US-China trade war 2025 ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾದಿಂದ ಆಮದಾಗುವ ಎಲ್ಲಾ ಸರಕುಗಳ ಮೇಲೆ 100% ಹೆಚ್ಚುವರಿ ಸುಂಕ ಮತ್ತು ನಿರ್ಣಾಯಕ ಸಾಫ್ಟ್‌ವೇರ್‌ಗಳ ಮೇಲೆ ರಫ್ತು ನಿಯಂತ್ರಣ ಘೋಷಿಸಿದ್ದಾರೆ. ಈ ನಿರ್ಧಾರ ಅಮೆರಿಕ-ಚೀನಾ ವ್ಯಾಪಾರ ಯುದ್ಧ ತೀವ್ರ., ಜಾಗತಿಕ ಮಾರುಕಟ್ಟೆ ತಲ್ಲಣ.

ವಾಷಿಂಗ್ಟನ್, (ಅ.11): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಬಳಿಕ ಇದೀಗ ಚೀನಾ ವಿರುದ್ಧ ಮತ್ತೊಮ್ಮೆ ಕಠಿಣ ನಿಲುವು ತಳೆದಿದ್ದಾರೆ. ನವೆಂಬರ್ 1, 2025ರಿಂದ ಎಲ್ಲಾ ಚೀನಾದ ಆಮದುಗಳ ಮೇಲೆ ಹೆಚ್ಚುವರಿಯಾಗಿ 100% ಸುಂಕ ವಿಧಿಸುವುದಾಗಿ ಅವರು ಘೋಷಿಸಿದ್ದಾರೆ. ಇದಲ್ಲದೆ, ಅಮೆರಿಕದಲ್ಲಿ ತಯಾರಾದ ನಿರ್ಣಾಯಕ ಸಾಫ್ಟ್‌ವೇರ್‌ಗಳ ಮೇಲೆ ರಫ್ತು ನಿಯಂತ್ರಣಗಳನ್ನು ಜಾರಿಗೊಳಿಸುವುದಾಗಿಯೂ ಹೇಳಿದ್ದಾರೆ. ಈ ಕ್ರಮವು ವಿಶ್ವದ ಎರಡು ದೊಡ್ಡ ಆರ್ಥಿಕ ಶಕ್ತಿಗಳ ನಡುವಿನ ವ್ಯಾಪಾರ ಯುದ್ಧವನ್ನು ಮತ್ತೊಮ್ಮೆ ಉಲ್ಬಣಗೊಳಿಸಿದ್ದು, ಜಾಗತಿಕ ಮಾರುಕಟ್ಟೆಗಳಲ್ಲಿ ಭಾರೀ ತಲ್ಲಣ ಉಂಟುಮಾಡಿದೆ.

ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಶಿಯಲ್ನಲ್ಲಿ ಪೋಸ್ಟ್ ಮೂಲಕ ಚೀನಾದ ಮೇಲೆ ಕಟುವಾದ ದಾಳಿ ನಡೆಸಿದ್ದಾರೆ. 'ಚೀನಾ ಅಸಾಮಾನ್ಯವಾಗಿ ಆಕ್ರಮಣಕಾರಿ ವ್ಯಾಪಾರ ನೀತಿಯನ್ನು ಅಳವಡಿಸಿಕೊಂಡಿದ್ದು, ಇದು ಎಲ್ಲಾ ದೇಶಗಳ ಮೇಲೆ ಪರಿಣಾಮ ಬೀರುತ್ತದೆ. ಅವರು ನವೆಂಬರ್ 1ರಿಂದ ತಮ್ಮ ಹೆಚ್ಚಿನ ಉತ್ಪನ್ನಗಳ ಮೇಲೆ ರಫ್ತು ನಿರ್ಬಂಧಗಳನ್ನು ವಿಧಿಸಲು ಯೋಜಿಸುತ್ತಿದ್ದಾರೆ, ಇದು ಜಾಗತಿಕ ಮಾರುಕಟ್ಟೆಯಲ್ಲಿ ಅಸಮತೋಲನ ಸೃಷ್ಟಿಸುತ್ತದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಅಮೆರಿಕ ಈಗ ಅಷ್ಟೇ ಕಠಿಣ ಕ್ರಮ ಕೈಗೊಳ್ಳುತ್ತದೆ. ನವೆಂಬರ್ 1ರಿಂದ ಚೀನಾದ ಮೇಲೆ ನಾವು ಹೆಚ್ಚುವರಿಯಾಗಿ 100% ಸುಂಕವನ್ನು ವಿಧಿಸುತ್ತೇವೆ – ಇದು ಅವರ ಸದ್ಯದ ಸುಂಕಗಳ ಜೊತೆಗೆ ಸೇರುತ್ತದೆ' ಎಂದು ಅವರು ಬರೆದಿದ್ದಾರೆ.

ಟ್ರಂಪ್ ಸುಂಕಗಳ ಪರಿಣಾಮಗಳೇನು?

ಸುಂಕ ಎಂದರೆ ಒಂದು ದೇಶವು ಆಮದು ಸರಕುಗಳ ಮೇಲೆ ವಿಧಿಸುವ ತೆರಿಗೆ. ಇದು ವಿದೇಶಿ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿ, ದೇಶೀಯ ಕೈಗಾರಿಕೆಗಳಿಗೆ ಸ್ಪರ್ಧಾತ್ಮಕವಾಗಿ ಪರಿಣಾಮ ಬೀರುತ್ತದೆ. ಆದರೆ ಟ್ರಂಪ್‌ರ 100% ಸುಂಕವು ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು. ಅಮೆರಿಕದಲ್ಲಿ ಬೆಲೆ ಏರಿಕೆಯಿಂದಾಗಿ, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಎಲೆಕ್ಟ್ರಿಕ್ ವಾಹನಗಳು (EVಗಳು) 30-40%ರಷ್ಟು ದುಬಾರಿಯಾಗಬಹುದು.

ಪೂರೈಕೆ ಸರಪಳಿ ಭಂಗ: ಅಮೆರಿಕ-ಚೀನಾ ನಡುವಿನ ವ್ಯಾಪಾರ ಕಡಿಮೆಯಾಗಿ, ಜಾಗತಿಕ ಆರ್ಥಿಕತೆಗೆ ಧಕ್ಕೆ. ಮಾರುಕಟ್ಟೆ ಚಂಚಲತೆ: ಶುಕ್ರವಾರ ಟ್ರಂಪ್‌ರ ಘೋಷಣೆಯ ನಂತರ ಡೌ ಜೋನ್ಸ್ 1.9%, S&P 500 2.7% ಮತ್ತು ನಾಸ್‌ಡ್ಯಾಕ್ 3.5%ರಷ್ಟು ಕುಸಿತದೊಂದಿಗೆ ಕ್ಲೋಸ್ ಆಗಿದೆ.

ಸಾಫ್ಟ್‌ವೇರ್ ರಫ್ತು ನಿಯಂತ್ರಣಗಳ ಘೋಷಣೆ: ಇದು ತಂತ್ರಜ್ಞಾನ ಯುದ್ಧದ ಹೊಸ ಹಂತ ಎನ್ನಬಹುದು. ನವೆಂಬರ್ 1ರಿಂದ ಅಮೆರಿಕವು ಕೃತಕ ಬುದ್ಧಿಮತ್ತಾ (AI), ಡೇಟಾ ಭದ್ರತೆ, ಮಿಲಿಟರಿ ತಂತ್ರಜ್ಞಾನ ಮತ್ತು ಕೈಗಾರಿಕಾ ಸಾಫ್ಟ್‌ವೇರ್‌ಗಳ ರಫ್ತನ್ನು ನಿರ್ಬಂಧಿಸುತ್ತದೆ. ಇದು ಚೀನಾದ ತಂತ್ರಜ್ಞಾನ ಕಂಪನಿಗಳು, EV ತಯಾರಕರು ಮತ್ತು ರಕ್ಷಣಾ ಉದ್ಯಮಕ್ಕೆ ಗಂಭೀರ ಪರಿಣಾಮಗಳನ್ನ ಎದುರಿಸಬಹುದು. ತಜ್ಞರು ಇದನ್ನು ಅಮೆರಿಕದ ತಾಂತ್ರಿಕ ಸ್ಥಿತಿ ಕಾಪಾಡಿಕೊಳ್ಳುವ ಕಾರ್ಯತಂತ್ರ ಎಂದು ಕರೆದಿದ್ದಾರೆ.

ತಜ್ಞರ ಅಭಿಪ್ರಾಯ: ವಾಷಿಂಗ್ಟನ್‌ನ ಚಿಂತಕರ ಚಾವಡಿಯ ತಜ್ಞ ಡಾ. ಅಲೆಕ್ಸಾಂಡರ್ ಮಿಚೆಲ್ ಅವರು, ಇದು ಕೇವಲ ಆರ್ಥಿಕ ತಂತ್ರವಲ್ಲ, ರಾಜಕೀಯವೂ. 2025 ಚುನಾವಣೆಗೆ ಮುನ್ನ ಟ್ರಂಪ್ ತಮ್ಮ 'ಅಮೆರಿಕ ಮೊದಲು' ನೀತಿಯ ಬೆಂಬಲಿಗರಾಗಿ ತೋರಿಸಿಕೊಳ್ಳುತ್ತಿದ್ದಾರೆ. ದೇಶೀಯ ಕೈಗಾರಿಕೆಗಳ ರಕ್ಷಣೆ ಮತ್ತು ಚೀನಾ ಅವಲಂಬನೆ ಕಡಿಮೆ ಮಾಡುವುದು ಗುರಿ. ಆದರೆ ಚೀನಾ ಪ್ರತೀಕಾರ ಕೈಗೊಂಡರೆ, ಜಾಗತಿಕ ಆರ್ಥಿಕತೆಗೆ ಭಾರೀ ಹಾನಿ ಎಂದು ಎಚ್ಚರಿಸಿದ್ದಾರೆ.

ಟ್ರಂಪ್ ಚೀನಾವನ್ನು 'ಜಾಗತಿಕ ಆರ್ಥಿಕತೆಯ ಒತ್ತೆಯಾಳು' ಎಂದು ಆರೋಪಿಸಿದ್ದಾರೆ. ವಿಶೇಷವಾಗಿ, ಚೀನಾದ ಅಪರೂಪದ ಭೂಮಿ ಲೋಹಗಳ (ರೇರ್ ಅರ್ಥ್‌ಗಳ) ರಫ್ತು ನಿಯಂತ್ರಣಗಳು – ಇವು ಎಲೆಕ್ಟ್ರಾನಿಕ್ಸ್, EV ಬ್ಯಾಟರಿಗಳು ಮತ್ತು ರಕ್ಷಣಾ ಉಪಕರಣಗಳಲ್ಲಿ 80% ಮಾರುಕಟ್ಟೆ ನಿಯಂತ್ರಿಸುತ್ತವೆ – ಈ ಆರೋಪಕ್ಕೆ ಕಾರಣವಾಗಿದೆ.

ರಾಜತಾಂತ್ರಿಕ ಉದ್ವಿಗ್ನತೆ: ಕ್ಸಿ ಜಿನ್‌ಪಿಂಗ್‌ರೊಂದಿಗಿನ ಸಭೆ ರದ್ದು: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರೊಂದಿಗಿನ ಯೋಜಿತ ಸಭೆಯನ್ನು ಟ್ರಂಪ್ ರದ್ದುಗೊಳಿಸುತ್ತಿರುವುದಾಗಿ ಸೂಚಿಸಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ನಡೆಯುವ APEC ಸಮ್ಮೇಳನದ ಸಂದರ್ಭದಲ್ಲಿ ನಡೆಯಬೇಕಿದ್ದ ಈ ಸಭೆಗೆ ರದ್ದಾಗುವ ಬಗ್ಗೆ ಟ್ರಂಪ್ ಸುಳಿವು ನೀಡಿದ್ದಾರೆ. ಇದು ಇತ್ತೀಚಿನ ತಿಂಗಳುಗಳಲ್ಲಿ ಸುಧಾರಿದ್ದ US-ಚೀನಾ ಸಂಬಂಧಗಳಿಗೆ ಧಕ್ಕೆ ನೀಡಿದೆ.

ಈ ಬೆಳವಣಿಗೆಗಳು ಜಾಗತಿಕ ಮಾರುಕಟ್ಟೆಗಳನ್ನು ಚಂಚಲಗೊಳಿಸಿವೆ. ತಜ್ಞರು, ಈ ವ್ಯಾಪಾರ ಯುದ್ಧವು 2025ರ ಆರ್ಥಿಕ ಬೆಳವಣಿಗೆಯನ್ನು 1-2%ರಷ್ಟು ಕಡಿಮೆ ಮಾಡಬಹುದು ಎಂದು ಎಚ್ಚರಿಸುತ್ತಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ನಮ್ಮನ್ನು ಅನುಸರಿಸಿ.