ಅಮೆರಿಕದ ರಕ್ಷಣಾ ಇಲಾಖೆಯಲ್ಲಿದ್ದುಕೊಂಡು ಚೀನಾದ ಅಧಿಕಾರಿಗಳನ್ನು ರಹಸ್ಯವಾಗಿ ಭೇಟಿಯಾಗಿ ಭಾರಿ ಪ್ರಮಾಣದ ರಹಸ್ಯ ಮಾಹಿತಿಗಳನ್ನು ಕದ್ದು ಹಂಚಿಕೊಳ್ಳಿತ್ತಿದ್ದರು ಎಂದು ಅಮೆರಿಕ ಸರ್ಕಾರವು ಭಾರತೀಯ ಮೂಲದವನ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದೆ.

ವಾಷಿಂಗ್ಟನ್‌: ಅಮೆರಿಕದ ರಕ್ಷಣಾ ಇಲಾಖೆಯಲ್ಲಿದ್ದುಕೊಂಡು ಚೀನಾದ ಅಧಿಕಾರಿಗಳನ್ನು ರಹಸ್ಯವಾಗಿ ಭೇಟಿಯಾಗಿ ಭಾರಿ ಪ್ರಮಾಣದ ರಹಸ್ಯ ಮಾಹಿತಿಗಳನ್ನು ಕದ್ದು ಹಂಚಿಕೊಳ್ಳಿತ್ತಿದ್ದರು ಎಂದು ಅಮೆರಿಕ ಸರ್ಕಾರವು ಭಾರತೀಯ ಮೂಲದವನ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದೆ.

ಮುಂಬೈನಲ್ಲಿ ಜನಿಸಿದ್ದ ಆ್ಯಷ್ಲೆ ಟೆಲ್ಲಿಸ್‌ ಎಂಬುವರು ಅಮೆರಿಕದ ರಕ್ಷಣಾ ಇಲಾಖೆಯಲ್ಲಿ ವ್ಯೂಹಾತ್ಮಕ ಸಲಹೆಗಾರರಾಗಿದ್ದರು. 2023ರಲ್ಲಿ ಚೀನಾ ಅಧಿಕಾರಿಗಳನ್ನು ಭೇಟಿಯಾಗಿದ್ದರು ಎಂದು ಅಮೆರಿಕ ಕೋರ್ಟ್‌ನಲ್ಲಿ ವಾದಿಸಿದೆ.

ಸಾವಿರಾರು ಪುಟದ ದಾಖಲೆಗಳು ವಶ:

ಈ ಬಗ್ಗೆ ಕೋರ್ಟ್‌ನಲ್ಲಿ ಅಫಿಡವಿಟ್‌ ಸಲ್ಲಿಸಿರುವ ಅಮೆರಿಕ ನ್ಯಾಯಾಂಗ ಇಲಾಖೆಯು, ಆ್ಯಷ್ಲೆ ವೆನ್ನಾ ನಿವಾಸದ ನೆಲ ಮಳಿಗೆಯಲ್ಲಿ ಸಾವಿರಾರು ಪುಟಗಳುಳ್ಳ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ದಾಖಲೆಗಳ ‘ಅತಿ ಸೂಕ್ಷ್ಮ’, ‘ಸೂಕ್ಷ್ಮ’ ಚಿಹ್ನೆಯಿದ್ದು, ಆ್ಯಷ್ಲೆ ರಕ್ಷಣಾ ಇಲಾಖೆಯ ಉನ್ನತ ಸ್ಥಾನದಲ್ಲಿದ್ದ ಕಾರಣ ಇವುಗಳು ಲಭ್ಯವಾಗಿತ್ತು ಎಂದು ವಾದಿಸಿದೆ. ಇದಿಷ್ಟೇ ಅಲ್ಲದೇ ಅಮೆರಿಕ ಅಧಿಕೃತ ಮುದ್ರಣಾಲಯದಲ್ಲಿ ತಮಗೆ ಬೇಕಾದಂತೆ ವಾಯುಪಡೆ ಪತ್ರಗಳನ್ನು ಮುದ್ರಿಸಿಕೊಂಡಿದ್ದರು ಎಂದು ಹೇಳಿದೆ.

ಭಾರತ- ಅಮೆರಿಕ ಅಣು ಒಪ್ಪಂದದಲ್ಲಿ ಭಾಗಿ:

ಆ್ಯಷ್ಲೆ ಅವರು 2008ರಲ್ಲಿ ನಡೆದ ಭಾರತ - ಅಮೆರಿಕ ಅಣು ಒಪ್ಪಂದದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ ಭಾರತ, ಚೀನಾ ಮತ್ತು ಆಗ್ನೇಯ ಏಷ್ಯಾ ವಿಚಾರದಲ್ಲಿ ಪರಿಣತರಾಗಿದ್ದರು.

ಮಾಜಿ ಅಧ್ಯಕ್ಷ ಬುಷ್‌ಗೆ ಸಲಹೆಗಾರ:

ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್‌ ಡಬ್ಲ್ಯು ಬುಷ್‌ ಅವರಿಗೆ ಆ್ಯಷ್ಲೆ ಅವರು ಆಪ್ತ ಸಲಹೆಗಾರರಲ್ಲಿ ಒಬ್ಬರಾಗಿದ್ದರು. ಬುಷ್‌ ಅವರಿಗೆ ಹಿರಿಯ ನಿರ್ದೇಶಕರಾಗಿ ಸಹ ಸೇವೆ ಸಲ್ಲಿಸಿದ್ದರು.