Asianet Suvarna News Asianet Suvarna News

Indians Kidnapped in US: 8 ತಿಂಗಳ ಕಂದಮ್ಮ ಸೇರಿ ಭಾರತ ಮೂಲದ ನಾಲ್ವರ ಅಪಹರಣ

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ 8 ತಿಂಗಳ ಮಗು ಸೇರಿ ನಾಲ್ವರು ಭಾರತೀಯರನ್ನು ಅಪಹರಿಸಲಾಗಿದೆ. ಶಂಕಿತ ಅಪಹರಣಕಾರನ ಬಳಿ ಬಂದೂಕು ಇದ್ದು, ಆತ ಅಪಾಯಕಾರಿಯಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. 

indians kidnapped in united states 4 indians including 8 month old baby ash
Author
First Published Oct 4, 2022, 10:55 AM IST

ಅಮೆರಿಕದಲ್ಲಿ ಸೋಮವಾರ 8 ತಿಂಗಳ ಮಗು, ಕಂದಮ್ಮನ ಪೋಷಕರು ಸೇರಿ ನಾಲ್ವರನ್ನು ಕಿಡ್ನ್ಯಾಪ್‌ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಯುನೈಟೆಡ್‌ ಸ್ಟೇಟ್ಸ್‌ನ ಕ್ಯಾಲಿಫೋನಿರ್ಯಾದ ಮರ್ಸಿಡ್‌ ಕೌಂಟಿಯಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ಮರ್ಸಿಡ್‌ ಕೌಂಟಿ ಆಫೀಸ್‌ ಹೇಳಿಕೆ ನೀಡಿದೆ. ಅಲ್ಲದೆ, ಈ ಸಂಬಂಧ ಅವರು ಟ್ವಿಟ್ಟರ್‌, ಫೇಸ್‌ಬುಕ್‌ ಸೇರಿ ಸಾಮಾಜಿಕ ಜಾಲತಾಣಗಳಲ್ಲೂ ಶೇರ್‌ ಮಾಡಿಕೊಂಡಿದ್ದಾರೆ.  36 ವರ್ಷದ ಜಸ್ದೀಪ್‌ ಸಿಂಗ್, 27 ವರ್ಷದ ಜಸ್ಲೀನ್‌ ಕೌರ್‌ ಅವರ 8 ತಿಂಗಳ ಮಗು ಅರೂಹಿ ಧೇರಿ ಹಾಗೂ 39 ವರ್ಷದ ಅಮನ್‌ದೀಪ್‌ ಸಿಂಗ್‌  ಹೀಗೆ ನಾಲ್ವರನ್ನು ಅಪಹರಿಸಲಾಗಿದೆ ಎಂದು ABC 10 ವರದಿ ಮಾಡಿದೆ. ಇನ್ನು, ಇವರನ್ನು ಕಿಡ್ನ್ಯಾಪ್‌ ಮಾಡಿರುವ ನಾಲ್ವರು ಶಂಕಿತನ ಬಳಿ ಬಂದೂಕು ಇದೆ ಹಾಗೂ ಆತ ಅಪಾಯಕಾರಿಯಾಗಿರಬಹುದು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. 

ಘಟನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಲಾಗಿಲ್ಲ, ಏಕೆಂದರೆ ತನಿಖೆ ಇನ್ನೂ ಆರಂಭಿಕ ಹಂತದಲ್ಲಿದೆ ಎಂದು ತಿಳಿದುಬಂದಿದೆ. ಆದರೆ ದಕ್ಷಿಣ ಹೆದ್ದಾರಿ 59 ರ 800 ಬ್ಲಾಕ್‌ನಲ್ಲಿನ ವ್ಯವಹಾರದಿಂದ ನಾಲ್ವರನ್ನು ಅವರ ಇಚ್ಛೆಗೆ ವಿರುದ್ಧವಾಗಿ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ಎಬಿಸಿ 30 ವರದಿ ಮಾಡಿದೆ. ಇನ್ನು, ಚಿಲ್ಲರೆ ವ್ಯಾಪಾರಿಗಳು ಮತ್ತು ರೆಸ್ಟೋರೆಂಟ್‌ಗಳನ್ನು ಹೊಂದಿರುವ ರಸ್ತೆ ಮಾರ್ಗದಲ್ಲಿ ಈ ಅಪಹರಣ ನಡೆದಿರಬಹುದು ಎಂದು ಹೇಳಲಾಗಿದೆ. 

ಇದನ್ನು ಓದಿ: Bengaluru: ಫಿಲ್ಮ್‌ ಸ್ಟೈಲಲ್ಲಿ ಬಾಲಕನ ಅಪಹರಿಸಿ ಹಣ ಸುಲಿದ ವಿದ್ಯಾರ್ಥಿ!

ಇನ್ನು, ಪೊಲೀಸ್‌ ಅಧಿಕಾರಿಗಳು ಶಂಕಿತನ ಹೆಸರು ಅಥವಾ ಆತನ ಸಂಭವನೀಯ ಉದ್ದೇಶದ ಬಗ್ಗೆ ತಿಳಿಸಿಲ್ಲ ಎಂದು ಎನ್‌ಬಿಸಿ ನ್ಯೂಸ್ ವರದಿ ಮಾಡಿದೆ. ಇನ್ನು, ಶಂಕಿತ ಅಥವಾ ಅಪಹರಣಕ್ಕೊಳಗಾದವರನ್ನು ಸಂಪರ್ಕಿಸದಂತೆ ನಾವು ಸಾರ್ವಜನಿಕರನ್ನು ಕೇಳುತ್ತಿದ್ದೇವೆ ಎಂದು ಸ್ಥಳೀಯ ಜಿಲ್ಲಾಧಿಕಾರಿಗಳ ಕಚೇರಿ ಸೋಮವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಜನರು ಶಂಕಿತ ಅಥವಾ ಅಪಹರಣಕ್ಕೊಳಗಾದವರನ್ನು ಸಂಪರ್ಕಿಸಬೇಡಿ ಮತ್ತು ಅವರು ಕಂಡರೆ 911 ಗೆ ಕರೆ ಮಾಡಿ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. 
ಈ ಮದ್ಯೆ,  2019 ರಲ್ಲಿ, ಭಾರತೀಯ ಮೂಲದ ಟೆಕ್ಕಿ, ತುಷಾರ್ ಅಟ್ರೆ ಅವರು ಐಷಾರಾಮಿ ಕ್ಯಾಲಿಫೋರ್ನಿಯಾ ಮನೆಯಿಂದ ಅಪಹರಿಸಿದ ಗಂಟೆಗಳ ನಂತರ ಅವರ ಗೆಳತಿಯ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಇವರು ಯುಎಸ್‌ನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕಂಪನಿಯ ಮಾಲೀಕರೂ ಆಗಿದ್ದರು. 

ಇದನ್ನೂ ಓದಿ: Pak Hindu ಹದಿಹರೆಯ ಹಿಂದೂ ಹುಡುಗಿಯರ ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರ!

Follow Us:
Download App:
  • android
  • ios