ಕ್ಷಿಪಣಿ ದಾಳಿ ಬಳಿಕ ಪಾಕ್ ಇರಾನ್ ರಾಜತಾಂತ್ರಿಕ ಸಂಘರ್ಷ: ಪಾಕ್‌ನ ಉಗ್ರ ನೆಲೆ ಮೇಲೆ ದಾಳಿ ನಡೆಸಿದ್ದ ಇರಾನಿ ಸೇನೆ
ತನ್ನ ದೇಶದ ಉಗ್ರ ನೆಲೆಗಳ ಮೇಲೆ ಇರಾನ್ ಸೇನೆ ನಡೆಸಿದ ಡ್ರೋನ್ ಮತ್ತು ಕ್ಷಿಪಣಿ ದಾಳಿಯನ್ನು ಪಾಕಿಸ್ತಾನ ತೀವ್ರವಾಗಿ ಖಂಡಿಸಿದೆ. ಇದು ಅಪ್ರಚೋದಿತ ವಾಯುಸೀಮೆ ಉಲ್ಲಂಘನೆಯಾಗಿದೆ. ಇದು ಮುಂದುವರೆದರೆ ಇರಾನ್ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಿ ಬರಲಿದೆ ಎಂದು ಪಾಕ್ ಎಚ್ಚರಿಕೆ ನೀಡಿದೆ.
ಇಸ್ಲಾಮಾಬಾದ್: ತನ್ನ ದೇಶದ ಉಗ್ರ ನೆಲೆಗಳ ಮೇಲೆ ಇರಾನ್ ಸೇನೆ ನಡೆಸಿದ ಡ್ರೋನ್ ಮತ್ತು ಕ್ಷಿಪಣಿ ದಾಳಿಯನ್ನು ಪಾಕಿಸ್ತಾನ ತೀವ್ರವಾಗಿ ಖಂಡಿಸಿದೆ. ಇದು ಅಪ್ರಚೋದಿತ ವಾಯುಸೀಮೆ ಉಲ್ಲಂಘನೆಯಾಗಿದೆ. ಇದು ಮುಂದುವರೆದರೆ ಇರಾನ್ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಿ ಬರಲಿದೆ ಎಂದು ಪಾಕ್ ಎಚ್ಚರಿಕೆ ನೀಡಿದೆ. ಅಲ್ಲದೆ, ಇರಾನ್‌ನಲ್ಲಿನ ತನ್ನ ರಾಯಭಾರಿಯನ್ನು ಪಾಕಿಸ್ತಾನ ಹಿಂಪಡೆದಿದೆ ಹಾಗೂ ಪಾಕ್‌ನಲ್ಲಿನ ಇರಾನ್ ರಾಯಭಾರಿಯನ್ನು ಉಚ್ಚಾಟಿಸಿದೆ, ಸೇಡಿನ ಮೊದಲ ಕ್ರಮ ಜರುಗಿಸಿದೆ.
ಬಲೂಚಿಸ್ತಾನದಲ್ಲಿರುವ ಜೈಷ್ ಎ ಅದ್ಲ್ ಎಂಬ ಸುನ್ನಿ ಉಗ್ರ ಸಂಘಟನೆ, ಪಾಕಿಸ್ತಾನವನ್ನು ನೆಲೆಯಾಗಿಸಿಕೊಂಡು ತನ್ನ ದೇಶದ ಸೇನೆ ಮೇಲೆ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದ್ದ ಇರಾನ್ ಸೇನೆ, ಮಂಗಳವಾರ ಪಾಕಿಸ್ತಾನದ ಬಲೂಚಿಸ್ತಾನದ ಪ್ರಾಂತ್ಯದ 2 ಜೈಷ್ ಉಗ್ರ ನೆಲೆಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿ ನೆಲೆಗಳನ್ನು ಧ್ವಂಸಗೊಳಿಸಿತ್ತು.
ಇರಾನ್‌ನಲ್ಲಿ ಭೀಕರ ಅವಳಿ ಬಾಂಬ್ ಸ್ಫೋಟ : 103 ಬಲಿ
ಈ ಬಗ್ಗೆ ಇರಾನ್ ರಾಯಭಾರ ಕಚೇರಿ ಹಿರಿಯ ಅಧಿಕಾರಿಗಳನ್ನು ಕರೆಸಿಕೊಂಡಿದ್ದ ವಿದೇಶಾಂಗ ಸಚಿವಾಲಯ, ದಾಳಿಯ ಬಗ್ಗೆ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಅಲ್ಲದೆ, ‘ಏಕಪಕ್ಷೀಯ ವಾಯುಸೀಮೆ ಉಲ್ಲಂಘನೆ ಅತ್ಯಂತ ಗಂಭೀರ ಪ್ರಕರಣ. ನಮ್ಮ ಸಾರ್ವಭೌಮತೆ ಉಲ್ಲಂಘನೆಯನ್ನು ನಾವು ಅತ್ಯಂತ ಕಠಿಣವಾಗಿ ವಿರೋಧಿಸುತ್ತೇವೆ. ಇಂಥ ಪ್ರಕರಣ ಮುಂದುವರೆದರೆ ಇರಾನ್ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದೆ.
ಉಗ್ರ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಇರಾನ್ ಹಲವು ಬಾರಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದರೂ ಅದು ಕ್ರಮ ಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮೊದಲಿಗೆ ಇರಾಕ್ ಮತ್ತು ಸಿರಿಯಾದ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ್ದ ಇರಾನ್ ಸೇನೆ ಬಳಿಕ ಪಾಕ್ ಮೇಲೆ ದಾಳಿ ನಡೆಸಿತ್ತು.
ಪಾಕಿಸ್ತಾನದಲ್ಲಿ ಒಂದು ಡಜನ್ ಮೊಟ್ಟೆಗೆ 400 ರೂಪಾಯಿ!
ಪಾಕ್ ಮೇಲೆ ಇರಾನ್ ದಾಳಿ: ಭಾರತ ಸಮರ್ಥನೆ
ನವದೆಹಲಿ: ಪಾಕಿಸ್ತಾನ ಉಗ್ರ ನೆಲೆಗಳ ಮೇಲೆ ಇರಾನ್ ದಾಳಿ ಮಾಡಿದ್ದನ್ನು ಭಾರತ ಸರ್ಕಾರ ಪರೋಕ್ಷವಾಗಿ ಸಮಮರ್ಥಿಸಿದೆ. ‘ಆತ್ಮರಕ್ಷಣೆಗಾಗಿ ಇರಾನ್ ಕ್ರಮ ಕೈಗೊಂಡಿದೆ ಎಂಬುದು ನಮಗೆ ಅರ್ಥವಾಗುತ್ತದೆ’ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.