಜಾಬ್ ಧರಿಸುವುದಿಲ್ಲ ಎಂದು ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿರುವುದು ತಿಳಿದ ವಿಷಯವೇ. ಕಡ್ಡಾಯವಾಗಿ ಹಿಜಾಬ್ ಧರಿಸಬೇಕು ಎನ್ನುವ ನಿಯಮದ ವಿರುದ್ಧ ಬೇಸತ್ತು ಯುವತಿಯೊಬ್ಬಳು ಇರಾನ್ ವಿಶ್ವವಿದ್ಯಾನಿಲಯದ ಆವರಣದಲ್ಲಿ ಬಿಕಿನಿ ಧರಿಸಿ ಪ್ರತಿಭಟನೆಯನ್ನೂ ಮಾಡಿದ್ದಳು!ರಸ್ತೆಯ ಮೇಲೆ ಇಳಿದು ಪುರುಷರ ಎದುರೇ ಹಿಜಾಬ್ಗಳನ್ನು ಕಿತ್ತು ಬೆಂಕಿ ಹಚ್ಚಿ ಸುಡುತ್ತಲೇ ಇದ್ದಾರೆ. ಪೊಲೀಸರು ನಡೆಸಿದ ದಾಳಿಯಿಂದ ಕೆಲವು ಮಹಿಳೆಯರು ಜೀವ ಕಳೆದುಕೊಂಡಿದ್ದರೂ, ಇರಾನ್‌ನಲ್ಲಿ ಹಿಜಾಬ್ ವಿರುದ್ಧದ ಪ್ರತಿಭಟನೆ ಜೋರಾಗಿಯೇ ನಡೆಯುತ್ತಿದೆ. ಹಿಜಾಬ್ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಪೊಲೀಸ್ ಕಸ್ಟಡಿಯಲ್ಲೇ ಮಹ್ಸಾ ಅಮಿನಿ ಎಂಬ ಯುವತಿ ಸಾವಿಗೀಡಾಗಿದ್ದಳು. ಇದರಿಂದ ಉದ್ವಿಗ್ನ ಸ್ಥಿತಿ ತಲೆದೋರಿತ್ತು. ಮಹಿಳೆಯರು ಬಿದಿಗಳಿದು ಯುವತಿಯ ಸಾವಿನ ವಿರುದ್ಧ ಪ್ರತಿಭಟಿಸಿದ್ದರು, ಹಿಜಾಬ್ ಕಿತ್ತು ಎಸೆದಿದ್ದರು. ಇಂದಿಗೂ ಪ್ರತಿಭಟನೆ ಅಲ್ಲಿ ನಡೆಯುತ್ತಲೇ ಇದೆ.
ಇದರ ನಡುವೆಯೇ, ಇದೀಗ ಮತ್ತೊಂದು ವಿಚಿತ್ರ ಘಟನೆ ಇರಾನ್ ವಿಮಾನ ನಿಲ್ದಾಣದಲ್ಲಿ ನಡೆದಿದೆ. ವಿಮಾನ ನಿಲ್ದಾಣದಲ್ಲಿ ಮುಸ್ಲಿಂ ಮೌಲ್ವಿಯೋರ್ವ ಮಹಿಳೆಗೆ ಹಿಜಾಬ್ ಧರಿಸು ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ಕೆಂಡಾಮಂಡಲವಾದ ಯುವತಿ, ನಿಮಗೆ ಹಿಜಾಬ್ ಬೇಕಾ, ಸರಿ ಧರಿಸ್ತೇನೆ ನೋಡಿ ಎಂದು ಮೌಲ್ವಿ ಧರಿಸಿದ್ದ ಟರ್ಬನ್ ಕಿತ್ತು ಹಿಜಾಬ್ ಆಗಿ ಮಾಡಿಕೊಂಡಿದ್ದಾಳೆ! ಇದನ್ನು ನೋಡಿ ಕೆಲ ಕಾಲ ವಿಮಾನ ನಿಲ್ದಾಣದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಇದರ ವಿಡಿಯೋ ವೈರಲ್ ಆಗಿದೆ. ಮಾತ್ರವಲ್ಲದೇ ಆ ಮೌಲ್ವಿ ಕೂಡ ಕಕ್ಕಾಬಿಕ್ಕಿಯಾಗಿ ಹೋಗಿದ್ದಾರೆ!
ಮದ್ವೆಯಾಗಿ 25 ವರ್ಷಕ್ಕೆ 24 ಮಕ್ಕಳು! ಗಂಡನ ಗುಟ್ಟು ಬಿಚ್ಚಿಟ್ಟು ಎಲ್ಲರನ್ನೂ ಬೆಚ್ಚಿಬೀಳಿಸಿದ ಮಹಿಳೆ!
ಇರಾನ್ ರಾಜಧಾನಿ ಟೆಹ್ರಾನಿನ ಮೆಹೆರಾಬಾದ್ ವಿಮಾನ ನಿಲ್ದಾಣದಲ್ಲಿ ನಡೆದಿರುವ ಘಟನೆ ಇದು ಎನ್ನಲಾಗಿದೆ. ವಿಮಾನಕ್ಕಾಗಿ ಕಾಯುತ್ತಿರುವ ಸಂದರ್ಭದಲ್ಲಿ ಅಲ್ಲಿಯ ಪ್ರಯಾಣಿಕರ ತಂಗುದಾಣದಲ್ಲಿದ್ದ ಯುವತಿ ಬಂದಿದ್ದಳು. ಆಕೆ ಹಿಜಾಬ್ ಧರಿಸಿರಲಿಲ್ಲ. ಅಲ್ಲಿಯೇ ಇದ್ದ ಮುಸ್ಲಿಂ ಮೌಲ್ವಿಗೆ ಕೋಪ ಬಂದಿದೆ. ಕೂಡಲೇ ಹಿಜಾಬ್ ಧರಿಸುವಂತೆ ಆದೇಶಿಸಿದ್ದಾರೆ. ಮೊದಲೇ ಅಲ್ಲಿಯ ಮಹಿಳೆಯರು ಹಿಜಾಬ್ ವಿರುದ್ಧ ಕೊತಕೊತ ಕುದಿಯುತ್ತಿದ್ದಾರೆ. ಇನ್ನು ಕೇಳಬೇಕೆ? ಆಕ್ರೋಶಗೊಂಡ ಯುವತಿ ನಿಮಗೆ ಹಿಜಾಬ್ ಬೇಕಾ ಹಿಜಾಬ್... ತಡೀರಿ ಎಂದು ಮೌಲ್ವಿ ತಲೆಗೆ ಧರಿಸಿದ್ದ ಟರ್ಬನ್ ಕಿತ್ತು ಹಿಜಾಬ್ ಮಾಡಿಕೊಂಡಿದ್ದಾಳೆ!
ವರದಿಯ ಪ್ರಕಾರ, ಯುವತಿ ಹಿಜಾಬ್ ಧರಿಸದೇ ಇದ್ದುದಕ್ಕೆ ಆ ಯುವತಿಗೆ ಮೌಲ್ವಿ, ನಿನಗೆ ನಾಚಿಕೆ ಆಗಲ್ವೇ ಎಂದು ಕೇಳಿದ್ದಾರೆ ಎನ್ನಲಾಗಿದೆ. ಇದೇ ವಿಷಯಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿಯೂ ನಡೆದಿದೆ. ಈ ಬಗ್ಗೆ ನಿನ್ನ ಕುಟುಂಬದವರಿಗೆ ದೂರು ಕೊಡುತ್ತೇನೆ ಎಂದು ಮೌಲ್ವಿ ಹೇಳಿ, ಆಕೆಯ ಕುಟುಂಬದ ಬಗ್ಗೆ ಪ್ರಶ್ನಿಸಿದ್ದಾರೆ. ಅದೆಲ್ಲಾ ನಿಮಗೆ ಯಾಕೆ ಬೇಕು ಎಂದು ಯುವತಿ ಪ್ರಶ್ನಿಸಿದ್ದಾಳೆ. ಆದರೂ ಮೌಲ್ವಿ ಸುಮ್ಮನೇ ಇರದೇ ತರಾಟೆಗೆ ತೆಗೆದುಕೊಂಡಾಗ ಯುವತಿಗೆ ಕೋಪ ನೆತ್ತಿಗೇರಿದೆ. ಆಗ ಆಕೆ ಈ ರೀತಿ ಮಾಡಿರುವುದಾಗಿ ವರದಿಯಾಗಿದೆ.ಈ ಘಟನೆಯನ್ನು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿರುವ ಕಾರಣ, ಇದು ವೈರಲ್ ಆಗಿದೆ. ಯುವತಿ ವಿರುದ್ಧ ದೂರು ದಾಖಲಾಗಿದೆಯಂತೆ ಮಾತ್ರವಲ್ಲದೇ ಆಕೆಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದೂ ಹೇಳಲಾಗುತ್ತಿದೆ. ಬಳಿಕ ಆಕೆ ಮಾನಸಿಕ ಅಸ್ವಸ್ಥಳೆಂದು ಹೇಳಿ ಆಕೆಯನ್ನು ಮೌಲ್ವಿಯ ಒಪ್ಪಿಗೆ ಮೇರೆಗೆ ಬೇರೆಡೆ ಸ್ಥಳಾಂತರಿಸಿದ್ದಾರೆ ಎನ್ನಲಾಗಿದೆ.
ಭೀಕರ ಕಾಳ್ಗಿಚ್ಚಿನ ನಡುವೆಯೇ ಮೊಲದ ರಕ್ಷಣೆ ಮಾಡಿದ 'ಹೀರೋ': ಮನಕಲಕುವ ವಿಡಿಯೋ ವೈರಲ್