ಮಹಿಳೆಯರು-ಮಕ್ಕಳ ಬೆತ್ತಲೆ ವಿಡಿಯೋ ಸೆರೆ ಹಿಡಿಯುತ್ತಿದ್ದ ಭಾರತ ಮೂಲದ ಡಾಕ್ಟರ್ ಅರೆಸ್ಟ್ - 13 ಸಾವಿರಕ್ಕೂ ಅಧಿಕ ವಿಡಿಯೋ
ಭಾರತದಿಂದ ಅಮೆರಿಕಾಗೆ ಹೋದ ವೈದ್ಯನೋರ್ವ ಸಾವಿರಾರು ಮಹಿಳೆಯರು ಮತ್ತು ಮಕ್ಕಳ ಖಾಸಗಿ ವಿಡಿಯೋ ಸೆರೆ ಹಿಡಿದು ಜೈಲು ಸೇರಿದ್ದಾನೆ.
ವಾಷಿಂಗಟನ್ ಡಿಸಿ: ಅಮೆರಿಕದಿಂದ ಆಘಾತಕಾರಿ ಘಟನೆಯೊಂದು ವರದಿಯಾಗುತ್ತಿದೆ. ಮಹಿಳೆಯರು ಮತ್ತು ಮಕ್ಕಳ ನಗ್ನ ವಿಡಿಯೋಗಳನ್ನು ಸೆರೆ ಹಿಡಿಯುತ್ತಿದ್ದ ಭಾರತ ಮೂಲದ ವೈದ್ಯನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು 13 ಸಾವಿರಕ್ಕೂ ಅಧಿಕ ಆಕ್ಷೇಪಾರ್ಹ ವಿಡಿಯೋಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆಸ್ಪತ್ರೆ ಸೇರಿದಂತೆ ಹಲವು ಸ್ಥಳಗಳಲ್ಲಿ ರಹಸ್ಯ ಕ್ಯಾಮೆರಾಗಳನ್ನು ಇರಿಸಿ ಈತ ವಿಡಿಯೋಗಳನ್ನು ಸೆರೆ ಹಿಡಿಯುತ್ತಿದ್ದನು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಸ್ಥಳೀಯ ವರದಿಗಳ ಪ್ರಕಾರ, ಲೈಂಗಿಕ ದೌರ್ಜನ್ಯ ಆರೋಪದಡಿ ಭಾರತ ಮೂಲದ 40 ವರ್ಷದ ವೈದ್ಯನನ್ನು ಬಂಧಿಸಲಾಗಿದೆ. ಆರೋಪಿಯನ್ನು 2 ಮಿಲಿಯನ್ ಡಾಲರ್ (17 ಕೋಟಿ ರೂಪಾಯಿ) ಬಾಂಡ್ ಆಧಾರದ ಮೇಲೆ ಅಮೆರಿಕಾದ ಜೈಲಿನಲ್ಲಿ ಇರಿಸಲಾಗಿದೆ. ಈತನ ವಿರುದ್ಧ ಸಾವಿರಾರು ಮಹಿಳೆಯರು ಮತ್ತು ಮಕ್ಕಳ ನಗ್ನ ವಿಡಿಯೋ ಮತ್ತು ಪೋಟೋ ಸೆರೆ ಹಿಡಿದ ಆರೋಪವಿದೆ.
ಚೇಂಜಿಂಗ್ ಏರಿಯಾ, ಆಸ್ಪತ್ರೆಯ ಕೋಣೆಗಳಲ್ಲಿ ರಹಸ್ಯ ಕ್ಯಾಮೆರಾ
ಫಾಕ್ಸ್ ವರದಿ ಪ್ರಕಾರ, ಆಗಸ್ಟ್ 8ರಂದು ವೈದ್ಯ ಒಮೈರ್ ಎಜಾಜ್ ಬಂಧನವಾಗಿದೆ. ಆರೋಪಿ ವೈದ್ಯ ಆಸ್ಪತ್ರೆಯ ಚೇಂಜಿಂಗ್ ರೂಮ್ ಸೇರಿದಂತೆ ಆಸ್ಪತ್ರೆಯ ಹಲವು ಸ್ಥಳದಲ್ಲಿ ರಹಸ್ಯ ಕ್ಯಾಮೆರಾಗಳನ್ನು ಇರಿಸಿದ್ದನು. ಇಷ್ಟು ಮಾತ್ರವಲ್ಲದೇ ತನ್ನದೇ ಮನೆಯಲ್ಲಿಯೂ ಯಾರಿಗೂ ತಿಳಿಯದಂತೆ ಸೀಕ್ರೆಟ್ ಕ್ಯಾಮೆರಾ ಇಟ್ಟಿದ್ದನು. ಇದೇ ಕ್ಯಾಮೆರಾದಿಂದ ಎರಡು ವರ್ಷದ ಹೆಣ್ಣು ಮಗುವಿನ ನಗ್ನ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದನು. ವೈದ್ಯನ ಪತ್ನಿ ನೀಡಿದ ಮಾಹಿತಿಯಿಂದಲೇ ಒಮೈರ್ ಎಜಾಜ್ ಪ್ರಕರಣ ಬೆಳಕಿಗೆ ಬಂದಿದೆ.
ಡಾಕ್ಟರ್ ಒಮೈರ್ ಎಜಾಜ್, ಮಹಿಳೆಯರು ಲೈಂಗಿಕ ಸಂಬಂಧ ಬೆಳೆಸುವ ವಿಡಿಯೋಗಳನ್ನು ರಹಸ್ಯವಾಗಿ ಸೆರೆ ಹಿಡಿದಿದ್ದಾನೆ. ಇನ್ನು ಮಹಿಳೆಯರು ಮಲಗಿದ್ದಾಗ ಅಥವಾ ಪ್ರಜ್ಞೆ ಕಳೆದುಕೊಂಡಾಗ ಅವರ ಜೊತೆ ಲೈಂಗಿಕ ಸಂಪರ್ಕ ಬೆಳೆಸಿ ಅದನ್ನು ಸಹ ವಿಡಿಯೋ ಮಾಡಿಕೊಳ್ಳುತ್ತಿದ್ದನು. ಇಡೀ ಪ್ರಕರಣದ ಸಂಪೂರ್ಣ ತನಿಖೆ ನಡೆಸಲು ಕೆಲವು ತಿಂಗಳು ಬೇಕಾಗುತ್ತದೆ ಎಂದು ತನಿಖಾಧಿಕಾರಿಮಾಹಿತಿ ನೀಡಿದ್ದಾರೆ. ಅಮೆರಿಕಾದ ಮಿಶಿಗನ್ ರಾಜ್ಯದ ಓಕ್‌ಲ್ಯಾಂಡ್ ಕೌಂಠಿ ಎಂಬಲ್ಲಿ ನಡೆದಿದೆ.
ಪ್ಲೀಸ್, ಒಬ್ಬೊಬ್ಬರಾಗಿ ರೇಪ್ ಮಾಡಿ… ಬಾಂಗ್ಲಾದೇಶದ ಹಿಂದೂ ತಾಯಿಯ ಅಸಹಾಯಕತೆ ನಿಮಗೆ ಕಣ್ಣೀರು ತರಿಸುತ್ತೆ!
ಡಾಕ್ಟರ್ ಏಜಾಜ್ ಹಲವು ದೌರ್ಜನ್ಯಗಳನ್ನು ನಡೆಸಿದ್ದಾನೆ. ಸದ್ಯ ಈತನ ವಿಕೃತಿಯ ಸಣ್ಣದಾದ ಝಲಕ್ ಸಿಕ್ಕಿದ್ದು, ಇದುವೇ ಆಘಾತವನ್ನುಂಟು ಮಾಡುತ್ತಿದೆ. ತನ್ನ ಬಳಿ ಚಿಕಿತ್ಸೆಗೆ ಬರುತ್ತಿದ್ದ ರೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದನು. ಆತ ಅಪರಾಧಿ ಎಂದು ಸಾಬೀತು ಆಗಲಿದೆ ಎಂದು ತನಿಖಾಧಿಕಾರಿ ಹೇಳಿದ್ದಾರೆ. ಆಗಸ್ಟ್ 8ರಂದು ವೈದ್ಯನನ್ನು ಬಂಧಿಸಿ ಆತನ ಮನೆಯನ್ನು ಪರಿಶೀಲನೆ ನಡೆಸಿದಾಗ ಹಲವು ಮಾಹಿತಿ ಹೊರಬಂದಿವೆ.
ಮನೆಯಲ್ಲಿದ್ದ ವೈದ್ಯನ ಕಂಪ್ಯೂಟರ್‌ನಲ್ಲಿ 13,000ಕ್ಕೂ ಅಧಿಕ ವಿಡಿಯೋಗಳು ಸಿಕ್ಕಿವೆ. ಹಾಗೆಯೇ ಕ್ಯಾಮೆರಾಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈತನ ಕ್ಲೌಡ್ ಸ್ಟೋರೇಜ್ ಅಥವಾ ಪೆನ್‌ಡ್ರೈವ್‌ಗಳಲ್ಲಿ ವಿಡಿಯೋಗಳನ್ನು ಸೇವ್ ಮಾಡಿಕೊಂಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಡಾಕ್ಟರ್ ಏಜಾಜ್ ವಿರುದ್ಧ ಒಟ್ಟು ಐದು ಪ್ರಕರಣಗಳು ದಾಖಲಾಗಿವೆ.
2011ರಲ್ಲಿ ಭಾರತದಿಂದ ಅಮೆರಿಕಾಗೆ ಬಂದಿದ್ದ
ಡಾಕ್ಟರ್ ಏಜಾಜ್ 2011ರಲ್ಲಿ ಭಾರತದಿಂದ ಅಮೆರಿಕಾಗೆ ಹೋಗಿದ್ದನು. ಅಲಬಾಮಾಗೆ ತೆರಳುವ ಮೊದಲು, ಸಿನೈ ಗ್ರೇಸ್ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದನು. ನಂತರ ಇಲ್ಲಿಂದ 2018ರಲ್ಲಿ ಮಿಚಿಗನ್‌ಗೆ ತೆರಳಿದ್ದರು. ಸದ್ಯ ಪೊಲೀಸರು ಈತನಿಂದ ದೌರ್ಜನ್ಯಕ್ಕೊಳಗಾದವರನ್ನು ಹುಡುಕುತ್ತಿದ್ದಾರೆ. ಈತನಿಂದ ದೌರ್ಜನಕ್ಕೆ ಒಳಗಾದವರು ನಮ್ಮನ್ನು ಸಂಪರ್ಕಿಸಬಹುದು ಎಂದು ಪೊಲೀಸರು ಪ್ರಕಟನೆ ಹೊರಡಿಸಿದ್ದಾರೆ. 2023ರಲ್ಲಿ ತಾಯಿ-ಮಗಳ ಖಾಸಗಿ ವಿಡಿಯೋ ಸೆರೆ ಹಿಡಿದಿದ್ದ ಆರೋಪದಡಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು.
ಐದು ಮಕ್ಕಳ ತಾಯಿ ನಾನು, ಬಿಟ್ಟು ಬಿಡೆಂದು ಗೋಗೆರದರೂ ಹಾಳು ಮಾಡಿದ ರಾಜಕಾರಣಿಯ ಕಾಮುಕ ಮಗ!