ಐಸಿಸ್ ಭಯೋತ್ಪಾದಕರ ಮೇಲೆ ಅಮೆರಿಕ ದಾಳಿ, ಸಿರಿಯಾದಲ್ಲಿ ಬೇರು ಬಿಟ್ಟಿರುವ ಐಸಿಸ್ ಉಗ್ರ ತಾಣಗಳ ಮೇಲೆ ಅಮೆರಿಕ ಸ್ಟ್ರೈಕ್ ನಡೆಸಿದೆ. ವಾಯುಪಡೆ, ನೌಕಾ ಪಡೆಗಳ ಮಿಸೈಲ್ ದಾಳಿಗೆ ಸಿರಿಯಾ ತತ್ತರಿಸಿದೆ.

ವಾಶಿಂಗ್ಟನ್ (ಜ.11) ಐಸಿಸ್ ಭಯೋತ್ರಾದಕರ ನೆಲೆಗಳ ಮೇಲೆ ಅಮೆರಿಕ ದಾಳಿ ನಡೆಸಿದೆ. ಹಾಕೆ ಆಪರೇಶನ್ ಹೆಸರಿನಲ್ಲಿ ಅಮೆರಿಕ ಭಯೋತ್ಪಾದಕ ನಿರ್ಮೂಲನೆಗೆ ಈ ದಾಳಿ ನೆಡೆಸಿದೆ. ಇತ್ತೀಚೆಗೆ ಅಮೆರಿಕ ನ್ಯಾಷನಲ್ ಗಾರ್ಡ್ ಮೇಲೆ ಐಸಿಸ್ ಉಗ್ರರು ದಾಳಿ ನಡೆಸಿ ಹತ್ಯೆ ಮಾಡಿದ್ದರು. ಇದರ ಬೆನ್ನಲ್ಲೇ ದಾಳಿ ನಡೆಸಿದ್ದ ಅಮೆರಿಕ ಇದೀಗ ಕೆಲವೇ ದಿನಗಳ ಅಂತರದಲ್ಲಿ ಎರಡೇ ದಾಳಿ ನಡೆಸಿದೆ. ನಿನ್ನ ತಡ ರಾತ್ರಿ ಈ ಬಾರಿ ಭಾರಿ ಮಿಲಿಟರಿ ಆಪರೇಶನ್ ನಡೆಸಿದೆ. ಭಾರಿ ದಾಳಿಯಲ್ಲಿ ಐಸಿಸ್ ಹಲವು ನೆಲಗಳು ಧ್ವಂಸಗೊಂಡಿದೆ.

2024ರಿಂದ ಮತ್ತೆ ಅಧಿಪತ್ಯ ಸಾಧಿಸಿರುವ ಐಸಿಸ್

2024ರಲ್ಲಿ ಅಸಾದ್ ಸರ್ಕಾರ ಪತನಕ್ಕೆ ಐಸಿಸ್ ಉಗ್ರರು ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅಸಾದ್ ಸರ್ಕಾರ ಪತನದ ಬಳಿಕ ಸಿರಿಯಾದಲ್ಲಿ ಐಸಿಸ್ ಭಯೋತ್ಪಾದಕರು ಹಿಡಿತ ಸಾಧಿಸಿದ್ದಾರೆ. ಸಾರಗದ ಮೇಲೂ ಹಿಡಿತ ಸಾಧಿಸಲು ಯತ್ನಿಸಿದ್ದರೆ. ಹೀಗಾಗಿ ಡಿಸೆಂಬರ್ ಎರಡನೇ ವಾರದಲ್ಲಿ ಐಸಿಸ್ ಭಯೋತ್ಪಾದಕರು ಇಬ್ಬರು ಅಮೆರಿಕ ಕೋಸ್ಟಲ್ ಗಾರ್ಡ್ ಹಾಗೂ ಮತ್ತೊರ್ವ ಒಟ್ಟು ಮೂವರನ್ನು ಹತ್ಯೆ ಮಾಡಿತ್ತು. ಸಾಗರದ ಮೂಲಕ ಸಾಗುವ ಸರಕುಗಳ ಹಡಗುಗಳ ಮೇಲೆ ದಾಳಿ ಸರಕು ವಶಪಡಿಸಿಕೊಳ್ಳುವುದು, ಒತ್ತೆಯಾಳಾಗಿಟ್ಟುಕೊಳ್ಳುವ ಕೃತ್ಯಗಳನ್ನು ಮಾಡುತ್ತಿರುವ ಐಸಿಸ್ ಭಯೋತ್ಪಾದಕರ ವಿರುದ್ದ ಇದೀಗ ಅಮೆರಿಕ ಸಮರ ಸಾರಿದೆ.

ವಾಯು ಸೇನೆ ಹಾಗೂ ನೌಕಾ ಸೇನೆಯಿಂದ ದಾಳಿ

ಅಮೆರಿಕದ ವಾಯು ಸೇನೆ ಹಾಗೂ ನಕೌ ಸೇನೆ ದಾಳಿ ಮಾಡಿದೆ. ಸಿರಿಯಾದಲ್ಲಿರುವ ಐಸಿಸ್ ಭಯೋತ್ಪಾದಕ ನೆಲೆಗಳನ್ನು ಗುರುತಿಸಿ ದಾಳಿ ಮಾಡಲಾಗಿದೆ. ಒಂದೇ ಸಮನೆ ಎರಡು ದಿಕ್ಕುಗಳಿಂದ ದಾಳಿಯಾಗಿದೆ. ದಾಳಿಯ ವಿಡಿಯೋಗಳನ್ನು ಅಮೆರಿಕ ಬಿಡುಗಡೆ ಮಾಡಿದೆ. ಎಷ್ಟು ನೆಲಗಳ ಮೇಲೆ, ಎಲ್ಲೆಲ್ಲ ದಾಳಿಯಾಗಿದೆ ಅನ್ನೋ ಮಾಹಿತಿಯನ್ನು ನೀಡಲು ಪೆಂಟಗಾನ್ ವಕ್ತಾರರು ನಿರಾಕರಿಸಿದ್ದಾರೆ.

ಸಾವು ನೋವಿನ ಕುರಿತು ವರದಿಯೇನು

ಅಮೆರಿಕ ಹಾಕೆ ಹೆಸರಿನ ಆಪರೇಶನ್‌ನಲ್ಲಿ ಭಾರಿ ಪ್ರಮಾಣದ ದಾಳಿ ಮಾಡಿದೆ. ಅಮೆರಿಕದ ಫೈಟರ್ ಜೆಟ್ ಸತತವಾಗಿ ಬಾಂಬ್ ಸೇರಿದಂತೆ ಮಿಸೈಲ್ ಸಿಡಿಸಿದೆ. ಸಿರಿಯಾದ ಕೆಲ ಪ್ರದೇಶಗಳೇ ಧ್ವಂಸಗೊಂಡಿದೆ. ಆದರೆ ಈ ದಾಳಿಯಲ್ಲಿನ ಸಾವು ನೋವುಗಳ ಕುರಿತು ಯಾವುದೇ ಮಾಹಿತಿ ಇಲ್ಲ .

ಡಿಸೆಂಬರ್ 19 ರಂದು ನಡೆಸಿದ ಮೊದಲ ದಾಳಿಯಲ್ಲಿ 70 ಐಸಿಸ್ ನೆಲೆಗಳನ್ನು ಧ್ವಂಸ ಮಾಡಲಾಗಿತ್ತು. ಇದೀಗ ಅದಕ್ಕಿಂತ ಹೆಚ್ಚು ನೆಲೆಗಳ ಮೇಲೆ ಅಮೆರಿಕ ದಾಳಿ ಮಾಡಿದೆ ಎಂದು ವರದಿಯಾಗಿದೆ. ಡಿಸೆಂಬರ್ 13ರಂದು ಇಬ್ಬರು ಅಮೆರಿಕ ಯೋಧರು ಸೇರಿದಂತೆ ಮೂವರು ಹತ್ಯೆಗೆ ಸೇಡು ತೀರಿಸಿಕೊಳ್ಳಲು ಹಾಗೂ ಅಮೆರಿಕ ಮುಟ್ಟಿದರೆ ಜೋಕೆ ಎಂಬ ಸ್ಪಷ್ಟ ಸಂದೇಶ ರವಾನಿಸಲು ಈ ದಾಳಿ ನಡೆಸಿದೆ. ಭಯೋತ್ಪಾದನೆ ನಿರ್ಮೂಲನಕ್ಕೆ ಅಮೆರಿಕ ಮತ್ತಷ್ಟು ದಾಳಿ ನಡೆಸಲಿದೆ ಎಂಬ ಎಚ್ಚರಿಕೆ ನೀಡಿದೆ.

Scroll to load tweet…