ಮಹಿಳೆಯೊಬ್ಬಳು ಸತ್ತ ವ್ಯಕ್ತಿಯನ್ನು ವ್ಹೀಲ್‌ಚೇರ್‌ನಲ್ಲಿ ಕೂರಿಸಿ ಬ್ಯಾಂಕ್‌ಗೆ ಕರೆತಂದ ಘಟನೆ ಬ್ರೆಜಿಲ್‌ನ ರಿಯೋ ಡಿ ಜನೈರೋದಲ್ಲಿ ನಡೆದಿದ್ದು, ಮಹಿಳೆಯ ವರ್ತನೆ ಹಿಂದಿನ ಕಾರಣ ತಿಳಿದರೆ ಆಘಾತಗೊಳ್ಳುವುದಂತೂ ಪಕ್ಕಾ. 

ಮಹಿಳೆಯೊಬ್ಬಳು ಸತ್ತ ವ್ಯಕ್ತಿಯನ್ನು ವ್ಹೀಲ್‌ಚೇರ್‌ನಲ್ಲಿ ಕೂರಿಸಿ ಬ್ಯಾಂಕ್‌ಗೆ ಕರೆತಂದ ಘಟನೆ ಬ್ರೆಜಿಲ್‌ನ ರಿಯೋ ಡಿ ಜನೈರೋದಲ್ಲಿ ನಡೆದಿದ್ದು, ಮಹಿಳೆಯ ವರ್ತನೆ ಹಿಂದಿನ ಕಾರಣ ತಿಳಿದರೆ ಆಘಾತಗೊಳ್ಳುವುದಂತೂ ಪಕ್ಕಾ. 

ಪಿಂಚಣಿದಾರರಾಗಿದ್ದ ಪೌಲೊ ರಾಬೆರ್ಟೊ ಬ್ರಾಗ ಎಂಬ 68 ವರ್ಷದ ವೃದ್ಧ ಇತ್ತೀಚೆಗೆ ತೀರಿಕೊಂಡಿದ್ದು, ಅವರು ಮೃತಪಟ್ಟ ಕೆಲವೇ ಗಂಟೆಗಳಲ್ಲಿ ಈ ವ್ಯಕ್ತಿಯ ಸೊಸೆ ಎಂದು ಗುರುತಿಸಿಕೊಂಡಿರುವ ಮಹಿಳೆ ಆತನನ್ನು ವ್ಹೀಲ್‌ಚೇರ್‌ನಲ್ಲಿ ಕೂರಿಸಿಕೊಂಡು ಬ್ಯಾಂಕ್‌ಗೆ ಬಂದಿದ್ದಾರೆ. ಬಳಿಕ ಲೋನ್‌ ಅಪ್ಲಿಕೇಷನ್‌ಗೆ ಸಹಿ ಹಾಕಿಸಲು ಪ್ರಯತ್ನಿಸಿದ್ದಾರೆ. ಆದರೆ ವೃದ್ಧ ಅಸ್ವಸ್ಥನಾದಂತೆ ಬ್ಯಾಂಕ್ ಅಧಿಕಾರಿಗಳಿಗೆ ಕಂಡು ಬಂದಿದ್ದು, ಜೊತೆಗೆ ಮಹಿಳೆಯ ವರ್ತನೆ ಅನುಮಾನ ಮೂಡಿಸುವಂತೆ ಇದ್ದಿದ್ದರಿಂದ ಸಂಶಯಗೊಂಡ ಬ್ಯಾಂಕ್ ಸಿಬ್ಬಂದಿ ಗಮನಿಸಿದಾಗ ವೃದ್ಧ ಈಗಾಗಲೇ ಹೆಣವಾಗಿರುವುದು ತಿಳಿದಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಸಿಬ್ಬಂದಿ ಘಟನೆಯನ್ನು ಚಿತ್ರೀಕರಿಸಿಕೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ.

ಭಾರತದ ಬಗ್ಗೆ ಈ ಯುಗದ ನಾಸ್ಟ್ರಮಸ್ ಭವಿಷ್ಯ ಹೇಳಿದ್ದೇನು? ಹುಲಿಯಂತೆ ಚಿತ್ರಿಸಿದ ಅರ್ಥವೇನು?

ಕೆಲ ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಆಕೆ ತನ್ನ ಹೆಸರಿನಲ್ಲಿ ತೆಗೆಯುತ್ತಿದ್ದ ಸಾಲಕ್ಕೆ ಸತ್ತ ವ್ಯಕ್ತಿಯಿಂದ ಸಹಿ ಮಾಡಲು ಬಯಸಿದ್ದಳು. ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ವೀಡಿಯೋದಲ್ಲಿ ಕಾಣಿಸುವಂತೆ ಮಹಿಳೆ ಮೃತರಾಗಿರುವ ಪಿಂಚಣಿದಾರರ ತಲೆಯನ್ನು ಹಿಡಿದುಕೊಂಡು ಆತನಲ್ಲಿ ಪೇಪರ್‌ಗೆ ಸಹಿ ಹಾಕುವಂತೆ ಹೇಳುತ್ತಿರುವಂತೆ ವರ್ತಿಸುತ್ತಿದ್ದಾಳೆ. ಆದರೆ ನ್ಯಾಯಯುತವಾಗಿ ಇದು ಸಾಧ್ಯವಿಲ್ಲವಾದರೂ ಆಕೆ ಆತ ಕೈ ಬೆರಳುಗಳ ನಡುವೆ ಪೆನ್ನನ್ನು ಸಿಕ್ಕಿಸಿ ಆತನ ಸಿಗ್ನೇಚರ್‌ ಅನ್ನು ಪಡೆಯುವ ವಿಫಲ ಯತ್ನ ಮಾಡುತ್ತಾಳೆ. ವ್ಹೀಲ್‌ಚೇರ್‌ನಲ್ಲಿ ಇರುವ ವ್ಯಕ್ತಿ ಶವವಾಗಿದ್ದಾನೆ ಎಂಬುದನ್ನು ತಿಳಿಯದ ಬ್ಯಾಂಕ್ ಸಿಬ್ಬಂದಿಗೆ ಮಹಿಳೆಯ ಈ ವಿಚಿತ್ರ ವರ್ತನೆ ಗಮನಕ್ಕೆ ಬರುತ್ತಿದ್ದಂತೆ ವ್ಯಕ್ತಿಯ ಕ್ಷೇಮದ ಬಗ್ಗೆ ಕಳವಳ ತೋರಿದ್ದಾರೆ. ಆಗ ಮಹಿಳೆ ಆ ವ್ಯಕ್ತಿ ಇರುವುದೇ ಹಾಗೆ ಎಂದು ಹೇಳಿ ಇನ್ನೇನು ಸಿಕ್ಕಿ ಬೀಳುವ ಭಯದಿಂದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡುವಂತೆ ಬ್ಯಾಂಕ್ ಸಿಬ್ಬಂದಿಯನ್ನೇ ಕೇಳಿದ್ದಾಳೆ.

ನಂತರ ಆತನನ್ನು ಎಲ್ಲರೂ ಸೇರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ ವೈದ್ಯರು ಈ ಘಟನೆ ನಡೆಯುವುದಕ್ಕೂ ಎಷ್ಟು ಗಂಟೆಗಳ ಮೊದಲೇ ಪಿಂಚಣಿದಾರರಾಗಿದ್ದ ಪೌಲೊ ರಾಬೆರ್ಟೊ ಬ್ರಾಗ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಇದರಿಂದ ಮಹಿಳೆಯ ನಾಟಕ ಬಯಲಾಗಿದೆ. ಹೀಗೆ ಹೆಣದೊಂದಿಗೆ ಬ್ಯಾಂಕ್‌ಗೆ ಬಂದ ಮಹಿಳೆಯನ್ನು ಎರಿಕಾ ಡಿ ಸೋಜಾ ವೈರಾ ನನ್ ಎಂದು ಗುರುತಿಸಲಾಗಿದ್ದು, ಆಕೆ ತಾನು ಮೃತ ವ್ಯಕ್ತಿಯ ಸೊಸೆಯಾಗಿದ್ದು, ಆತನನ್ನು ನೋಡಿಕೊಳ್ಳುತ್ತಿದ್ದೆ ಎಂದು ಹೇಳಿಕೊಂಡಿದ್ದಾಳೆ.

ಬ್ರೆಜಿಲ್‌ ಬುಡಕಟ್ಟಿನ ಕೊನೆ ಪುರುಷನ ಸಾವು, ಜನಾಂಗ ಉಳಿಸಲು ಹೆಣ್ಮಕ್ಕಳ ಪ್ರಯತ್ನ!

ಘಟನೆಗೆ ಸಂಬಂಧಿಸಿದಂತೆ ಈಗ ತನಿಖೆಗೆ ಆದೇಶಿಸಲಾಗಿದ್ದು, ಅಧಿಕಾರಿಗಳು ಬ್ಯಾಂಕ್ ಹೊರಗೆ ಹಾಗೂ ಒಳಗೆ ಇದ್ದ ಸಿಸಿಟಿವಿಗಳನ್ನು ಪರೀಕ್ಷಿಸುತ್ತಿದ್ದಾರೆ. 

Scroll to load tweet…