ಉಗ್ರ ದಾವುದ್ ಇಬ್ರಾಹಿಂ ನಿಧನ ಸುದ್ದಿ, ಪಾಕಿಸ್ತಾನದಲ್ಲಿ ಇಂಟರ್ನೆಟ್, ಸೋಶಿಯಲ್ ಮೀಡಿಯಾ ಬಂದ್!
ಭಾರತದ ಮೋಸ್ಟ್ ವಾಂಟೆಡ್ ಉಗ್ರ, ಪಾಕಿಸ್ತಾನದಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ದಾವುದ್ ಇಬ್ರಾಹಿಂಗೆ ವಿಷಪ್ರಾಶಾನ ಮಾಡಲಾಗಿದೆ ಅನ್ನೋ ಸುದ್ದಿ ಹರಡುತ್ತಿದ್ದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಇಂಟರ್ನೆಟ್ ಸೇವೆ, ಸಾಮಾಜಿಕ ಮಾಧ್ಯಮಕ್ಕೆ ನಿರ್ಬಂಧ ಹೇರಲಾಗಿದೆ.
ಇಸ್ಲಾಮಾಬಾದ್(ಡಿ.18) ಭಾರತದಲ್ಲಿ ಬಾಂಬ್ ಬ್ಲಾಸ್ಟ್, ಉದ್ಯಮಿಗಳ ಹತ್ಯೆ, ಹವಾಲ ಹಣ ಬಳಕೆ, ಖೋಟಾ ನೋಟು ಸೇರಿದಂತೆ ಹಲವು ಪ್ರಕರಣದ ಪ್ರಮುಖ ಆರೋಪಿ ಉಗ್ರ ದಾವುದ್ ಇಬ್ರಾಹಿಂಗೆ ಪಾಕಿಸ್ತಾನದಲ್ಲಿ ವಿಶಪ್ರಾಶಾನ ಮಾಡಲಾಗಿದೆ ಅನ್ನೋ ಸುದ್ದಿ ಭಾರಿ ಸಂಚಲನ ಸೃಷ್ಟಿಸಿದೆ. ಭಾರತದಿಂದ ಪರಾರಿಯಾಗಿರುವ ಉಗ್ರ ದಾವುದ್ ಇಬ್ರಾಹಿಂಗೆ ಪಾಕಿಸ್ತಾನ ರಾಜಾತಿಥ್ಯ ನೀಡಿದೆ. ಪಾಕಿಸ್ತಾನದಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ದಾವುದ್‌ಗೆ ಅಪರಿಚಿತರು ವಿಶಪ್ರಾಶಾನ ಮಾಡಲಾಗಿದೆ ಅನ್ನೋ ಸುದ್ದಿ ಕೋಲಾಹಲಕ್ಕೆ ಕಾರಣವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ತೀವ್ರ ಹಿನ್ನಡೆ ತಂದಿದೆ. ಇದರ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಇಂಟರ್ನೆಟ್ ಸೇವೆ ಬಂದ್ ಮಾಡಲಾಗಿದೆ. ಜೊತಗೆ ಎಲ್ಲಾ ಸೋಶಿಯಲ್ ಮಿಡಿಯಾಗೆ ನಿರ್ಬಂಧ ವಿಧಿಸಲಾಗಿದೆ.
ದಾವುದ್ ಇಬ್ರಾಹಿಂ ವಿಶಪ್ರಾಶಾನದಿಂದ ಆಸ್ಪತ್ರೆ ದಾಖಲಾಗಿದ್ದಾನೆ. ಆತನಿಗೆ ಪಾಕಿಸ್ತಾನ ಸೇನೆ, ಐಎಸ್ಐ ಸೇರಿದಂತೆ ಉನ್ನತ ಭದ್ರತಾ ಅಧಿಕಾರಿಗಳ ತಂಡ ಭದ್ರತೆ ನೀಡುತ್ತಿದೆ. ಆಸ್ಪತ್ರೆಯ ಒಂದು ಮಹಡಿಗೆ ಯಾರಿಗೂ ಪ್ರವೇಶ ನೀಡುತ್ತಿಲ್ಲ ಅನ್ನೋ ಮಾತುಗಳು ಪಾಕಿಸ್ತಾನದ ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿಬರುತ್ತಿದೆ. ಇದರ ಜೊತೆಗೆ ದಾವುದ್ ಮೃತಪಟ್ಟಿದ್ದಾನೆ ಅನ್ನೋ ಸುದ್ದಿ ಕೂಡ ಹರಿದಾಡುತ್ತಿದೆ.
ಭಾರತದ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂಗೆ ವಿಷಪ್ರಾಶನ? ಪಾಕ್ ಆಸ್ಪತ್ರೆಗೆ ದಾಖಲು!
ಈ ಬೆಳವಣಿಗೆ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮುಜುಗರವಾಗಿದೆ. ಉಗ್ರ ದಾವುದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಇಲ್ಲ ಎಂದು ಪಾಕ್ ಸರ್ಕಾರ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸ್ಪಷ್ಟನೆ ನೀಡಿತ್ತು. ಆದರೆ ಭಾರತ ಪಾಕಿಸ್ತಾನ ಆಶ್ರಯ ನೀಡಿದೆ ಅನ್ನೋ ದಾಖಲೆಯನ್ನು ಬಹಿರಂಗಪಡಿಸಿತ್ತು. ಆದರೂ ಪಾಕಿಸ್ತಾನ ಮಾತ್ರ ನಿರಾಕರಿಸಿತ್ತು. ಇದೀಗ ಪಾಕಿಸ್ತಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ, ಅಪರಿಚಿತರು ವಿಶಪ್ರಾಶಾನ ಮಾಡಿದ್ದಾರೆ ಅನ್ನೋ ಮಾಹಿತಿಗಳು ಪಾಕಿಸ್ತಾನ ಸುಳ್ಳನ್ನು ಬಟಾ ಬಯಲು ಮಾಡುವಂತಿದೆ. ಹೀಗಾಗಿ ಪಾಕಿಸ್ತಾನದಲ್ಲಿ ಇಂಟರ್ನೆಟ್ ಸೇವೆ, ಸಾಮಾಜಿಕ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ.
ದಾವುದ್ ಇಬ್ರಾಹಿಂಗೆ ಅಪರಿಚಿತರು ವಿಶಪ್ರಾಶಾನ ಮಾಡಿದ್ದಾರೆ ಅನ್ನೋ ಮಾಹಿತಿಯೂ ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಿಮಿಸಿದೆ. ಕಾರಣ ಇತ್ತೀಚೆಗೆ ಭಾರತ ತನ್ನ ರಾ ಎಜೆನ್ಸಿ ಮೂಲಕ ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಉಗ್ರರು, ಕ್ರಿಮಿನಲ್‌ಗಳನ್ನು ಹತ್ಯೆ ಮಾಡಲಾಗುತ್ತದೆ ಅನ್ನೋ ಕೂಗು ಜೋರಾಗುತ್ತಿದೆ. ಈಗಾಗಲೇ ಪಾಕಿಸ್ತಾನದಲ್ಲಿ ರಾಜಾರೋಶವಾಗಿ ತಿರುಗಾಡುತ್ತಿದ್ದ ಮುಂಬೈ ದಾಳಿ ಸೇರಿದಂತೆ ಹಲವು ದಾಳಿಗಳ ಮಾಸ್ಟರ್ ಮೈಂಡ್ ಉಗ್ರರನ್ನು ಅಪರಿಚಿತರು ಹತ್ಯೆ ಮಾಡಿದ್ದರು. ಈ ಹತ್ಯೆಗಳನ್ನು ಭಾರತ ಮಾಡಿದೆ ಅನ್ನೋ ಆರೋಪವಿದೆ. ಇದೀಗ ಗರಿಷ್ಠ ಭದ್ರತೆಯಲ್ಲಿರುವ ದಾವುದ್ ಇಬ್ರಾಹಿಂಗೆ ಅಪರಿಚಿತರು ವಿಶಪ್ರಾಶಾನ ಮಾಡಿದ್ದಾರೆ ಅನ್ನೋ ಮಾಹಿತಿ ಪಾಕಿಸ್ತಾನದ ತಲೆನೋವು ಹೆಚ್ಚಿಸಿದೆ.
LTTEಗೆ ಮರುಜೀವ ನೀಡಲು ದಾವೂದ್ ಆಪ್ತನಿಂದ ಭಾರಿ ಸಂಚು: ಲಂಕೆಗೆ ಅಪಾರ ಶಸ್ತ್ರಾಸ್ತ್ರ, ಡ್ರಗ್ಸ್ ಸಾಗಣೆ