22 ವರ್ಷದ ಮಹ್ಸಾ ಅಮಿನಿ ತನ್ನ ಕುಟುಂಬದೊಂದಿಗೆ ಇರಾನ್ ರಾಜಧಾನಿಗೆ ಭೇಟಿ ನೀಡಿದ್ದಾಗ, ಇಸ್ಲಾಮಿಕ್ ಗಣರಾಜ್ಯದ ಮಹಿಳೆಯರಿಗೆ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಅನ್ನು ಜಾರಿಗೊಳಿಸುವ ಜವಾಬ್ದಾರಿಯುತ ಪೊಲೀಸ್ ಘಟಕವು ಮಂಗಳವಾರ ಬಂಧಿಸಿತ್ತು. ಈ ಡ್ರೆಸ್‌ ಕೋಡ್‌ನಲ್ಲಿ ಸಾರ್ವಜನಿಕವಾಗಿ ಕಡ್ಡಾಯವಾಗಿ ಹಿಜಾಬ್‌ ಧರಿಸುವುದು ಸೇರಿದೆ. 

ಇಸ್ಲಾಮಿಕ್ ಗಣರಾಜ್ಯ ಇರಾನ್‌ನ ನೈತಿಕತೆಯ ಪೊಲೀಸರು ಬಂಧಿಸಿದ ನಂತರ ಕೋಮಾದಲ್ಲಿದ್ದ ಆ ದೇಶದ ಯುವತಿ ಶುಕ್ರವಾರ ಮೃತಪಟ್ಟಿದ್ದಾರೆ ಎಂದು ರಾಜ್ಯ ಮಾಧ್ಯಮ ವರದಿ ಮಾಡಿದೆ. "ದುರದೃಷ್ಟವಶಾತ್, ಅವಳು ಸತ್ತಳು ಮತ್ತು ಆಕೆಯ ದೇಹವನ್ನು ವೈದ್ಯಕೀಯ ಪರೀಕ್ಷಕರ ಕಚೇರಿಗೆ ವರ್ಗಾಯಿಸಲಾಯಿತು" ಎಂದು ರಾಜ್ಯ ದೂರದರ್ಶನ ವರದಿ ಮಾಡಿದೆ. 22 ವರ್ಷದ ಮಹ್ಸಾ ಅಮೀನಿ ಮೃತಪಟ್ಟ ಯುವತಿ ಎಂದು ತಿಳಿದುಬಂದಿದೆ. ಆಕೆ ತಮ್ಮ ಕುಟುಂಬದೊಂದಿಗೆ ಟೆಹ್ರಾನ್‌ಗೆ ಭೇಟಿ ನೀಡಿದ್ದ ವೇಳೆ 1979 ರ ಇಸ್ಲಾಮಿಕ್ ಕ್ರಾಂತಿಯ ಸ್ವಲ್ಪ ಸಮಯದ ನಂತರ ಮಹಿಳೆಯರಿಗೆ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಕಡ್ಡಾಯವಾಗಿ ಜಾರಿಗೊಳಿಸುವ ವಿಶೇಷ ಪೊಲೀಸ್ ಘಟಕ ಆ ಯುವತಿಯನ್ನು ಬಂಧಿಸಿತ್ತು. 

ಈ ಸಂಬಂಧ ಗುರುವಾರ ಹೇಳಿಕೆ ನೀಡಿದ ಟೆಹ್ರಾನ್‌ ಪೊಲೀಸರು, ನಿಯಮಗಳ ಬಗ್ಗೆ "ಸೂಚನೆ" ಗಾಗಿ ಅಮಿನಿಯನ್ನು ಇತರ ಮಹಿಳೆಯರೊಂದಿಗೆ ಬಂಧಿಸಲಾಗಿತ್ತು ಎಂದು ದೃಢಪಡಿಸಿದರು. ಹಾಗೂ, ಇತರರ ಜತೆಯಲ್ಲಿದ್ದಾಗ ಮಾರ್ಗದರ್ಶನ ಸ್ವೀಕರಿಸುವ ವೇಳೆ ಆಕೆ ಇದ್ದಕ್ಕಿದ್ದಂತೆ ಹೃದಯದ ಸಮಸ್ಯೆಯಿಂದ ಬಳಲಿದಳು. ಬಳಿಕ, ತುರ್ತು ಸೇವೆಗಳ ಸಹಕಾರದೊಂದಿಗೆ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯ್ದೆವು" ಎಂದೂ ಅವರು ಹೇಳಿಕೆ ನೀಡಿದ್ದಾರೆ. ಇದಕ್ಕೂ ಮುನ್ನ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಈ ಪ್ರಕರಣದ ತನಿಖೆಯನ್ನು ನಡೆಸುವಂತೆ ಆಂತರಿಕ ಸಚಿವರಿಗೆ ಆದೇಶಿಸಿದ್ದರು. ಹಲವಾರು ಶಾಸಕರು ಸಂಸತ್ತಿನಲ್ಲಿ ಈ ಪ್ರಕರಣವನ್ನು ಪ್ರಸ್ತಾಪಿಸುವುದಾಗಿ ಹೇಳಿದರು. ಇನ್ನೊಂದೆಡೆ, ತನಿಖೆಗಾಗಿ ವಿಶೇಷ ಕಾರ್ಯಪಡೆಯನ್ನು ರಚಿಸುವುದಾಗಿ ನ್ಯಾಯಾಂಗ ತಿಳಿಸಿದೆ.

ಇದನ್ನು ಓದಿ: Hijab Case: ಹಿಜಾಬ್‌ ನಿಷೇಧಿಸಿದ್ದಕ್ಕೆ 17000 ಮಂದಿ ಪರೀಕ್ಷೆ ಗೈರು!

ಔಪಚಾರಿಕವಾಗಿ ಗಶ್ಟ್-ಇ ಇರ್ಷಾದ್ (Gasht-e Ershad) (ಮಾರ್ಗದರ್ಶನ ಪ್ಯಾಟ್ರೋಲ್‌) ಎಂದು ಕರೆಯಲ್ಪಡುವ ನೈತಿಕತೆಯ ಪೊಲೀಸರ ನಡವಳಿಕೆಯ ಕುರಿತು ಇರಾನ್‌ನ ಒಳಗೆ ಮತ್ತು ಹೊರಗೆ ಹೆಚ್ಚಾಗುತ್ತಿರುವ ವಿವಾದದ ಮಧ್ಯೆ ಮಹ್ಸಾ ಅಮೀನಿಯ ಸಾವು ವರದಿಯಾಗಿದೆ. ಜುಲೈನಲ್ಲಿ, ಮಹಿಳೆಯೊಬ್ಬರು ತನ್ನ ಮಗಳ ಬಿಡುಗಡೆಗಾಗಿ ನೈತಿಕತೆಯ ಪೊಲೀಸ್‌ ಪಡೆಗಳ ವ್ಯಾನ್‌ಗಳ ಮುಂದೆ ನಿಂತು ಮನವಿ ಮಾಡುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಮುಸುಕು ಧರಿಸಿದ ಮಹಿಳೆ ವ್ಯಾನ್ ಅನ್ನು ನಿಲ್ಲಿಸುತ್ತಿದ್ದಂತೆ ಅದನ್ನು ಹಿಡಿದಿಟ್ಟುಕೊಂಡರು. ಆದರೆ, ಮತ್ತೆ ಅ ವ್ಯಾನ್‌ ವೇಗವನ್ನು ಪಡೆಯುತ್ತಿದ್ದಂತೆ ಆ ಮಹಿಳೆಯನ್ನು ತಳ್ಳಲಾಯಿತು. ಇನ್ನು, ಈ ದೇಶದಲ್ಲಿ ಮಹಿಳೆಯರು ತಮ್ಮ ಕೂದಲು ಮತ್ತು ಕುತ್ತಿಗೆಯನ್ನು ಶಿರಸ್ತ್ರಾಣದಿಂದ ಮರೆಮಾಚುವುದು ಕಡ್ಡಾಯವಾಗಿದೆ. ಇದು ಇರಾನಿನ ಮುಸ್ಲಿಮರಿಗೆ ಮಾತ್ರವಲ್ಲದೆ ಎಲ್ಲಾ ರಾಷ್ಟ್ರೀಯತೆಗಳು ಮತ್ತು ಧರ್ಮಗಳಿಗೆ ಅನ್ವಯಿಸುವ ಕಡ್ಡಾಯ ಡ್ರೆಸ್ ಕೋಡ್ ಆಗಿದೆ. ಆದರೆ, ದಶಕಗಳ ಬಳಿಕ ಈಗ ಮಹಿಳೆಯರು ವಿಶೇಷವಾಗಿ ದೊಡ್ಡ ನಗರಗಳಲ್ಲಿ, ಹಿಜಾಬ್‌ ಅನ್ನು ಹಿಂದಕ್ಕೆ ತಳ್ಳುತ್ತಿದ್ದಾರೆ. ಅಂದರೆ ತಮ್ಮ ಕೂದಲನ್ನು ಬಹಿರಂಗಪಡಿಸಲು, ಹಿಜಾಬ್‌ ಅನ್ನು ತಮ್ಮ ತಲೆಯ ಮೇಲೆ ಹಿಂದಕ್ಕೆ ಧರಿಸುತ್ತಾರೆ.

ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಹಿಜಾಬ್ ನಿಷೇಧಿಸಿದ್ದ ವಿಚಾರಕ್ಕೆ ಉಂಟಾದ ವಿವಾದದ ಬಗ್ಗೆಯೂ ನಿಮಗೆ ಅರಿವಿದೆಯಲ್ಲವೇ.. ಹಲವು ವಿದ್ಯಾರ್ಥಿನಿಯರು ಹಿಜಾಬ್‌ ಪಟ್ಟು ಹಿಡಿದು ಶಾಲೆಯನ್ನು ತೊರೆದಿದ್ದರು. ಅಲ್ಲದೆ, ಅನೇಕ ವಿದ್ಯಾರ್ಥಿನಿಯರು ಪರೀಕ್ಷೆಯನ್ನು ಸಹ ಬರೆದಿಲ್ಲ. ಆದರೆ, ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್‌ ಎತ್ತಿ ಹಿಡಿದಿತ್ತು. ನಂತರ, ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದ್ದು, ಸದ್ಯ ಈ ಪ್ರಕರಣವನ್ನು ದೇಶದ ಅತ್ಯುನ್ನತ ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ.

ಇದನ್ನೂ ಓದಿ: Onam: ಹಿಜಾಬ್ ಧರಿಸಿ ಶಾಲೆಯಲ್ಲಿ ಡ್ಯಾನ್ಸ್‌ ಮಾಡಿದ ಕೇರಳ ಬಾಲಕಿಯರು: ವಿಡಿಯೋ ನೋಡಿ..