ವೆಚ್ಚ ಕಡಿತಕ್ಕೆ ಟ್ರಂಪ್ ಆಡಳಿತ 10,000 ಸರ್ಕಾರಿ ನೌಕರರನ್ನು ವಜಾಗೊಳಿಸಿದೆ. ಸೇನೆಯಲ್ಲಿ ತೃತೀಯ ಲಿಂಗಿಗಳ ನೇಮಕ ಮತ್ತು ಲಿಂಗ ಪರಿವರ್ತನೆಯನ್ನು ನಿಷೇಧಿಸಲಾಗಿದೆ. ಅಮೆರಿಕ, ರಷ್ಯಾ ಮತ್ತು ಚೀನಾಗಳ ರಕ್ಷಣಾ ವೆಚ್ಚದಲ್ಲಿ ಶೇ.50ರಷ್ಟು ಕಡಿತಕ್ಕೆ ಟ್ರಂಪ್ ತ್ರಿಪಕ್ಷೀಯ ಒಪ್ಪಂದಕ್ಕೆ ಉತ್ಸುಕರಾಗಿದ್ದಾರೆ. ಅಣ್ವಸ್ತ್ರ ಉತ್ಪಾದನಾ ವೆಚ್ಚ ಕಡಿತವೇ ಇದರ ಉದ್ದೇಶ.
ವಾಷಿಂಗ್ಟನ್: ವೆಚ್ಚ ಕಡಿತದ ಯೋಜನೆಯ ಭಾಗವಾಗಿ ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಅಂದಾಜು 10000 ನೌಕರರನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಮನೆಗೆ ಕಳುಹಿಸಿದೆ. ಅನೇಕರು ಇನ್ನೂ ತರಬೇತಿ ಅವಧಿಯಲ್ಲೇ ಕೆಲಸ ಕಳೆದುಕೊಂಡಿದ್ದಾರೆ. ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವ ಟ್ರಂಪ್, ‘ಸರ್ಕಾರದ ಬಹಳಷ್ಟು ಹಣ ವ್ಯರ್ಥವಾಗಿ ಖರ್ಚಾಗುತ್ತಿದೆ. ಸರ್ಕಾರ ಈಗಾಗಲೇ 3120 ಲಕ್ಷ ಕೋಟಿ ರು. ಸಾಲ ಹೊಂದಿದ್ದು, 156 ಲಕ್ಷ ಕೋಟಿ ರು. ಹಣಕಾಸು ಕೊರತೆ ಎದುರಿಸುತ್ತಿದೆ. ಸರ್ಕಾರದ ಆರ್ಥಿಕ ಸ್ಥಿತಿಯ ಸುಧಾರಣೆಗೆ ಈ ಕ್ರಮ ಅಗತ್ಯ’ ಎಂದಿದ್ದಾರೆ.
ತಲಾ ₹970 ಕೋಟಿ ವೆಚ್ಚದ ಎಫ್ 35 ಯುದ್ಧ ವಿಮಾನ ಖರೀದಿ ಭಾರತಕ್ಕೆ ಅಗತ್ಯವೇ? 1 ಗಂಟೆ ಹಾರಿಸಲು 28 ಲಕ್ಷ ರು.ವೆಚ್ಚ
ಸೇನೆಗೆ ತೃತೀಯ ಲಿಂಗಿಗಳ ನೇಮಕ ಬ್ಯಾನ್
ಅಮೆರಿಕ ಸೇನೆಯು ಇನ್ನು ಮುಂದೆ ತೃತೀಯ ಲಿಂಗಿಗಳನ್ನು ಸೇನೆಗೆ ನೇಮಕ ಮಾಡಿಕೊಳ್ಳುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಜ.27ರಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭದ್ರತಾ ಪಡೆಗಳಲ್ಲಿ ತೃತೀಯ ಲಿಂಗಿಗಳ ನೇಮಕವನ್ನು ನಿಷೇಧಗೊಳಿಸಿ ಆದೇಶಿಸಿದ್ದರು. ಇದರ ಬೆನ್ನಲ್ಲೇ ಸೇನೆಯು ಕ್ರಮಕ್ಕೆ ಮುಂದಾಗಿದೆ. ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಸೇನೆ, ತೃತೀಯ ಲಿಂಗಿಗಳ ನೇಮಕಕ್ಕೆ ನಿಷೇಧ ಹೇರಲಾಗಿದೆ. ಜೊತೆಗೆ ಹಾಲಿ ಸೇವೆಯಲ್ಲಿರುವ ಸಿಬ್ಬಂದಿಗಳ ಲಿಂಗ ಪರಿವರ್ತನೆಗೆ ಮುಂದಾಗುವ ಕ್ರಮಗಳನ್ನು ಸಹ ನಿಲ್ಲಿಸಲಾಗಿದೆ ಎಂದು ತಿಳಿಸಿದೆ. ಇದು ಟ್ರಂಪ್ ಅವರು ಅಧಿಕಾರವಹಿಸಿಕೊಂಡ ಬಳಿಕ ತೃತೀಯ ಲಿಂಗಿ ವಿರುದ್ಧ ತೆಗೆದುಕೊಳ್ಳುತ್ತಿರುವ ಕ್ರಮವಾಗಿದ್ದು, ಈ ಹಿಂದೆ ಕ್ರೀಡಾ ಚಟುವಟಿಕೆಗಳಲ್ಲಿಯೂ ಸಹ ನಿಷೇಧ ಹೇರಿದ್ದರು.
ಅಮೆರಿಕದಲ್ಲಿ ಅಕ್ರಮ ವಲಸಿಗರನ್ನು ಗುರುತಿಸುವ ಕೆಲಸ ಹೇಗೆ ನಡೆಯುತ್ತಿದೆ?
ಅಮೆರಿಕ, ರಷ್ಯಾ, ಚೀನಾ ರಕ್ಷಣಾ ವೆಚ್ಚ ಶೇ.50 ಕಡಿತಕ್ಕೆ ಟ್ರಂಪ್ ಹೊಸ ಪ್ಲಾನ್
ದೇಶದ ಆರ್ಥಿಕತೆಯಲ್ಲಿ ಬಹುದೊಡ್ಡ ಪಾಲನ್ನು ನುಂಗಿ ಹಾಕುತ್ತಿರುವ ರಕ್ಷಣಾ ಬಜೆಟ್ ಅನ್ನು ಶೇ.50ರಷ್ಟು ಕಡಿತಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ. ವಿಶೇಷವೆಂದರೆ ತಮ್ಮ ದೇಶದ್ದು ಮಾತ್ರವಲ್ಲದೇ ರಷ್ಯಾ, ಚೀನಾ ದೇಶಗಳಿಗೂ ಇದೇ ಪ್ಲಾನ್ ಅಳವಡಿಕೆಗೂ ಟ್ರಂಪ್ ಯೋಜಿಸಿದ್ದಾರೆ.
ಅಣ್ವಸ್ತ್ರ ಉತ್ಪಾದನೆಯಲ್ಲಿ ಮುಂಚೂಣಿ ದೇಶಗಳಾಗಿರುವ ಅಮೆರಿಕ, ರಷ್ಯಾ, ಚೀನಾ, ತಮ್ಮ ರಕ್ಷಣಾ ವೆಚ್ಚದಲ್ಲಿ ಶೇ.50ರಷ್ಟನ್ನು ಕೇವಲ ಅಣ್ವಸ್ತ್ರಗಳಿಗೆ ಮೀಸಲಿಡುತ್ತಿವೆ. ಹೀಗಾಗಿ ಈ ಮೂರು ದೇಶಗಳ ನಡುವೆ ತ್ರಿಪಕ್ಷೀಯ ಒಪ್ಪಂದ ಮಾಡಿಕೊಂಡು ಒಟ್ಟಾರೆ ರಕ್ಷಣಾ ವೆಚ್ಚವನ್ನು ಶೇ.50ರಷ್ಟು ಕಡಿತದ ಪ್ರಸ್ತಾಪವನ್ನು ಡೊನಾಲ್ಡ್ ಟ್ರಂಪ್ ಮುಂದಿಟ್ಟಿದ್ದಾರೆ. ಈ ಬಗ್ಗೆ ವಿಶ್ವದ ಅತಿ ದೊಡ್ಡ ಪರಮಾಣು ದೇಶಗಳಗಾಗಿರುವ ರಷ್ಯಾ ಹಾಗೂ ಚೀನಾ ಜತೆ ಮಾತುಕತೆ ನಡೆಸುವ ಉದ್ದೇಶ ಹೊಂದಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕದ ಬೌರ್ಬನ್ ವಿಸ್ಕಿ ಮೇಲಿನ ಸುಂಕ ಶೇ.50ರಷ್ಟು ಕಡಿಮೆ ಮಾಡಿದ ಭಾರತ!
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬರೀ ಅಣ್ವಸ್ತ್ರಕ್ಕಾಗಿಯೇ ಶತಕೋಟಿ ಡಾಲರ್‌ಗಳಷ್ಟು ಹಣವನ್ನು ವ್ಯಯ ಮಾಡಲಾಗುತ್ತಿದೆ. ಈ ಅಣ್ವಸ್ತ್ರಗಳಿಂದ 50 ಬಾರಿ ಅಥವಾ 100 ಬಾರಿ ವಿಶ್ವವನ್ನು ವಿನಾಶ ಮಾಡಬಹುದು. ಆದರೆ ಇದು ಸಲ್ಲದು. ಇದೇ ಹಣವನ್ನು ಅನ್ಯ ಉದ್ದೇಶಕ್ಕೆ ನಾವು ಬಳಸಬಹುದು. ಹೀಗಾಗಿ ಅಮೆರಿಕವು ಚೀನಾ ಹಾಗೂ ರಷ್ಯಾ ಜತೆ ಅಣ್ವಸ್ತ್ರದ ಮೇಲೆ ಹಣ ವಿನಿಯೋಗ ಕಡಿಮೆ ಮಾಡುವ ಮಾತುಕತೆ ನಡೆಸಲು ಉತ್ಸುಕವಾಗಿದೆ’ ಎಂದರು.
ಅಮೆರಿಕ ಹಾಗೂ ರಷ್ಯಾ ಶೀತಲ ಸಮರ ಯುಗದಿಂದಲೇ ಅಣ್ವಸ್ತ್ರ ಹೊಂದಿವೆ. ಚೀನಾ ಇದೇ ಮಟ್ಟವನ್ನು ಇನ್ನು 6 ವರ್ಷದಲ್ಲಿ ಮುಟ್ಟಬಹುದು ಎಂದು ಟ್ರಂಪ್ ಆತಂಕ ವ್ಯಕ್ತಪಡಿಸಿದರು.
