Asianet Suvarna News Asianet Suvarna News

UNHRC: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಭಾರತ ಮರು ಆಯ್ಕೆ

  • ಬಹುಮತದೊಂದಿಗೆ UNHRC ಗೆ ಭಾರತ ಮರು ಆಯ್ಕೆ
  • ಮಾನವ ಹಕ್ಕುಗಳ ಮಂಡಳಿಯ ಚುನಾವಣೆಯಲ್ಲಿ ಒಟ್ಟು 18 ದೇಶಗಳು ಆಯ್ಕೆ
  • ತಮ್ಮ ಮೇಲೆ ವಿಶ್ವಾಸವಿಟ್ಟ ಸದಸ್ಯ ರಾಷ್ಟ್ರಗಳಿಗೆ ಅಭಿನಂದನೆ ತಿಳಿಸಿದ ಭಾರತ
India gets re elected to UN Human Rights Council
Author
Bengaluru, First Published Oct 15, 2021, 2:22 PM IST

ನವದೆಹಲಿ (ಅ. 15):  ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ (UNHRC) 2022-24 ರ ಅವಧಿಗೆ ಭಾರತ ಬಹುಮತದೊಂದಿಗೆ ಮರು ಆಯ್ಕೆಯಾಗಿದೆ. ವಿಶ್ವ ಸಂಸ್ಥೆಯ ಸಾಮಾನ್ಯ  ಸಭೆಯು(UN general assembly) ಗುರುವಾರ ಮಾನವ ಹಕ್ಕುಗಳ ಮಂಡಳಿಯ 18 ಹೊಸ ಸದಸ್ಯರಿಗಾಗಿ ಚುನಾವಣೆ ನಡೆಸಿತ್ತು. ಆಯ್ಕೆಯಾದ ದೇಶಗಳು ಜನವರಿ 2022 ರಿಂದ ಮೂರು ವರ್ಷಗಳ ಕಾಲ ಮಂಡಳಿಯ ಸದಸ್ಯರಾಗಿರುತ್ತಾರೆ. ಗುರುವಾರ ನಡೆದ ಚುನಾವಣೆಯಲ್ಲಿ 193 ಸದಸ್ಯರ ಸಭೆಯಲ್ಲಿ ಒಟ್ಟು 184 ಮತಗಳನ್ನು ಭಾರತ ಪಡೆದುಕೊಂಡಿದೆ. 

India gets re elected to UN Human Rights Council

ಲಾಡೆನ್‌ ಸ್ತುತಿ​ಸುವ ಪಾಕ್‌​ನಿಂದ ಶಾಂತಿ ಮಾತು: ಭಾರತ ಕಿಡಿ!

ಮಾನವ ಹಕ್ಕುಗಳ ಮಂಡಳಿಯ ಚುನಾವಣೆಯಲ್ಲಿ ಭಾರತಕ್ಕೆ ದೊರಕಿರುವ ಬೆಂಬಲದಿಂದ ತುಂಬಾ ಸಂತೋಷವಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವದಲ್ಲಿರುವ ಅಚಲ ನಂಬಿಕೆ, ಅನೇಕತ್ವ ಮತ್ತು ನಮ್ಮ ಸಂವಿಧಾನದಲ್ಲಿ ತಿಳಿಸಲಾಗಿರುವ ಮೂಲಭೂತ ಹಕ್ಕುಗಳ ಪ್ರತಿಫಲ ಇದಾಗಿದೆ. ನಮಗೆ ಬುಹುಮತ ನೀಡಿದಕ್ಕಾಗಿ ವಿಶ್ವ ಸಂಸ್ಥೆಯ ಎಲ್ಲ ಸದಸ್ಯರಿಗೂ ಧನ್ಯವಾದ ತಿಳಿಸುತ್ತೇನೆʼ ಎಂದು ವಿಶ್ವ ಸಂಸ್ಥೆಗೆ ಭಾರತದ ಖಾಯಂ ರಾಯಭಾರಿಯಾದ ಟಿ ಎಸ್‌ ತಿರುಮೂರ್ತಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಕೂಡ ಮಾಡಿರುವ ವಿಶ್ವಸಂಸ್ಥೆಯಲ್ಲಿರುವ ಭಾರತದ ಶಾಶ್ವತ ಆಯೋಗ (India's Permanent Mission to the UN) ಭಾರತದ ಮೇಲೆ ವಿಶ್ವಾಸವಿಟ್ಟ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸಿದೆ. ಅಲ್ಲದೇ ಸಮ್ಮಾನ, ಸಂವಾದ ಮತ್ತು ಸಹಯೋಗದ ಮೂಲಕ ಮಾನವ ಹಕ್ಕುಗಳ ಪ್ರಚಾರ ಮತ್ತು ಸಂರಕ್ಷಣೆಯ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತೇವೆ ಎಂದು ತಿಳಿಸಿದೆ.

India🇮🇳 gets re-elected to the @UN_HRC (2022-24) for a 6th term with overwhelming majority.

Heartfelt gratitude to the @UN membership for reposing its faith in 🇮🇳.

We will continue to work for promotion and protection of Human Rights through #Samman #Samvad #Sahyog pic.twitter.com/ltqktWcat1

ಮಾನವ ಹಕ್ಕುಗಳ ಮಂಡಳಿಯಲ್ಲಿ ಭಾರತದ  ಈಗಿರುವ  ಸದಸ್ಯತ್ವ ಡಿಸೆಂಬರ್‌ 31 2021ರಂದು ಕೊನೆಗೊಳ್ಳಲಿತ್ತು. ಆದರೆ ಈಗ ಮರು ಆಯ್ಕೆಯ ಮೂಲಕ ಭಾರತದ ಸದಸ್ಯತ್ವ ಮೂರು ವರ್ಷಗಳ ಕಾಲ ಮುಂದುವರೆಯಲಿದೆ. ವಿಶ್ವ ಸಂಸ್ಥೆಯು ರಹಸ್ಯ ಮತದಾನ ಮೂಲಕ 2022-24 ರ ಅವಧಿಗೆ 18 ದೇಶಗಳನ್ನು ಮಾನವ ಹಕ್ಕುಗಳ ಮಂಡಳಿಗೆ ಆಯ್ಕೆ ಮಾಡಿದೆ.

ಅರ್ಜಂಟೀನಾ(Argentina), ಬೆನಿನ್‌(Benin), ಕ್ಯಾಮರೂನ್‌(Cameroon), ಎರಿಟ್ರಿಯಾ(Eritrea), ಫಿನ್‌ಲ್ಯಾಂಡ್(Finland), ಗ್ಯಾಂಬಿಯಾ(Gambia), ಹೌಂಡರಾಸ್‌(Honduras), ಭಾರತ(India), ಖಜಕಿಸ್ತಾನ(Kazakhastan), ಲಿಥುವೇನಿಯಾ(Lithuania), ಲಕ್ಸಂಬರ್ಗ್‌(Luxembourg), ಮಲೆಷಿಯಾ(Malaysia), ಮಾಂಟೆನೆಗ್ರೊ(Montenegro), ಪರುಗ್ವೆ(Paraguay), ಕತಾರ್‌(Qatar), ಸೋಮಾಲಿಯಾ(Somalia), ಯುಎಇ(UAE) ಮತ್ತು ಅಮೆರಿಕಾ(USA) ಮಾನವ ಹಕ್ಕುಗಳ ಮಂಡಳಿಗೆ ಆಯ್ಕೆಯಾಗಿವೆ.

ತ್ವರಿತ ಲಸಿಕೆ ಪೂರೈಸಿದ ಭಾರತಕ್ಕೆ ವಿಶ್ವಸಂಸ್ಥೆಯಲ್ಲಿ ಭಾರೀ ಮೆಚ್ಚುಗೆ!

ಜನವರಿ 2021 ರವರೆಗೆ ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳ ಪೈಕಿ 119 ರಾಷ್ಟ್ರಗಳು ಮಾನವ ಹಕ್ಕುಗಳ ಮಂಡಳಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿವೆ. 2022-24 ಅವಧಿಗೆ ಭಾರತ ಆಯ್ಕೆಯಾಗುವ ಮೂಲಕ  ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ 6ನೇ ಅವಧಿಗೆ ಆಯ್ಕೆಯಾದಂತಾಗಿದೆ. ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಆಯ್ಕೆಯಾದ ರಾಷ್ಟ್ರಗಳು ಮೂರು ವರ್ಷಗಳ ಕಾಲ ಸದಸ್ಯತ್ವ ಹೊಂದಿರುತ್ತವೆ. 

Follow Us:
Download App:
  • android
  • ios