Asianet Suvarna News Asianet Suvarna News

ಐದು ಮಕ್ಕಳ ತಾಯಿ ನಾನು, ಬಿಟ್ಟು ಬಿಡೆಂದು ಗೋಗೆರದರೂ ಹಾಳು ಮಾಡಿದ ರಾಜಕಾರಣಿಯ ಕಾಮುಕ ಮಗ!

ರಾಜಕೀಯ ಮುಖಂಡನ ಮಗನಿಂದ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಅರೆನಗ್ನರಾಗಿ ಪ್ರತಿಭಟನೆ ನಡೆಸಿದ್ದಾರೆ. ನಾನು 5 ಮಕ್ಕಳ ತಾಯಿಯಂದ್ರೂ ಬಿಡದೇ ಮದ್ಯ ಕುಡಿದು ರೇಪ್ ಮಾಡಿದ್ದಾನೆ.

Ghaziabad semi nude woman protest against political leader son accused of molestation mrq
Author
First Published Aug 22, 2024, 4:00 PM IST | Last Updated Aug 22, 2024, 4:00 PM IST

ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್ ನಗರದ ರಸ್ತೆ ಬಳಿ ಮಹಿಳೆಯೊಬ್ಬರು ಅರೆನಗ್ನವಾಗಿ ಕುಳಿತಿರುವ ವಿಡಿಯೋ ವೈರಲ್ ಆಗುತ್ತಿದೆ. ಅರೆನಗ್ನವಾಗಿ ಕುಳಿತ ಮಹಿಳೆ ರಾಜಕೀಯ ಮುಖಂಡನೋರ್ವನ ಮಗನ ವಿರುದ್ಧ ಅತ್ಯಾಚಾರದ ಆರೋಪವನ್ನು ಮಾಡಿದ್ದಾರೆ. ಆರೋಪಿ ನನ್ನನ್ನು ಪೊದೆಯೊಳಗೆ ಎಳೆದೊಯ್ದು ಮದ್ಯ ಕುಡಿದು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಾನು ಐದು ಮಕ್ಕಳ ತಾಯಿ, ನನ್ನನ್ನು ಬಿಟ್ಬಿಡು ಎಂದು ಕೈ ಮುಗಿದು ಬೇಡಿಕೊಂಡರೂ ಆತ ಕೇಳಲಿಲ್ಲ. ನನ್ನನ್ನು ಅತ್ಯಾಚಾರ ಮಾಡಿದ ಬಳಿಕವೇ ಆತ ಅಲ್ಲಿಂದ ಹೋದನು ಎಂದು ಮಹಿಳೆ ಆರೋಪಿಸಿದ್ದಾರೆ. 

ಅತ್ಯಾಚಾರದ ಬಳಿಕ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ದೆಹಲಿ-ಮೀರತ್ ಎಕ್ಸ್‌ಪ್ರೆಸ್ ವೇ ಬಳಿಯ ಕೆಂಪು ಚೌಕ್‌ ಸಮೀಪದಲ್ಲಿ ಮಹಿಳೆ ಕುಳಿತುಕೊಂಡಿದ್ದರು. ಅಲ್ಲಿಗೆ ಬಂದ ಕೆಲವರು ಮಹಿಳೆಯನ್ನು ಬಲವಂತವಾಗಿ ಕರೆದುಕೊಂಡು ಪೊದೆಯೊಳಗೆ ಎಳೆದೊಯ್ದಿದ್ದಾರೆ. ನಂತರ ಅಲ್ಲಿಗೆ ಬಂದ ರಾಜಕೀಯ ಮುಖಂಡನ ಮಗ ಮದ್ಯ ಸೇವಿಸಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆನಂತರ ಮಹಿಳೆಯನ್ನು ರಾತ್ರಿ ಕೆಂಪು ಬಾವಿ  ಬಳಿ ಬಿಟ್ಟು ಹೋಗಿದ್ದಾರೆ. 

ಟ್ರೈನಿ ಡಾಕ್ಟರ್ ರೇಪ್ & ಮರ್ಡರ್ ಕೇಸ್; ನಾಲ್ಕು ಮದ್ವೆಯಾಗಿದ್ದ ಆರೋಪಿಯನ್ನ ಬಿಟ್ ಹೋದ ಮೂರು ಪತ್ನಿಯರು!

ಅರೆನಗ್ನಳಾಗಿ ಕುಳಿತು ಮಹಿಳೆ ಪ್ರತಿಭಟನೆ ನಡೆಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಸಾರ್ವಜನಿಕರು ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಸಂತ್ರಸ್ತೆಗೆ ನ್ಯಾಯ ಕೊಡಿಸಬೇಕು, ಕಾಮುಕರಿಗೆ ತಕ್ಕ ಶಿಕ್ಷೆ ಆಗಬೇಕೆಂದು ಆಗ್ರಹಿಸುತ್ತಿದ್ದಾರೆ. ಓರ್ವ ಮಹಿಳೆ ಉತ್ತರ ಪ್ರದೇಶದ ರಸ್ತೆಯಲ್ಲಿ ಅರನಗ್ನಳಾಗಿ ಕುಳಿತಿದ್ದಾಳೆ. ಐದು ಮಕ್ಕಳಿವೆ ಬಿಡಿ ಅಂದ್ರೂ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಮಹಿಳೆ ಆರೋಪ ಮಾಡುತ್ತಿದ್ದಾರೆ. ಆರೋಪಿ ಓರ್ವ ರಾಜಕೀಯ ನಾಯಕನ ಮಗ ಎಂದು ಮಹಿಳೆ  ಹೇಳುತ್ತಿದ್ದಾರೆ. ಹಾಗಾಗಿ ದುಷ್ಕರ್ಮಿಗಳ ರಕ್ಷಣೆಗೆ ಸರ್ಕಾರ ನಿಂತಿದೆಯಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಯಾರು ಆ ರಾಜಕೀಯ ನಾಯಕ? ಇಂತಹ ಮಗನಿಗೆ ಜನ್ಮ ಕೊಟ್ಟವನು? ಅತನ ಮುಖವಾಡ ಬೆಳಕಿಗೆ ಬರಬೇಕು. ತಾಯಿಯ ಪ್ರೀತಿಯ ಬೆಲೆ ಅವನಿಗೆ ಅರ್ಥವಾಗುವಷ್ಟು ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಸಂತ್ರಸ್ತೆಯ ಮಾತುಗಳನ್ನು ಕೇಳಿದ ಜನರು ಆರೋಪಿಗಳ ವಿರುದ್ಧ ಪೊಲೀಸರು ಮತ್ತು ಆಡಳಿತದಿಂದ ಕಠಿಣ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ.

ಪ್ಲೀಸ್, ಒಬ್ಬೊಬ್ಬರಾಗಿ ರೇಪ್ ಮಾಡಿ… ಬಾಂಗ್ಲಾದೇಶದ ಹಿಂದೂ ತಾಯಿಯ ಅಸಹಾಯಕತೆ ನಿಮಗೆ ಕಣ್ಣೀರು ತರಿಸುತ್ತೆ!

Latest Videos
Follow Us:
Download App:
  • android
  • ios