ನಮ್ಮ ದೇಶದಿಂದ ಭಾರತದ ಎಲ್ಲ 90 ಸೈನಿಕರು ವಾಪಸ್: ಮಾಲ್ಡೀವ್ಸ್ ಘೋಷಣೆ
ಮಾಲ್ಡೀವ್ಸ್‌ನಲ್ಲಿ ನೆಲೆಸಿರುದ್ದ ಸುಮಾರು 90 ಭಾರತೀಯ ಸೇನಾ ಸಿಬ್ಬಂದಿ ವಾಪಸು ಹೋಗಿದ್ದಾರೆ. ಕೊನೆಯ ಬ್ಯಾಚ್ ಭಾರತೀಯ ಸೈನಿಕರನ್ನು ಶುಕ್ರವಾರ ವಾಪಸ್ ಕಳುಹಿಸಲಾಗಿದೆರೆಂದು ಸರ್ಕಾರ ತಿಳಿಸಿದೆ.
ಮಾಲೆ (ಮೇ.11): ಭಾರತವು ತನ್ನ ಎಲ್ಲಾ ಸೈನಿಕರನ್ನು ಮಾಲ್ಡೀವ್ಸ್‌ನಿಂದ ಹಿಂತೆಗೆದುಕೊಂಡಿದೆ ಎಂದು ಮಾಲ್ಡೀವ್ಸ್ ಸರ್ಕಾರ ಶುಕ್ರವಾರ ಹೇಳಿದೆ. ಭಾರತದ ಜತೆ ಸಂಬಂಧ ಹಳಸಿದ ಬಳೊಲ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ತಮ್ಮ ದೇಶದಿಂದ ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ಸಂಪೂರ್ಣವಾಗಿ ಹಿಂಪಡೆಯಲು ಮೇ 10 ರ ಗಡುವು ನಿಗದಿಪಡಿಸಿದ್ದರು. ಆ ಪ್ರಕಾರ ಮಾಲ್ಡೀವ್ಸ್‌ನಲ್ಲಿ ನೆಲೆಸಿರುದ್ದ ಸುಮಾರು 90 ಭಾರತೀಯ ಸೇನಾ ಸಿಬ್ಬಂದಿ ವಾಪಸು ಹೋಗಿದ್ದಾರೆ. ಕೊನೆಯ ಬ್ಯಾಚ್ ಭಾರತೀಯ ಸೈನಿಕರನ್ನು ಶುಕ್ರವಾರ ವಾಪಸ್ ಕಳುಹಿಸಲಾಗಿದೆರೆಂದು ಸರ್ಕಾರ ತಿಳಿಸಿದೆ.
ಈ ನಡುವೆ ಭಾರತ ಮಾಲ್ಡೀವ್ಸ್‌ಗೆ ನೀಡಿದ್ದ ಎರಡು ಹೆಲಿಕಾಪ್ಟರ್‌ಗಳು ಮತ್ತು ಡಾರ್ನಿಯರ್ ವಿಮಾನಗಳನ್ನು ನಿರ್ವಹಿಸಲು ಕೆಲವು ಭಾರತೀಯ ಸಿಬ್ಬಂದಿ ಮಾಲ್ಡೀವ್ಸ್‌ಗೆ ಇತ್ತೀಚೆಗೆ ಬಂದಿದ್ದರು. ಅವರ ವಿವರಗಳನ್ನು ನಂತರ ಬಹಿರಂಗಪಡಿಸಲಾಗುವುದು ಎಂದು ಸರ್ಕಾರ ಹೇಳಿದೆ. ಪ್ರವಾಸೋದ್ಯಮ ವಿಚಾರವಾಗಿ ಮಾಲ್ಡೀವ್ಸ್ ಹಾಗೂ ಭಾರತದ ಸಂಬಂಧ ಕಳೆದ ವರ್ಷ ಹಳಸಿತ್ತು. ಹೀಗಾಗಿ ಈ ಹಿಂದೆ ತನ್ನ ಸಹಾಯಕ್ಕಾಗಿ ಮಾಲ್ಡೀವ್ಸ್‌ಗೆ ಬಂದಿದ್ದ 90 ಭಾರತೀಯ ಸೇನಾ ಸಿಬ್ಬಂದಿಗೆ ಗೇಟ್‌ಪಾಸ್ ನೀಡಲು ಮಾಲ್ಡೀವ್ಸ್ ಸರ್ಕಾರ ನಿರ್ಧರಿಸಿತ್ತು.
ನಮ್ಮಆರ್ಥಿಕತೆ ನಿಮ್ಮನ್ನೇ ಅವಲಂಬಿಸಿದೆ ನಮ್ಮಲ್ಲಿಗೆ ಬನ್ನಿ ಪ್ಲೀಸ್: ಭಾರತೀಯರಿಗೆ ಮಾಲ್ಡೀವ್ಸ್ ಸಚಿವ ಮನವಿ
ಮೋದಿ ಟೀಕೆಯಂಥ ಘಟನೆ ಇನ್ನು ಆಗಲ್ಲ: ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾಲ್ಡೀವ್ಸ್‌ನ ಸಚಿವರು ನೀಡಿದ್ದ ಕೀಳು ಹೇಳಿಕೆಯಂಥ ಘಟನೆಗಳು ಇನ್ನು ಮುಂದೆ ಆಗುವುದಿಲ್ಲ ಎಂದು ಮಾಲ್ಡೀವ್ಸ್‌ನ ವಿದೇಶಾಂಗ ಸಚಿವ ಮೂಸಾ ಜಮೀರ್ ಹೇಳಿದ್ದಾರೆ. ಅಲ್ಲದೆ ಇಂಥಹವರ ವಿರುದ್ಧ ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಭಾರತಕ್ಕೆ ತಮ್ಮ ಮೊದಲ ಭೇಟಿಯ ವೇಳೆ ಸಂದರ್ಶನದಲ್ಲಿ ಮಾತನಾಡಿದ ಮೂಸಾ,‘ಅಂದಿನ ಸಚಿವರ ಹೇಳಿಕೆಗಳು ಅವರ ವೈಯಕ್ತಿಕ ಹೊರತು ಸರ್ಕಾರ ಅಥವ ಮಾಲ್ಡೀವ್ಸ್ ದೇಶದಲ್ಲ. ನಾವು ಈಗಾಗಲೇ ಅವರ ವಿರುದ್ಧ ಕ್ರಮ ತೆಗೆದುಕೊಂಡಿದ್ದೇವೆ. ಇನ್ನು ಮುಂದೆ ಇಂಥಹ ಯಾವುದೇ ಎಡವಟ್ಟು ಆಗುವುದಿಲ್ಲ’ ಎಂದು ಹೇಳಿದ್ದಾರೆ. ಜೊತೆಗೆ ಮಾಲ್ಡೀವ್ಸ್‌ನಲ್ಲಿ ಚೀನಾ ಸೇನಾ ನೆಲೆಗೆ ಅವಕಾಶ ನೀಡಲಾಗುವುದು ಎಂಬ ವರದಿಗಳನ್ನು ಅವರು ಸ್ಪಷ್ಟವಾಗಿ ತಳ್ಳಿಹಾಕಿದರು.