ನವದೆಹಲಿ (ಫೆ. 15): ಅಮೆರಿಕ ಜತೆ ಸೀಮಿತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮುಂದಾಗಿರುವ ಕೇಂದ್ರ ಸರ್ಕಾರ, ದೇಶದ ಕೋಳಿ ಸಾಕಣಿಕೆ ಹಾಗೂ ಹೈನುಗಾರಿಕೆ ಮಾರುಕಟ್ಟೆಯನ್ನು ಭಾಗಶಃ ಅಮೆರಿಕಕ್ಕೆ ತೆರೆದಿಡುವ ಆಫರ್‌ ಅನ್ನು ಮುಂದಿಟ್ಟಿದೆ.

ಅಮೆರಿಕವು ಭಾರತಕ್ಕೆ ಅಲ್ಲಿನ ಔಷಧ, ಜವಳಿ ಹಾಗೂ ಕೃಷಿಯಂತ್ರ ವಲಯಗಳಲ್ಲಿ ಉತ್ತಮ ಹೂಡಿಕೆಗೆ ಅವಕಾಶ ಮಾಡಿಕೊಡಬೇಕು ಎಂಬ ಷರತ್ತಿನೊಂದಿಗೆ ಈ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮೂಲಗಳು ಹೇಳಿವೆ. ಫೆ.24 ಹಾಗೂ 25ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತ ಪ್ರವಾಸ ಕೈಗೊಳ್ಳುತ್ತಿದ್ದು, ಆ ವೇಳೆ ಸ್ಪಷ್ಟ ಚಿತ್ರಣ ಲಭಿಸಲಿದೆ ಎಂದು ವರದಿಗಳು ತಿಳಿಸಿವೆ.

ಮೋದಿ ಹೇಳಿದ ‘ಆ’ ಮಾತು ಸರಿಯಂತೆ: ಪ್ರಧಾನಿ ಹೇಳಿದ್ದೇನಂತೆ?

ವಿಶ್ವದ ಹೈನೋದ್ಯಮ ವಲಯಕ್ಕೆ ಭಾರತದ ಪೇಟೆಯನ್ನು ತೆರೆದಿಡುವ ಅಂಶ ಹೊಂದಿದ್ದ ಆರ್‌ಸಿಇಪಿ ಒಪ್ಪಂದಕ್ಕೆ ಭಾರತದಲ್ಲಿ ಇತ್ತೀಚೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಈ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹಿ ಹಾಕಿರಲಿಲ್ಲ. ಅದರ ನಡುವೆಯೇ ಅಮೆರಿಕಕ್ಕೆ ಭಾರತದ ಹೈನೋದ್ಯಮ ತೆರೆದಿಡುವ ಸಾಧ್ಯತೆಯ ಬಗ್ಗೆ ಮಾಹಿತಿ ಸಿಕ್ಕಿದೆ.

ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶವಾಗಿರುವ ಭಾರತದಲ್ಲಿ 8 ಕೋಟಿ ಜನರು ಹೈನೋದ್ಯಮವನ್ನು ನಂಬಿಕೊಂಡಿದ್ದಾರೆ. ಹೀಗಾಗಿ ಡೈರಿ ಉತ್ಪನ್ನಗಳ ಆಮದಿಗೆ ಸರ್ಕಾರ ನಿರ್ಬಂಧ ಹೇರಿದೆ. ಇದೀಗ ಅದನ್ನು ಭಾಗಶಃ ತೆರವುಗೊಳಿಸಲು ಮುಂದಾಗಿದೆ.

ಮೈಕ್ರೋಸಾಫ್ಟ್‌ ಸಿಇಓ ಸತ್ಯ ನಾದೆಲ್ಲಾ ಬೆಂಗ್ಳೂರಿಗೆ?

ಕೋಳಿ ಕಾಲುಗಳ ಮೇಲಿನ ತೆರಿಗೆಯನ್ನು ಶೇ.100 ರಿಂದ ಶೇ.25 ಕ್ಕೆ ಇಳಿಸಲು ಭಾರತ ಬಯಸಿದೆ. ಮತ್ತೊಂದೆಡೆ, ಡೈರಿ ಮಾರುಕಟ್ಟೆಯನ್ನು ಷರತ್ತಿನ ಮೇಲೆ ಭಾಗಶಃ ತೆರೆಯಲು ಉದ್ದೇಶಿಸಿದೆ ಎನ್ನಲಾಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಹಿರಿಯ ಅಧಿಕಾರಿಗಳು, ‘ಸೇಬುಹಣ್ಣಿನ ಮಾರುಕಟ್ಟೆಯನ್ನು ಆಸ್ಪ್ರೇಲಿಯಾ, ಚೀನಾ, ನ್ಯೂಜಿಲೆಂಡ್‌ಗೆ ಭಾರತ ಈ ಹಿಂದೆ ತೆರೆದಿಟ್ಟಿತ್ತು. ಆಗ ಭಾರತದ ಸೇಬು ಉದ್ಯಮ ಬಿದ್ದುಹೋಗಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಹಾಗೇನೂ ಆಗಲಿಲ್ಲ. ಈಗ ಅದೇ ರೀತಿ ಹೈನೋದ್ಯಮ ಹಾಗೂ ಕುಕ್ಕುಟ ಉದ್ಯಮಕ್ಕೆ ಏನೂ ಆಗುವುದಿಲ್ಲ’ ಎಂದಿದ್ದಾರೆ.

#NewsIn100Seconds ಈ ಕ್ಷಣದ ಪ್ರಮುಖ ಸುದ್ದಿಗಳು

"