ಮಾಲ್ಡೀವ್ಸ್ ತೊರೆದ ಭಾರತೀಯ ಯೋಧರು: ಅಸಮರ್ಥ ಮಾಲ್ಡೀವ್ಸ್ ಸೇನೆಯ ಕೈಯಲ್ಲಿ ಭಾರತ ನೀಡಿದ ವಿಮಾನಗಳು

ಭಾರತೀಯ ಯೋಧರು ಮರಳಿದ ಬಳಿಕ, ಭಾರತ ಮಾಲ್ಡೀವ್ಸ್‌ಗೆ ಉಡುಗೊರೆಯಾಗಿ ನೀಡಿದ ಹೆಲಿಕಾಪ್ಟರ್‌ಗಳು ಮತ್ತು ವಿಮಾನವನ್ನು ಚಲಾಯಿಸುವ ಸಾಮರ್ಥ್ಯ ಮಾಲ್ಡೀವ್ಸ್ ಸೇನೆಗಿಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

india maldives row india fully withdraws soldiers from Maldives rav

ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ನಲ್ಲಿದ್ದ ಭಾರತೀಯ ಸೇನೆಯ ಯೋಧರು, ಭಾರತ ಮಾಲ್ಡೀವ್ಸ್‌ಗೆ ಕೊಡುಗೆಯಾಗಿ ನೀಡಿದ್ದ ಎರಡು ಹೆಲಿಕಾಪ್ಟರ್‌ಗಳು ಮತ್ತು ಒಂದು ಡಾರ್ನಿಯರ್ ಸಾಗಾಣಿಕಾ ವಿಮಾನವನ್ನು ಮೇ 10, ಶುಕ್ರವಾರದಂದು ಮಾಲ್ಡೀವ್ಸ್‌ನಿಂದ ಮರಳುವ ತನಕ ಕಾರ್ಯಾಚರಿಸುತ್ತಿದ್ದರು.

ಭಾರತೀಯ ಯೋಧರು ಮರಳಿದ ಬಳಿಕ, ಭಾರತ ಮಾಲ್ಡೀವ್ಸ್‌ಗೆ ಉಡುಗೊರೆಯಾಗಿ ನೀಡಿದ ಹೆಲಿಕಾಪ್ಟರ್‌ಗಳು ಮತ್ತು ವಿಮಾನವನ್ನು ಚಲಾಯಿಸುವ ಸಾಮರ್ಥ್ಯ ಮಾಲ್ಡೀವ್ಸ್ ಸೇನೆಗಿಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ಭಾರತೀಯ ಸೈನಿಕರು ಭಾರತಕ್ಕೆ ಮರಳಿದ ಒಂದೆರಡು ದಿನಗಳ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮಾಲ್ಡೀವ್ಸ್‌ನ ರಕ್ಷಣಾ ಸಚಿವರಾದ ಘಸ್ಸನ್ ಮೌಮೂನ್ ಅವರು ತಮ್ಮ ಅಸಾಮರ್ಥ್ಯವನ್ನು ಒಪ್ಪಿಕೊಂಡಿದ್ದರು.

ಮಾಲ್ಡೀವಿಯನ್ ನ್ಯಾಷನಲ್ ಡಿಫೆನ್ಸ್ ಫೋರ್ಸ್‌ನ (ಎಂಎನ್‌ಡಿಎಫ್) ಕೆಲವು ಯೋಧರು ವಿಮಾನ ಚಲಾಯಿಸುವ ತರಬೇತಿ ಪಡೆಯಲು ಆರಂಭಿಸಿದ್ದಾರೆ. ಆದರೆ ಈಗ ಅವರು ಯಾರಿಗೂ ಭಾರತೀಯ ಸೇನೆ ಬಿಟ್ಟು ಹೋಗಿರುವ ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ಚಲಾಯಿಸುವ ಸಾಮರ್ಥ್ಯವಿಲ್ಲ ಎಂದು ರಕ್ಷಣಾ ಸಚಿವರಾದ ಘಸ್ಸನ್ ಮೌಮೂನ್ ಹೇಳಿದ್ದಾರೆ.

ಪೆಟ್ರೋಲ್ ದರದಲ್ಲಿ ಸ್ಥಿರತೆ ಹೊಂದಲು ನೆರವಾದ ಭಾರತ ಸರ್ಕಾರದ ಸ್ಥಿರ ವಿದೇಶಾಂಗ ನೀತಿಗಳು

ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ಚಲಾಯಿಸಲು ಅವಶ್ಯಕವಾದ ತರಬೇತಿ ಹಲವು ಹಂತಗಳನ್ನು ಹೊಂದಿದ್ದು, ವಿವಿಧ ಕಾರಣಗಳಿಂದ ಮಾಲ್ಡೀವಿಯನ್ ಯೋಧರು ಇನ್ನೂ ತಮ್ಮ ತರಬೇತಿಯನ್ನು ಪೂರ್ಣಗೊಳಿಸಿಲ್ಲ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ. ಇದರ ಪರಿಣಾಮವಾಗಿ, ಮಾಲ್ಡೀವ್ಸ್ ಸೇನೆಯಲ್ಲಿ ಇಂದಿಗೆ ಎರಡು ಹೆಲಿಕಾಪ್ಟರ್‌ಗಳು ಮತ್ತು ಡಾರ್ನಿಯರ್ ವಿಮಾನವನ್ನು ಚಲಾಯಿಸಲು ಪರವಾನಗಿ ಹೊಂದಿರುವ ಅಥವಾ ಸಂಪೂರ್ಣ ಚಾಲನಾ ಸಾಮರ್ಥ್ಯ ಹೊಂದಿರುವ ಪೈಲಟ್‌ಗಳಿಲ್ಲ.

ಈ ಹಿಂದೆ ಅಧ್ಯಕ್ಷ ಮೊಹಮದ್ ಮುಯಿಝು ನೇತೃತ್ವದ ನೂತನ ಸರ್ಕಾರದ ಉನ್ನತ ಅಧಿಕಾರಿಗಳು ಎಂಎನ್‌ಡಿಎಫ್ ಸಮರ್ಥ ಪೈಲಟ್‌ಗಳನ್ನು ಹೊಂದಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ಮಾಲ್ಡೀವ್ಸ್ ರಕ್ಷಣಾ ಸಚಿವರು ಇದಕ್ಕೆ ವ್ಯತಿರಿಕ್ತವಾದ ಹೇಳಿಕೆ ನೀಡಿದ್ದಾರೆ.

ಫೆಬ್ರವರಿ ತಿಂಗಳಲ್ಲಿ ಕೈಗೊಂಡ ಒಪ್ಪಂದಕ್ಕೆ ಅನುಗುಣವಾಗಿ, ಕಳೆದ ಶುಕ್ರವಾರ ಭಾರತೀಯ ಪಡೆಗಳ ಯೋಧರು ಮಾಲ್ಡೀವ್ಸ್‌ನಿಂದ ಭಾರತಕ್ಕೆ ಮರಳಿದ್ದಾರೆ. ಭಾರತೀಯ ಸೈನಿಕರನ್ನು ಮಾಲ್ಡೀವ್ಸ್‌ನಿಂದ ಭಾರತಕ್ಕೆ ಮರಳುವಂತೆ ಮಾಡುವುದು 2023ರಲ್ಲಿ ಅಧ್ಯಕ್ಷ ಮೊಹಮದ್ ಮುಯಿಝು ಅವರ ಚುನಾವಣಾ ಪ್ರಚಾರದ ಪ್ರಮುಖ ಭರವಸೆಯಾಗಿತ್ತು.

ಸಾರ್ವಜನಿಕರಿಗೆ ಸೇವೆಯ ಭರವಸೆ

ಶನಿವಾರ ಮಾತನಾಡಿದ ಮಾಲ್ಡೀವ್ಸ್ ವಿದೇಶಾಂಗ ಸಚಿವರಾದ ಮೂಸಾ ಜ಼ಮೀರ್ ಅವರು, ಮಾಲ್ಡೀವ್ಸ್‌ನಲ್ಲಿದ್ದ ಎಲ್ಲ 76 ಭಾರತೀಯ ಯೋಧರೂ ಸ್ವದೇಶಕ್ಕೆ ಮರಳಿದ್ದಾರೆ ಎಂದು ಘೋಷಿಸಿದ್ದಾರೆ. ಅವರ ಬದಲಿಗೆ, ಭಾರತದಿಂದ ಉಡುಗೊರೆಯಾಗಿ ನೀಡಲಾದ ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಸಂಸ್ಥೆಯ ನಾಗರಿಕ ಸಿಬ್ಬಂದಿಗಳು ಮಾಲ್ಡೀವ್ಸ್‌ಗೆ ಆಗಮಿಸಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

ಜ಼ಮೀರ್ ಅವರು ಭಾರತ ಮೇ 10ರ ಗಡುವಿಗೆ ಮುನ್ನವೇ ತನ್ನ ಸೈನಿಕರನ್ನು ಮಾಲ್ಡೀವ್ಸ್‌ನಿಂದ ಭಾರತಕ್ಕೆ ಮರಳಿ ಕರೆಸಿಕೊಂಡಿದೆ ಎಂದಿದ್ದಾರೆ. ಚೀನಾ ಪರ ಧೋರಣೆ ಹೊಂದಿರುವ, ಮಾಲ್ಡೀವ್ಸ್ ನೂತನ ಅಧ್ಯಕ್ಷ ಮೊಹಮದ್ ಮುಯಿಝು ಅವರು ನವೆಂಬರ್ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಭಾರತೀಯ ಯೋಧರು ತಾಯ್ನಾಡಿಗೆ ಮರಳುವ ಪ್ರಕ್ರಿಯೆಗೆ ಅಧಿಕೃತ ಆರಂಭ ಲಭಿಸಿತು.

ಭಾರತಕ್ಕೆ ತನ್ನ ಮೊದಲ ಅಧಿಕೃತ ಭೇಟಿಯ ಬಳಿಕ, ವಿದೇಶಾಂಗ ಸಚಿವ ಜ಼ಮೀರ್ ಒಂದು ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದರು. ಅಲ್ಲಿ ಅವರು ಭಾರತೀಯ ಯೋಧರು ಈ ಮೊದಲು ಹನಿಮಾಧೂ, ಕ್ರಾಧೂ, ಮತ್ತು ಗಾನ್ ಪ್ರದೇಶಗಳಲ್ಲಿ ನಿಯೋಜನೆಗೊಂಡಿದ್ದರು ಎಂದು ವಿವರಿಸಿದರು.

ಭಾರತೀಯ ಯೋಧರು ಮಾಲ್ಡೀವ್ಸ್‌ನಿಂದ ಹಂತ ಹಂತವಾಗಿ ಮರಳಿದ್ದಾರೆ ಎಂದು ಮೂಸಾ ಜ಼ಮೀರ್ ವಿವರಿಸಿದ್ದಾರೆ. ಗಾನ್‌ನಲ್ಲಿ ನೆಲೆಯಾಗಿದ್ದ 26 ಯೋಧರು ಮಾರ್ಚ್‌ 7 ಮತ್ತು ಮಾರ್ಚ್ 9ರ ನಡುವೆ ಭಾರತಕ್ಕೆ ಮರಳಿದ್ದರು. ಹನಿಮಾಧೂ ಪ್ರದೇಶದಲ್ಲಿದ್ದ 25 ಯೋಧರು ಎಪ್ರಿಲ್ 7ರಿಂದ ಎಪ್ರಿಲ್ 9ರ ನಡುವೆ ಭಾರತಕ್ಕೆ ಮರಳಿದರು. ಕದ್ಧೂ ಪ್ರದೇಶದಲ್ಲಿದ್ದ 12 ಭಾರತೀಯ ಯೋಧರು ಮೇ 7, ಮಂಗಳವಾರದಂದು ಭಾರತಕ್ಕೆ ಮರಳಿದರೆ, ಕದ್ಧೂವಿನ ಕೊನೆಯ 13 ಭಾರತೀಯ ಯೋಧರ ಗುಂಪು ಮೇ 9, ಗುರುವಾರದಂದು ಭಾರತಕ್ಕೆ ಮರಳಿತು.

ಬಾಹ್ಯಾಕಾಶದ ಗಡಿಗಳಾಚೆ: ಭಾರತದ 2047ರ ಮುನ್ನೋಟ

ಇದೇ ಪತ್ರಿಕಾಗೋಷ್ಠಿಯಲ್ಲಿ, ರಕ್ಷಣಾ ಸಚಿವರಾದ ಮೊಹಮದ್ ಘಸ್ಸನ್ ಮೌಮೂನ್ ಅವರು ಭಾರತೀಯ ಯೋಧರ ಬದಲಿಗೆ ಆಗಮಿಸಿರುವ ಸಿಬ್ಬಂದಿಗಳು ಸೈನಿಕರಲ್ಲದೆ ನಾಗರಿಕರಷ್ಟೇ ಎನ್ನುವುದನ್ನು ಮಾಲ್ಡೀವ್ಸ್ ಸರ್ಕಾರ ಖಾತ್ರಿಪಡಿಸಿದೆ ಎಂದಿದ್ದರು.

ಈಗ ಭಾರತ ನೀಡಿರುವ ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ರಕ್ಷಣಾ ಸಚಿವಾಲಯ ಮಾಲ್ಡೀವ್ಸ್ ನ್ಯಾಷನಲ್ ಡಿಫೆನ್ಸ್ ಫೋರ್ಸ್ (ಎಂಎನ್‌ಡಿಎಫ್) ಅಧಿಕೃತವಾಗಿ ನಿರ್ವಹಿಸುತ್ತಿವೆ ಎಂದು ಅವರು ವಿವರಿಸಿದ್ದಾರೆ.

Latest Videos
Follow Us:
Download App:
  • android
  • ios