ಅಮೆರಿಕದ ಟೆಕ್ಸಾಸ್‌ನ ಅತ್ಯುನ್ನತ ಶೈಕ್ಷಣಿಕ ಪ್ರಶಸ್ತಿಗೆ ಭಾರೀಯ ಮೂಲದ ಎಂಜಿನೀಯರ್ ಅಶೋಕ್ ವೀರರಾಘವನ್ ಪಾತ್ರರಾಗಿದ್ದಾರೆ. ಅದು ಟೆಕ್ಸಾಸ್‌ನ ಅತ್ಯಂತ ಗೌರವಾನ್ವಿತ ಪ್ರಶಸ್ತಿಯಾಗಿದೆ. ಹಾಗಾದರೆ ಈ ಸಾಧನೆಗೆ ಪಾತ್ರವಾದ ಅಶೋಕ್ ವೀರರಾಘವನ್ ಯಾರು?

ಟೆಕ್ಸಾಸ್(ಫೆ.26) ಕಂಪ್ಯೂಟರ್ ಎಂಜಿನೀಯರ್, ಪ್ರೊಫೆಸರ್ ಅಶೋಕ್ ವೀರರಾಘವನ್ ಟೆಕ್ಸಾಸ್‌ನ ಪ್ರತಿಷ್ಠಿತ ಹಾಗೂ ಗೌರವಾನ್ವಿತ ಎಡಿತ್ ಮತ್ತು ಪೀಟರ್ ಒ'ಡೊನೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಟೆಕ್ಸಾಸ್‌ನ ರೈಸ್ ವಿಶ್ವವಿದ್ಯಾಲಯದ ಆರ್ ಬ್ರೌನ್ ಸ್ಕೂಲ್ ಆಫ್ ಎಂಜಿನಿಯರಿಂಗ್‌ನಲ್ಲಿ ಎಲೆಕ್ಟ್ರಿಕಲ್ ಹಾಗೂ ಕಂಪ್ಯೂಟರ್ ಎಂಜಿನಿಯರಿಂಗ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿರುವ ಆಶೋಕ್ ವೀರರಾಘವನ್ ಅವರ ಸಾಧನೆ ಗುರುತಿಸಿ ಟೆಕ್ಸಾಸ್ ಸಂಶೋಧಕರಿಗೆ ನೀಡುವ ಈ ಶೈಕ್ಷಣಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಕ್ರಾಂತಿಕಾರಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಅದೃಶ್ಯವನ್ನು ಗೋಚರಿಸುವಂತೆ ಮಾಡುವ ಸಂಶೋಧನೆಗೆ ಅಶೋಕ್ ವೀರರಾಘವನ್ ಅವರಿಗೆ ಪ್ರಶಸ್ತಿ ಒಲಿದು ಬಂದಿದೆ. ಈ ವಾರ್ಷಿಕ ಪ್ರಶಸ್ತಿಗೆ ಭಾರತೀಯ ಮೂಲದ ಎಂಜಿನೀಯರ್ ಪಾತ್ರರಾಗಿರುವುದು ಭಾರತೀಯರ ಸಂತಸ ಮತ್ತಷ್ಟು ಹೆಚ್ಚಿಸಿದೆ. ಈ ಪ್ರಶಸ್ತಿ ಕುರಿತು ಪ್ರತಿಕ್ರಿಯೆ ನೀಡಿರುವ ಅಶೋಕ್ ವೀರರಾಘವನ್, ಪ್ರತಿಷ್ಠಿತ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿರುವುದು ಅತ್ಯಂತ ಸಂತಸ ತಂದಿದೆ. ಈ ಪ್ರಶಸ್ತಿ ಸ್ವೀಕರಿಸಲು ನಾನು ಉತ್ಸುಕನಾಗಿದ್ದೇನೆ. ಇದು ಸಂಶೋಧನೆ, ಎಂಜಿನೀಯರಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ. ಈ ಗೌರವ ಹಿಂದೆ ವಿದ್ಯಾರ್ಥಿಗಳು ರೈಸ್ ವಿಶ್ವಾವಿದ್ಯಾಲಯ, ಪ್ರೊಫೆಸರ್ಸ್, ಹಲವು ಮಾರ್ಗದರ್ಶಕರ ಪ್ರಯತ್ನವೂ ಇದೆ ಎಂದು ಅಶೋಕ್ ವೀರರಾಘವನ್ ಹೇಳಿದ್ದಾರೆ.

ಬೆಂಗಳೂರು ಏರ್‌ಪೋರ್ಟ್‌ಗೆ ವಿಶ್ವಮಟ್ಟದ ಪ್ರಶಸ್ತಿ: ಟರ್ಮಿನಲ್‌ 2 ಒಳಾಂಗಣ ವಿನ್ಯಾಸಕ್ಕೆ ಫಿದಾ

ಚೆನ್ನೈ ಮೂಲದ ಅಶೋಕ್ ವೀರರಾಘವನ್ ಬಾಲ್ಯದ ದಿನಗಳನ್ನು, ಶಿಕ್ಷಣವನ್ನು ಚೆನ್ನೈನಲ್ಲೇ ಪಡೆದಿದ್ದಾರೆ. 2022ರಲ್ಲಿ ಮದ್ರಾಸ್ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯಲಲ್ಲಿ ಬಿಟೆಕ್ ಪದವಿ ಪಡೆದಿರುವ ವೀರರಾಘವನ್, ಬಳಿಕ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಾಗೆ ತೆರಳಿದರು. ಅಮೆರಿಕದ ಮೇರಿಲ್ಯಾಂಡ್‌ನ ಕಂಪ್ಯೂಟರ್ ಎಂಜಿನೀಯರಿಂಗ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಹಾಗೂ ಕಂಪ್ಯೂಟರ್ ಎಂಜಿನೀಯರಿಂಗ್‌ನಲ್ಲಿ ಮಾಸ್ಟರ್ ಡಿಗ್ರಿ ಮಾಡಿದ್ದಾರೆ.

2022ರಲ್ಲಿ ಅಶೋಕ್ ವೀರರಾಘವನ್ ಅವರಿಗೆ ಅಮೆರಿಕದ ಪ್ರತಿಷ್ಠಿತ IEEE ಪ್ರಶಸ್ತಿ ಒಲಿದು ಬಂದಿದೆ. 2017ರಲ್ಲಿ ಅಶೋಕ್ ರಾವಘವನ್‌ಗೆ NSF ಪ್ರಶಸ್ತಿ ಹಾಗೂ ಹರ್ಶೆಲ್ ಎಂ ರಿಚ್ ಸಂಶೋಧನೆ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಕ್ಯಾಮೆರಾದಲ್ಲಿನ ಲೆಸನ್ಸ್ ಬದಲಿಸುವ ತೆಳುವಾದ ಸಂವೇದಕ ಚಿಪ್ ಮೂಲಕ ಫಾಲ್ಟ್ ಕ್ಯಾಮೆರಾ ಅಭಿವೃದ್ಧಿಯಲ್ಲೂ ಅಶೋಕ್ ರಾಘವನ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಕಾಂತಾರಕ್ಕೆ ಅಂತರರಾಷ್ಟ್ರೀಯ ವಿಶೇಷ ಪ್ರಶಸ್ತಿ: ಶಂಕರ್​ನಾಗ್​ಗೆ ಸಮರ್ಪಿಸಿದ ರಿಷಬ್​ ಶೆಟ್ಟಿ